ಕೌಶಲ್ಯ ತರಬೇತಿಗೆ ಜೆಎಸ್ಎಸ್ ಮಂಜುನಾಥೇಶ್ವರ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಸಂಸ್ಥೆ-ದೇಶಪಾಂಡೆ ಫೌಂಡೆಶನ್ ಒಡಂಬಡಿಕೆ

ಧಾರವಾಡ: ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗಾಗಿ ಧಾರವಾಡದ ವಿದ್ಯಾಗಿರಿಯ ಸ್ಕಿಲ್ಲಿಂಗ್ ಡೆವೆಲೆಪ್‌ಮೆಂಟ್ ಸೆಂಟರ್‌ ಒಡಂಬಡಿಕೆ ಮಾಡಿಕೊಂಡಿವೆ. ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗಾಗಿ ಕಾಲೇಜಿನ ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ ಹಾಗೂ ದೇಶಪಾಂಡೆ ಫೌಂಡೇಶನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಪಿ. ಎನ್. ನಾಯಕ್‌ ಅವರು ಸಹಿ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಶಿವಾನಂದ ಹರಳಯ್ಯ, ಮಹಾವೀರ ಉಪಾದ್ಯೆ, … Continued

ಧಾರವಾಡ: ಜೆಎಸ್‌ಎಸ್‌ ಮಂಜುನಾಥೇಶ್ವರ ಐಟಿಐ ಕಾಲೇಜಿಗೆ ಕರ್ಣಾಟಕ ಬ್ಯಾಂಕಿನಿಂದ ಬೊಲೆರೊ ವಾಹನ ಹಸ್ತಾಂತರ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಕರ್ಣಾಟಕ ಬ್ಯಾಂಕಿನವರು ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿಗೆ ನೀಡುತ್ತಿರುವ ಬೊಲೆರೋ ವಾಹನವನ್ನು ಕರ್ಣಾಟಕ ಬ್ಯಾಂಕಿನ ಎ.ಜಿ.ಎಂ ವಾದಿರಾಜ. ಕೆ. ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ ಹರ್ಷೇಂದ್ರಕುಮಾರ. ಜೆ.ಎಸ್.ಎಸ್ ಆಡಳಿತ ಮಂಡಳಿ ಸದಸ್ಯರಾದ ಎಂ.ಎನ್ ತಾವರಗೇರಿ, ಶ್ರೀಕಾಂತ … Continued

ಧಾರವಾಡ: ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನಲ್ಲಿ “ಮ್ಯಾಂಗೋ ಮೇಳ

ಧಾರವಾಡ: ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನಲ್ಲಿ “ಮ್ಯಾಂಗೋ ಮೇಳ” ಆಯೋಜಿಸಲಾಗಿತ್ತು. ಮಕ್ಕಳು ಮಾವಿನ ಹಣ್ಣಿನಿಂದ ತಯಾರಿಸಿದ ಹಲವಾರು ತಿಂಡಿ ತಿನಿಸುಗಳನ್ನು ತಯಾರಿಸಿ ತಂದಿದ್ದರು. ೭ನೇ ತರಗತಿಯ ೨೦೦ಕ್ಕೂ ಹೆಚ್ಚು ಮಕ್ಕಳು ಈ ಮೇಳದಲ್ಲಿ ಭಾಗವಹಿಸಿ ಮಾವಿನ ಹಣ್ಣಿನ ಪಾನೀಯ, ಬರ್ಫಿ, ಕೇಕ್, ಉಪ್ಪಿನಕಾಯಿ, ಚಟ್ನಿ, ಚಿತ್ರನ್ನ, ಹಲ್ವ, ಗೊಜ್ಜು, ಜಾಮ್ ಹೀಗೆ ಹತ್ತು ಹಲವಾರು … Continued

ಧಾರವಾಡ:ಜೆಎಸ್‌ಎಸ್ ಹುಕ್ಕೇರಿಕರ್ ಕಾಲೇಜಿನ ಐವರು ವಿದ್ಯಾರ್ಥಿಗಳು ಜಿಲ್ಲೆಗೆ ಟಾಪರ್

ಧಾರವಾಡ: ಧಾರವಾಡದ ಜೆಎಸ್ಎಸ್‌ ಸಂಸ್ಥೆಯ ಆರ್.ಎಸ್.ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯವು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಒಟ್ಟು ಹಾಜರಾದ ೭೭೫ ವಿದ್ಯಾರ್ಥಿಗಳಲ್ಲಿ ೬೨೬ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಒಟ್ಟು ೮೦.೭೭% ಫಲಿತಾಂಶ ಪಡೆದಿದೆ.ಜಿಲ್ಲೆಯ ಟಾಪ್ ೧೦ ರಲ್ಲಿ ಐದು ವಿದ್ಯಾರ್ಥಿಗಳು ಈ ಕಾಲೇಜಿನವರಾಗಿದ್ದಾರೆ. ವಾಣಿಜ್ಯ ವಿಭಾಗ ೧. ಅನನ್ಯ ಭಟ್(೯೮.೩೩) ಜಿಲ್ಲೆಗೆ ೨ನೇ ಸ್ಥಾನ, ೨ ಸಾಕ್ಷಿ ಕುಲಕರ್ಣಿ ಜಿಲ್ಲೆಗೆ … Continued

ದ್ವಿತೀಯ ಪಿಯು ಫಲಿತಾಂಶ: ಧಾರವಾಡ ಜೆಎಸ್‌ಎಸ್‌ ಎಸ್‌ಎಂಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ: ವಿದ್ಯಾಗಿರಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ವತಂತ್ರ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳಾದ ರೋಹಿಣಿ ಬಿದ್ನೂರಮಠ 600/570 (95%), ತೇಜಶ್ವಿನಿ ನಿಂಗೊಲ್ಲಿ 600/570 (95%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮರಾಗಿದ್ದಾರೆ. ನಂತರದಲ್ಲಿ ಕ್ರಮವಾಗಿ ನಮನ ಭಟ್ 600/558 (93%), … Continued

ಹುಬ್ಬಳ್ಳಿ: ಇಂದು ಯೋಗ ಕಹಳೆ ಕಾರ್ಯಕ್ರಮ

ಹುಬ್ಬಳ್ಳಿ: ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ ಪಾರ್ಕ್‌ನ ವಿವೇಕ ಜಾಗೃತ ಬಳಗಗಳ ಆಶ್ರಯದಲ್ಲಿ ಸರ್ವೋತೊಮುಖ ಪ್ರಗತಿಗೆ ಪೂರಕವಾದ ‘ಯೋಗ ಕಹಳೆ’ ಕಾರ್ಯಕ್ರಮ ಭಾನುವಾರ ಮೇ ೮ರಂದು ಬೆಳಿಗ್ಗೆ ೧೦:೩೦ ರಿಂದ ವಿದ್ಯಾನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ಸಭಾ ಭವನದಲ್ಲಿ ನಡೆಯಲಿದೆ. ಯೋಗ ಕಹಳೆ ಕಾರ್ಯಕ್ರಮದಲ್ಲಿ ಕೋಟದ ಮೂಡುಗಿಳಿಯಾರು ಯೋಗಬನ ವೈದ್ಯಕೀಯ ನಿರ್ದೇಶಕರು ಮತ್ತು  ಸರ್ವಕ್ಷೇಮ … Continued

ನನಗೆ ಅಧಿಕಾರ ಕೊಟ್ಟಿದ್ದು ಶಿಕ್ಷಕ ಸಮುದಾಯ, ಅವರಿಗೆಂದೂ ಅನ್ಯಾಯ ಮಾಡಲು ಬಿಡುವುದಿಲ್ಲ: ಸಭಾಪತಿ ಹೊರಟ್ಟಿ

ಧಾರವಾಡ : ಕಳೆದ ನಲವತ್ತೆರಡು ವರ್ಷಗಳ ಹಿಂದೆ ಶಿಕ್ಷಕ ಸಮುದಾಯ ನನ್ನ ಕೈಗೆ ಅಧಿಕಾರವನ್ನು ಕೊಟ್ಟರು. ಅಂದಿನಿಂದ ಇಂದಿನ ವರೆಗೂ ನನಗೆ ಅಧಿಕಾರ ಕೊಟ್ಟ ಶಿಕ್ಷಕ ಸಮುದಾಯದವರಿಗೆ ನಾನೆಂದೂ ಕೈಕೊಟ್ಟಿಲ್ಲ, ಅನ್ಯಾಯ ಮಾಡಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಇಲ್ಲಿಯ ಜನತಾ ಶಿಕ್ಷಣ ಸಮಿತಿಯ (ಜೆ.ಎಸ್.ಎಸ್) ಪರವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ … Continued

ಧಾರವಾಡ: ನಾಳೆ ವಿಧಾನ ಪರಿಷತ್‌ ಸಭಾಪತಿ ಹೊರಟ್ಟಿಗೆ ಅಭಿನಂದನಾ ಸಮಾರಂಭ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ಪರವಾಗಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಏಪ್ರಿಲ್‌ ೯ ರಂದು ಬೆಳಿಗ್ಗೆ ೧೦:೩೦ಕ್ಕೆ ಧಾರವಾಡದ ಜೆ.ಎಸ್.ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಲಿದ್ದಾರೆ. ಖ್ಯಾತ ಸಂಸ್ಕೃತ ವಿದ್ವಾಂಸ ವೆಂಕಟ ನರಸಿಂಹ ಜೋಶಿಯ ಶುಭಾಶಂಸನೆ … Continued

ಸ್ವಾಸ್ಥ್ಯ ಸಮಾಜಕ್ಕೆ ಲಿಂಗ ಸಮಾನತೆ ಅವಶ್ಯ: ವಾಣಿಶ್ರೀ ಪ್ರಸಾದ

ಧಾರವಾಡ: ಸಮಾಜದಲ್ಲಿ ಮಹಿಳೆಯರು, ಪುರುಷರು ಪ್ರತಿಯೊಂದರಲ್ಲೂ ಸರಿ ಸಮಾನರು. ಇದರಲ್ಲಿ ಯಾವುದೇ ಭೇದ-ಭಾವ ಇರಬಾರದು ಎಂದು ಧಾರವಾಡದ ವಾಣಿಶ್ರೀ ಅಜಿತ ಪ್ರಸಾದ ಹೇಳಿದರು. ವಿದ್ಯಾಗಿರಿಯ ಜೆ.ಎಸ್.ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸ, ಉದ್ಯೋಗಾವಕಾಶ … Continued

ವ್ರತ-ಧರ್ಮಾಚರಣೆ ಇಂದಿನ ಅವಶ್ಯ : ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ

ಧಾರವಾಡ: ಅಹಿಂಸೆ, ಅಪರಿಗ್ರಹ ಇಂದಿನ ಅವಶ್ಯಕತೆಗಳಾಗಿವೆ. ಹಿಂಸೆಯಿಂದ ಇಡೀ ವಿಶ್ವವೇ ನಲುಗಿ ಹೋಗಿದೆ. ವ್ರತ-ಧರ್ಮಾಚರಣೆಯಿಂದ ಮನಸ್ಸಿಗೆ ಶಾಂತಿ ಪ್ರಾಪ್ತಿಯಾಗಿ ನಮ್ಮಲ್ಲಿರುವ ಕೆಟ್ಟ ವಿಚಾರಗಳನ್ನು ದೂರವಿಡಬಹುದು. ಆಗ ಸಮಾಜದಲ್ಲಿ ಶಾಂತಿ, ಸಾಮರಸ್ಯ ಉಂಟಾಗುತ್ತದೆ ಎಂದು ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು. ಧಾರವಾಡ ನಗರದ ಸನ್ಮತಿ ಜಿನ ಮಂದಿರದಲ್ಲಿ ನಡೆದ ನೂತನ ಏಕಶಿಲಾ … Continued