ಬಾಂಗ್ಲಾದೇಶದ ಪ್ರತಿಭಟನೆಯಲ್ಲಿ 105 ಮಂದಿ ಸಾವು : ದೇಶಾದ್ಯಂತ ಕರ್ಫ್ಯೂ, ಮಿಲಿಟರಿ ನಿಯೋಜನೆ

ಢಾಕಾ : ದೇಶಾದ್ಯಂತ ಹರಡಿರುವ ಅಶಾಂತಿಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಅಧಿಕಾರಿಗಳು ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಿದ್ದಾರೆ. ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಗಳು ಕನಿಷ್ಠ 105 ಜನರ ಸಾವಿಗೆ ಕಾರಣವಾಗಿವೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ. ಇದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೆ ಕಠಿಣ ರಾಜಕೀಯ ಸವಾಲನ್ನು ಒಡ್ಡುತ್ತಿದೆ, ಏಕೆಂದರೆ ವಿದ್ಯಾರ್ಥಿಗಳು … Continued

ಮೈಕ್ರೋಸಾಫ್ಟ್ ವಿಂಡೋಸ್ ಜಾಗತಿಕ ಜಾಗತಿಕ ಅಡಚಣೆಗೆ ಕಾರಣ..? : ವಿಶ್ವದಾದ್ಯಂತ ಯಾವ್ಯಾವ ಸೇವೆಗಳ ಮೇಲೆ ಪರಿಣಾಮ..?

ನವದೆಹಲಿ: ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ಸೇವೆಗಳಲ್ಲಿ ಉಂಟಾದ ತಾಂತ್ರಿಕ ಅಡಚಣೆಯಿಂದಾಗಿ ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ ಸೇರಿದಂತೆ ಹಲವು ದೇಶಗಳಲ್ಲಿ ತೀವ್ರ ಅಡಚಣೆ ಉಂಟಾಗಿದೆ. ಜಾಗತಿಕವಾಗಿ, ಮೈಕ್ರೋಸಾಫ್ಟ್ ಕ್ಲೌಡ್ ಸ್ಥಗಿತವು ಅಮೆರಿಕ ಏರ್‌ಲೈನ್‌ಗಳು ವಿಮಾನಗಳನ್ನು ರದ್ದುಗೊಳಿಸಲು ಕಾರಣವಾಯಿತು. ವಿಮಾನಯಾನ ಸಂಸ್ಥೆಗಳು, ಬ್ಯಾಂಕ್‌ಗಳು ಮತ್ತು ಮಾಧ್ಯಮ ಔಟ್‌ಲೆಟ್‌ಗಳಲ್ಲಿ ಅಡೆತಡೆಗಳ ವ್ಯಾಪಕ ವರದಿಗಳಿವೆ. ಗ್ಲಿಚ್, ಬಳಕೆದಾರರಿಗೆ ಬ್ಲೂ ಸ್ಕ್ರೀನ್ … Continued

ಜಾಗತಿಕ ಸ್ಥಗಿತದ ಸಮಸ್ಯೆ ಎದುರಿಸುತ್ತಿರುವ ಮೈಕ್ರೋಸಾಫ್ಟ್ ; ಲಕ್ಷಾಂತರ ಬಳಕೆದಾರರಿಗೆ ತೊಂದರೆ

ನವದೆಹಲಿ : ಪ್ರಪಂಚದಾದ್ಯಂತ ಮೈಕ್ರೋಸಾಫ್ಟ್ ವಿಂಡೋಸ್ ಬಳಕೆದಾರರು ಪ್ರಸ್ತುತ “ಬ್ಲೂ ಸ್ಕ್ರೀನ್ ಆಫ್ ಡೆತ್” (BSOD) ದೋಷವನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಅವರ ಸಿಸ್ಟಂಗಳು ಇದ್ದಕ್ಕಿದ್ದಂತೆ ಸ್ಥಗಿತ ( shut down)ಗೊಳ್ಳಲು ಅಥವಾ ಮರುಪ್ರಾರಂಭವಾಗಲು (restart) ಕಾರಣವಾಗುತ್ತದೆ. ವಿವಿಧ Microsoft 365 ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ಪ್ರವೇಶಿಸಲು ಬಳಕೆದಾರರಿಗೆ ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಕ್ರೌಡ್‌ ಸ್ಟ್ರೈಕ್‌ … Continued

ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಉಲ್ಬಣ : 39 ಸಾವು, ಸರ್ಕಾರಿ ಟಿವಿ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಢಾಕಾ : ಸರ್ಕಾರಿ ಉದ್ಯೋಗಗಳಿಗೆ ಮೀಸಲಾತಿ ವ್ಯವಸ್ಥೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಪ್ರತಿಭಟನಾಕಾರರು, ಭದ್ರತಾ ಅಧಿಕಾರಿಗಳು ಮತ್ತು ಸರ್ಕಾರದ ಪರ ವಿದ್ಯಾರ್ಥಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯ ನಂತರ ವ್ಯಾಪಕ ಹಿಂಸಾಚಾರವು ಬಾಂಗ್ಲಾದೇಶದಲ್ಲಿ ಭುಗಿಲೆದ್ದಿದೆ. ಹಿಂಸಾಚಾರದಲ್ಲಿ ಕನಿಷ್ಠ 39 ಜನರು ಮೃತಪಟ್ಟಿದ್ದಾರೆ, ಬಾಂಗ್ಲಾದೇಶದಲ್ಲಿ ಗುರುವಾರವು ಅತ್ಯಂತ ಹಿಂಸಾತ್ಮಕ ದಿನವಾಗಿದೆ. ವಿದ್ಯಾರ್ಥಿಗಳು ಬಾಂಗ್ಲಾದೇಶದಾದ್ಯಂತ ಸಾರಿಗೆಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದಾಗ ಪೊಲೀಸರು … Continued

ವೀಡಿಯೊ | ನಾಗರಿಕ ಸಂಪರ್ಕವೇ ಇಲ್ಲದ, ಕಣ್ಣಿಗೇ ಕಾಣಿಸಿಕೊಳ್ಳದ ವಿಶ್ವದ ಅತಿದೊಡ್ಡ ಬುಡಕಟ್ಟು ಜನಾಂಗದ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಸ್ಥಳೀಯ ಹಕ್ಕುಗಳ ಲಾಭರಹಿತ ಸಂಸ್ಥೆ ಸರ್ವೈವಲ್ ಇಂಟರ್‌ನ್ಯಾಷನಲ್‌ ನಿಂದ ಪಡೆದ ಗಮನಾರ್ಹವಾದ ಅಪರೂಪದ ಚಿತ್ರಗಳು ಮತ್ತು ವೀಡಿಯೊಗಳು ಈವರೆಗೆ ನಾಗರಿಕ ಸಂಪರ್ಕಕ್ಕೇ ಬಾರದ ಸ್ಥಳೀಯ ಬುಡಕಟ್ಟು ಜನಾಂಗದ ದೈನಂದಿನ ದಿನಚರಿಯನ್ನು ತೋರಿಸುತ್ತವೆ, ಇದು ಮರ ಕಟಾವ್‌ ಮಾಡುವ ಪ್ರದೇಶಕ್ಕೆ “ಅಪಾಯಕಾರಿಯಾಗಿ ಹತ್ತಿರದಲ್ಲಿದೆ” ಎಂದು ವರದಿ ಹೇಳಿದೆ. ಪೆರುವಿನ ಮಾಶ್ಕೊ ಪಿರೊ ಬುಡಕಟ್ಟು 50 ಕ್ಕೂ ಹೆಚ್ಚು … Continued

ಟ್ರಂಪ್ ಮೇಲೆ ಗುಂಡು ಹಾರಿಸುವ ಕ್ಷಣದ ಮೊದಲು ಛಾವಣಿ ಮೇಲೆ ʼಶೂಟರ್ʼ ನೋಡಿ ಭದ್ರತಾ ಅಧಿಕಾರಿಗಳಿಗೆ ಎಚ್ಚರಿಸಿದ ಜನರು ; ವೀಡಿಯೊ ವೈರಲ್‌

ಪೆನ್ಸಿಲ್ವೇನಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಮೇಲೆ ಗುಂಡು ಹಾರಿಸಿದ ಶಂಕಿತ ವ್ಯಕ್ತಿಯನ್ನು ಗುಂಡಿನ ದಾಳಿಗೆ ಕೇವಲ ಎರಡು ನಿಮಿಷಗಳ ಮೊದಲು ಕಾನೂನು ಜಾರಿ ಸಂಸ್ಥೆ ಸಿಬ್ಬಂದಿಗೆ ಜನರು ತೋರಿಸುತ್ತಿರುವ ವೀಡಿಯೊವಿಂದು ಹೊರಹೊಮ್ಮಿದೆ. ಜನರು ಕಾನೂನು ಜಾರಿ ಸಂಸ್ಥೆಗೆ ಆತನ ಬಗ್ಗೆ ಎಚ್ಚರಿಕೆ ನೀಡುತ್ತಿರುವುದನ್ನು ನೋಡುಗರು ತೆಗೆದ ವೀಡಿಯೊ ತೋರಿಸುತ್ತದೆ. ಆಫಿಸರ್‌ … Continued

ಶಾಲೆಯಲ್ಲಿ ಗಣಿತದಲ್ಲಿ ನಿಪುಣ ವಿದ್ಯಾರ್ಥಿ, $500 ಬಹುಮಾನ ಗೆದ್ದಿದ್ದ ಟ್ರಂಪ್ ಮೇಲೆ ಗುಂಡು ಹಾರಿಸಿದ ಥಾಮಸ್ ಕ್ರೂಕ್ಸ್….

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶನಿವಾರ ಪ್ರಚಾರ ರ್ಯಾಲಿಯಲ್ಲಿ ಹತ್ಯೆಗೈಯಲು ಯತ್ನಿಸಿದ ಶಂಕಿತ ಆರೋಪಿ ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್,  ಎಂದು ಎಫ್‌ಬಿಐ ಗುರುತಿಸಿದೆ. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಟ್ರಂಪ್ ಮಾತನಾಡುತ್ತಿದ್ದ ವೇದಿಕೆಯತ್ತ ಗುಂಡು ಹಾರಿಸಿದ ನಂತರ ಶಂಕಿತನನ್ನು ಸಿಕ್ರೆಟ್‌ ಸರ್ವಿಸ್‌ ಕೆಲವೇ ಸೆಕೆಂಡುಗಳಲ್ಲಿ ಗುಂಡಿಕ್ಕಿ ಕೊಂದಿದೆ. 100 … Continued

ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ಮೇಲೆ ಗುಂಡಿನ ದಾಳಿ; ಶಂಕಿತನ ಗುರುತು ಪತ್ತೆ : ಟ್ರಂಪ್‌ ಮೊದಲ ಪ್ರತಿಕ್ರಿಯೆ

ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬಾತನೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಯತ್ನದ ಶಂಕಿತ ಶೂಟರ್ ಎಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಗುರುತಿಸಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಪ್ರಚಾರ ಸಭೆಯೊಂದರಲ್ಲಿ 20 ವರ್ಷದ ಕ್ರೂಕ್ಸ್ ಅವರು 78 ವರ್ಷದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್‌ … Continued

ವೀಡಿಯೊ…| ರ್‍ಯಾಲಿ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ ಮೇಲೆ ಗುಂಡಿನ ದಾಳಿ

ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಶನಿವಾರ (ಸ್ಥಳೀಯ ಕಾಲಮಾನ) ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಅವರ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದ ನಂತರ ಗಾಯಗೊಂಡಿದ್ದಾರೆ. ಘಟನೆಯ ನಂತರ ಭದ್ರತಾ ಸಿಬ್ಬಂದಿ ಅವರನ್ನು ವೇದಿಕೆಯಿಂದ ಹೊರಗೆ ಕರೆದೊಯ್ಯುವಾಗ ಅವರ ಮುಖದ ಮೇಲೆ ರಕ್ತ ಕಂಡುಬಂದಿದೆ. ಟ್ರಂಪ್‌ ಅವರು “ಉತ್ತಮ” … Continued

ʼಶ್ರೀಮಂತʼರನ್ನು ಮದುವೆಯಾಗುವುದು ಹೇಗೆಂದು ʼಮಹಿಳೆʼಯರಿಗೆ ಕಲಿಸುವ ಈ ‘ಇನ್ಫ್ಲುಯೆನ್ಸರ್‌’ ವರ್ಷದ ಗಳಿಕೆ ₹ 163 ಕೋಟಿ…!

ಶ್ರೀಮಂತ ಪುರುಷರನ್ನು ಹೇಗೆ ಮದುವೆಯಾಗಬೇಕೆಂದು ಮಹಿಳೆಯರಿಗೆ ಕಲಿಸುವ ಚೀನಾದ ವಿವಾದಾತ್ಮಕ ಲವ್ ಗುರು, ವರ್ಷಕ್ಕೆ 142 ಮಿಲಿಯನ್ ಯುವಾನ್ (ಅಂದಾಜು ₹ 163 ಕೋಟಿ) ಗಳಿಸುತ್ತಾರೆ ಎಂದು ವರದಿಯಾಗಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಪ್ರಭಾವಿ ಮಹಿಳೆಯ ನಿಜವಾದ ಹೆಸರು ಲೆ ಚುವಾಂಕ್, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸಂಬಂಧ ಮತ್ತು ಆರ್ಥಿಕ ಸಲಹೆಗಳನ್ನು … Continued