ಕಾಶ್ಮೀರಿ ಪಂಡಿತರು ಶೀಘ್ರದಲ್ಲೇ ತಮ್ಮ ಮೂಲ ನೆಲೆ ಕಾಶ್ಮೀರ ಕಣಿವೆಗೆ ಮರಳುವ ಸಮಯ ಬಂದಿದೆ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗ್ವತ್‌

ಜಮ್ಮು: ಕಾಶ್ಮೀರಿ ಪಂಡಿತರು ಶೀಘ್ರದಲ್ಲೇ ಕಣಿವೆಯಲ್ಲಿರುವ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ, ಅವರು ಮತ್ತೆ ಸ್ಥಳಾಂತರಗೊಳ್ಳದಂತೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. 1990ರಲ್ಲಿ ಕಣಿವೆಯಿಂದ ಕಾಶ್ಮೀರಿ ಪಂಡಿತರ ನಿರ್ಗಮನದ ಹಿಂದಿನ ವಾಸ್ತವತೆಯ ಬಗ್ಗೆ ದೇಶಾದ್ಯಂತ ಮತ್ತು ಹೊರಗೆ ಸಾರ್ವಜನಿಕ ಜಾಗೃತಿ ಮೂಡಿಸಿದೆ … Continued

ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸನನ್ನು ಎತ್ತಿ ಒಗೆದ ದೈತ್ಯಾಕಾರಾದ ಗೂಳಿ: ಆಸ್ಪತ್ರೆಗೆ ದಾಖಲು…ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ನಗರದ ದಯಾಳಪುರ ಪ್ರದೇಶದಲ್ಲಿ ಗುರುವಾರ ಸಂಜೆ ದೆಹಲಿ ಪೊಲೀಸರೊಬ್ಬರ ಮೇಲೆ ಗೂಳಿಯೊಂದು ದಾಳಿ ಮಾಡಿದೆ. ಕಾನ್‌ಸ್ಟೇಬಲ್ ಜ್ಞಾನ್ ಸಿಂಗ್ ದಯಾಳ್‌ಪುರದ ಶೇರ್‌ಪುರ್ ಚೌಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದೆ. ಗೂಳಿಯು ಪೊಲೀಸ್‌ ಪೇದೆಯು ಹಿಂದಿನಿಂದ ದಾಳಿ ಮಾಡಿ ಗಾಳಿಯಲ್ಲಿ ಹಾರಿಸಿತು. ಪೇದೆ ನೆಲಕ್ಕೆ ಬಿದ್ದ ನಂತರ, ಕರ್ತವ್ಯದಲ್ಲಿದ್ದ ಇತರ ಪೊಲೀಸರು ಹಾಗೂ ಸಾರ್ವಜನಿಕರು … Continued

ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಿ ಇಲ್ಲದಿದ್ದರೆ…. : ಮಹಾರಾಷ್ಟ್ರ ಸರ್ಕಾರಕ್ಕೆ ರಾಜ್ ಠಾಕ್ರೆ

ಮುಂಬೈ: ಮಸೀದಿಗಳಲ್ಲಿ ಹಾಕುವ ಧ್ವನಿ ವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್​ ಠಾಕ್ರೆ , ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಶಿವಾಜಿ ಪಾರ್ಕ್​​ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾನು ಪ್ರಾರ್ಥನೆಗಳನ್ನು ವಿರೋಧಿಸುವುದಿಲ್ಲ, ಯಾವುದೇ ಧರ್ಮದ ವಿರೋಧಿಯೂ ಅಲ್ಲ. ಆದರೆ ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತದೆ. ಅಷ್ಟೆಲ್ಲ ದೊಡ್ಡದಾಗಿ ಯಾಕೆ ಹಾಕಬೇಕು? ಈ … Continued

ಕಾಶ್ಮೀರಿ ಪಂಡಿತರ ಸಾಮೂಹಿಕ ವಲಸೆಗೆ ವಿ.ಪಿ.ಸಿಂಗ್, ಮುಫ್ತಿ ಮೊಹಮ್ಮದ್‌ ಸಯೀದ್ ಕಾರಣ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರ ಸಾಮೂಹಿಕ ವಲಸೆಗೆ ಅಂದಿನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅಲ್ಲ, ಆದರೆ ಆಗಿನ ಪ್ರಧಾನಿ ವಿ.ಪಿ. ಸಿಂಗ್ ಮತ್ತು ಅವರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಕಾರಣ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಶನಿವಾರ ಹೇಳಿದ್ದಾರೆ. ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆಯನ್ನು ಬಿಂಬಿಸುವ ದಿ ಕಾಶ್ಮೀರ್ ಫೈಲ್ಸ್ … Continued

ಯುಗಾದಿ ಮೆರವಣಿಗೆ ವೇಳೆ ಕಲ್ಲು ತೂರಾಟ: ನಾಲ್ವರು ಪೊಲೀಸ್‌ ಅಧಿಕಾರಿಗಳು ಸೇರಿ 42 ಜನರಿಗೆ ಗಾಯ

ಏಪ್ರಿಲ್ 2, ಶನಿವಾರದಂದು ರಾಜಸ್ಥಾನದ ಕರೌಲಿಯಲ್ಲಿ ಧಾರ್ಮಿಕ ಮೆರವಣಿಗೆಯ ಭಾಗವಾಗಿ ನಡೆದ ಮೋಟಾರ್‌ ಸೈಕಲ್ ರ್ಯಾಲಿಯ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರಿಂದ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 42 ಜನರು ಗಾಯಗೊಂಡಿದ್ದಾರೆ. ಹಿಂದೂ ಹೊಸ ವರ್ಷದ ಮೊದಲ ದಿನವಾದ ‘ನವ ಸಂವತ್ಸರ’ ಯುಗಾದಿ ಸಂದರ್ಭದಲ್ಲಿ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಘಟನೆಯ ನಂತರ ಪೊಲೀಸರು … Continued

ಭಾರತದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ 122 ವರ್ಷಗಳಲ್ಲೇ ಅತಿ ಹೆಚ್ಚು ಉಷ್ಣತೆ ದಾಖಲು…!

ನವದೆಹಲಿ: ಭಾರತದಲ್ಲಿ ದಾಖಲೆಯ ಸರಾಸರಿ ಉಷ್ಣಾಂಶ ದಾಖಲಾಗಿದ್ದು, ಅದರ ಪರಿಣಾಮ ಏಪ್ರಿಲ್​ನಲ್ಲೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಏಪ್ರಿಲ್​ನ ಮೊದಲ 10-15 ದಿನಗಳಲ್ಲಿ ಅತ್ಯಂತ ಉಷ್ಣಹವಾಮಾನ ಇರಲಿದ್ದು, ತೀವ್ರವಾದ ಶಾಖದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. 2022ರ ಈ ಮಾರ್ಚ್​ನಲ್ಲಿ ಮಾಸಿಕ ಸರಾಸರಿ ಉಷ್ಣಾಂಶ 122 ವರ್ಷಗಳಲ್ಲೇ … Continued

ಬಿಜೆಪಿಗೆ ದುರಹಂಕಾರ ಬಂದಿದೆ… ಗುಜರಾತ್‌ನಲ್ಲಿ ಆಪ್ ಗೆ ಅವಕಾಶ ಕೊಡಿ: ಅರವಿಂದ್ ಕೇಜ್ರಿವಾಲ್

ನವದೆಹಲಿ: ‘ಮಿಷನ್ ಗುಜರಾತ್’ ಅನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) “ಒಂದು ಅವಕಾಶ” ಕೋರಿ ಅಹಮದಾಬಾದ್ ನಗರದಲ್ಲಿ ಮೆಗಾ ರೋಡ್‌ ಶೋ ನಡೆಸಿದರು. ಈ ವರ್ಷದ ಕೊನೆಯಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಎಎಪಿ ನಾಯಕರು ಎರಡು … Continued

ಕಣಿವೆಗೆ ಉರುಳಿ ಬಿದ್ದ ಟ್ರಕ್: 7 ಸಾವು, 14 ಮಂದಿಗೆ ಗಾಯ

ತಿರುಪತ್ತೂರ: ದೇವಸ್ಥಾನಕ್ಕೆ ತೆರಳುತ್ತಿದ್ದ ಟ್ರಕ್ ಕಣಿವೆಗೆ ಬಿದ್ದ ಪರಿಣಾಮ 7 ಮಂದಿ ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಸೆಂಬರೈ ಗ್ರಾಮದಲ್ಲಿ ನಡೆದಿದೆ. ದೇವಾಲಯವು ಸೆಂಬರೈ ಗ್ರಾಮದ ಬೆಟ್ಟದ ಮೇಲಿದೆ. ಈ ದೇವಾಲಯಕ್ಕೆ ತೆರಳುವಾಗ ವಾಹನದ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಮಹಿಳೆಯರೂ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ 14 … Continued

ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡ ಹಾವಿನ ಜೊತೆ ಹೋರಾಡಿ ಜೀವ ಉಳಿಸಿಕೊಂಡ ಪುಟ್ಟ ಕಪ್ಪೆಯ ರೋಚಕ ವೀಡಿಯೋ ನೋಡಿ

ವಿಶ್ವಾಸ, ಧೈರ್ಯ ಹಾಗೂ ಪ್ರಯತ್ನದಿಂದ ಎಂಥ ಸವಾಲನ್ನೂ ಎದುರಿಸಬಹುದು ಎಂಬುದನ್ನು ಪುಟ್ಟ ಕಪ್ಪೆಯೊಂದು ಮಾಡಿ ತೋರಿಸಿದೆ. ಈ ಪುಟ್ಟ ಕಪ್ಪೆ ಮಾರುದ್ದ ಹಾವಿನ ವಿರುದ್ಧ ಸತತ ಹೋರಾಟದ ಫಲವಾಗಿ ಸಾವಿನ ದವಡೆಯಲ್ಲಿದ್ದ ತನ್ನ ಪ್ರಾಣ ಉಳಿಸಿಕೊಂಡಿದೆ. ಆ ವೀಡಿಯೊದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡದಾದ ಮತ್ತು ಬಲಶಾಲಿಯಾದ ಹಾವಿನ ಬಾಯಿಗೆ … Continued

ಐತಿಹಾಸಿಕ ಸುಂಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ-ಆಸ್ಟ್ರೇಲಿಯಾ ಸಹಿ

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ಶನಿವಾರ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಕ್ಯಾನ್‌ಬೆರಾ ತನ್ನ ಮಾರುಕಟ್ಟೆಯಲ್ಲಿ ಜವಳಿ, ಚರ್ಮ, ಆಭರಣ ಮತ್ತು ಕ್ರೀಡಾ ಉತ್ಪನ್ನಗಳಂತಹ 95 ಪ್ರತಿಶತಕ್ಕೂ ಹೆಚ್ಚು ಭಾರತೀಯ ಸರಕುಗಳಿಗೆ ಸುಂಕ ಮುಕ್ತ ಪ್ರವೇಶ ಒದಗಿಸಲಿದೆ. ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ … Continued