ಮಧ್ಯಮ ವರ್ಗ, ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆ: ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಪ್ರತಿಪಾದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತಮ್ಮ ಕೊನೆಯ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡುವಾಗ “ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಭಾರತದ ವಿಧಾನ”, ಬಡತನವನ್ನು ನಿವಾರಿಸಲು ಸರ್ಕಾರದ ಪ್ರಯತ್ನಗಳು ಮತ್ತು ಬೆಳೆಯುತ್ತಿರುವ ಮಧ್ಯಮ ವರ್ಗದ ಬಗ್ಗೆ ಮಾತನಾಡಿದ್ದಾರೆ. ಹಿಂಸಾಚಾರದಿಂದ ಹಾನಿಗೊಳಗಾದ ಮಣಿಪುರದೊಂದಿಗೆ ದೇಶ ನಿಂತಿದೆ ಎಂದು ಪ್ರಧಾನಿ ಮೋದಿ ಹೇಳಿದರು. … Continued

ದೇಶವು ಮಣಿಪುರದೊಂದಿಗಿದೆ, ಪರಿಸ್ಥಿತಿ ಸುಧಾರಿಸುತ್ತಿದೆ: 77ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ

ನವದೆಹಲಿ: ಕೆಂಪು ಕೋಟೆಯ ಆವರಣದಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಡೀ ರಾಷ್ಟ್ರವು ಮಣಿಪುರದೊಂದಿಗೆ ಇದೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರವು ಪರಿಹಾರವನ್ನು ಕಂಡುಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ. ಕೆಂಪು ಕೋಟೆಯಿಂದ ಸತತ 10 ನೇ ಭಾಷಣದ ಆರಂಭದಲ್ಲಿ ಪ್ರಧಾನಿ … Continued

ಆಗಸ್ಟ್ 15 ರಿಂದ ಟೊಮೆಟೊ ಕೆಜಿಗೆ 50 ರೂ.ಗಳಿಗೆ ಮಾರಾಟಕ್ಕೆ ಸರ್ಕಾರದ ಸೂಚನೆ

ನವದೆಹಲಿ: ಆಗಸ್ಟ್ 15 ರಿಂದ ಟೊಮೆಟೊವನ್ನು ಕೆಜಿಗೆ 50 ರೂ.ಗಳಿಗೆ ಚಿಲ್ಲರೆ ದರದಲ್ಲಿ ಮಾರಾಟ ಮಾಡುವಂತೆ ಕೇಂದ್ರ ಸರ್ಕಾರ ಸೋಮವಾರ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟ (ನಾಫೆಡ್)ಕ್ಕೆ ನಿರ್ದೇಶನ ನೀಡಿದೆ. ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಈ ನಿರ್ಧಾರ … Continued

‘ಡಬಲ್ ಐಸ್ಮಾರ್ಟ್’ ಸಿನೆಮಾದ ಕತ್ತಿವರಸೆಯ ದೃಶ್ಯದ ಚಿತ್ರೀಕರಣದ ವೇಳೆ ನಟ ಸಂಜತ ದತ್ತಗೆ ಗಾಯ ; ವರದಿ

ಪೂರಿ ಜಗನ್ನಾಥ ಅವರ ಮುಂದಿನ ಸಿನೆಮಾ ‘ಡಬಲ್ ಐಸ್ಮಾರ್ಟ್’ ಚಿತ್ರೀಕರಣದಲ್ಲಿ ನಟ ಸಂಜಯ ದತ್ ಅವರು ಸೆಟ್‌ನಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಿಂಕ್ವಿಲ್ಲಾದಲ್ಲಿನ ವರದಿಯ ಪ್ರಕಾರ, ಅವರು ಹೊಡೆದಾಟದ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು. ‘ಅವರು ಖಡ್ಗ ಹಿಡಿದ ಫೈಟಿಂಗ್ ಅನ್ನು ಒಳಗೊಂಡಿರುವ ದೊಡ್ಡ ಆಕ್ಷನ್ ದೃಶ್ಯಕ್ಕಾಗಿ ಚಿತ್ರೀಕರಣ ನಡೆಸುತ್ತಿದ್ದರು ಮತ್ತು ಆ ಸಂದರ್ಭದಲ್ಲಿ ಗಾಯಗೊಂಡರು. ಅವರ ತಲೆಗೆ … Continued

ಹಿಮಾಚಲದಲ್ಲಿ ಮೇಘಸ್ಫೋಟ, ಭೂಕುಸಿತದಲ್ಲಿ 48 ಸಾವು ; ಹಠಾತ್‌ ಪ್ರವಾಹದಿಂದ ಕೊಚ್ಚಿಹೋದ 7 ಮಂದಿ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಭವಿಸಿದ ಭಾರೀ ಮಳೆಯಿಂದ ಉಂಟಾದ ದುರಂತದಲ್ಲಿ, ಗುಡ್ಡಗಾಡು ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಕಳೆದ ಎರಡು ದಿನಗಳಲ್ಲಿ 48 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಮಳೆಯಿಂದ ಹಠಾತ್ ಪ್ರವಾಹಕ್ಕೆ ಏಳು ಜನರು ಕೊಚ್ಚಿ ಹೋಗಿ ಸಾವಿಗೀಡಾಗಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು … Continued

ವೀಡಿಯೊ..| ಬಿಜೆಪಿ, ಅದರ ಬೆಂಬಲಿಗರನ್ನು ‘ರಾಕ್ಷಸರು’ ಎಂದು ಕರೆದ ಕಾಂಗ್ರೆಸ್ ನಾಯಕ ರಣದೀಪ ಸುರ್ಜೇವಾಲಾ : ಭುಗಿಲೆದ್ದ ವಿವಾದ

ನವದೆಹಲಿ: ಕಾಂಗ್ರೆಸ್ ನಾಯಕ ರಣದೀಪ ಸುರ್ಜೇವಾಲಾ ಅವರು ಬಿಜೆಪಿ ಮತ್ತು ಅದರ ಬೆಂಬಲಿಗರ ಬಗ್ಗೆ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ. ಆಡಳಿತ ಪಕ್ಷ ಮತ್ತು ಅದಕ್ಕೆ ಮತ ಹಾಕುವವರು “ರಾಕ್ಷಸರು (demons)” ಎಂದು ಹರ್ಯಾಣದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅವರ ಹೇಳಿಕೆ ಬಿಜೆಪಿಯಿಂದ ತೀವ್ರ ಖಂಡನೆಗೆ ಒಳಗಾಗಿದ್ದಾರೆ. “ಬಿಜೆಪಿ ಮತ್ತು ಜನನಾಯಕ ಜನತಾ ಪಾರ್ಟಿ (ಜೆಜೆಪಿ)ಯ … Continued

ಚಂದ್ರನ ಮೇಲ್ಮೈಯಿಂದ ಕೇವಲ 177 ಕಿಮೀ ದೂರದಲ್ಲಿದೆ ಚಂದ್ರಯಾನ-3 ಬಾಹ್ಯಾಕಾಶ ನೌಕೆ : ವಿಕ್ರಂ ಲ್ಯಾಂಡರ್ ಇದರಿಂದ ಬೇರ್ಪಡಲು ಒಂದು ಮಾತ್ರ ಹಂತ ಬಾಕಿ

ಬೆಂಗಳೂರು: ಚಂದ್ರಯಾನ – 3 ಬಾಹ್ಯಾಕಾಶ ನೌಕೆ ಚಂದ್ರನಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಇಸ್ರೋ ನಿಯಂತ್ರಣ ಕೇಂದ್ರದ ತಜ್ಞರು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಬಳಿಗೆ ಮತ್ತಷ್ಟು ಸಮೀಪ ಹೋಗುವಂತೆ ನೋಡಿಕೊಂಡಿದ್ದಾರೆ. ನೌಕೆಯನ್ನು ಕ್ರಮೇಣವಾಗಿ ಹೆಚ್ಚು-ಅಂಡಾಕಾರದ ಕಕ್ಷೆಯಿಂದ (174 km x 1437 km) ಚಂದ್ರನ ಸುತ್ತ ವೃತ್ತಾಕಾರದ ಕಕ್ಷೆಗೆ (150km x 177km) ಸ್ಥಳಾಂತರಿಸಲಾಗಿದೆ. ಈಗ ನೌಕೆಯು … Continued

ಎರಡು ಬಾರಿ ನೀಟ್‌ ಪರೀಕೆಯಲ್ಲಿ ಅನುತ್ತೀರ್ಣನಾದ ನಂತರ ಆತ್ಮಹತ್ಯೆ ಮಾಡಿಕೊಂಡ ಯುವಕ : ನಂತರ ತಂದೆಯೂ ಆತ್ಮಹತ್ಯೆ

ಚೆನ್ನೈ: ಚೆನ್ನೈನಲ್ಲಿ 19 ವರ್ಷದ ವೈದ್ಯಕೀಯ ಸೀಟ್‌ ಆಕಾಂಕ್ಷಿಯೊಬ್ಬ ಎರಡು ಬಾರಿ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಆತ ಸತ್ತಿದ್ದಾನೆ ಎಂದು ಘೋಷಿಸಲಾಯಿತು. ನಗರದ ಕ್ರೋಮ್‌ಪೇಟೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಯನ್ನು ಜಗದೀಶ್ವರನ್ ಎಂದು … Continued

ಭಾರೀ ಮಳೆಗೆ ಶಿಮ್ಲಾದಲ್ಲಿ ದೇವಸ್ಥಾನ ಕುಸಿದು 9 ಸಾವು

ಶಿಮ್ಲಾ: ಸೋಮವಾರ ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಶಿವ ದೇವಾಲಯ ಕುಸಿದು ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸಿಖು ತಿಳಿಸಿದ್ದಾರೆ. ಸಮ್ಮರ್ ಹಿಲ್ ಪ್ರದೇಶದ ದೇವಸ್ಥಾನದಲ್ಲಿ ಭೂಕುಸಿತದಲ್ಲಿ ಡಜನ್‌ಗಟ್ಟಲೆ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. … Continued

ತಿರುಪತಿ ಬೆಟ್ಟದಲ್ಲಿ ಚಿರತೆ ದಾಳಿ ಪ್ರಕರಣ : ಮಕ್ಕಳನ್ನು ಪಾದಚಾರಿ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಸಮಯ ಬದಲು

ತಿರುಪತಿ: ಇತ್ತೀಚಿಗೆ ಮಕ್ಕಳ ಮೇಲೆ ಚಿರತೆ ದಾಳಿಯ ಘಟನೆಗಳ ನಂತರ ತಿರುಮಲ ತಿರುಪತಿ ದೇವಸ್ಥಾನವು ಸಮೀಪದ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಪಾದಚಾರಿ ಮಾರ್ಗದಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಭಾನುವಾರ ನಿರ್ಬಂಧ ವಿಧಿಸಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಯಾತ್ರಾರ್ಥಿಗಳಿಗೆ ಪಾದಚಾರಿ ಮಾರ್ಗಗಳಲ್ಲಿ ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ … Continued