ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ

ಕುಮಟಾ;ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ಗುರುವಾರದಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ.ಶ್ರೀದೇವಾಲಯದಲ್ಲಿ ಪ್ರತಿವರ್ಷದಂತೆ ನವರಾತ್ರಿ ಪೂಜಾ ಕಾರ್ಯಕ್ರಮ ಗುರುವಾರ ಮುಂಜಾನೆಯಿಂದ ಆರಂಭವಾಗಲಿದೆ. ಶ್ರೀದುರ್ಗಾಪಾರಾಯಣ,ಸರ್ವಾಂಕಾರ ಪೂಜೆ,ಸರ್ವಾಪೂಜಾಸೇವೆ,ಫಲಪಂಚಾಮೃತ ಪೂಜೆ,ಪಂಚಾವಾದ್ಯ ಸೇವೆ ಮಹಾಮಂಗಳಾರತಿ ಪೂಜೆ ದಿನಾಂಕ ೧೫ ಶುಕ್ರವಾರದ ತನಕ ಪ್ರತಿನಿತ್ಯ ನಡೆಯಲಿದೆ.ದಿನಾಂಕ ೧೧ ರಂದು ಶಾರದಾಸ್ಥಾಪನೆ,೧೨ ತ್ರಿದಿನ ದೇವಿ ಪೂಜೆ,೧೩ ರಂದು ದುರ್ಗಾಷ್ಟಮಿ,೧೪ ರಂದು ಮಹಾನವಮಿ ಹಾಗೂ ೧೫ ಶುಕ್ರವಾರದಂದು … Continued

ಮಹಾವೀರ ಉಪಾದ್ಯೆಗೆ ಶಿಕ್ಷಕ-ಸಿರಿ ಪ್ರಶಸ್ತಿ

ಧಾರವಾಡದ ಸರಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಕ್ರೀಯಾ ಸಮಿತಿ(ರಿ) ಬೆಂಗಳೂರು ಇವರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿದ್ಯಾಗಿರಿಯ ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಹಾವೀರ ಉಪಾದ್ಯೆ ಯವರಿಗೆ ರಾಜ್ಯ ಮಟ್ಟದ ಶಿಕ್ಷಕ-ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕುಮಟಾ; ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಸ್ವಚ್ಛತೆ -ಕರ್ತವ್ಯ ಮಾಸಾಚರಣೆಗೆ ಚಾಲನೆ

ಕುಮಟಾ;ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ವಚ್ಛತಾ ಮಾಸಾಚರಣೆಗೆ ಪ್ರಾಚಾರ್ಯ ಡಾ. ಎಸ್.ವಿ.ಶೇಣ್ವಿ ಚಾಲನೆ ಶನಿವಾರ ನೀಡಿದರು ಮಹಾತ್ಮ ಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. .ಮಹಾತ್ಮ ಗಾಂಧೀಜಿ ಮತ್ತು ಲಾಲಬಹುದ್ದೂರ ಶಾಸ್ತ್ರಿಗಳ ಜನ್ಮ ದಿನಾಚರಣೆ ನೆನಪಿಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಸ್ವಚ್ಚತೆ ಮತ್ತು ಕರ್ತವ್ಯ ಮಾಸಾಚರಣೆಯನ್ನು ವೈಶಿಷ್ಟ್ಯವಾಗಿ ಆಚರಿಸಲು ನಿರ್ದರಿಸಿದ್ದೇವೆ. ಸ್ವತಂತ್ರ ಭಾರತದ ೭೬ ನೇ … Continued

ಕುಮಟಾ: ಸ್ಟೇರಿಂಗ್‌ ಲಾಕ್‌ ಆಗಿ ಉರುಳಿದ ಟಿಪ್ಪರ್‌, ಪವಾಡ ಸದೃಶ ಪಾರಾದ ಮೂವರು

ಕುಮಟಾ; ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಗಿಬ್‌ ಹೈಸ್ಕೂಲ್ ಸಮೀಪ ಚಲಿಸುತ್ತಿದ್ದ ಟಿಪ್ಪರೊಂದು ಸ್ಟೇರಿಂಗ್ ಲಾಕಾಗಿ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಸೈಕಲ್ ನಿಲ್ಲಿಸಿ ಮಾತಾಡುತ್ತಿದ್ದ ಇಬ್ಬರು ಉರುಳಿ ಬೀಳುತ್ತಿರುವ ಟಿಪ್ಪರ್ ಅಡಿಯಲ್ಲಿ ಸಿಲುಕಿದ್ದರು. ಆದರೆ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್ ಉರುಳುತ್ತಿರುವಾಗ ತಕ್ಷಣ ಇಬ್ಬರೂ ಮಲಗಿ ಟಿಪ್ಪರ್ ಉರುಳುತ್ತಿರುವಂತೆ ಅದರ ಚಕ್ರ … Continued

ಶಿರಸಿ ಐಎಂಎ ಅಧ್ಯಕ್ಷರಾಗಿ ಡಾ.ರಾಮ ಹೆಗಡೆ ಆಯ್ಕೆ

ಶಿರಸಿ: ಭಾರತೀಯ ವೈದ್ಯಕೀಯ ಸಂಘ ಶಿರಸಿಯ ಶಾಖೆಯ 2021-2022 ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಡಾ. ರಾಮ ಹೆಗಡೆ ಹಾಗೂ ಗೌರವ ಕಾರ್ಯದರ್ಶಿಯಾಗಿ ಡಾ. ರವೀಂದ್ರ ಕೊಳ್ವೇಕರ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ, ಡಾ ವಿಶ್ವನಾಥ ಅಂಕದ್, ಉಪಾಧ್ಯಕ್ಷರಾಗಿ ಡಾ.ವಿನಾಯಕ ತೆಂಬದ್ಮನೆ . ಜಂಟಿ ಕಾರ್ಯದರ್ಶಿಯಾಗಿ, ಡಾ ವಿನಾಯಕ ಎಸ್ . ಕೇಂದ್ರ ಸಮಿತಿ ಸದಸ್ಯರಾಗಿ ಡಾ ಜಿ. … Continued

ಮಕ್ಕಳಲ್ಲಿ ಏಕತಾ ಮನೋಭಾವ ಬೆಳೆಯಲಿ: ಡಾ.ಅಜಿತ ಪ್ರಸಾದ

ಧಾರವಾಡ: ಮಕ್ಕಳ ಮನಸ್ಸು ದ್ವೇಷ, ಅಸೂಯೆ, ಕೀಳರಿಮೆ ಇಲ್ಲದೆ ಮೃದುವಾದದ್ದು. ಅದಕ್ಕೆ ನಾವು ಯಾವ ರೀತಿಯ ಪೋಷಣೆ ನೀಡುತ್ತೇವೆಯೋ ಆ ರೀತಿ ಮಕ್ಕಳು ಬೆಳೆಯುತ್ತಾರೆ. ಸಮಾಜದಲ್ಲಿ ಮೇಲು ಕೀಳು ಎನ್ನದೆ ಸಮವಾಗಿ ಬದುಕಿದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ಅವರು ಜೆ.ಎಸ್.ಎಸ್ ಶ್ರೀ … Continued

ಜೆ.ಎಸ್.ಎಸ್ ನಲ್ಲಿ ಕಲಾಕ್ಷೇತ್ರದಲ್ಲಿ ಕೋವಿಡ್-೧೯ ಲಸಿಕಾ ಕಾರ್ಯಕ್ರಮ

ಜನತಾ ಶಿಕ್ಷಣ ಸಮಿತಿ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾಗಿರಿಯ ಜೆ.ಎಸ್.ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಕೋವಿಡ್-೧೯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಟ್ಟು ೪೭೦ ಜನ ಕೋವಿಡ್ ಲಸಿಕೆ ಪಡೆದರು. ಈ ಸಂದರ್ಭದಲ್ಲಿ ಡಾ. ರತ್ನಾ, ಮಹಾವೀರ ಉಪಾದ್ಯೆ, ಜಿನೇಂದ್ರ ಕುಂದಗೋಳ ಇತರರು ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ: ಜೆಎಸ್ಎಸ್‌ ನಿಂದ ಸನ್ಮಾನ

ಧಾರವಾಡ: ಜೆಎಸ್‌ಎಸ್ ಬನಶಂಕರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಕ್ಕೆ ಅತ್ಯತ್ತಮ ಘಟಕ ಮತ್ತು ಸುರೇಶಪ್ಪ ಸಜ್ಜನ ಅವರಿಗೆ ೨೦೧೯-೨೦೨೦ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಯನ್ನು ೨೪ ಸಪ್ಟೆಂಬರ್ ೨೦೨೧ ರಂದು ದೆಹಲಿಯ ಸುಶ್ಮಾಸ್ವರಾಜ ಭವನದಲ್ಲಿ ನೀಡಿ ಗೌರವಿಸಲಾಯಿತು. ಕಳೆದ ಆರು ವರ್ಷಗಳ ಅವಧಿಯಲ್ಲಿ ೧೦ ರಕ್ತದಾನ ಶಿಬಿರ, ೧೨ ಉಚಿತ … Continued

ಕುಮಟಾ; ಭಾರತ ಬಂದ್‌ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ

ಕುಮಟಾ;ಭಾರತ ಬಂದ್ ಗೆ ಬೆಂಬಲ ಸೂಚಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.ರಾಷ್ಟ್ರಿಯ ಹೆದ್ದಾರಿ ೬೬ ರ ಮಣಕಿ ಮೈದಾನದಿಂದ ತಹಶೀಲ್ದಾರ ಕಚೇರಿಯ ವರೆಗೆ ಮೆರವಣಿಗೆಯ ಮೂಲಕ ಸಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಲಾಯಿತು. ಬಿಸಿಯೂಟ ತಯಾರಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು.ನಂತರ ತಹಶೀಲ್ದಾರ ಕಚೇರಿಯ … Continued

ಜೆಇಇ ಮೇನ್ಸ್‌ -ಸಿಇಟಿ ಪರೀಕ್ಷೆಯಲ್ಲಿ ಜೆಎಸ್ಎಸ್ ಆರ್.ಎಸ್.ಹುಕ್ಕೇರಿಕರ ಪಿಯು ಕಾಲೇಜಿನ ಉತ್ತಮ ಸಾಧನೆ

ಧಾರವಾಡ: ನಗರದ ವಿದ್ಯಾಗಿರಿಯ ಜೆ.ಎಸ್.ಎಸ್.ಆರ್.ಎಸ್. ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯದ ೨೦೨೦-೨೦೨೧ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿ.ಇ.ಟಿ ಹಾಗೂ ಜೆ.ಇ.ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ನಾಲ್ಕು ಹಂತಗಳ ಪರೀಕ್ಷೆಗಳಲ್ಲೂ ಉತ್ತಮ ಸಾಧನೆಗೈದು ಬಿ.ಇ/ಬಿ.ಟೆಕ್ ವಿಭಾಗದಲ್ಲಿ ಜೆ.ಇ.ಇ. ಅಡ್ವಾನ್ಸ್ಡ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಜೆ.ಇ.ಇ ಮೇನ್ಸ್‌ನಲ್ಲಿ … Continued