ರೈತರ ಮೇಲಿನ ಸುಳ್ಳು ಎಫ್‌ಐಆರ್ ರದ್ದುಗೊಳಿಸಿ, ಎಂಎಸ್‌ಪಿ ಕಾನೂನು ಬದ್ಧಗೊಳಿಸಿ : ಪ್ರಧಾನಿಗೆ ಪತ್ರ ಬರೆದ ವರುಣ್‌ ಗಾಂಧಿ

ನವದೆಹಲಿ: ಬಿಜೆಪಿ ಸಂಸದ ವರುಣ್​ ಗಾಂಧಿ ರೈತರ ಹೋರಾಟಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಅನೇಕ ಸಂದರ್ಭಗಳಲ್ಲಿ ವಿರೋಧಿಸಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದ ಬೆನ್ನಲ್ಲೇ ವರುಣ್​ ಗಾಂಧಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಕೆಲವು ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ. ಕೃಷಿ ಕಾಣೂನು ಹಿಂಪಡೆಯುವುದಾಗಿ ಭರವಸೆ ನೀಡಿರುವ ಪ್ರಧಾನಿ … Continued

ಪುಟ್ಟ ಕಂದಮ್ಮಗೆ ತೆವಳಿಕೊಂಡು ಮುಂದೆ ಸಾಗಲು ಕಲಿಸುವ ಈ ಬುದ್ಧಿವಂತ ನಾಯಿ: ಹೃದಯ ಮುಟ್ಟುವ ವಿಡಿಯೊ ವೀಕ್ಷಿಸಿ

ಬುದ್ಧಿವಂತ ಹಾಗೂ ಹೃದಯವಂತ ನಾಯಿಯ ಅದ್ಭುತ ನಿದರ್ಶನಕ್ಕೆ ಸಾಕ್ಷಿ ಇಲ್ಲಿದೆ. ಜೊತೆಗೆ ಅದು ಪುಟ್ಟ ಮಗುವಿನ ಮೇಲೆ ತೋರುವ ಕಳಕಳಿಗೆ ನಿಮ್ಮ ಮನಮಿಡಿಯಲೇಬೇಕು, ಹಾಗಿದೆ ಈ ಪುಟ್ಟ ನಾಯಿಯ ವರ್ತನೆ. ಇಂಥ ಅದ್ಭುತ ದೃಶ್ಯದ ವಿಡಿಯೊ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ. ಈ ವಿಡಿಯೊದಲ್ಲಿ ಶ್ವಾನವೊಂದು ಮುದ್ದು ಕಂದನಿಗೆ ಹೊರಳುತ್ತಾ ಮುಂದೆ … Continued

ಮಾವುತನಿಂದ ತನ್ನ ಬಾಬ್ ಕಟ್ ಕೂದಲು ಬಾಚಿಸಿಕೊಂಡ ಆನೆ …! ವಿಡಿಯೊ ವೀಕ್ಷಿಸಿ

ಭೂಮಿಯ ಮೇಲಿನ ಅತ್ಯಂತ ಮುದ್ದಾದ ಪ್ರಾಣಿಗಳ ಪಟ್ಟಿಯನ್ನು ಯಾರಾದರೂ ಮಾಡಿದರೆ, ಆನೆಗಳು ಖಂಡಿತವಾಗಿಯೂ ಅದರಲ್ಲಿ ಸೇರುತ್ತವೆ. ಅವುಗಳ ಸ್ವಭಾವ ಸೌಮ್ಯ ಮತ್ತು ಅತ್ಯಂತ ಬುದ್ಧಿವಂತ ಪ್ರಾಣಿ ಕೂಡ ಹೌದು. ಇಲ್ಲಿ ಆನೆಯೊಂದು ಬಾಬ್ ಕಟ್ ಮಾಡಿಕೊಂಡಿದ್ದು, ಇದು ಬಾಬ್‌ ಕಟ್‌ ಮಾಡಿಸಿಕೊಂಡಿರುವ ಕ್ಲಿಪ್ ವೈರಲ್ ಆಗಿದೆ ಮತ್ತು ಅದನ್ನು ಅದು ನೋಡಲು ತುಂಬಾ ಮುದ್ದಾಗಿದೆ. ವೈರಲ್ … Continued

ಭಾರತದಲ್ಲಿ 10,302 ಹೊಸ ಕೋವಿಡ್ -19 ಸೋಂಕುಗಳು ದಾಖಲು, ಇದು ನಿನ್ನೆಗಿಂತ 7.2% ಕಡಿಮೆ

ನವದೆಹಲಿ: ಭಾರತವು ಶನಿವಾರ 10,302 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ ಶೇಕಡಾ 7.2 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದ ಒಟ್ಟು ಪ್ರಕರಣ 3,44,99,925 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 267 ಜನರು ಕೋವಿಡ್-19 ಗೆ ಮೃತಪಟ್ಟಿದ್ದು, ಒಟ್ಟು ವರದಿಯಾದ ಸಾವಿನ ಸಂಖ್ಯೆ 4,65,349 … Continued

ಭೀಕರ ಮಳೆಗೆ ನಲುಗಿದ ಆಂಧ್ರದ ರಾಯಲಸೀಮೆ; 17 ಮಂದಿ ಸಾವು, 100ಕ್ಕೂ ಅಧಿಕ ಜನರು ನಾಪತ್ತೆ

ಆಂಧ್ರ ಪ್ರದೇಶದ ರಾಯಲಸೀಮೆ ಪ್ರಾಂತ್ಯ ಮಳೆ ಆರ್ಭಟಕ್ಕೆ ನಲುಗಿದ್ದು, ಚಿತ್ತೂರು, ಕಡಪ, ಕರ್ನೂಲು, ಅನಂತಪುರ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಪ್ರಕರಣಗಳಲ್ಲಿ ಇದುವರೆಗೆ 17 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, 100 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದಿಂದಾಗಿ ಕಡಪ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಮೂರು ಬಸ್​ಗಳು ಸಿಲುಕಿಕೊಂಡಿದ್ದು, ಇದರಿಂದಾಗಿ ಕನಿಷ್ಠ 12 ಜನರು ದುರ್ಮರಣಕ್ಕೀಡಾಗಿದ್ದಾರೆ. 18 ಜನ ನಾಪತ್ತೆಯಾಗಿದ್ದು, … Continued

ಮೂರು ಜಿಂಕೆಗಳ ರಕ್ಷಣೆಗೆ 50 ಎಕರೆ ಭೂಮಿ ಬಿಟ್ಟುಕೊಟ್ಟ ರೈತ, ಈಗ ಅಲ್ಲಿವೆ 1800 ಜಿಂಕೆಗಳು..! :ಇದು ಸಾಧ್ಯವಾದದ್ದು ಹೇಗೆ..?. ಇಲ್ಲಿದೆ ವಿವರ

ತಮಿಳುನಾಡಿನ ಪುದುಪಾಳ್ಯಂ ಗ್ರಾಮದಲ್ಲಿ, 50-ಎಕರೆ ತೋಟವು ಬಹಳ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದೆ. ಭೇಟಿ ನೀಡಿದರೆ, ಸಾಮಾನ್ಯ ಆಡುಗಳು ಮತ್ತು ಹಸುಗಳ ಜೊತೆಗೆ ಜಿಂಕೆಗಳ ಹಿಂಡು ಕೂಡ ನಿಮ್ಮನ್ನು ಈ ತೋಟದಲ್ಲಿ ಸ್ವಾಗತಿಸಬಹುದು…! ಕಳೆದ 20 ವರ್ಷಗಳಿಂದ, ಜಿಂಕೆಗಳು ಈ ಫಾರ್ಮ್ ಅನ್ನು ತಮ್ಮ ಮನೆಯಾಗಿ ಮಾಡಿಕೊಂಡಿವೆ ಮತ್ತು ಸಾಕು ಪ್ರಾಣಿಗಳೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿವೆ. ಕೆಲವು … Continued

ಭಾರತೀಯ ವಾಯುಪಡೆಗೆ ಸ್ವದೇಶಿ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್ ಹಸ್ತಾಂತರಿಸಿದ ಪ್ರಧಾನಿ ಮೋದಿ..ಅವಳಿ ಎಂಜಿನ್ ಹೆಲಿಕಾಪ್ಟರ್ ಬಗ್ಗೆ ಮಾಹಿತಿ

ನವದೆಹಲಿ: ಭಾರತಕ್ಕೆ ಹೆಮ್ಮೆಯ ಕ್ಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಭಾರತದ 75 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುವ ‘ರಾಷ್ಟ್ರೀಯ ರಕ್ಷಾ ಸಮರ್ಪಣ್ ಪರ್ವ್’ ಆಚರಣೆಯ ಸಂದರ್ಭದಲ್ಲಿ ಭಾರತೀಯ ವಾಯುಪಡೆಗೆ ಎಚ್‌ಎಎಲ್‌ (HAL) ಸ್ವದೇಶಿ ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್) ಹಸ್ತಾಂತರಿಸಿದರು. ಭಾರತೀಯ ವಾಯುಸೇನೆ (IAF) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ … Continued

ಆಂಧ್ರದಲ್ಲಿ ಭೀಕರ ಮಳೆ..:ತಿರುಪತಿ ಬಳಿ ನೋಡುತ್ತಲೇ ಕುಸಿದುಬಿದ್ದ ಬೃಹತ್‌ ಮನೆ..ರಾಂಪುರ ಬಳಿ ಜೀವ ಉಳಿಸಿಕೊಳ್ಳಲು ಬಸ್‌ ಟಾಪ್‌ ಮೇಲೆ ಕುಳಿತ ಜನ..! ವೀಕ್ಷಿಸಿ

ಭಾರೀ ಮಳೆಯಿಂದ ಉಂಟಾದ ಪ್ರವಾಹದ ಪರಿಣಾಮ ಆಂಧ್ರಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಶುಕ್ರವಾರ, ನವೆಂಬರ್ 19 ರಂದು ಮುಂದುವರೆರಿದಿದೆ. , ಅನೇಕ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪ್ರಖ್ಯಾತ ಯಾತ್ರಾ ಸ್ಥಳ ತಿರುಪತಿ ಸಮೀಪದ ತಿರುಚನೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಎರಡು ಅಂತಸ್ತಿನ ಕಟ್ಟಡ ಕುಸಿದು ಬೀಳುವ ಆಘಾತಕಾರಿ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ವಸುಂಧರಾ ನಗರದಲ್ಲಿ ಶುಕ್ರವಾರ … Continued

ಆಗ್ರಾ ಆಸ್ಪತ್ರೆಯಲ್ಲಿ ದೇವರಿಗೆ ಬ್ಯಾಂಡೇಜ್‌…!: ಗೋಳಾಡಿ ಕೃಷ್ಣನ ವಿಗ್ರಹದ ಮುರಿದ ಕೈಗೆ ವೈದ್ಯರಿಂದ ಬ್ಯಾಂಡೇಜ್ ಹಾಕಿಸಿಕೊಂಡ ಅರ್ಚಕ…!!

ಆಗ್ರಾ: ಇತ್ತೀಚಿನ ದಿನಗಳಲ್ಲಿ ಕರಾಳ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಉತ್ತರ ಪ್ರದೇಶದಲ್ಲಿ ಈಗ ಚಿತ್ರವಿಚಿತ್ರ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಆಗ್ರಾದ ಜಿಲ್ಲಾ ಆಸ್ಪತ್ರೆಗೆ ಇಂದು (ಶುಕ್ರವಾರ) ಅರ್ಚಕರೊಬ್ಬರು ಕೃಷ್ಣನ ವಿಗ್ರಹವನ್ನು ಹೊತ್ತು ಬಂದಿದ್ದರು. ನನ್ನ ಕೃಷ್ಣನ ಕೈ ಮುರಿದು ಹೋಗಿದೆ. ಇದಕ್ಕೆ ಬ್ಯಾಂಡೇಜ್ ಹಾಕಿ ಎಂದು ವೈದ್ಯರ ಬಳಿ ಮನವಿ ಮಾಡಿದ್ದು, ಅವರ ಮಾತನ್ನು ಕೇಳಿದ … Continued

ಪತ್ನಿಗೆ ಮಾಡಿದ ಅವಮಾನ ಸಹಿಸಲ್ಲ ..ಮತ್ತೆ ಸಿಎಂ ಆಗುವವರೆಗೂ ವಿಧಾಸಭೆಗೆ ಹೋಗಲ್ಲ ಎಂದು ಕಣ್ಣೀರು ಹಾಕಿದ ಚಂದ್ರಬಾಬು ನಾಯ್ಡು

ಅಮರಾವತಿ: ನವೆಂಬರ್ 19, ಶುಕ್ರವಾರದಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಮತ್ತೆ ಅಧಿಕಾರಕ್ಕೆ ಬಂದ ನಂತರವೇ ಆಂಧ್ರ ಪ್ರದೇಶ ವಿಧಾನಸಭೆಗೆ ಮತ್ತೆ ಕಾಲಿಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಎರಡನೇ ದಿನದಂದು, ಆಡಳಿತಾರೂಢ ವೈಎಸ್‌ಆರ್‌ಸಿಪಿ ಸದಸ್ಯರಿಂದ ತಾವು ಎದುರಿಸುತ್ತಿರುವ ನಿರಂತರ ಅವಮಾನದಿಂದ ನೋವಾಗಿದೆ … Continued