ಬಾಂಗ್ಲಾಕ್ಕೆ ಭಾರತದಿಂದ 12 ಲಕ್ಷ ಕೊರೊನಾ ಲಸಿಕೆ ಕೊಡುಗೆ

ಢಾಕಾ : ಭಾರತವು ಶನಿವಾರ ಬಾಂಗ್ಲಾದೇಶಕ್ಕೆ 12 ಲಕ್ಷ ಕೋವಿಡ್-19 ಲಸಿಕೆಯ ಡೋಸ್‌ಗಳನ್ನು ಕೊಡುಗೆಯಾಗಿ ನೀಡಿದೆ. ಎರಡು ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಲಸಿಕೆಗಳನ್ನೊಳಗೊಂಡ ಪ್ರಾತಿನಿಧಿಕ ಪೆಟ್ಟಿಗೆಯೊಂದನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರಿಗೆ ಹಸ್ತಾಂತರಿಸಿದರು. ಅದೇ ವೇಳೆ, ಮೋದಿ 109 ಅಂಬುಲೆನ್ಸ್‌ಗಳ ಪ್ರಾತಿನಿಧಿಕ ಕೀ ಹಸೀನಾರಿಗೆ ನೀಡಿದರು. ಉಭಯ ನಾಯಕರು … Continued

ಮೋದಿ ಭೇಟಿ ವಿರೋಧಿಸಿ ನಡೆದ ಹಿಂಸಾಚಾರಕ್ಕೆ ನಾಲ್ವರು ಸಾವು: ಫೇಸ್‌ಬುಕ್‌ ಸೇವೆ ಸ್ಥಗಿತಗೊಳಿಸಿದ ಬಾಂಗ್ಲಾ ಸರ್ಕಾರ

ಢಾಕಾ; ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ವಿರೋಧಿಸಿ ಇಸ್ಲಾಮಿಕ್‌ ಮೂಲಭೂತ ಸಂಘಟನೆಗಳು ಪ್ರತಿಭಟಿಸುತ್ತಿರುವುದರಿಂದ ಬಾಂಗ್ಲಾದೇಶದಲ್ಲಿ ಫೇಸ್‌ಬುಕ್ ಸೇವೆ ಕಡಿತಗೊಳಿಸಲಾಗಿದೆ. ಬೀದಿಗಳಲ್ಲಿ ಹಿಂಸಾಚಾರ ನಡೆದಿದ್ದರಿಂದ ಪೊಲೀಸ್‌ ಗೋಲಿಬಾರಿನಲ್ಲಿ ನಾಲ್ವರು ಹೆಫಜತ್-ಇ-ಇಸ್ಲಾಮಿ ಸದಸ್ಯರು ಶುಕ್ರವಾರ ಮೃತಪಟ್ಟಿದ್ದರು. ನಮ್ಮ ಸೇವೆಗಳನ್ನು ಬಾಂಗ್ಲಾದೇಶದಲ್ಲಿ ನಿರ್ಬಂಧಿಸಲಾಗಿದೆ ಎಂದು ತಿಳಿದಿದೆ. ನಾವು ಇನ್ನಷ್ಟು ಅರ್ಥಮಾಡಿಕೊಳ್ಳಲು ಕೆಲಸ ಮಾಡುತ್ತಿದ್ದೇವೆ ಮತ್ತು ಸಾಧ್ಯವಾದಷ್ಟು ಬೇಗ ಪೂರ್ಣ … Continued

ಮೋದಿ ಭೇಟಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ನಾಲ್ವರು ಸಾವು

ನವ ದೆಹಲಿ: ಇಸ್ಲಾಮಿಕ್ ಮೂಲಭೂತವಾದಿ ಗುಂಪಿನ ಹೆಫಜತ್-ಎ-ಇಸ್ಲಾಂನ ಕಾರ್ಯಕರ್ತರು ಮತ್ತು ಎಡ ಪಕ್ಷಗಳ ಸಂಯೋಜಿತ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಬಾಂಗ್ಲಾದೇಶ ಭೇಟಿ ವಿರೊಧಿಸಿ ನಡೆದ ಪ್ರತಿಭಟನೆ ಪೊಲೀಸರೊಂದಿಗೆ ಘರ್ಷಣೆಗೆ ತಿರುಗಿದಾಗ ಚಿತ್ತಗಾಂಗ್‌ನಲ್ಲಿ ಕನಿಷ್ಠ ನಾಲ್ಕು ಜನರು ಮೃತಪಟ್ಟಿದ್ದಾರೆ. ಮೋದಿಯವರ ನಿಗದಿತ ಭೇಟಿಯ ವಿರುದ್ಧ ಈಗಾಗಲೇ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು, ಬಾಂಗ್ಲಾದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ … Continued

ಬಾಂಗ್ಲಾದೇಶದ ವಿಮೋಚನೆಗಾಗಿ ಪ್ರತಿಭಟಿಸಿದಾಗ ನಾನೂ ಜೈಲಿಗೆ ಹೋಗಿದ್ದೆ: ಪ್ರಧಾನಿ ಮೋದಿ

ಢಾಕಾ: ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 50 ನೇ ವರ್ಷದ ಸ್ವಾತಂತ್ರ್ಯಕ್ಕಾಗಿ ನೆರೆಯ ದೇಶವಾದ ಬಾಂಗ್ಲಾದೇಶವನ್ನು ಶುಕ್ರವಾರ ಅಭಿನಂದಿಸಿದ್ದಾರೆ ಮತ್ತು ಬಾಂಗ್ಲಾದೇಶದ ವಿಮೋಚನೆಗಾಗಿ ಪ್ರತಿಭಟಿಸುವಾಗ ತಾವೂ ಕೂಡ ಜೈಲಿಗೆ ಹೋಗಿದ್ದೆ ಎಂದು ಹೇಳಿದ್ದಾರೆ. ನಾನು ಕೆಲವು ಸ್ನೇಹಿತರ ಜೊತೆ ಬಾಂಗ್ಲಾದೇಶದ ಹೋರಾಟದ ಸಮಯದಲ್ಲಿ ಪ್ರತಿಭಟನೆ ನಡೆಸಿದಾಗ ನನಗೆ ಸುಮಾರು 20-22 ವರ್ಷ … Continued

ಕೊರೊನಾ ಸೋಂಕಿತ ಪಾಕ್ ಪ್ರಧಾನಿ ಇಮ್ರಾನ್‌ ಸಭೆ ನಡೆಸಿದ್ದಕ್ಕೆ ವ್ಯಾಪಕ ಟೀಕೆ

ಇಸ್ಲಾಮಾಬಾದ್‌: ಕೊರೊನಾ ಸೋಂಕಿಗೊಳಗಾಗಿದ್ದರೂ ತಮ್ಮ ಮಾಧ್ಯಮ ತಂಡದೊಂದಿಗೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸಭೆ ನಡೆಸಿದ್ದನ್ನು ವಿರೋಧ ಪಕ್ಷಗಳು ಟೀಕಿಸಿವೆ. ಇಮ್ರಾನ್‌ಖಾನ್‌ ಗುರುವಾರ ಕೊರೊನಾ ಲಸಿಕೆ ತೆಗೆದುಕೊಂಡಿದ್ದರು. ಆದರೆ ಅವರಿಗೆ ಶುಕ್ರವಾರ ಸೋಂಕು ತಗುಲಿರುವುದು ದೃಢಪಟ್ಟಿತ್ತು. ದೇಶದ ಪ್ರಥಮ ಮಹಿಳೆ ಬುಶ್ರಾ ಬೀಬಿ ಅವರಿಗೂ ಸೋಂಕು ತಗುಲಿದೆ. ಇದರ ಮಧ್ಯೆ ಪ್ರಧಾನಿ ತಮ್ಮ “ಬನಿಗಾಲ್‌ʼ ನಿವಾಸದಲ್ಲಿ … Continued

12 ವರ್ಷ ಒಳಗಿನ ಮಕ್ಕಳಿಗೂ ಕೊವಿಡ್‌ ಲಸಿಕೆ: ಅಮೆರಿಕದಲ್ಲಿ ಪ್ರಯೋಗ ಶುರು

ಫಿಜರ್ ಇಂಕ್ ಹಾಗೂ ಜರ್ಮನ್ ಪಾಲುದಾರ ಬಯೋಟೆಕ್ ಎಸ್‌ಇ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಿದೆʼ ಹೀಗೆಂದು ಅಮೆರಿಕಾದ ಔಷಧಿ ಕಂಪನಿ ಫಿಜರ್ ಹೇಳಿದೆ. ಬುಧವಾರ,ಮೊದಲ ಬ್ಯಾಚ್ ಮಕ್ಕಳಿಗೆ ಚುಚ್ಚು ಮದ್ದು ನೀಡಲಾಗಿದ್ದು, 12 ವರ್ಷ ಒಳಗಿನ ಹಾಗೂ 6 ತಿಂಗಳಿನ ಮೇಲಿನ ಮಕ್ಕಳಿಗೆ ಈ ಲಸಿಕೆ … Continued

ಬೌಲ್ಡರ್ ಶೂಟಿಂಗ್: ‘ಗನ್‌ಮ್ಯಾನ್’ ಅಹ್ಮದ್ ಅಲಿಸ್ಸಾ ಮುಸ್ಲಿಂ ಎಂದು ಅಪಹಾಸ್ಯಕ್ಕೊಳಗಾಗಿ ಸಮಾಜ ವಿರೋಧಿಯಾದ: ಸಹೋದರನ ಹೇಳಿಕೆ

ಕೊಲೊರಾಡೋದ ಬೌಲ್ಡರ್‌ನಲ್ಲಿರುವ ಕಿರಾಣಿ ಅಂಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸರು ಸೇರಿದಂತೆ ಕನಿಷ್ಠ ಹತ್ತು ಜನರನ್ನು ಕೊಂದ 21 ವರ್ಷದ ‘ಗನ್‌ಮ್ಯಾನ್’ ಅಹ್ಮದ್ ಅಲ್ ಅಲಿವಿ ಅಲಿಸ್ಸಾ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರು ಮಂಗಳವಾರ ಬಿಚ್ಚಿಟ್ಟ ಹಿಂಸಾಚಾರಕ್ಕೆ ಸಂಭವನೀಯ ಉದ್ದೇಶವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಪೊಲೀಸರ ಪ್ರಕಾರ, ಅವರ ಅಪಾರ್ಟ್ಮೆಂಟ್ನಲ್ಲಿ ತಪಾಸಣೆ ನಡೆಸದಾಗ ಹೆಚ್ಚಿನ ಶಸ್ತ್ರಾಸ್ತ್ರಗಳು … Continued

ಬಾಂಗ್ಲಾದೇಶ: ನಿರಾಶ್ರಿತ ರೊಹಿಂಗ್ಯಾ ಕ್ಯಾಂಪ್‌ನಲ್ಲಿ ಅಗ್ನಿ ಅವಘಡ ೧೫ ಸಾವು

ಬಾಂಗ್ಲಾದೇಶದ ನಿರಾಶ್ರಿತರ ಕ್ಯಾಂಪ್‌ನಲ್ಲಿ ಬೆಂಕಿ ಅವಘಡದಲ್ಲಿ ರೋಹಿಂಗ್ಯಾಗಳ ಗುಡಿಸಲುಗಳು ಧ್ವಂಸಗೊಂಡಿದ್ದು, ೧೫ ಜನರು ಮೃತಪಟ್ಟಿದ್ದರೆ ೪೦೦ ಜನರು ಕಾಣೆಯಾಗಿದ್ದಾರೆ. ೨೦೧೭ರ ಮಿಲಿಟರಿ ದೌರ್ಜನ್ಯದಿಂದ ವಲಸೆ ಬಂದ ಒಂದು ಮಿಲಿಯನ್‌ ಮುಸಲ್ಮಾನರು ಇಲ್ಲಿ ೮೦೦೦ ಎಕರೆ ವ್ಯಾಪ್ತಿಯಲ್ಲಿ ವಿವಿಧ ಕ್ಯಾಂಪ್‌ಗಳಲ್ಲಿ ನೆಲೆಸಿದ್ದಾರೆ. ಅಡುಗೆ ಅನಿಲ ಸಿಲೆಂಡರ್‌ ಸ್ಫೋಟದಿಂದ ದುರ್ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಭಯಭೀತರಾದ ಕುಟುಂಬಗಳು ತಾವು ಸಾಗಿಸಬಹುದಾದ … Continued

ಕೊಲೊರಾಡೋದಲ್ಲಿ ಗುಂಡಿನ ದಾಳಿ: ಒಬ್ಬ ಪೊಲೀಸ್‌ ಅಧಿಕಾರಿ ಸೇರಿದಂತೆ ೧೦ ಸಾವು

ಕೊಲೊರಾಡೋದ ಬೌಲ್ಡರ್‌ನಲ್ಲಿರುವ ಕಿರಾಣಿ ಅಂಗಡಿಯೊಂದರಲ್ಲಿ ಸೋಮವಾರ ಮಧ್ಯಾಹ್ನ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ ಎಂದು ಬೌಲ್ಡರ್ ಅಧಿಕಾರಿಗಳು ತಿಳಿಸಿದ್ದಾರೆ. ಶೂಟಿಂಗ್ ನಂತರ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೊರಾಡೋ ಇತ್ತೀಚಿನ ವರ್ಷಗಳಲ್ಲಿ ಹಲವಾರು ಮಾರಣಾಂತಿಕ ಸಾಮೂಹಿಕ ಗುಂಡಿನ ದೃಶ್ಯವಾಗಿದೆ, ಇದರಲ್ಲಿ ಅರೋರಾದ ಕಿಕ್ಕಿರಿದ ಚಿತ್ರಮಂದಿರವೊಂದರಲ್ಲಿ … Continued

ರಷ್ಯಾದ ಸ್ಪುಟ್ನಿಕ್ ವಿ 200 ಮಿಲಿಯನ್ ಕೊರೊನಾ ಡೋಸ್‌ ತಯಾರಿಸಲಿರುವ ಭಾರತದ ವಿರ್ಚೋ ಗ್ರೂಪ್

ಮಾಸ್ಕೋ: ವರ್ಷದೊಳಗೆ 200 ಮಿಲಿಯನ್ ಡೋಸ್ ಕೊರೋನಾ ಲಸಿಕೆ ಉತ್ಪಾದನೆಗಾಗಿ ಭಾರತೀಯ ಮೂಲದ ಔಷಧ ಸಂಸ್ಥೆ ಒಂದರ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ರಷ್ಯಾದ ಸ್ಪುಟ್ನಿಕ್ ವಿ. ಕೊವಿಡ್‌ ಲಸಿಕೆಯ ಪಾಲುದಾರ ಸಂಸ್ಥೆ ಸೋಮವಾರ ಹೇಳಿದೆ. ಭಾರತದಲ್ಲಿ ಪ್ರತಿ ವರ್ಷ 200 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆಗೆ ವಿರ್ಚೋ ಗ್ರೂಪ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ದೇಶದ ಸಾರ್ವಜನಿಕ … Continued