8 ಲಕ್ಷ ರೂ.ಗಳ ಬೆಲೆ ಬಾಳುವ ಟಗರು ‘ಲವ್ಲಿಬಾಯ್ ಹೃದಯಾಘಾತದಿಂದ ಸಾವು

ಬಾಗಲಕೋಟೆ: 8 ಲಕ್ಷ ರೂ.ಗಳ ವರೆಗೆ ಹೊಂದಿದ್ದ “ಲವ್ಲಿ ಬಾಯ್” ಎಂಬ ಹೆಸರಿನ ಟಗರು ಹೃದಯಾಘಾತದಿಂದ ಮೃತಪಟ್ಟಿದೆ. ಮೂಲತಃ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕ ಎಚ್.ಎನ್. ಸೇಬಣ್ಣವರ ಅವರಿಗೆ ಈ ಟಗರು ಸೇರಿದ್ದು, ಇದು ಕಾಳಗಕ್ಕೆ ಹೆಸರುವಾಸಿಯಾಗಿತ್ತು. ಹೀಗಾಗಿ ಈ ಟಗರಿಗೆ 8 ಲಕ್ಷ ರೂ.ಗಳ ವರೆಗೆ ಬೇಡಿಕೆ ಇತ್ತು. ಅಂದಾಜು ಮುನ್ನೂರಕ್ಕೂ ಹೆಚ್ಚು … Continued

ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ: ಖಾರ್ಕಿವ್​​ನಲ್ಲಿ ಹಾವೇರಿಯ ವಿದ್ಯಾರ್ಥಿ ಸಾವು

ಕೀವ್​(ಉಕ್ರೇನ್​): ಉಕ್ರೇನ್​ನ ಖಾರ್ಕಿವ್​ ನಗರದ ಮೇಲೆ ಇಂದು ಬೆಳಗ್ಗೆ ರಷ್ಯಾ ಸೇನೆ ನಡೆಸಿರುವ ವೈಮಾನಿಕ ಶೆಲ್​ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ಮೃತಪಟ್ಟಿರುವ ವಿದ್ಯಾರ್ಥಿಯನ್ನು ಹಾವೇರಿ ಜಿಲ್ಲೆಯ ನಿವಾಸಿ ನವೀನ್​ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಖಾರ್ಕಿವ್​ನಲ್ಲಿ ವ್ಯಾಸಂಗ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ತಿಂಡಿ ಮಾಡಲು ಹೊರಗಡೆ ಹೋಗಿದ್ದ ವೇಳೆ ರಷ್ಯಾ ರಾಕೆಟ್‌ ದಾಳಿ … Continued

ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಇಳಿಕೆ

ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 268 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 5,623 ಕ್ಕೆ ಇಳಿಕೆಯಾಗಿದೆ. ಇಂದು, ಸೋಮವಾರ 14 ಮಂದಿ ಮೃತಪಟ್ಟಿದ್ದಾರೆ ಅವಧಿಯಲ್ಲಿ 1,119 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಬಾಗಲಕೋಟೆ, ಗದಗ, ಹಾವೇರಿ, ಮಂಡ್ಯ, ರಾಯಚೂರು, ರಾಮನಾಗರ,ಮತ್ತು … Continued

ಬೈಕಿಗೆ ಬಸ್‌ ಡಿಕ್ಕಿ: ಮೂವರ ಸಾವು

ಚಿಕ್ಕಬಳ್ಳಾಪುರ: ಭೀಕರ ರಸ್ತೆ ಅಪಘಾತವೊಂದರಲ್ಲಿ ಸ್ಕೂಟಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಮೂವರು ಸಾವಿಗೀಡಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್ ನಲ್ಲಿದ್ದಂತ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೊನ್ನೇನಹಳ್ಳಿ ಗೇಟ್ ಬಳಿಯಲ್ಲಿ ರಸ್ತೆ ಕ್ರಾಸ್ ಮಾಡುವಾಗ, ಬೈಕ್ ಗೆ ಖಾಸಗಿ ಬಸ್ಬಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ನಜ್ಜು … Continued

ಕನ್ನಡದ ಖ್ಯಾತ ನಟ ರವಿಚಂದ್ರನ್ ತಾಯಿ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್​ ವೀರಸ್ವಾಮಿ, ಇಂದು, ಸೋಮವಾರ (ಫೆ.28) ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ರವಿಚಂದ್ರನ್​ ತಾಯಿ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಪಟ್ಟಮ್ಮಾಳ್​ ವೀರಸ್ವಾಮಿ … Continued

ಉಕ್ರೇನ್‌ನಿಂದ ಬರುವ ವಿದ್ಯಾರ್ಥಿಗಳ ಪ್ರಯಾಣದ ವೆಚ್ಚ ಭರಿಸ್ತೇವೆ : ಸಿಎಂ ಬೊಮ್ಮಾಯಿ

ಬೆಂಗಳೂರು: ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮಕೈಗೊಳ್ಳಲಾಗುತ್ತಿದೆ. ವಿಪತ್ತು ನಿರ್ವಹಣಾ ಇಲಾಖೆಯಿಂದಲೇ ವಿದ್ಯಾರ್ಥಿಗಳ ಪ್ರಯಾಣ ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು, ಪಶ್ಚಿಮ ಭಾಗದಲ್ಲಿದ್ದ ವಿದ್ಯಾರ್ಥಿಗಳು ರೊಮೆನಿಯಾ ಮೂಲಕ … Continued

ಎಲ್. ಎಸ್. ಶಾಸ್ತ್ರಿಯವರ ಐದು ಕೃತಿಗಳ ಬಿಡುಗಡೆ, ವೇದ ರಚಿಸಿರುವುದು ಕೇವಲ ಮಡಿವಂತಿಕೆಗಾಗಿ ಅಲ್ಲ- ನಾರಾಯಣ ಯಾಜಿ

ಬೆಳಗಾವಿ :ವೇದ ರಚಿಸಿರುವುದು ಕೇವಲ ಮಡಿವಂತಿಕೆಗಾಗಿ ಅಲ್ಲ. ಪ್ರಕೃತಿಯನ್ನು ಆರಾಧಿಸುವ ಉದ್ದೇಶದಿಂದ ಅದನ್ನು ರಚಿಸಲಾಗಿದೆ. ಅದರಲ್ಲಿರುವ ಕಾವ್ಯದ ಸೌಂದರ್ಯವನ್ನು ತೋರಿಸುವುದಕ್ಕಾಗಿ, ಛಂದಸ್ಸಿನ ಕಾರಣಕ್ಕಾಗಿ ರಚಿಸಲಾಗಿದೆ ಎಂದು ಖ್ಯಾತ ಅಂಕಣಕಾರ, ನಾರಾಯಣ ಯಾಜಿ ಸಾಲೆಬೈಲು ಹೇಳಿದರು. ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನವರು ಭಾನುವಾರ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಿರಿಯ ಪತ್ರಕರ್ತ, ಲೇಖಕ … Continued

ಕುಮಟಾ: ರಂಗಕರ್ಮಿ ಎಸ್. ಟಿ. ಭಟ್ಟ ಹೊಲನಗದ್ದೆ ನಿಧನ

ಕುಮಟಾ : ರಂಗ ಕಲಾವಿದ ಹಾಗೂ ನಾಟಕ ನಿರ್ದೇಶಕ  ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಎಸ್. ಟಿ. ಭಟ್ಟ (66)  ಅವರು ಭಾನುವಾರ ನಿಧನ ರಾದರು. ಎಸ್. ಟಿ. ಭಟ್ಟ ಅವರು 200ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದರು. ಅನೇಕ ನಾಟಕ ಪುಸ್ತಕವನ್ನು ರಚಿಸಿದ್ದಾರೆ. ನಾಟಕ ಕಲಾವಿದರೂ ಆಗಿದ್ದ ಅವರು 100 ಕ್ಕೂ … Continued

ಶಿವಮೊಗ್ಗ: ನಾಳೆಯಿಂದ ಶಾಲಾ ಕಾಲೇಜು ಪುನಾರಂಭ

ಶಿವಮೊಗ್ಗ: ನಗರದಲ್ಲಿ ನಾಳೆಯಿಂದ (ಫೆಬ್ರವರಿ 28ರಿಂದ) ಶಾಲಾ- ಕಾಲೇಜು ಪುನಾರಂಭ ಆಗಲಿದೆ. ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಉದ್ವಿಗ್ನಗೊಂಡ ಗಲಭೆ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕಳೆದ ಒಂದು ವಾರದಿಂದ ಬಂದ್ ಆಗಿತ್ತು. ಆದರೆ, ಈಗ ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ ಮಾಡಿದ್ದಾರೆ. ಈಗ … Continued

ಕರಡಿ ದಾಳಿ: ಮನೆಯ ಮುಂದೆ ಮಲಗಿದ್ದ ವ್ಯಕ್ತಿಗೆ ಗಂಭೀರ ಗಾಯ

ಮಧುಗಿರಿ: ಕರಡಿಯೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಐ ಡಿ ಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ಮನೆಯ ಮುಂದೆ ಮಲಗಿದ್ದ ಮಲೇರಂಗಪ್ಪ (56) ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ದಾಳಿಯಿಂದ ಮಲೇರಂಗಪ್ಪ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ಅವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ … Continued