ಭಾರತದಲ್ಲಿ 12,428 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ಇದು ಮಾರ್ಚ್‌ಗಿಂತ ಕಡಿಮೆ

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 12,428 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ನಿನ್ನೆಗಿಂತ 13.1 ಶೇಕಡಾ ಕಡಿಮೆಯಾಗಿದೆ. ಇದು ದೇಶವು 230 ದಿನಗಳಲ್ಲಿ ಕಂಡ ಪ್ರಕರಣಗಳಲ್ಲಿ ಕಡಿಮೆ ದೈನಂದಿನ ಏರಿಕೆಯಾಗಿದೆ. ಹೊಸ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಪ್ರಕರಣ ಈಗ 3,42,02,202 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ … Continued

ಆರ್ಯನ್‌ ಖಾನ್ ಪ್ರಕರಣ: ಸೈಲ್ ಅಫಿಡವಿಟ್‌ ವಿರುದ್ಧ ಎನ್‌ಸಿಬಿ, ಸಮೀರ್‌ ವಾಂಖೆಡೆ ಸಲ್ಲಿಸಿದ್ದ ಮನವಿ ತಿರಸ್ಕೃತ

ಮುಂಬೈ: ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಗೆ ಅಡ್ಡಿಪಡಿಸುವ ಯತ್ನಗಳನ್ನು ತಡೆಯಲು ನಿರ್ದೇಶಿಸುವಂತೆ ಕೋರಿ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಹಾಗೂ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಮುಂಬೈ ಸೆಷನ್ಸ್‌ ನ್ಯಾಯಾಲಯದ ಮುಂದೆ ಸಲ್ಲಿಸಿದ್ದ ಮನವಿ ತಿರಸ್ಕೃತವಾಗಿದೆ. ಆರ್ಯನ್ ಖಾನ್‌ ಡ್ರಗ್‌ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಯಾಗಿರುವ ಕೆ. ಪಿ. ಗೋಸಾವಿಯ ಅಂಗರಕ್ಷಕ … Continued

ನನಗೆ ಸಮನ್ಸ್‌ ನೀಡಿಲ್ಲ, ಬೇರೆ ಉದ್ದೇಶಕ್ಕಾಗಿ ದೆಹಲಿಗೆ ಬಂದಿದ್ದೇನೆ: ಸಮೀರ್ ವಾಂಖೇಡೆ

ನವದೆಹಲಿ:ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋದ ಮುಂಬೈ ಘಟಕದ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಸೋಮವಾರ ಸಂಜೆ ದೆಹಲಿಗೆ ಆಗಮಿಸಿದ್ದಾರೆ, ಹಾಗೂ ತನ್ನ ವಿರುದ್ಧದ ಸುಲಿಗೆ ಆರೋಪಕ್ಕಾಗಿ ದೆಹಲಿಗೆ ಕರೆಸಿಕೊಂಡಿಲ್ಲ, ತಾನು ಬೇರೆ ಉದ್ದೇಶಕ್ಕಾಗಿ ದೆಹಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ನನ್ನ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಭಾನುವಾರ, ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ … Continued

ಮುಂಬೈ ಡ್ರಗ್ ಪ್ರಕರಣ: ಸ್ವತಂತ್ರ ಸಾಕ್ಷಿದಾರ ಕಿರಣ್ ಗೋಸಾವಿ ಶರಣು?

ಮುಂಬೈ: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದ ಮತ್ತು ವಿಡಿಯೋ ಮಾಡಿಕೊಂಡಿದ್ದ ಕಿರಣ್ ಗೋಸಾಮಿ ತಾವು ಎನ್‌ಸಿಬಿಗೆ ಶರಣಾಗುವುದಾಗಿ ಹೇಳಿಕೊಂಡಿದ್ದಾರೆ. ಖಾಸಗಿ ತನಿಖಾಧಿಕಾರಿ ಕಿರಣ್ ಗೋಸಾವಿ ಅವರು ಲಕ್ನೋದಲ್ಲಿ ಶೀಘ್ರದಲ್ಲೇ ಶರಣಾಗುವುದಾಗಿ ತಿಳಿಸಿದ್ದಾರೆ. “ನಾನು ಅರ್ಧ ಗಂಟೆಯೊಳಗೆ ಲಕ್ನೋದಲ್ಲಿ ಶರಣಾಗುತ್ತೇನೆ” ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. … Continued

ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲ ಸೌಕರ್ಯ ಮಿಷನ್‌ಗೆ ಮೋದಿ ಚಾಲನೆ

ವಾರಾಣಸಿ : ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಆರೋಗ್ಯ ಮೂಲ ಸೌಕರ್ಯ ಬಲಪಡಿಸುವ ಅತಿ ದೊಡ್ಡ ಯೋಜನೆಯಾಗಿರುವ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲ ಸೌಕರ್ಯ ಮಿಷನ್‌ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉತ್ತರ ಪ್ರದೇಶದ ವಾರಣಸಿಯಲ್ಲಿ ಚಾಲನೆ ನೀಡಿದ್ದಾರೆ. ಅಲ್ಲದೆ, ಪ್ರಧಾನಿಯವರು ತಮ್ಮ ಸಂಸತ್ ಕ್ಷೇತ್ರದಲ್ಲಿ 5200 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ವಿವಿಧ … Continued

18,000 ಕೋಟಿ ರೂ.ಗಳಿಗೆ ಏರ್ ಇಂಡಿಯಾ ಮಾರಾಟ : ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ ಸನ್ಸ್‌- ಕೇಂದ್ರ ಸರ್ಕಾರ

ನವದೆಹಲಿ : ಕೇಂದ್ರ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ವನ್ನು18,000 ಕೋಟಿ ರೂ.ಗಳಿಗೆ ಖರೀದಿ ಮಾಡಿದ್ದ ಟಾಟಾ ಸನ್ಸ್‌ ಹಾಗೂ ಕೇಂದ್ರ ಸರ್ಕಾರ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿವೆ. ಹೀಗಾಗಿ ಏರ್‌ ಇಂಡಿಯಾ ಟಾಟಾ ಸಂಸ್ಥೆಯ ಪಾಲಾಗಿದೆ. ಭಾರತದಲ್ಲಿ 2003 – 04ರ ನಂತರದಲ್ಲಿ ನಡೆಯುತ್ತಿರುವ ಮೊದಲ ಖಾಸಗೀಕರಣವಾಗಿದ್ದು, ತನ್ನದೇ ಸಂಸ್ಥೆಯನ್ನು … Continued

ಐಪಿಎಲ್‌ಗೆ 2 ಹೊಸ ತಂಡಗಳು ಸೇರ್ಪಡೆ: ಬಿಡ್ಡಿಂಗ್​ ನಲ್ಲಿ ಬಿಸಿಸಿಐ ಪಡೆದ ಹಣ ಎಷ್ಟೆಂದರೆ…!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಹಮದಾಬಾದ್ ಮತ್ತು ಲಕ್ನೋವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಐಪಿಎಲ್ ನ ಎರಡು ಹೊಸ ತಂಡಗಳಾಗಿ ಸೇರ್ಪಡೆಗೊಳಿಸಲಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಸೋಮವಾರ ನಡೆದ ಹರಾಜಿನಲ್ಲಿ ಒಟ್ಟು 9 ಸಂಸ್ಥೆಗಳು ಬಿಡ್ಡಿಂಗ್​ ನಡೆಸಿದ್ದವು. ಅಂತಿಮವಾಗಿ ಆರ್​ಪಿ-ಸಂಜಯ್ ಗೋಯೆಂಕಾ ಗ್ರೂಪ್ ಸಂಸ್ಥೆ 7,090 ಕೋಟಿ ರೂ. ಹರಾಜು … Continued

ಒಂದೇ ವರ್ಷದಲ್ಲಿ ಈ ದಂಪತಿಯಿಂದ ಬರೋಬ್ಬರಿ 300 ಜನರಿಗೆ ಹನಿಟ್ರ್ಯಾಪ್‌…! ಸುಲಿಗೆ ಮಾಡಿದ ಹಣದ ಮೊತ್ತ ಕೇಳಿ ಪೊಲೀಸರೇ ತಬ್ಬಿಬ್ಬು..!

ಗಾಜಿಯಾಬಾದ್ : ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹುಡುಗಿಯರನ್ನು ಬಳಸಿಕೊಂಡು ಉದ್ಯಮಿಗಳು, ಶ್ರೀಮಂತರನ್ನು ಹನಿಟ್ರ್ಯಾಪ್‌ ಬಲೆಗೆ ಬೀಸಿಕೊಂಡು ಸುಲಿಗೆ ಮಾಡುವ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿದೆ. ಇಂಥದ್ದೇ ಪ್ರಕರಣಗಳಲ್ಲಿ ಹನಿಟ್ರ್ಯಾಪ್‌ ಮೂಲಕ ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡಿರುವ ದಂಪತಿಯನ್ನು ಪೊಲೀಸರು ಗಾಜಿಯಾಬಾದ್ ನಲ್ಲಿ ಬಂಧಿಸಿದ್ದು ಅವರು ನೀಡಿದ ವಿವರಗಳನ್ನು ಕೇಳಿ ಪೊಲೀಸರೇ ಹೌಹಾರಿದ್ದಾರೆ. ಯೋಗೇಶ್ … Continued

ಮುಂಬೈ ಕ್ರೂಸ್‌ ಡ್ರಗ್ಸ್‌ ಹಗರಣ: ಎನ್​ಸಿಬಿ ವಿಚಾರಣೆಗೆ ಗೈರಾದ ಅನನ್ಯಾ ಪಾಂಡೆ

ಮುಂಬೈ: ನಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿರುವ ಆರ್ಯನ್​ ಖಾನ್ ಜತೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಅನನ್ಯಾ ಪಾಂಡೆ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಇಂದು (ಅಕ್ಟೋಬರ್​ 25) ವಿಚಾರಣೆಗೆ ಅವರು ಹಾಜರಾಗಿಲ್ಲ. ಮತ್ತೊಂದು ದಿನ ಬರುವುದಾಗಿ ಅವರು ಎನ್​ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಎರಡು ದಿನ ಅನನ್ಯಾ ವಿಚಾರಣೆಗೆ ಬಂದಿದ್ದರು. ಸೋಮವಾರ (ಅಕ್ಟೋಬರ್​ 25) ಅವರು ಮತ್ತೆ … Continued

ಒಬಿಸಿ, ಇಡಬ್ಲ್ಯೂಎಸ್ ಅರ್ಜಿ ವಿಚಾರಣೆ ಮುಗಿಯುವ ವರೆಗೂ ನೀಟ್ ಪಿಜಿ ಕೌನ್ಸೆಲಿಂಗ್‌ಗೆ ಬ್ರೇಕ್ ಹಾಕಿದ ಸುಪ್ರೀಂ ಕೋರ್ಟ್‌

ನವದೆಹಲಿ: ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸುವ ನೀಟ್ ಪಿಜಿ ಕೌನ್ಸೆಲಿಂಗ್‌ ತಡೆಹಿಡಿಯುವಂತೆ ಸುಪ್ರೀಂಕೋರ್ಟ್‌ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಒಬಿಸಿ, ಇಡಬ್ಲ್ಯೂಎಸ್ ಮೀಸಲು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಮುಗಿಯುವವರೆಗೂ ನೀಟ್ ಸ್ನಾತಕೋತ್ತರ ಕೋರ್ಸ್ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತಡೆಹಿಡಿಯಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದವರ (ಇಡಬ್ಲ್ಯೂಎಸ್) ಕೋಟಾ ಸೀಟು ಪಡೆಯಲು ಕೇಂದ್ರ … Continued