ಮೆದುಳು ನಿಷ್ಕ್ರಿಯ ಶಿರಸಿ ಮಹಿಳೆ ಅಂಗಾಂಗ ದಾನ: ಬೆಂಗಳೂರಿಗೆ ಒಯ್ಯಲು ಧಾರವಾಡದಿಂದ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್

ಹುಬ್ಬಳ್ಳಿ:ಮೆದುಳು ನಿಷ್ಕ್ರಿಯವಾಗಿದ್ದ ಮಹಿಳೆಯೊಬ್ಬರು ಮಾಡಿದ ಅಂಗಾಂಗಗಳನ್ನು ಶನಿವಾರ ವಿಮಾನದ ಮೂಲಕಮಾಡುವ ಮೂಲಕ ಬೆಂಗಳೂರಿಗೆ ರವಾನಿಸಲಾಯಿತು. ಕಣ್ಣು, ಕಿಡ್ನಿ, ಲಿವರ್ ಅಂಗಾಂಗಗಳನ್ನು ಸಾಗಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ ಪೊಲೀಸರು ಗಮನ ಸೆಳೆದಿದ್ದಾರೆ. ಪೊಲೀಸರ ಸಹಕಾರದೊಂದಿಗೆ 10 ನಿಮಿಷದಲ್ಲಿ 16 ಕಿಲೋ ಮೀಟರ್ ದೂರ ವೈದ್ಯರು ಅಂಗಾಂಗಗಳನ್ನು ಸಾಗಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯ … Continued

ಹೊನ್ನಾವರ:ಕೋವಿಡ್‌ ಸಂಕಷ್ಟದಲ್ಲಿ ಬಂದರು ನಿರ್ಮಾಣಕ್ಕೆ ರಸ್ತೆ ಅಗಲೀಕರಣಕ್ಕೆ ಒಕ್ಕಲೆಬ್ಬಿಸಲು ಮುಂದಾದ ಕಂಪನಿ; ಸ್ಥಳೀಯರ ತೀವ್ರ ವಿರೋಧ

ಹೊನ್ನಾವರ: ಒಂದೆಡೆ ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಕ್ಕು ಜನಜೀವನ ಸಂಕಷ್ಟದಲ್ಲಿದೆ.ಈ ಸಂದರ್ಭದಲ್ಲಿ ಹೊನ್ನಾವರದ ಟೊಂಕ ಪ್ರದೇಶದಲ್ಲಿ ‘ಹೊನ್ನಾವರ ಪೋರ್ಟ್ ಕಂಪನಿ’ಯು ಬಂದರು ನಿರ್ಮಾಣಕ್ಕೆ ಸಮುದ್ರ ಕಿನಾರೆ ಬದಿ ರಸ್ತೆ ವಿಸ್ತರಣೆಗೆ ಮುಂದಾಗಿದೆ. ಈ ಕುರಿತು ಕಾಮಗಾರಿಗೆಂದು ಈ ಮಳೆಗಾಲದಲ್ಲಿ ಕಾಸರಕೋಡು ಟೊಂಕಾ ಪ್ರದೇಶದಲ್ಲಿ ಮೀನುಗಾರರ ಶೆಡ್‌ಗಳು ಮತ್ತು ಮನೆಗಳ ತೆರವಿಗೆ ಮುಂದಾದಾಗ ಸ್ಥಳೀಯರು ಶನಿವಾರ … Continued

ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿ ದರ ಶೇ. 2.58

ಬೆಂಗಳೂರು: ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಗಳ ಸಂಖ್ಯೆ 1,05,226ಕ್ಕೆ ಕುಸಿದಿದೆ. ಕೊರೊನಾ ಸೋಂಕಿನ ಪಾಸಿಟಿವಿ ದರ ಶೇ. 2.58ರಷ್ಟಿದೆ ಹಾಗೂ ಸೋಂಕಿತರ ಸಾವಿನ ಪ್ರಮಾಣ ಶೇ. 2.69ರಷ್ಟುದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಕಳೆದ 24 ತಾಸಿನಲ್ಲಿ (ಶನಿವಾರ) ರಾಜ್ಯದಲ್ಲಿ ರಾಜ್ಯದಲ್ಲಿ ಹೊಸದಾಗಿ 4272 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಗೂ 115 … Continued

ಕೊವಿಡ್​ ಗುಣಮುಖ ಬಾಲಕನಲ್ಲಿ ಅಪರೂಪದ ಎನೆಕ್ ಕಾಯಿಲೆ ಪತ್ತೆ ! ಮಕ್ಕಳಿಗೆ ಬಂದಿದ್ದು ದೇಶದಲ್ಲೇ ಮೊದಲು ಎಂದ ವೈದ್ಯರು

ದಾವಣಗೆರೆ: ದೇಶದಲ್ಲಿ ವಿರಳವಾದ ಕಾಯಿಲೆಯೊಂದು ದಾವಣಗೆರೆ ಎಸ್ಎಸ್ ಆಸ್ಪತ್ರೆಯಲ್ಲಿ 13 ವರ್ಷದ ಬಾಲಕನಲ್ಲಿ ಪತ್ತೆಯಾಗಿದೆ. ಅಪರೂಪದ ಅಕ್ಯುಟ್‌ ನೆಕ್ರೋಟೈಜಿಂಗ್ ಎನ್ಸೆಫಲೋಪತಿ (ANEC case- acute necrotizing encephalopathy of childhood) ಎಂಬ ಕಾಯಿಲೆಯು ಎಸ್ಎಸ್ ವೈದ್ಯಕೀಯ ಸಂಶೋಧನೆ ಸಂಸ್ಥೆಯಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖವಾದ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದೆ. ಎಸ್ಎಸ್ ಆಸ್ಪತ್ರೆ ಸಂಶೋಧನಾ ಕೇಂದ್ರದ ವೈದ್ಯಕೀಯ … Continued

ಡೆಲ್ಟಾ ಪ್ಲಸ್‌ ಕೊರೊನಾ ವೈರಸ್‌: ಮಹಾರಾಷ್ಟ್ರದಿಂದ ಉತ್ತರ ಕನ್ನಡಕ್ಕೆ ಬರುವವರ ಕೈಗೆ ಸೀಲ್..!

ಕಾರವಾರ: ಎರಡನೇ ಅಲೆ ಮುಗಿಯುವ ಹಂತದಲ್ಲಿ ಇದೀಗ ಕೊರೊನಾ ಡೆಲ್ಟಾ ವೈರಸ್ ಬಗ್ಗೆ ಭೀತಿ ಪ್ರಾರಂಭವಾಗಿದ್ದು, ಉತ್ತರಕನ್ನಡದ ಜಿಲ್ಲಾಡಳಿತ ಈ ರೂಪಾಂತರಿ ವೈರಸ್ ತಡೆಗೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಡೆಲ್ಟಾ ಪ್ಲಸ್‌ ವೈರಸ್ ಸೋಂಕಿನ ಮಾದರಿ ಪತ್ತೆಯಾಗಿಲ್ಲ. ಮಹಾರಾಷ್ಟ್ರದಲ್ಲಿ ಕಂಡು ಬಂದಿರುವುದು … Continued

ಸಚಿವ ಹೆಬ್ಬಾರ್‌ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ಹೂಡಿದ ನಟ​ ಚೇತನ್‌

ಬೆಂಗಳೂರು: ಬ್ರಾಹ್ಮಣ್ಯದ ಕುರಿತಂತೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ ಬಳಿಕ ನಟ ಚೇತನ್​ ಚೇತನ್​ ಅವರ ಪೋಸ್ಟ್​ ಖಂಡಿಸಿ, ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​ ಅವರು ಟ್ವೀಟ್​ ಮಾಡಿದ್ದರು. ಹಾಗೂ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಸಚಿವ ಹೆಬ್ಬಾರ್‌ ಅವರ ಪೋಸ್ಟಿನಿಂದ ತಮ್ಮ ತೇಜೋವಧೆ ಆಗಿದೆ ಎಂದು ಚೇತನ್​ ಅವರು ಸಚಿವರ ವಿರುದ್ಧ 1 ರೂ. ಮಾನನಷ್ಟ … Continued

ನೂತನ ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ರೈತರಿಂದ ರಾಜಭವನಕ್ಕೆ ಮುತ್ತಿಗೆ, ಹಲವರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದ ರೈತರು ಬೆಂಗಳೂರಿನಲ್ಲಿ ಶನಿವಾರ ರಾಜಭವನ ಚಲೋ ನಡೆಸಿದರು. ರಾಜಭವನಕ್ಕೆ ಮುತ್ತಿಗೆ ಹಾಕಿ ಸರ್ಕಾರದ ಗಮನ ಸೆಳೆದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ತಿದ್ದುಪಡಿ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಸರ್ಕಾರ ಹಿಂತೆಗೆದುಕೊಳ್ಳುವ ವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಹೇಳಿದ್ದಾರೆ. … Continued

ಮತ್ತೆ ಮುಷ್ಕರಕ್ಕೆ ಮುಂದಾಗುವ ಮುನ್ನವೇ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ ಸರ್ಕಾರ..!

ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಗಳ ನೌಕರರು ಜುಲೈ 5ರ ಬಳಿಕ ಮತ್ತೆ ಮುಷ್ಕರ ನಡೆಸಲು ಮುಂದಾಗಿರುವ ಸುಳಿವಿನ ಮೇರೆಗೆ ರಾಜ್ಯ ಸರ್ಕಾರ ಮುಷ್ಕರಕ್ಕೆ ಬ್ರೇಕ್‌ ಹಾಕಲು ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಿದೆ. ಜುಲೈ 1ರಿಂದ ಡಿಸೆಂಬರ್ 31ರ ವರೆಗೆ ಮುಷ್ಕರವನ್ನು ನಿಷೇಧಿಸಿ ಆದೇಶ ಮಾಡಲಾಗಿದೆ. ಆರ್ಥಿಕತೆಯ ಮೇಲೆ ಕೋವಿಡ್ ಸಾಕಷ್ಟು ಪ್ರಭಾವ ಬೀರಿದೆ. … Continued

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸರ್ಕಾರ ರಚಿಸಿದ ಸಮಿತಿಯಲ್ಲಿ ಗುಣವಂತೆಯ ಡಾ.ಪರಮೇಶ್ವರ ಪಂಡಿತ

ಹೊನ್ನಾವರ: ಉನ್ನತ ಶಿಕ್ಷಣದಲ್ಲಿ ಪ್ರಮುಖ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ಜಾರಿಗೆ ಸರ್ಕಾರ ರಚಿಸಿರುವ ವಿಜ್ಞಾನ ಮತ್ತು ಗಣಿತ ಶಾಸ್ತ್ರ ತಜ್ಞರ ಸಮಿತಿಗೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಗುಣವಂತೆ ಮೂಲದ, ಡಾ. ಪರಮೇಶ್ವರ ವಿ. ಪಂಡಿತ್‌ ಆಯ್ಕೆಯಾಗಿದ್ದಾರೆ. ಬೆಂಗಳೂರು ನಿವಾಸಿಯಾದ, ಬೆಂಗಳೂರು ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.ಸದ್ಯ ಇವರು … Continued

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ’

ಬೆಂಗಳೂರು: ಗುಂಪುಗಾರಿಕೆ ಮಾಡಿ ಪಕ್ಷವನ್ನು ಹಾಳು ಮಾಡುವವರು ನಮಗೆ ಬೇಡವೇ ಬೇಡ. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡುವ, ಪಕ್ಷದ ಸಿದ್ಧಾಂತ ಮತ್ತು ನಾಯಕತ್ವ ನಂಬಿ ಬರುವವರನ್ನು ಮಾತ್ರ ಕಾಂಗ್ರೆಸ್ ಗೆ ಸೇರಿಸಿಕೊಳ್ಳಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಹಾಸನ ಜಿಲ್ಲೆ ಬೇಲೂರು ಪುರಸಭೆಗೆ ಆಯ್ಕೆ ಆಗಿರುವ ಕಾಂಗ್ರೆಸ್ ಸದಸ್ಯರನ್ನು … Continued