ಕರ್ನಾಟಕ, ಉತ್ತರ ಪ್ರದೇಶದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರದ ತಾತ್ವಿಕ ಒಪ್ಪಿಗೆ

ನವದೆಹಲಿ: ಕರ್ನಾಟಕ, ಉತ್ತರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂಬ ಮಾಹಿತಿಯನ್ನು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ. ಸಂಸತ್ ಕಲಾಪದಲ್ಲಿ ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವರು, ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಗೋವಾಗಳಿಂದ ಪ್ರಸ್ತಾವನೆಗಳು … Continued

ಸಂಗಮೇಶ ವರ್ತನೆ : ಹಕ್ಕುಚ್ಯುತಿ ಮಂಡನೆಗೆ ವಿಧಾನಸಭೆಯಲ್ಲಿ ಗದ್ದಲ

ಬೆಂಗಳೂರು; ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರು ಸದನದಲ್ಲಿ ಅನುಚಿತವಾಗಿ ವರ್ತನೆ ಮಾಡಿದ ಪ್ರಕರಣ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿ ಕಾರಣವಾಯಿತು. ಸರ್ಕಾರದ ನಡೆ ಖಂಡಿಸಿ ಪ್ರತಿಪಕ್ಷ ಕಾಂಗ್ರೆಸ್‍ನ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರಶ್ನೋತ್ತರ ಅವ ಮುಗಿದ ನಂತರ ಶಾಸಕ ಅರಗ ಜ್ಞಾನೇಂದ್ರ ಹಕ್ಕುಚ್ಯುತಿ ಮಂಡಿಸಿ ವಿಷಯ ಪ್ರಸ್ತಾವನೆ … Continued

ಪರಿಷತ್‌: ಪ್ರಶ್ನೆ ಕೇಳದೆ ಸಚಿವ ಬೈರತಿಗೆ ಮುಜುಗರ ತರಲು ಕಾಂಗ್ರೆಸ್‌ ಸದಸ್ಯರ ಯತ್ನ

ಬೆಂಗಳೂರು: ಮಾನಹಾನಿ ಪ್ರಕರಣಗಳನ್ನು ಪ್ರಕಟಿಸದಂತೆ ಕೋರ್ಟ್ ಮೆಟ್ಟಿಲೇರಿರುವ ಆರು ಮಂದಿ ಪೈಕಿ ಒಬ್ಬರಾಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರಿಗೆ ಕಾಂಗ್ರೆಸ್ ಪ್ರಶ್ನೆ ಕೇಳದೆ ವಿಧಾನಪರಿಷತ್‍ನಲ್ಲಿ ಮುಜುಗರ ಉಂಟು ಮಾಡಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಆರ್.ಪ್ರಸನ್ನಕುಮಾರ್ ಮತ್ತು ಬಸವರಾಜ ಪಾಟೀಲ ಇಟಗಿ ಅವರ ಪ್ರಶ್ನೆಗಳು ಇದ್ದವು. ಆದರೆ, ಈ ಇಬ್ಬರು ಕೂಡ ನಾವು … Continued

ಸಿಂಧಗಿಯಲ್ಲಿ ಜೆಡಿಎಸ್‌ಗೆ ಬಿಗ್‌ ಶಾಕ್‌ ನೀಡಿದ ಅಶೋಕ ಮನಗೂಳಿ…!

ವಿಜಯಪುರ: ಉಪಚುನಾವಣೆ ಸನಿಹದಲ್ಲಿರುವಾಗಲೇ ಜೆಡಿಎಸ್‌ಗೆ ದೊಡ್ಡ ಶಾಕ್‌ ಆಗಿದೆ. ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಮಾಜಿ ಸಚಿವ ದಿ.ಎಂ. ಸಿ.ಮನಗೂಳಿ ಅವರ ಪುತ್ರ ಪಕ್ಷ ತೊರೆಯುವುದಾಗಿ ಪ್ರಕಟಿಸುವುದರ ಮೂಲಕ ಜೆಡಿಎಸ್‌ಗೆ ಬಿಗ್‌ ಶಾಕ್‌ ನೀಡಿದ್ದಾರೆ. ಅವರು ಕಾಂಗ್ರೆಸ್‌ ಸೇರುವುದಾಗಿ ಹೇಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಧಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ (85) ಜನವರಿ 28ರಂದು … Continued

೯ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮಂಗಳವಾರ ಬೆಳ್ಳಂಬೆಳಗ್ಗೆ 9 ಅಧಿಕಾರಿಗಳಿಗೆ ಸೇರಿದ ರಾಜ್ಯದ 11 ಜಿಲ್ಲೆಗಳ 28 ಸ್ಥಳಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅಕ್ರಮವಾಗಿ ಸಂಪತ್ತು ಗಳಿಸಿದ ಆರೋಪಗಳು ಈ ಓಂಭತ್ತು ಅಧಿಕಾರಿಗಳ ವಿರುದ್ಧ ಕೇಳಿಬಂದ ಹಿನ್ನೆಲೆಯಲ್ಲಿ ಇವರ ಮನೆ, ಕಚೇರಿ ಮೇಲೆ … Continued

ರಮೇಶ ಜಾರಕಿಹೊಳಿ ಪ್ರಕರಣ: ಬುಕ್ ಆಫ್ ಲಾ ಪ್ರಕಾರ ತನಿಖೆ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಬುಕ್ ಆಫ್ ಲಾ ಪ್ರಕಾರ ತನಿಖೆ ನಡೆಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು … Continued

ನರ ಹಂತಕ ಹುಲಿ ಹಿಡಿಯಲು ೧೫೦ ಅರಣ್ಯ ಸಿಬ್ಬಂದಿ: ಆದರೂ ಕಾಣಿಸದ ಹುಲಿ

ಮಡಿಕೇರಿ: ನರ ಹಂತಕ ವ್ಯಾಘ್ರನ ಸೆರೆ ವಿಳಂಬವಾಗುತ್ತಿದ್ದು, ಗ್ರಾಮಸ್ಥರ ಆಕ್ರೋಶವೂ ಹೆಚ್ಚಾಗುತ್ತಿದೆ. ಈಗಾಗಲೇ ಮೂರು ಜೀವಗಳನ್ನು ಬಲಿ ಪಡೆದಿರುವ ಗಂಡು ಹುಲಿ ಯಾರ ಕಣ್ಣಿಗೂ ಬೀಳುತ್ತಿಲ್ಲ. ಅರಣ್ಯ ಇಲಾಖೆಯ 150ಕ್ಕೂ ಅಧಿಕ ಸಿಬ್ಬಂದಿ ಹುಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿ ಸೋಮವಾರ ಬೆಂಗಳೂರಿನಲ್ಲಿ ಶಾಸಕರಾದ ಕೆ. ಜಿ. ಬೋಪಯ್ಯ, ವನ್ಯಜೀವಿ ವಿಭಾಗದ … Continued

ಇದು ನೂರಕ್ಕೆ ನೂರು ನಕಲಿ ಸಿಡಿ, ಯುವತಿಗೆ ೫ ಕೋಟಿ, ವಿದೇಶದಲ್ಲಿ ಎರಡು ಫ್ಲ್ಯಾಟ್ ‌ಆಮಿಷ: ರಮೇಶ ಜಾರಕಿಹೊಳಿ

ಬೆಂಗಳೂರು: ಇದು ನೂರಕ್ಕೆ ನೂರರಷ್ಟು ನಕಲಿ ಸಿಡಿ. ಸಿಡಿ ವಿದ್ಯಮಾನದಲ್ಲಿ ನಾನು ನಿರಪರಾಧಿ, ನಾನು ಯಾವುದೇ ತಪ್ಪು ಮಾಡಿಲ್ಲ. ಇದು ನನ್ನ ತೇಜೋವಧೆ ಮಾಡಲು ರೂಪಿಸಿದ ಷಡ್ಯಂತ್ರ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿದ್ದಾರೆ. ಮಂಗಳವಾರ (ಮಾ.೯) ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡುತ್ತ ಕೆಲಕಾಲ ತೀವ್ರವಾಗಿ ಗದ್ಗದಿತರಾದರು. ರಮೇಶ್ ಜಾರಕಿಹೊಳಿಯವರು ಯುವತಿಗೆ ಕೆಲಸದ ಆಮಿಷವೊಡ್ಡಿ … Continued

ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಸ್ಫೋಟಕ ತುಂಬಿದ್ದ ಎರಡು ವಾಹನಗಳು ಪತ್ತೆ

ಶಿವಮೊಗ್ಗ: ಶಿವಮೊಗ್ಗದ ವಿಮಾನ ನಿಲ್ದಾಣದ ಬಳಿ ಭಾರಿ ಪ್ರಮಾಣದ ಸ್ಫೋಟಕ ತುಂಬಿದ್ದ ಎರಡು ವಾಹನಗಳು ಪತ್ತೆಯಾಗಿವೆ. ಇವುಗಳಲ್ಲಿ 904 ಕೆ.ಜಿ. ಜಿಲೆಟಿನ್ ಕಡ್ಡಿ, 3,267 ಡಿಟೊನೇಟರ್‌ಗಳು ಸೇರಿದಂತೆ ಹಲವಾರು ಇತರ ವಸ್ತುಗಳು ಪತ್ತೆಯಾಗಿವೆ. ವಿಮಾನ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಟಾಟಾ 407 ವಾಹನದಲ್ಲಿ 36 ಬಾಕ್ಸ್ ಜಿಲೆಟಿನ್ ಕಡ್ಡಿಗಳು, ಪಿಕ್ ಅಪ್ ವಾಹನದಲ್ಲಿ 3,267 ಎಲೆಕ್ಟ್ರಾನಿಕ್ … Continued

ಶೀಘ್ರದಲ್ಲೇ ರಾಜ್ಯ ಖನಿಜ ನೀತಿ  ಜಾರಿ: ಬಜೆಟ್‍ನಲ್ಲಿ ಘೋಷಣೆ 

ಬೆಂಗಳೂರು” ಗಣಿಗಾರಿಕೆ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ  ರಾಷ್ಟ್ರೀಯ ಖನಿಜ ನೀತಿಗೆ ಅನುಗುಣವಾಗಿ  ರಾಜ್ಯ ಸರ್ಕಾರವು 2021-26ನೇ ಸಾಲಿನ  ರಾಜ್ಯ ಖನಿಜ ನೀತಿ ಜಾರಿ ಮಾಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, ನಮ್ಮ ಸರ್ಕಾರವು 2008ರಲ್ಲಿಯೇ ಖನಿಜ ನೀತಿ ಜಾರಿಗೆ ತಂದಿತ್ತು. ಇದೀಗ ಈ … Continued