ಬರಲಿವೆ ಆಕಾಶದಲ್ಲಿ ಹಾರುವ ಕಾರುಗಳು : 300 ಕಿಲೋಮೀಟರ್ ಗರಿಷ್ಠ ವೇಗ …ಮೊದಲ ನಗರವಾಗಲು ಸಿದ್ಧವಾಗುತ್ತಿದೆ ದುಬೈ…!

ಏರ್ ಟ್ಯಾಕ್ಸಿಗಳು ಶೀಘ್ರವೇ ರಿಯಾಲಿಟಿ ಆಗಬಹುದು. 2026 ರ ವೇಳೆಗೆ ದುಬೈನಲ್ಲಿ ಏರ್ ಟ್ಯಾಕ್ಸಿಗಳು (Flying Taxi service) ಆಕಾಶದಲ್ಲಿ ಸಂಚರಿಸಲಿವೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಪ್ರಕಟಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶೇಖ್ ಮೊಹಮ್ಮದ್ ” ಇಂದು … Continued

ಕರಾಚಿ ಪೊಲೀಸ್ ಮುಖ್ಯಸ್ಥ ಕಚೇರಿಯಲ್ಲಿ ಗುಂಡಿನದಾಳಿ : 5 ಪಾಕಿಸ್ತಾನಿ ತಾಲಿಬಾನ್ ಉಗ್ರರು ಸೇರಿ 9 ಮಂದಿ ಸಾವು

ತೆಹ್ರೀಕ್-ಎ-ತಾಲಿಬಾನ್ (ಪಾಕಿಸ್ತಾನ) ನ ಶಸ್ತ್ರಸಜ್ಜಿತ ಉಗ್ರರು ಶುಕ್ರವಾರ ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಕರಾಚಿ ಪೊಲೀಸ್ ಮುಖ್ಯಸ್ಥರ ಮುಖ್ಯ ಕಚೇರಿ ಕಟ್ಟಡದ ನಿಯಂತ್ರಣ ಮರಳಿ ಪಡೆಯಲು ಯಶಸ್ವಿಯಾದ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಐವರು ಭಯೋತ್ಪಾದಕರು ಸೇರಿದಂತೆ ಒಂಬತ್ತು ಜನರು ಮೃತಪಟ್ಟಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸ್ ಪೇದೆಗಳು, ರೇಂಜರ್ … Continued

ಟರ್ಕಿ, ಸಿರಿಯಾದಲ್ಲಿ ಭೂಕಂಪ : 45,000 ದಾಟಿದ ಸಾವಿನ ಸಂಖ್ಯೆ

ಇಸ್ತಾಂಬುಲ್‌: ಟರ್ಕಿ ಮತ್ತು ಸಿರಿಯಾದಲ್ಲಿ ಭಾರಿ ಭೂಕಂಪ ಸಂಭವಿಸಿದ 11 ದಿನಗಳ ನಂತರ ರಕ್ಷಣಾ ಕಾರ್ಯಕರ್ತರು ಅವಶೇಷಗಳಡಿಯಿಂದ ಮೂವರನ್ನು ಹೊರತೆಗೆದಿದ್ದಾರೆ. 7.8 ತೀವ್ರತೆಯ ಭೂಕಂಪದಲ್ಲಿ 45,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 40ಕ್ಕೂ ಹೆಚ್ಚು ನಂತರದ ಆಘಾತಗಳು ಸಾವಿರಾರು ಕಟ್ಟಡಗಳನ್ನು ನೆಲಸಮಗೊಳಿಸಿದವು. ಅನೇಕ ಅಂತಾರಾಷ್ಟ್ರೀಯ ರಕ್ಷಣಾ ತಂಡಗಳು ವಿಶಾಲವಾದ ಭೂಕಂಪ ವಲಯವನ್ನು ತೊರೆದಿದ್ದರೂ, ಬದುಕುಳಿದವರು ಇನ್ನೂ … Continued

ಪಾಕಿಸ್ತಾನದಲ್ಲಿ ಈಗ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 272 ರೂ..! ಒಂದು ಲೀಟರ್‌ ಹಾಲಿಗೆ 210 ರೂ….!!

ಪಾಕಿಸ್ತಾನದ ನಾಗರಿಕರು ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ ಈಗ 272 ರೂ.ಗಳನ್ನು ತೆರಬೇಕು. ಇಂಧನ ಬೆಲೆಯಲ್ಲಿನ ಹೊಸ ಹೆಚ್ಚಳದ ನಂತರ ಪ್ರತಿ ಲೀಟರ್‌ ಡೀಸೆಲ್‌ಗೆ 280 ರೂ.ಗಳು ವೆಚ್ಚವಾಗುತ್ತದೆ. ಇಂಧನ ಬೆಲೆಗಳ ಹೆಚ್ಚಳವು ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನದ ನಾಗರಿಕರಿಗೆ ಮತ್ತಷ್ಟು ಹೊರೆಗೆ ಕಾರಣವಾಗಿದೆ. ಶೆಹಬಾಜ್ ಷರೀಫ್ ಸರ್ಕಾರವು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪೂರಕ ಹಣಕಾಸು … Continued

ಗಂಡಸರಿಗೂ ಬರಲಿದೆ ಗರ್ಭನಿರೋಧಕ ಮಾತ್ರೆಗಳು : ವಿಜ್ಞಾನಿಗಳಿಂದ ಹೊಸ ಸಂಶೋಧನೆ

ಮಹಿಳೆಯರಿಗಾಗಿ ಇರುವ ಗರ್ಭ ನಿರೋಧಕ ಮಾತ್ರೆಗಳಂತೆ ಪುರುಷರಿಗೂ ಗರ್ಭನಿರೋಧಕ ಮಾತ್ರೆಗಳನ್ನು ಮಾರುಕಟ್ಟೆಗೆ ತರುವ ಬಗ್ಗೆ ತಜ್ಞರ ತಂಡವೊಂದು ಸಂಶೋಧನೆ ನಡೆಸಿದೆ. ಇದನ್ನು ಮೊದಲು ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಇದು ಭರವಸೆ ಮೂಡಿಸಿದೆ ಎಂದು ಅಧ್ಯಯನ ನಿರತರು ಹೇಳಿದ್ದಾರೆ. ಇಲಿಗಳ ಮೇಲೆ ಪ್ರಾಯೋಗಿಕ ಸಂಶೋಧನೆ ಸಮಯದಲ್ಲಿ, ಅಮೆರಿಕನ್ ವಿಜ್ಞಾನಿಗಳು ಒಂದು ಪುರುಷ ಗರ್ಭನಿರೋಧಕ ಟ್ಯಾಬ್ಲೆಟ್ ಒಂದು … Continued

2024ರ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಬಿಡ್ ಘೋಷಿಸಿದ ಭಾರತೀಯ ಮೂಲದ ಅಮೆರಿಕನ್ ನಿಕ್ಕಿ ಹ್ಯಾಲೆ

ಚಾರ್ಲ್ಸ್ಟನ್ (ಅಮೆರಿಕ) : ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಅವರು 2024 ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ, ವಾಷಿಂಗ್ಟನ್‌ನಲ್ಲಿ “ಹೊಸ ತಲೆಮಾರಿನ” ನಾಯಕತ್ವವನ್ನು ಪ್ರಸ್ತಾಪಿಸುವ ಮೂಲಕ ಸಹ ರಿಪಬ್ಲಿಕನ್ ಅಭ್ಯರ್ಥಿ 76 ವರ್ಷದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಸವಾಲು ಹಾಕಿದ್ದಾರೆ. “ನಾನು ನಿಕ್ಕಿ ಹ್ಯಾಲಿ ಮತ್ತು … Continued

ಪೋರ್ಚುಗಲ್‌: ಕ್ಯಾಥೋಲಿಕ್ ಚರ್ಚ್ ಪಾದ್ರಿಗಳಿಂದ 5,000 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ…!

ಲಿಸ್ಬನ್(ಪೋರ್ಚುಗಲ್): ಪೋರ್ಚುಗಲ್‌ನ ಕ್ಯಾಥೋಲಿಕ್ ಪಾದ್ರಿಗಳು 1950ರಿಂದ ಸುಮಾರು 5,000 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಎಸಗಿದ್ದಾರೆ ಎಂದು ನೂರಾರು ಸಂತ್ರಸ್ತರ ಬಗ್ಗೆ ತನಿಖೆ ನಡೆಸಿದ ನಂತರ ಸ್ವತಂತ್ರ ಆಯೋಗ ಸೋಮವಾರ ಹೇಳಿದೆ. ಸ್ವತಂತ್ರ ಆಯೋಗ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಚರ್ಚ್‌ಗಳ ಪಾದ್ರಿಗಳ ಲೈಂಗಿಕ ದೌರ್ಜನ್ಯದ ಬಗ್ಗೆ ಪೋರ್ಚುಗಲ್‌ನ ಕ್ಯಾಥೋಲಿಕ್‌ … Continued

ಉದ್ಯೋಗ ಹುಡುಕಲು ಸಹಕರಿಸುವ ಸಾಮಾಜಿಕ ಪ್ಲಾಟ್‌ಫಾರ್ಮ್‌ ಲಿಂಕ್ಡ್‌ಇನ್‌ ನಲ್ಲೂ ಉದ್ಯೋಗಿಗಳ ಕಡಿತ..!

ಜನರು ಉದ್ಯೋಗಗಳಿಗಾಗಿ ಸೈನ್ ಅಪ್ ಮಾಡುವ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ಮತ್ತು ಈಗ ಉದ್ಯೋಗಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುವ ಲಿಂಕ್ಡ್‌ಇನ್‌ ಸಹ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ಟೆಕ್ ದೈತ್ಯ ಮೈಕ್ರೋಸಾಫ್ಟ್ ಮಾರ್ಚ್ ವೇಳೆಗೆ ಸುಮಾರು 10,000 ಜನರನ್ನು ವಜಾಗೊಳಿಸುವುದಾಗಿ ಘೋಷಿಸಿದ ನಂತರ ಈ ಸುದ್ದಿ ಬಂದಿದೆ. ವರದಿಯ ಪ್ರಕಾರ, … Continued

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಮಾನವ ರಹಿತ ಯುದ್ಧ ವಿಮಾನದ ಯಶಸ್ವಿ ಹಾರಾಟ ನಡೆಸಿದ ಲಾಕ್ಹೀಡ್ ಮಾರ್ಟಿನ್…!

ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ದೈತ್ಯ ಲಾಕ್ಹೀಡ್ ಮಾರ್ಟಿನ್ ಕಂಪನಿ ಕೃತಕ ಬುದ್ಧಿಮತ್ತೆ (Artificial Intelligence) ಮೂಲಕ ಕಾರ್ಯನಿರ್ವಹಿಸುವ ಯುದ್ಧತಂತ್ರದ ತರಬೇತಿ ವಿಮಾನ ಹಾರಾಟದ ಯಶಸ್ವಿ ಪರೀಕ್ಷೆ ನಡೆಸಿದೆ. ಕಂಪನಿಯ ಪ್ರಕಾರ ಇದೇ ಮೊದಲ ಬಾರಿಗೆ ಯುದ್ಧತಂತ್ರದ ವಿಮಾನ ಹಾರಾಟ ನಡೆಸಲು ಕೃತಕ ಬುದ್ಧಿಮತ್ತೆ (AI) ಬಳಸಲಾಗಿದೆ. ಇದು ವೇರಿಯಬಲ್ ಇನ್-ಫ್ಲೈಟ್ ಸಿಮ್ಯುಲೇಶನ್ ಟೆಸ್ಟ್ ಏರ್‌ಕ್ರಾಫ್ಟ್ … Continued

ʼಜೋಕ್ʼ : ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್‌ ಬದುಕಿದ್ದಾನೆ ಎಂಬ ತಮಿಳು ನಾಯಕನ ಹೇಳಿಕೆ ತಳ್ಳಿಹಾಕಿದ ಶ್ರೀಲಂಕಾ

ಕೊಲಂಬೊ: ಎಲ್‌ಟಿಟಿಇಯ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾದ 14 ವರ್ಷಗಳ ನಂತರ, ತಮಿಳು ರಾಷ್ಟ್ರೀಯವಾದಿ ನಾಯಕರೊಬ್ಬರು ಸೋಮವಾರ ಪ್ರಭಾಕರನ್‌ ಬದುಕಿದ್ದಾನೆ ಮತ್ತು ಅವರು ಈಗ ಕಾಣಿಸಿಕೊಳ್ಳಲು ಅನುಕೂಲಕರ ವಾತಾವರಣವಿದ್ದು, ಅವರು ಶೀಘ್ರವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾನೆ ಎಂದು ಹೇಳಿದ್ದನ್ನು ಶ್ರೀಲಂಕಾದ ರಕ್ಷಣಾ ಸಚಿವಾಲಯವು “ತಮಾಷೆ” ಎಂದು ತಳ್ಳಿಹಾಕಿದೆ. ಮತ್ತು 2009 ರಲ್ಲಿ ಪ್ರಭಾಕರನ್ ಕೊಲ್ಲಲ್ಪಟ್ಟರು ಎಂದು ಪ್ರತಿಪಾದಿಸಲು ಡಿಎನ್‌ಎ … Continued