ಗುಜರಾತಿನ ಸೂರತ್‌ ನಗರದಲ್ಲಿ ದೇಶದ ಮೊದಲ ‘ಸ್ಟೀಲ್ ರಸ್ತೆ’ ನಿರ್ಮಾಣ…! ವೀಕ್ಷಿಸಿ

ಗುಜರಾತ್: ಭಾರತದ ಡೈಮಂಡ್ ಸಿಟಿ ಸೂರತ್ ನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಉಕ್ಕಿನ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡಲಾಗಿದೆ. ಸಂಶೋಧನೆಯ ಭಾಗವಾಗಿ, ಸೂರತ್ ನಗರದಲ್ಲಿ ಹಜಿರಾ ಕೈಗಾರಿಕಾ ಪ್ರದೇಶದಲ್ಲಿ ದೇಶದ ಮೊದಲ ಉಕ್ಕಿನ ತ್ಯಾಜ್ಯದಿಂದ ದೇಶದಲ್ಲಿಯೇ ಮೊದಲ ರಸ್ತೆ ನಿರ್ಮಾಣ ಮಾಡಲಾಗಿದ್ದು, ಆರು ಪಥಗಳ ಒಂದು ಕಿಮೀ ಉದ್ದದ ಸ್ಟೀಲ್ ರಸ್ತೆ ನಿರ್ಮಾಣವಾಗಿದೆ. ಇದರ ಮೇಲೆ … Continued

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ: ಉಚಿತ ಪಡಿತರ ಮತ್ತೆ 6 ತಿಂಗಳವರೆಗೆ ವಿಸ್ತರಣೆ

ನವದೆಹಲಿ: ದೇಶದ ಬಲಿಷ್ಠತೆ ಪ್ರತಿ ನಾಗರಿಕನ ಶಕ್ತಿಯ ಮೇಲೆ ನಿಂತಿದೆ. ಹಾಗಾಗಿ ಉಚಿತ ಆಹಾರಧಾನ್ಯ ವಿತರಿಸುವ ಯೋಜನೆಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟವು ಶನಿವಾರದಂದು ʻಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆʼ (PM-GKAY) ಅನ್ನು ಸೆಪ್ಟೆಂಬರ್‌ರವರೆಗೆ ಅಂದರೆ, ಇನ್ನೂ ಆರು … Continued

ಕಂದಕಕ್ಕೆ ಉರುಳಿದ ಬಸ್: 7 ಸಾವು, 45 ಮಂದಿಗೆ ಗಾಯ

ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ-ತಿರುಪತಿ ಹೆದ್ದಾರಿಯ ಬಳಿಯ ಬಕರಾಪೇಟ ಕಣುಮಾದಲ್ಲಿ ಶನಿವಾರ ರಾತ್ರಿ 11.30 ರ ಸುಮಾರಿಗೆ ಸಂಭವಿಸಿದ ದುರ್ಘಟನೆಯಲ್ಲಿ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 7 ಮಂದಿ ಸಾವಿಗೀಡಾಗಿದ್ದು, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಮಾಲಿಶೆಟ್ಟಿ ವೆಂಗಪ್ಪ (60), ಮಾಲಿಶೆಟ್ಟಿ ಮುರಳಿ (45), ಕಾಂತಮ್ಮ (40), ಮಾಲಿಶೆಟ್ಟಿ ಗಣೇಶ್ (40), … Continued

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ಸಿನಿಂದ ಮೆಹಂಗಾಯಿ-ಮುಕ್ತ್ ಭಾರತ ಅಭಿಯಾನ; ಮಾರ್ಚ್ 31ರಿಂದ 3 ಹಂತದಲ್ಲಿ ದೇಶಾದ್ಯಂತ ಪ್ರತಿಭಟನೆ

ನವದೆಹಲಿ: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಶನಿವಾರ ಮೂರು ಹಂತದ ಪ್ರತಿಭಟನಾ ಅಭಿಯಾನ ಮಾಡುವುದಾಗಿ ಘೋಷಿಸಿದ್ದು, “ಮೆಹಂಗಾಯಿ-ಮುಕ್ತ್ ಭಾರತ್ ಅಭಿಯಾನ್”ದ ಅಡಿಯಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 7 ರವರೆಗೆ ದೇಶಾದ್ಯಂತ ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಿದೆ. ಶನಿವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಆಂದೋಲನವನ್ನು ಪ್ರಾರಂಭಿಸುವ ನಿರ್ಧಾರವನ್ನು … Continued

ಉಜ್ಜಯಿನಿ ಹಲ್ಲೆ ಪ್ರಕರಣ: ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ ಸಿಂಗ್‌ಗೆ ಒಂದು ವರ್ಷ ಜೈಲು ಶಿಕ್ಷೆ

2011ರಲ್ಲಿ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಪ್ರತಿಭಟನಾ ನಿರತ ಕಾರ್ಯಕರ್ತರೊಂದಿಗೆ ಘರ್ಷಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇಂದೋರ್ ಜಿಲ್ಲಾ ನ್ಯಾಯಾಲಯವು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಮತ್ತು ಇತರ ಆರು ಮಂದಿಗೆ ಶನಿವಾರ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ನಂತರ ನ್ಯಾಯಾಲಯವು ತಲಾ 25,000 ರೂ.ಗಳ ಶ್ಯೂರಿಟಿಯ ಮೇಲೆ ಎಲ್ಲರಿಗೂ ಜಾಮೀನು … Continued

ಆರ್‌ಎಸ್‌ಎಸ್‌ ವಿರೋಧಿ ಬರಹ ಪ್ರಶ್ನಿಸಿ ಅದರ ಸದಸ್ಯರು ಮಾನನಷ್ಟ ಮೊಕದ್ದಮೆ ಹೂಡಬಹುದು: ಕೇರಳ ಹೈಕೋರ್ಟ್‌ ತೀರ್ಪು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: ತನ್ನ ಸಂಘಟನೆ ವಿರುದ್ಧ ಅವಹೇಳನಕಾರಿ ಸಂಗತಿಗಳನ್ನು ಪ್ರಕಟಿಸಿದ ಸುದ್ದಿ ಸಂಸ್ಥೆಯ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯರೊಬ್ಬರು ನೀಡಿದ ದೂರನ್ನು ಐಪಿಸಿ ಸೆಕ್ಷನ್‌ 499ರ ಅಡಿ ವಿಚಾರಣೆ ನಡೆಸಬಹುದು ಎಂದು  ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಕೇರಳ ಹೈಕೋರ್ಟ್‌ ತೀರ್ಪು ಸುಪ್ರೀಂಕೋರ್ಟ್‌ನ ಯಾವುದೇ ಮಧ್ಯಪ್ರವೇಶಕ್ಕೆ ಆಸ್ಪದವೀಯುವಂತೆ … Continued

ಪ್ಯಾರಸಿಟಮಾಲ್ ಸೇರಿದಂತೆ 800ಕ್ಕೂ ಹೆಚ್ಚು ಅಗತ್ಯ ಔಷಧಗಳು ಏಪ್ರಿಲ್‌ನಿಂದ ದುಬಾರಿ

ನವದೆಹಲಿ: ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ (ಎನ್‌ಎಲ್‌ಇಎಂ) ಅಡಿಯಲ್ಲಿ ಪ್ಯಾರಸಿಟಮಾಲ್, ಅಜಿಥ್ರೊಮೈಸಿನ್ ಸೇರಿದಂತೆ 800 ಕ್ಕೂ ಹೆಚ್ಚು ಔಷಧಗಳು ಏಪ್ರಿಲ್ 1 ರಿಂದ 10.7%ರಷ್ಟು ಹೆಚ್ಚಾಗಲಿವೆ. 2020 ರಲ್ಲಿ ಇದೇ ಅವಧಿಯಲ್ಲಿ 2021 ರ ಕ್ಯಾಲೆಂಡರ್ ವರ್ಷಕ್ಕೆ ಸಗಟು ಬೆಲೆ ಸೂಚ್ಯಂಕದಲ್ಲಿ (WPI) 10.7 %ರಷ್ಟು ಬದಲಾವಣೆಯನ್ನು ಶುಕ್ರವಾರ ದ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ … Continued

ಉತ್ತರಾಖಂಡ​ ರಾಜ್ಯದ ಇತಿಹಾಸದಲ್ಲೇ ಮೊದಲ ಮಹಿಳಾ ಸ್ಪೀಕರ್ ಆಗಿ ರಿತು ಖಂಡೂರಿ ಭೂಷಣ್ ಆಯ್ಕೆ

ಡೆಹ್ರಾಡೂನ್: ಉತ್ತರಾಖಂಡದ ನೂತನ ಸ್ಪೀಕರ್ (5ನೇ ಸ್ಪೀಕರ್​)​ ಆಗಿ ರಿತು ಖಂಡೂರಿ ಭೂಷಣ್​​ ಅವಿರೋಧವಾಗಿ ಆಯ್ಕೆಯಾಗಿದ್ದು, ಉತ್ತರಾಖಂಡ್​ ಇತಿಹಾಸದಲ್ಲಿಯೇ ಮೊದಲ ಮಹಿಳಾ ಸ್ಪೀಕರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉತ್ತರಾಖಂಡದ ಕೋಟ್‌ದ್ವಾರ ವಿಧಾನಸಭೆ ಕ್ಷೇತ್ರದ ಶಾಸಕಿಯಾಗಿರುವ ಅವರು ಗುರುವಾರ ಡೆಹ್ರಾಡೂನ್​​ನಲ್ಲಿ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ವಿಧಾನಸಭೆ ಕಾರ್ಯದರ್ಶಿ ಮುಖೇಶ್ … Continued

ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ, ಅದು ತತ್ವಶಾಸ್ತ್ರದ ಕೃತಿ: ಎನ್ ಸಿಎಂ ಕಾರ್ಯಾಧ್ಯಕ್ಷೆ ಸೈಯದ್ ಶಹೆಜಾದಿ

ನವದೆಹಲಿ: ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ, ಅದು ತತ್ವಶಾಸ್ತ್ರದ ಪುಸ್ತಕ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಕಾರ್ಯಾಧ್ಯಕ್ಷೆ ಸೈಯದ್ ಶಹೆಜಾದಿ ಹೇಳಿದ್ದಾರೆ. ಗುಜರಾತ್ ಸರಕಾರವು ಶಾಲಾ ಪಠ್ಯಕ್ರಮದ ಭಾಗವಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಹೇಳಿಕೆ ಬಂದಿದೆ. 2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ 6 ರಿಂದ 12 ನೇ ತರಗತಿಗಳಿಗೆ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು … Continued

7 ತಿಂಗಳಲ್ಲಿ 3 ಬಾರಿ ಕಚ್ಚಿದ ನಾಗರಹಾವು…ಮೂರನೇ ಸಲ ಪ್ರಾಣವನ್ನೇ ತೆಗೆಯಿತು..!

ಆದಿಲಾಬಾದ್ (ತೆಲಂಗಾಣ)​: ತೀರ ಅಪರೂಪದ ಘಟನೆಯೊಂದರಲ್ಲಿ ಯುವತಿಗೆ ಬೇರೆ ಬೇರೆ ಸಮಯದಲ್ಲಿ ಅಂದರೆ ಏಳು ತಿಂಗಳಲ್ಲಿ ನಾಗರ ಹಾವು ಮೂರು ಸಲ ಕಚ್ಚಿದೆ, ಎರಡು ಸಲ ಬದುಕಿದೆ ಹುಡುಗಿ ಮೂರನೇ ಸಲ ಕಚ್ಚಿದಾಗ ಪ್ರಾಣ ಕಳೆದುಕೊಂಡಿದ್ದಾಳೆ ಎಂದಿ ಈಟವಿ ಭಾರತ್‌ ವರದಿ ಮಾಡಿದೆ. ವರದಿ ಪ್ರಕಾರ, ಈ ಘಟನೆ ತೆಲಂಗಾಣದ ಆದಿಲಾಬಾದ್​ ಜಿಲ್ಲೆಯಲ್ಲಿ ನಡೆದ ಬಗ್ಗೆ … Continued