ಕೊರೊನಾ ಸಂಕಟದಲ್ಲಿ ಆರೆಸ್ಸೆಸ್‌, ಸೇವಾ ಭಾರತಿಯಿಂದ ಮಾನವೀಯ ಕಾರ್ಯ

ಕುಮಟಾ: ಆರ್‌ ಎಸ್ಎಸ್ ನ ಸೇವಾ ಭಾರತಿ ಕುಮಟಾ ಘಟಕವು ಕೊರೊನಾ ಸಾಂಕ್ರಾಮಿಕ ರೋಗದ ಹೋರಾಟದಲ್ಲಿ ಮಾನವೀಯ ಕಾರ್ಯ ಮಾಡುತ್ತಿದ್ದು, ಜನ ಮೆಚ್ಚುಗೆಗೆ ಕಾರಣವಾಗಿದೆ. ಪೊಲೀಸ್ ಸಿಬ್ಬಂದಿ, ರಕ್ತ ದಾನಿಗಳು, ಆಸ್ಪತ್ರೆ ಸಿಬ್ಬಂದಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸರಕು ಸಾಗಿಸುವ ವಾಹನ ಚಾಲಕರು ಹಾಗೂ ಕ್ಲೀನರುಗಳಿಗೆ ಆಹಾರ, ಶುದ್ಧ ಕುಡಿಯುವ ನೀರಿನ ಬಾಟಲ್‌ಗಳನ್ನು ನೀಡಲಾಗುತ್ತಿದೆ. … Continued

ಜನ ಸಹಕರಿಸಿದರೆ ಜೂ.7ರ ನಂತರ ಲಾಕ್‍ಡೌನ್ ವಿಸ್ತರಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ:ಸಿಎಂ

ಬೆಂಗಳೂರು: ಜನ ಅಗತ್ಯ ಸಹಕಾರ ನೀಡಿದರೆ ಮಾತ್ರ ಜೂನ್ 7ರ ನಂತರ ಲಾಕ್‍ಡೌನ್ ಮುಂದುವರೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 7ರ ವರೆಗೂ ಎಂದಿನಂತೆ ಲಾಕ್‍ಡೌನ್ ಮುಂದುವರೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ಜೂ.7ರ ನಂತರ ಪರಿಸ್ಥಿತಿ ಅವಲೋಕಿಸಿ ಲಾಕ್‍ಡೌನ್ ವಿಸ್ತರಣೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು. … Continued

ಜಲಧಾರೆ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ, ಧಾರವಾಡ ಜಿಲ್ಲೆ 388 ಹಳ್ಳಿಗಳಿಗೆ ನೀರು:ಶೆಟ್ಟರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ 388 ಹಳ್ಳಿಗಳಿಗೆ ಮಲಪ್ರಭಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಜಲಧಾರೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1032 ಕೋಟಿ ರೂ.ಗಳ ಯೋಜನೆ ಇದು. ಕೇಂದ್ರ ಸರ್ಕಾರ ಜಲಜೀವನ್ ಮಿಷನ್ … Continued

ಕರ್ನಾಟಕದಲ್ಲಿ ಸಿಎಂ ಹುದ್ದೆ ಈಗ ಖಾಲಿ‌ ಇಲ್ಲ: ಸಚಿವ ಜೋಶಿ

ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಈಗ ಖಾಲಿ‌ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥರಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಒಳ್ಳೆಯ ಕೆಲಸ‌ ಮಾಡುತ್ತಿದ್ದಾರೆ. ವಯಸ್ಸಿನ ಕಾರಣ ಹೇಳಿ‌ ಅವರನ್ನು ಕೆಳಗಿಳಿಸುವುದು ಸೂಕ್ತವಲ್ಲ ಎಂದು ಹೇಳಿದರು. ರಾಜ್ಯದ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯೂ ಆಗಿಲ್ಲ. ನಾನು … Continued

ನನ್ನ ಕೋಳಿಗೆ ಭೇದಿ ಶುರುವಾಗ್ಬಿಟ್ಟಿದೆ .. ಅದ್ಕೆ ಆಸ್ಪತ್ರೆಗೆ ಹೋಗ್ತಾ ಇದ್ದೀನಿ: ವ್ಯಕ್ತಿ ಉತ್ತರಕ್ಕೆ ಪೊಲೀಸರೇ ಸುಸ್ತು..!

ಗದಗ: ಲಾಕ್‌ಡೌನ್‌ ಸಮಯದಲ್ಲಿ ಮನೆಯಿಂದ ಹೊರಬರಲು ಜನರು ಏನೆಲ್ಲ ಕಾರಣಗಳನ್ನು ಹುಡುಕುತ್ತಾರೆ. ಏನೆಲ್ಲ ಮಾಡಿ ಅಡ್ಡಾಡಲು ಕಾರಣ ಹುಡುಕುತ್ತಾರೆ. ಗದಗ ಜಿಲ್ಲೆಯಲ್ಲಿಯೂ ಇಂಥದ್ದೇಒಂದು ಘಟನೆ ನಡೆದಿದೆ. ಆದರೆ ಇಲ್ಲಿ ವ್ಯಕ್ತಿಯೊಬ್ಬ ಪೊಲೀಸರನ್ನು ಯಾಮಾರಿಸಲು ಕೊಟ್ಟ ಕಾರಣವೋ ಅಥವಾ ಅವನ ಮುಗ್ಧತೆಯೋ ಆತ ಕೊಟ್ಟ ಉತ್ತರಕ್ಕೆ ಪೊಲೀಸರಷ್ಟೇ ಅಲ್ಲ, ಅದನ್ನು ಕೇಳಿದ ಪ್ರತಿಯೊಬ್ಬರೂ ಹೌಹಾರುತ್ತಾರೆ. ಆತ ಕೊಟ್ಟ … Continued

ಕೊರೊನಾ ಸೋಂಕಿನ ಪ್ರಮಾಣ ಶೇ.10ಕ್ಕಿಂತ ಕಡಿಮೆ ಬರುವ ತನಕ ಲಾಕ್ಡೌನ್ ಸಡಿಲಿಕೆಯಿಲ್ಲ..ಇದು ಮುಂದುವರಿಸುವ ಮುನ್ಸೂಚನೆಯೇ..?

ಬೆಂಗಳೂರು : ಕೋವಿಡ್ – 19 ಸೋಂಕಿನ ಪ್ರಮಾಣ ಶೇಕಡಾ 10ಕ್ಕಿಂತ ಕಡಿಮೆ ಬರುವ ತನಕ ರಾಜ್ಯದಲ್ಲಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಸ್ತುತ ರಾಜ್ಯದಲ್ಲಿ ಸೋಂಕಿನ ದರ ಶೇ 10.ಕ್ಕಿಂತಲೂ ಹೆಚ್ಚಾಗಿದೆ. ಇದು ಶೇ 10 ಕ್ಕಿಂತ ಕಡಿಮೆ … Continued

ಹಲ್ಲೆ, ಅತ್ಯಾಚಾರ ಪ್ರಕರಣ: ಕೋರ್ಟ್‌ ಮುಂದೆ ಬಾಧಿತ ಬಾಂಗ್ಲಾ ಯುವತಿ ಹಾಜರಿಗೆ ಸಿದ್ಧತೆ

ಬೆಂಗಳೂರು: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಾಂಗ್ಲಾ ಯುವತಿಯನ್ನು ನ್ಯಾಯಧೀಶರ ಮುಂದೆ ಹಾಜರು ಪಡಿಸಿ ಹೇಳಿಕೆ ದಾಖಲಿಸಲು ರಾಮಮೂರ್ತಿನಗರ ಪೊಲೀಸರು ತಯಾರಿ ನಡೆಸಿದ್ದಾರೆ. ಕೇರಳದಲ್ಲಿದ್ದ ಸಂತ್ರಸ್ತ ಯುವತಿಯನ್ನು ಶುಕ್ರವಾರ ಸಂಜೆ ಬೆಂಗಳೂರಿಗೆ ಕರೆತರಲಾಗಿದೆ. ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಸಂತ್ರಸ್ತ ಯುವತಿಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಸಂತನಗರದಲ್ಲಿರುವ ವಿಶೇಷ … Continued

ಪ್ರಾಥಮಿಕ ಶಿಕ್ಷಕರು ಪ್ರೌಢಶಾಲೆ ಗ್ರೇಡ್-2 ಬಡ್ತಿಗೆ ಅರ್ಹರಲ್ಲ ಎಂದು ಕೆಎಟಿ ಆದೇಶ: 8000 ಶಿಕ್ಷಕರಿಗೆ ಹಿಂಬಡ್ತಿ

ಬೆಂಗಳೂರು: ಪ್ರಾಥಮಿಕ ಶಾಲೆ ಶಿಕ್ಷಕರು ಪ್ರೌಢಶಾಲೆ ಸಹ ಶಿಕ್ಷಕ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ(KAT) ಆದೇಶಿಸಿದೆ. 1 -5 ನೇ ತರಗತಿಗೆ ಪಾಠ ಮಾಡುವ ಪ್ರಾಥಮಿಕ ಶಾಲೆ ಶಿಕ್ಷಕರು, ಪ್ರೌಢಶಾಲೆ ಸಹ ಶಿಕ್ಷಕ ಗ್ರೇಡ್- 2 ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಲ್ಲ ಎಂದು ಆದೇಶಿಸಲಾಗಿದೆ. ಪ್ರಾಥಮಿಕ ಶಾಲೆ ಶಿಕ್ಷಕರುಗಳಿಗೆ ಪ್ರೌಢಶಾಲಾ … Continued

ಕರ್ನಾಟಕಕ್ಕೆ ಬರಬೇಕಿರುವ 11 ಸಾವಿರ ಕೋಟಿ ರೂ. ಜಿಎಸ್‍ಟಿ ಬಾಕಿ ಬಿಡುಗಡೆ ಮಾಡಿ: ಕೇಂದ್ರಕ್ಕೆ ರಾಜ್ಯದ ಮನವಿ

ಬೆಂಗಳೂರು: ಕರ್ನಾಟಕ ಸರಕಾರಕ್ಕೆ ಕೇಂದ್ರದಿಂದ ಬರಬೇಕಾಗಿರುವ ಜಿಎಸ್‍ಟಿ ಪರಿಹಾರ ನಷ್ಟದ ಬಾಕಿ ಮೊತ್ತ 11 ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಎಸ್‌ಟಿ ಮಂಡಳಿಯ ರಾಜ್ಯ ಪ್ರತಿನಿಧಿ ಹಾಗೂ ಗೃಹ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ. ಶುಕ್ರವಾರ ನಡೆದ … Continued

ಕರ್ನಾಟಕದಲ್ಲಿ ಹೊಸ ಸೋಂಕಿತರಿಗಿಂತ ಎರಡೂವರೆ ಪಟ್ಟು ಗುಣಮುಖ..ಪಾಸಿಟಿವಿಟಿ ದರ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಕಳೆದ 24 ಗಂಟೆಯಲ್ಲಿ 22,823 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 52,253 ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಶುಕ್ರವಾರ ಬಿಡುಗಡೆಯಾದವರ ಸಂಖ್ಯೆ ಹೊಸ ಸೋಂಕಿತರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಸೋಂಕಿತರ … Continued