ವಿಜಯಪುರದ ಆರು ಪಟ್ಟಣ ಪಂಚಾಯತ: ಕಾಂಗ್ರೆಸ್ ಮೇಲುಗೈ, ಬಿಜೆಪಿ ಕಳಪೆ ಪ್ರದರ್ಶನ

ವಿಜಯಪುರ : ವಿಜಯಪುರ ಜಿಲ್ಲೆಯ 6 ಪಟ್ಟಣ ಪಂಚಾಯತಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಮೂರು ಕಡೆಗಳಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದ್ದರೆ, ಒಂದು ಕಡೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ ಹಾಗೂ ಎರಡು ಕಡೆ ಅತಂತ್ರ ಸ್ಥಿತಿಯ ಫಲಿತಾಂಶ ಬಂದಿದೆ. 99 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ರಾಜ್ಯದಲ್ಲಿ ಆಡಳಿತಾರೂಢ … Continued

ಭಟ್ಕಳ: ಜಾಲಿ ಪಟ್ಟಣ ಪಂಚಾಯತದಲ್ಲಿ ಪಕ್ಷೇತರರದ್ದೇ ಮೇಲುಗೈ…

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಜಾಲಿ ಪಟ್ಟಣ ಪಂಚಾಯತದ 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 20 ವಾರ್ಡುಗಳಲ್ಲಿ 13 ಪಕ್ಷೇತರರೇ ಆಯ್ಕೆಯಾಗಿದ್ದಾರೆ. 20 ಸ್ಥಾನಗಳಲ್ಲಿ 4 ಕಾಂಗ್ರೆಸ್, 3 ಬಿಜೆಪಿ ಗೆಲುವು ಸಾಧಿಸಿದ್ದು 13 ಪಕ್ಷೇತರರು ಆಯಕೆಯಾಗಿದ್ದಾರೆ. 12 ಪಕ್ಷೇತರರು ತಂಝೀಮ್ ಬೆಂಬಲಿತ ಪಕ್ಷೇತರರಾಗಿದ್ದಾರೆ. ವಾರ್ಡ್‌ವಾರು  ಆಯ್ಕೆಯಾದವರ ವಿವರ … Continued

ಗದಗ- ಬೆಟಗೇರಿ ನಗರಸಭೆ:‌  ಇದೇ ಮೊದಲ ಬಾರಿಗೆ ಬಿಜೆಪಿಗೆ ಬಹುಮತ

ಗದಗ: ಗದಗ-ಬೆಟಗೇರಿ ನಗರ ಸಭೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ 18 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದೆ. ಮತ ಎಣಿಕೆ ಮುಕ್ತಾಯ ವಾಗಿದ್ದು ಒಟ್ಟು 35 ವಾರ್ಡುಗಳಲ್ಲಿ ಬಿಜೆಪಿ-18 , ಕಾಂಗ್ರೆಸ್‌-15 ಹಾಗೂ ಪಕ್ಷೇತರರು-2 ರಲ್ಲಿ ಜಯ ಸಾಧಿಸಿದ್ದಾರೆ ವಾರ್ಡ್‌ವಾರು ವಿವರ: 1- ಕಾಂಗ್ರೆಸ್‌- ಲಕ್ಷ್ಮಿ ಅನಿಲಕುಮಾರ್ ಸಿದ್ಧಮ್ಮನಹಳ್ಳಿ 2- ಕಾಂಗ್ರೆಸ್‌- ಸುರೇಶ … Continued

ಸರ್ಕಾರದ ಹಿಡಿತದಿಂದ ದೇಗುಲಗಳನ್ನು ಮುಕ್ತ ಮಾಡುವ ಸರ್ಕಾರದ ನಡೆಗೆ ನಟಿ ಖುಷ್ಬೂ ಸ್ವಾಗತ

ಬೆಂಗಳೂರು: ಸರ್ಕಾರದ ಹಿಡಿತದಿಂದ ದೇವಸ್ಥಾನಗಳನ್ನು ಮುಕ್ತ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯ್ದೆ ತರಲು ಮುಂದಾಗಿರುವುದನ್ನು ಚಿತ್ರ ನಟಿ ಹಾಗೂ ಬಿಜೆಪಿ ವಕ್ತಾರರಾದ ಖುಷ್ಬೂ ಸ್ವಾಗತಿಸಿದ್ದಾರೆ. ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ನಟಿ ಖುಷ್ಬೂ, ದೇವಸ್ಥಾನಗಳು ಮುಕ್ತವಾಗಬೇಕು. ಈಗ ಸರ್ಕಾರದ ಹಿಡಿತದಿಂದ ಮುಕ್ತ ಮಾಡುತ್ತಿರುವುದಕ್ಕೆ ಸ್ವಾಗತವಿದೆ ಎಂದು ಹೇಳಿದರು. … Continued

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ: ಕನ್ನಡದ ಮೂವರು ಲೇಖಕರಿಗೆ ಒಲಿದ ಪ್ರಶಸ್ತಿ

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಇಂದು (ಗುರುವಾರ) ಪ್ರಕಟಿಸಲಾಗಿದ್ದು, ಕನ್ನಡದ ಪ್ರಮುಖ ಲೇಖಕರಾದ ಡಿ.ಎಸ್.ನಾಗಭೂಷಣ  ಅವರ ‘ಗಾಂಧಿ ಕಥನ’ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ಬಾಲ ಪುರಸ್ಕಾರ’ ಕ್ಕೆ ಬಸು ಬೇವಿನಗಿಡದ ಅವರ ‘ಓಡಿ ಹೋದ ಹುಡುಗ’ ಮಕ್ಕಳ ಕಾದಂಬರಿ ಆಯ್ಕೆಯಾಗಿದೆ. ‘ಯುವ ಪುರಸ್ಕಾರ’ … Continued

ಅತ್ಯಾಚಾರ ಆರೋಪ ಪ್ರಕರಣ: ರಾಘವೇಶ್ವರ ಶ್ರೀಗಳ ಖುಲಾಸೆ ಪ್ರಶ್ನಿಸಿದ್ದ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಜಾ

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಆರೋಪದಿಂದ ಮುಕ್ತಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ (ಸಿಐಡಿ ತನಿಖಾಧಿಕಾರಿ) ಮತ್ತು ಗಾಯಕಿ ಪ್ರೇಮಲತಾ ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ … Continued

ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಕಾನೂನು ತರುವೆ ಎಂದ ಸಿಎಂ ಬೊಮ್ಮಾಯಿ : ಚುನಾವಣೆ ಭರವಸೆ ಈಡೇರಿಕೆಯತ್ತ ಬಿಜೆಪಿ ಹೆಜ್ಜೆ

ರಘುಪತಿ ಯಾಜಿ ಬೆಂಗಳೂರು: ಬಿಜೆಪಿಯ 2018ರ ಚುನಾವಣಾ ಭರವಸೆಯಂತೆ ರಾಜ್ಯದ ದೇವಾಲಯಗಳಿಗೆ ಸರ್ಕಾರದ ನಿಯಂತ್ರಣದಿಂದ ಸ್ವಾಯತ್ತತೆ ನೀಡುವ ಯೋಜನೆಗಳನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಘೋಷಿಸಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ದೇವಸ್ಥಾನಗಳನ್ನು ಸರ್ಕಾರದ ಆಡಳಿತ ನಿಯಂತ್ರಣದಿಂದ ಮುಕ್ತಗೊಳಿಸುವ ಕಾನೂನನ್ನು ಮಂಡಿಸಲಾಗುವುದು ಎಂದು ಅವರು ಬುಧವಾರ ಹೇಳಿದ್ದಾರೆ. ಕರ್ನಾಟಕ ವಿಧಾನಮಂಡಲದ ಮುಂದಿನ ಅಧಿವೇಶನ ಫೆಬ್ರವರಿಯಲ್ಲಿ ನಡೆಯುವ … Continued

ಹಿಂದೂ ದೇಗುಲಗಳನ್ನು ಕಾನೂನಿನಿಂದ ಸ್ವತಂತ್ರ ಮಾಡುತ್ತೇವೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಮತಾಂತರ ಕಾಯ್ದೆ ಜಾರಿಗೆ ವಿಶೇಷ ಕಾರ್ಯ ಪಡೆ ರಚನೆ ಮಾಡಲಾಗುತ್ತದೆ. ಬೇರೆ ಸಮುದಾಯದ ಪ್ರಾರ್ಥನಾ ಸ್ಥಳಕ್ಕೆ ಸ್ವತಂತ್ರವಿರುವ ರೀತಿಯಲ್ಲೇ ಹಿಂದೂ ದೇವಾಲಯಗಳನ್ನೂ ಸ್ವತಂತ್ರ ಮಾಡುತ್ತೇವೆ. ಹಿಂದೂ ದೇಗುಲಗಳನ್ನು ಕಾನೂನಿನಿಂದ ಮುಕ್ತ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಣೆ ಮಾಡಿದ್ದಾರೆ. ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸುತ್ತೇವೆ. ಸರ್ವ … Continued

ಕರ್ನಾಟಕದಲ್ಲಿ ಇಂದು 566 ಹೊಸ ಕೋವಿಡ್ ಪ್ರಕರಣಗಳು ದಾಖಲು: ಬೆಂಗಳೂರಿನಲ್ಲೇ 400 ಹೊಸ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಬುಧವಾರ 566 ಹೊಸ ಕೋವಿಡ್-19 ಪ್ರಕರಣಗಳು ಮತ್ತು ಆರು ಸಾವುಗಳು ವರದಿಯಾಗಿವೆ, ಒಟ್ಟು ಸೋಂಕಿತರ ಸಂಖ್ಯೆ 30,05,798 ಕ್ಕೆ, ಸಾವಿನ ಸಂಖ್ಯೆ 38,324 ಕ್ಕೆ ತಲುಪಿದೆ. ಈಗ ಮತ್ತೆ ಪ್ರಕರಣಗಳು ಐದುನೂರರ ಗಡಿ ದಾಟಿದೆ. ಈ ದಿನ 245 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದು, , ಇದುವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಸಿಕೊಂಡವರ … Continued

ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗದಲ್ಲಿ ಡಿಸೆಂಬರ್‌ 31ರಂದು ಮಾತ್ರ ರಾತ್ರಿ 8ರಿಂದಲೇ ನೈಟ್‌ ಕರ್ಫ್ಯೂ ಜಾರಿ

ಕಾರವಾರ: ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಆದೇಶಿಸಿದ್ದ ರಾತ್ರಿ ಕರ್ಫ್ಯೂಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬುಧವಾರ ಆದೇಶ ಮಾಡಿದ್ದಾರೆ. ಈ ಆದೇಶ ಡಿ.೩೧ ಮಾತ್ರ ಸೀಮಿತವಾಗಿದೆ. ಹೊಸ ಆದೇಶದಂತೆ ಡಿ.31ರಂದು ರಾತ್ರಿ 8 ಗಂಟೆಯಿಂದ ಮುಂಜಾನೆ ಐದು ಗಂಟೆ ವರೆಗೆ … Continued