ಭಾರತದ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ ಅಗರ್ಕರ್ ನೇಮಕ

ನವದೆಹಲಿ: ಭಾರತದ ಮಾಜಿ ಆಲ್‌ರೌಂಡರ್ ಅಜಿತ್ ಅಗರ್ಕರ್ ಅವರನ್ನು ಭಾರತ ಪುರುಷರ ಕ್ರಿಕೆಟ್ ತಂಡದ ಆಯ್ಕೆಗಾರರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (CAC), ಪುರುಷರ ಆಯ್ಕೆ ಸಮಿತಿಯಲ್ಲಿ ಒಬ್ಬ ಆಯ್ಕೆಗಾರನ ಸ್ಥಾನಕ್ಕಾಗಿ ಅರ್ಜಿದಾರರನ್ನು ಸಂದರ್ಶಿಸಿತು. ಮೂವರು ಸದಸ್ಯರು ಅಜಿತ್ ಅಗರ್ಕರ್ ಅವರನ್ನು … Continued

ಎಸ್‌ಸಿಒ ಶೃಂಗಸಭೆ : ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಮ್ಮುಖದಲ್ಲಿ ಭಯೋತ್ಪಾದನೆ ಕುರಿತು ಪ್ರಬಲ ಸಂದೇಶ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಶಾಂಘೈ ಸಹಕಾರ ಸಂಸ್ಥೆಯನ್ನು (SCO) ಭಾರತವು ವರ್ಚುವಲ್‌ ನಲ್ಲಿ ಆಯೋಜಿಸಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಕೂಡ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಜೂನ್ ಅಂತ್ಯದಲ್ಲಿ ವ್ಯಾಗ್ನರ್ ಗುಂಪಿನ ದಂಗೆ ಹತ್ತಿಕ್ಕಿದಾಗಿನಿಂದ ಪುತಿನ್ ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು. ಶಾಂಘೈ … Continued

ಮೇಕೆ ಬಲಿಕೊಟ್ಟ ವ್ಯಕ್ತಿ… ಆದ್ರೆ ಆತನನ್ನು ಕೊಂದ ಅದೇ ಮೇಕೆಯ ಕಣ್ಣು…!

ಸೂರಜಪುರ: ದೇವರಿಗೆ ಆಡು ಬಲಿ ಕೊಟ್ಟ ನಂತರ ಅದೇ ಆಡಿನಿಂದ ಮೃತಪಟ್ಟಿರುವ ಘಟನೆ ಛತ್ತೀಸ್​ಗಢದ ಸೂರಜಪುರ ಜಿಲ್ಲೆಯಲ್ಲಿ ನಡೆದಿದೆ. ಛತ್ತೀಸ್‌ಗಢದ ಸೂರಜಪುರ ಜಿಲ್ಲೆಯ ಬಗರ್ ಸಾಯಿ ಎಂಬ 50 ವರ್ಷದ ವ್ಯಕ್ತಿ ತನ್ನ ಇಷ್ಟಾರ್ಥ ಈಡೇರಿದ ನಂತರ ದೇವಸ್ಥಾನದಲ್ಲಿ ಮೇಕೆಯನ್ನು ಬಲಿ ನೀಡಲು ಮುಂದಾಗಿದ್ದ. ಅದಕ್ಕಾಗಿ ಬಗರ್ ಸಾಯಿ ಅವರು ಮದನಪುರ ಗ್ರಾಮದ ಇತರ ಗ್ರಾಮಸ್ಥರೊಂದಿಗೆ … Continued

ವೀಡಿಯೊ | ಭೀಕರ ಅಪಘಾತದಲ್ಲಿ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಹೋಟೆಲ್‌ಗೆ ನುಗ್ಗಿದ ಟ್ರಕ್ : 10 ಮಂದಿ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಗಳವಾರ ಮಹಾರಾಷ್ಟ್ರದ ಧುಲೆಯಲ್ಲಿ ಹೆದ್ದಾರಿ ಟ್ರಕ್‌ ಕಾರಿಗೆ ಡಿಕ್ಕಿ ಹೊಡೆದ ನಂತರ ಹೋಟೆಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಸಾವಿಗೀಡಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಿಂದ ಸುಮಾರು 300-ಕಿಮೀ ದೂರದಲ್ಲಿರುವ ಧುಲೆ ಜಿಲ್ಲೆಯ ಮುಂಬೈ-ಆಗ್ರಾ ಹೆದ್ದಾರಿಯ ಪಲಾಸ್ನರ್ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ … Continued

2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣು: 4 ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ

ನವದೆಹಲಿ: 2024 ರ ಚುನಾವಣೆಗೆ ಮುಂಚಿತವಾಗಿ ಹಾಗೂ ಕೆಲವು ರಾಜ್ಯಗಳಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ ನಾಲ್ಕು ರಾಜ್ಯಗಳಿಗೆ ಮಂಗಳವಾರ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಬಿಜೆಪಿಮಂಗಳವಾರ ಪಂಜಾಬ್, ತೆಲಂಗಾಣ, ಜಾರ್ಖಂಡ್ ಮತ್ತು ಆಂಧ್ರಪ್ರದೇಶಕ್ಕೆ ರಾಜ್ಯ ಮುಖ್ಯಸ್ಥರನ್ನು ನೇಮಿಸಿದೆ. ಪಕ್ಷವು ತೆಲಂಗಾಣ, ಪಂಜಾಬ್ ಮತ್ತು ಜಾರ್ಖಂಡ್‌ನಲ್ಲಿ ಕ್ರಮವಾಗಿ ಕೇಂದ್ರ … Continued

ನಟಿ ಅನುಗೌಡ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಜಮೀನು ವಿವಾದ ಸಂಬಂಧ ಕಿರುತೆರೆ ಮತ್ತು ಚಲನಚಿತ್ರ ನಟಿ ಅನುಗೌಡ ಅವರ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾ‌ಲೂಕಿನ ಉಳ್ಳೂರು ಗ್ರಾಮ ಪಂಚಾಯತ ವ್ಯಾಪ್ತಿಯ ಕಾಸ್ಪಾಡಿಯಲ್ಲಿ ನಟಿ ಅನೂಗೌಡ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಜಮೀನಿನ ವಿವಾದದ … Continued

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸಕ್ಕೆ ಬೆಂಕಿ: ಅಮೆರಿಕ ತೀವ್ರ ಖಂಡನೆ : ವೀಡಿಯೊ

ನವದೆಹಲಿ: ಭಾನುವಾರ ಬೆಳಗಿನ ಜಾವ 1:30 ರಿಂದ 2:30ರ ನಡುವೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಚಾನೆಲ್ ದಿಯಾ ಟಿವಿ ಮಂಗಳವಾರ ವರದಿ ಮಾಡಿದೆ. ಐದು ತಿಂಗಳ ಅವಧಿಯಲ್ಲಿ ಕಾನ್ಸುಲೇಟ್‌ನ ಮೇಲಿನ ಇದು ಎರಡನೇ ದಾಳಿಯಾಗಿದ್ದು, ಖಲಿಸ್ತಾನಿ ಬೆಂಬಲಿಗರು ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಖಲಿಸ್ತಾನಿ ಬೆಂಬಲಿಗರು ಮಾರ್ಚ್‌ನಲ್ಲಿ … Continued

ದೆಹಲಿ ಸರ್ಕಾರದ 400 ತಜ್ಞರನ್ನು ವಜಾಗೊಳಿಸಿದ ಲೆಫ್ಟಿನೆಂಟ್ ಗವರ್ನರ್

ನವದೆಹಲಿ : ದೆಹಲಿಯ ಎಎಪಿ ಸರ್ಕಾರವು ವಿವಿಧ ಇಲಾಖೆಗಳಲ್ಲಿ ನೇಮಿಸಿದ್ದ ಸುಮಾರು 400 ‘ತಜ್ಞರ’ ಸೇವೆಯನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ವಜಾಗೊಳಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಈ ನಿರ್ಧಾರವು ಆಡಳಿತ ಪಕ್ಷ ಮತ್ತು ಎಲ್‌ಜಿ ನಡುವೆ ಹೊಸ ಸುತ್ತಿನ ಘರ್ಷಣೆಯನ್ನು ಉಂಟುಮಾಡಬಹುದು. ಅವರು “ಪಾರದರ್ಶಕವಲ್ಲದ ರೀತಿಯಲ್ಲಿ” ತೊಡಗಿಸಿಕೊಂಡಿದ್ದಾರೆ ಮತ್ತು ಸಕ್ಷಮ ಪ್ರಾಧಿಕಾರದ … Continued

ಭಾರತದಲ್ಲಿ 999 ರೂ.ಗಳಿಗೆ ಬಿಡುಗಡೆಯಾದ ಜಿಯೋ ಭಾರತ ಫೋನ್ : ಜುಲೈ 7ರಿಂದ ಮಾರಾಟ ಪ್ರಾರಂಭ

ರಿಲಯನ್ಸ್ ಜಿಯೋ ಭಾರತದಲ್ಲಿ ಜಿಯೋ ಭಾರತ 4G ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯ “2G-ಮುಕ್ತ ಭಾರತ’ ವಿಷನ್‌ ವೇಗಗೊಳಿಸುವುದು ಈ ಮೊಬೈಲ್ ಫೋನ್ ಬಿಡುಗಡೆ ಮಾಡುವ ಹಿಂದಿನ ಗುರಿಯಾಗಿದೆ. ಕಾರ್ಬನ್ ಸಹಭಾಗಿತ್ವದಲ್ಲಿ ಜಿಯೋ ಕಂಪನಿಯು ಎರಡು ಜಿಯೋ ಭಾರತ ಫೋನ್ ಮಾದರಿಗಳಲ್ಲಿ ಒಂದನ್ನು ಬಿಡುಗಡೆ ಮಾಡಿದೆ. ಜಿಯೋ ಭಾರತ ಫೋನ್‌ಗಳನ್ನು ನಿರ್ಮಿಸಲು ಇತರ ಬ್ರ್ಯಾಂಡ್‌ಗಳು … Continued

ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು: ಜುಲೈ 11ರಿಂದ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗಳನ್ನು ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಜುಲೈ 11 ರಂದು ವಿಚಾರಣೆ ನಡೆಸಲಿದೆ. ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಶಾ ಫೈಸಲ್ ಅರ್ಜಿದಾರರಲ್ಲಿ ಒಬ್ಬರು. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು … Continued