ಉತ್ತರಾಖಂಡ ಚುನಾವಣೆ 2022: ಝೀ ನ್ಯೂಸ್‌ ಸಮೀಕ್ಷೆಯಲ್ಲಿ ಗೆಲ್ಲುವವರು ಯಾರು..?

ನವದೆಹಲಿ: ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದಲ್ಲಿ ಝೀ ನ್ಯೂಸ್ ಮತದಾರರಲ್ಲಿ ಅಭಿಪ್ರಾಯ ಸಂಗ್ರಹವನ್ನು ನಡೆಸಿದೆ. ಯುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ಆಡಳಿತಾರೂಢ ಬಿಜೆಪಿ ಚುನಾವಣೆ ಎದುರಿಸುತ್ತಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮೇಲೆ ತನ್ನ ಭರವಸೆಯನ್ನು … Continued

ಕರ್ನಾಟಕದಲ್ಲಿ ಸೋಮವಾರ 27,156 ಹೊಸ ಸೋಂಕು ದಾಖಲು, ಇದು ನಿನ್ನೆಗಿಂತ ಸ್ವಲ್ಪ ಕಡಿಮೆ

ಬೆಂಗಳೂರು: ಕರ್ನಾಟಕದಲ್ಲಿ ನಿನ್ನೆಗಿಂತ ಇಂದು, ಸೋಮವಾರ ಕೊರೊನಾ ದೈನಂದಿನ ಸೋಂಕುಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಇಳಿಕೆಯಾಗಲು ಮುಖ್ಯ ಕಾರಣ ಬೆಂಗಲೂರಿನಲ್ಲಿ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗಿರುವುದು. ಇಂದು ರಾಜ್ಯದಲ್ಲಿ ಒಟ್ಟು 27,156 ದೈನಂದಿನ ದಾಖಲಾಗಿವೆ. ನಿನ್ನೆ ಒಟ್ಟು 34,047 ಪ್ರಕರಣ ದಾಖಲಾಗಿತ್ತು. ಇಂದು ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. ಇದೇವೇಳೆ 7,827 ಮಂದಿ ಚೇತರಿಸಿಕೊಂಡು ವಿವಿಧ … Continued

ಡ್ರಾ ಮಾಡುವ ಕೆಲವೇ ಗಂಟೆಗಳ ಮೊದಲು ಖರೀದಿಸಿ 12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್..!

ತಿರುವನಂತಪುರಂ: ಕೇರಳದ ಕೊಟ್ಟಾಯಂನಲ್ಲಿ ಪೇಂಟಿಂಗ್ ಕೆಲಸಗಾರರೊಬ್ಬರು ಸರ್ಕಾರದ ಕ್ರಿಸ್‌ಮಸ್-ಹೊಸ ವರ್ಷದ ಲಾಟರಿಯ 12 ಕೋಟಿ ರೂ.ಗಳ ಮೊದಲ ಬಹುಮಾನ ಗೆದ್ದಿದ್ದಾರೆ..! ಐಮನಂ ಸಮೀಪದ ಕುಡಯಂಪಾಡಿ ಮೂಲದ ಸದಾನಂದನ್ ಅಲಿಯಾಸ್ ಸದನ್ ಅವರು ಭಾನುವಾರ ಬೆಳಿಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾಗೆ ಕೆಲವೇ ಗಂಟೆಗಳ ಮೊದಲು ಮಾರಾಟಗಾರರಿಂದ XG 218582 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದರು. ನಾನು ಬೆಳಿಗ್ಗೆ … Continued

ಪಂಜಾಬ್‌ನಲ್ಲಿ ಫೆ.14ರ ಬದಲಿಗೆ ಈಗ ಫೆಬ್ರವರಿ 20 ರಂದು ಮತದಾನ: ಚುನಾವಣಾ ಆಯೋಗ

ನವದೆಹಲಿ; ಹಲವಾರು ರಾಜಕೀಯ ಪಕ್ಷಗಳು ಮನವಿ ಮಾಡಿದ ನಂತರ ಫೆಬ್ರವರಿ 14 ರಂದು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಚುನಾವಣಾ ಆಯೋಗ (EC) ಮುಂದೂಡಿದೆ. ಒಂದೇ ಹಂತದ ಪಂಜಾಬ್ ವಿಧಾನಸಭಾ ಚುನಾವಣೆಯ ಮತದಾನ ಈಗ ಫೆಬ್ರವರಿ 20ರಂದು ನಡೆಯಲಿದೆ. ಗುರು ರವಿದಾಸ್ ಜಯಂತಿಯನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 14ರಂದು ಪಂಜಾಬಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ವಿವಿಧ … Continued

12ರಿಂದ 14 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಯಾವಾಗ?: ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರಿಂದ ಮಹತ್ವದ ಮಾಹಿತಿ

ನವದೆಹಲಿ: ದೇಶದಲ್ಲಿ 12ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಫೆಬ್ರವರಿ ಕೊನೆ ವಾರ ಅಥವಾ ಮಾರ್ಚ್‌ ಮೊದಲ ವಾರದಿಂದ ಈ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಹಾಗೂ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಎನ್ .ಕೆ ಅರೋರಾ ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು … Continued

365 ಬಗೆಯ ತಿನಿಸುಗಳ ಮೂಲಕ ಭಾವಿ ಅಳಿಯನಿಗೆ ಸಂಕ್ರಾಂತಿ ಹಬ್ಬಕ್ಕೆ ಸ್ವಾಗತ ನೀಡಿದ ಆಂಧ್ರದ ಕುಟುಂಬ..!

ಆಂಧ್ರಪ್ರದೇಶದ ಭಾವಿ ಅಳಿಯನಿಗೆ ಸಂಕ್ರಾಂತಿ ಹಬ್ಬದಂದು ಅವನ ಅತ್ತೆ-ಮಾವಂದರು ಭವ್ಯವಾದ ಔತಣವನ್ನು ಏರ್ಪಡಿಸಿದ್ದರು.. ಇದು ಅಂತಿಂಧ ಔತಣವಲ್ಲ, ಇದು ರಾಜ ಮಹಾರಾಜರ ಮನೆಯಲ್ಲಿಯೂ ಸಿಗುವುದು ವಿರಳ. ಏಕೆಂದರೆ ಅವರು ತಮ್ಮ ಭಾವಿ ಅಳಿಯನಿಗೆ ವರ್ಷದ 365 ದಿನಗಳನ್ನು ಪರಿಗಣಿಸಿ 365 ವಿಧದ ಭಕ್ಷ್ಯಗಳನ್ನು ಸಿದ್ಧಗೊಳಿಸಿದ್ದರು..!. ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ಆಂಧ್ರದ ಕುಟುಂಬವೊಂದು ಮಕರ ಸಂಕ್ರಾಂತಿ … Continued

ಬಲವಂತದಿಂದ ಯಾರಿಗೂ ಕೋವಿಡ್‌ ಲಸಿಕೆ ನೀಡುವುದಿಲ್ಲ: ಸುಪ್ರೀಂಕೋರ್ಟಿಗೆ ತಿಳಿಸಿದ ಕೇಂದ್ರ ಸರ್ಕಾರ

ನವದೆಹಲಿ : ಒತ್ತಾಯದಿಂದ ಯಾರಿಗೂ ಲಸಿಕೆ ನೀಡುವುದಿಲ್ಲ. ಅಂತಹ ಯಾವುದೇ ಸೂಚನೆಯನ್ನು ಕೇಂದ್ರ ಸರ್ಕಾರ ಅಥವಾ ಆರೋಗ್ಯ ಸಚಿವಾಲಯ ಹೊರಡಿಸಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ತಿಳಿಸಿದೆ. ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪಡೆಯಲು ವಿಕಲಾಂಗ ವ್ಯಕ್ತಿಗಳಿಗೆ ವಿನಾಯಿತಿ ನೀಡುವ ವಿಷಯದ ಕುರಿತು, ಕೇಂದ್ರವು ಯಾವುದೇ ಉದ್ದೇಶಕ್ಕಾಗಿ ಲಸಿಕೆ ಪ್ರಮಾಣಪತ್ರವನ್ನು ಕೊಂಡೊಯ್ಯುವುದನ್ನು ಕಡ್ಡಾಯಗೊಳಿಸುವ ಯಾವುದೇ ಮಾರ್ಗಸೂಚಿಯನ್ನೂ ನೀಡಿಲ್ಲ … Continued

ಮೂರು ಕಣ್ಣುಗಳು, ನಾಲ್ಕು ಮೂಗಿಗೆ ರಂಧ್ರಗಳಿರುವ ವಿಶಿಷ್ಟ ಆಕಳ ಕರುವಿನ ಜನನ..!

ರಾಜನಂದಗಾಂವ್: ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ರೈತನ ಜರ್ಸಿ ಹಸುವೊಂದು ಮೂರು ಕಣ್ಣಿನ ಕರುವಿಗೆ ಜನ್ಮ ನೀಡಿದೆ ಹಾಗೂ ಅದರ ಮೂಗಿನಲ್ಲಿ ಎರಡು ರಂಧ್ರಗಳ ಬದಲು 4 ರಂಧ್ರಗಳಿವೆ..! ಮೂರುಕಣ್ಣಿನ ಕರುವನ್ನು ನೋಡಲು ದೂರದ ಗ್ರಾಮಗಳಿಂದ ಜನ ಬರುತ್ತಿದ್ದಾರೆ. ಗ್ರಾಮದ ನಿವಾಸಿಗಳು ಕರುವಿಗೆ ಮಾಲೆ ಹಾಕಿ ಹಾಗೂ ಹಣ ಅರ್ಪಿಸಿ ಮಹಾದೇವನ ರೂಪವೆಂದು ಪೂಜಿಸುತ್ತಿದ್ದಾರೆ. ಮತ್ತೊಂದೆಡೆ, ಭ್ರೂಣವು … Continued

ಭಾರತದಲ್ಲಿ 2.59 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ ಅಲ್ಪ ಇಳಿಕೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,58,089 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಸೋಮವಾರ ಬಹಿರಂಗಪಡಿಸಿವೆ. ಇಲ್ಲಿಯವರೆಗೆ 8,209 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. 24-ಗಂಟೆಗಳ ಅವಧಿಯಲ್ಲಿ ಕೋವಿಡ್ ಸಾವುನೋವುಗಳ ಸಂಖ್ಯೆ 385 ದಾಖಲಾಗಿದೆ. ಸಕಾರಾತ್ಮಕತೆಯ ಪ್ರಮಾಣವು ಈಗ 19.65% ರಷ್ಟಿದೆ. ಭಾರತದ ಸಕ್ರಿಯ ಪ್ರಕರಣಗಳು ಪ್ರಸ್ತುತ 16,56,341 ರಷ್ಟಿದೆ. … Continued

ಕಥಕ್‌ ನೃತ್ಯದ ದಂತಕತೆ ಪಂಡಿತ ಬಿರ್ಜು ಮಹಾರಾಜ ನಿಧನ

ಕಥಕ್ ದಂತಕತೆ ಹಾಗೂ ಭಾರತೀಯ ನೃತ್ಯ ಪ್ರಕಾರದಲ್ಲಿ ಲಕ್ನೋ ಘರಾನಾ ಪರಂಪರೆ ಮುನ್ನಡೆಸಿದ್ದ ವಿಶ್ವ ಪ್ರಸಿದ್ಧ ಕಥಕ್‌ ನೃತ್ಯಪಟು ಪಂಡಿತ್ ಬಿರ್ಜು ಮಹಾರಾಜ್  (83) ಭಾನುವಾರ ತಡ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸೋದರಳಿಯ ಮತ್ತು ಶಿಷ್ಯ ಪಂ. ಮುನ್ನಾ ಶುಕ್ಲಾ ತಮ್ಮ 78 ನೇ ವಯಸ್ಸಿನಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದ ಕೆಲವೇ ದಿನಗಳಲ್ಲಿ … Continued