ಪದ್ಮಶ್ರೀ ಪುರಸ್ಕೃತ ಹಿಂದುಸ್ತಾನೀ ಸಂಗೀತದ ಖ್ಯಾತ ಗಾಯಕ ರಶೀದ್‌ ಖಾನ್‌ಗೆ ಕೊಲೆ ಬೆದರಿಕೆ: ಇಬ್ಬರ ಬಂಧನ

ಕೋಲ್ಕತ್ತಾ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿಂದುಸ್ತಾನೀ ಶಾಸ್ತ್ರೀಯ ಸಂಗೀತ ಗಾಯಕ ಉಸ್ತಾದ್ ರಶೀದ್ ಖಾನ್ ಗೆ ಕೊಲೆ ಬೆದರಿಕೆ ಮತ್ತು ಸುಲಿಗೆ ಕರೆ ಮಾಡಿದ ಇಬ್ಬರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇಬ್ಬರು ಆರೋಪಿಗಳು ಹೊಸದಾಗಿ ಅವರ ಬಳಿ ಸೇರಿಕೊಂಡ ಉದ್ಯೋಗಿಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆ ಬೆದರಿಕೆ ಹಾಗೂ ಹಣ ಸುಲಿಗೆ … Continued

ನಾನು ಕಬಡ್ಡಿ ಆಡಿದ್ದು ವಿಡಿಯೊ ಮಾಡಿದವರು ರಾವಣರು: ಸಾದ್ವಿ ಪ್ರಜ್ಞಾ

ಭೋಪಾಲ: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ವೈದ್ಯಕೀಯ ಆಧಾರದ ಮೇಲೆ ಜಾಮೀನು ಪಡೆದಿರುವ ಭೋಪಾಲ ಸಂಸದೆ, ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕಬಡ್ಡಿ ಆಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ವಿಡಿಯೊ ಚಿತ್ರೀಕರಿಸಿ, ಹರಿಬಿಟ್ಟವರನ್ನು ರಾವಣರು ಎಂದು ಹೇಳಿರುವ ಸಂಸದೆ ಪ್ರಜ್ಞಾ, ಹಾಗೆ ಮಾಡಿದವರ ವೃದ್ಧಾಪ್ಯ ಮತ್ತು ಮುಂದಿನ ಜನ್ಮ ಹಾಳಾಗಿ ಹೋಗುತ್ತದೆ ಎಂದು … Continued

ಕಾಂಗ್ರೆಸ್‌ಗೆ ನಾನೇ ಪೂರ್ಣಾವಧಿ ಸಕ್ರಿಯ ಅಧ್ಯಕ್ಷೆ,: ಜಿ- 23 ಗುಂಪಿಗೆ ಕಠಿಣ ಸಂದೇಶ ರವಾನಿಸಿದ ಸೋನಿಯಾ ಗಾಂಧಿ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಹಾಗೂ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಅವರೇ ಕಾಂಗ್ರೆಸ್‌ ಪಕ್ಷಕ್ಕೆ ಪೂರ್ಣಾವಧಿಯ, ಸಕ್ರಿಯ ಅಧ್ಯಕ್ಷರಾಗಿ ಮುಂದುವರೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಕುತೂಲಹ ಕೆರಳಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಇಂದು (ಶನಿವಾರ) ದೆಹಲಿಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಆರಂಭವಾಗಿದೆ. ಕೊರೊನಾದಿಂದ ಒಂದೂವರೆ ವರ್ಷದಿಂದ ನಡೆಯದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯೂಸಿ) … Continued

ರಾಯ್‌ಪುರ ರೈಲು ನಿಲ್ದಾಣದಲ್ಲಿ ಸ್ಫೋಟ: 6 ಸಿಆರ್‌ಪಿಎಫ್ ಸಿಬ್ಬಂದಿಗೆ ಗಾಯ

ರಾಯ್‌ಪುರ: ಶನಿವಾರ ಮುಂಜಾನೆ ರಾಯ್‌ಪುರ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಆರು ಸಿಬ್ಬಂದಿ ಗಾಯಗೊಂಡಿದ್ದಾರೆ. ಸಿಆರ್‌ಪಿಎಫ್‌ನ 211 ಬೆಟಾಲಿಯನ್‌ನ ಜವಾನರು ವಿಶೇಷ ರೈಲಿನಲ್ಲಿ ಜಮ್ಮುವಿಗೆ ಹೋಗುತ್ತಿತ್ತು. ಇಂದು ಬೆಳಿಗ್ಗೆ 6.30 ರ ಸುಮಾರಿಗೆ ರಾಯ್‌ಪುರ ರೈಲ್ವೇ ನಿಲ್ದಾಣದಲ್ಲಿ ಸಿಆರ್‌ಪಿಎಫ್‌ನ ವಿಶೇಷ ರೈಲಿನಲ್ಲಿ ಸಣ್ಣ ಸ್ಫೋಟ ದಾಖಲಾಗಿದೆ. ರೈಲು ಜರ್ಸುಗುಡಾದಿಂದ … Continued

ಭಾರತದಲ್ಲಿ 15,981 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 15,981 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಇದು ದೇಶವು ಒಂದು ದಿನ ಮೊದಲು ಕಂಡಿದ್ದಕ್ಕಿಂತ ಶೇಕಡಾ 5.2 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಗೆ ಶನಿವಾರ ತಿಳಿಸಿದೆ. ಇದರ ಪರಿಣಾಮವಾಗಿ, ಭಾರತದಲ್ಲಿ ಒಟ್ಟು ಪ್ರಕರಣ 3,40,53,573ಕ್ಕೆ ಏರಿದೆ. … Continued

ಭಾರತದ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಎರಡು ವರ್ಷಕ್ಕೆ ದ್ರಾವಿಡ್ ನೇಮಕ: ವರದಿ

ನವದೆಹಲಿ: ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ನವೆಂಬರ್ 2021 ರಿಂದ ಆರಂಭವಾಗುವ ಎರಡು ವರ್ಷಗಳ ಕಾಲ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ದ್ರಾವಿಡ್ ಅಂತಿಮವಾಗಿ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.. ಶುಕ್ರವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಫೈನಲ್‌ನಲ್ಲಿ ಈ … Continued

ಜಾಗತಿಕ ಹಸಿವಿನ ಸೂಚ್ಯಂಕ 2021: 94 ನೇ ಸ್ಥಾನದಿಂದ 101ನೇ ಸ್ಥಾನಕ್ಕೆ ಕುಸಿದ ಭಾರತ

ಭಾರತವು ಗುರುವಾರ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ ವರದಿಯಲ್ಲಿ 135 ರಾಷ್ಟ್ರಗಳ ಪೈಕಿ 101 ನೇ ಸ್ಥಾನಕ್ಕೆ ಕುಸಿದಿದೆ. ಭಾರತ ಕಳೆದ ವರ್ಷ 94 ನೇ ಸ್ಥಾನದಲ್ಲಿತ್ತು. ಈಗ ಪಾಕಿಸ್ತಾನ (92), ಬಾಂಗ್ಲಾದೇಶ (76) ಮತ್ತು ನೇಪಾಳ (76) ಗಳ ಇವುಗಳು ಭಾಋತಕ್ಕಿಂತ ಮುಂದಿವೆ..! ಐರಿಶ್ ನೆರವು ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನಿಯ … Continued

ರಾಜೀನಾಮೆ ಹಿಂಪಡೆದ ನವಜೋತ್ ಸಿಂಗ್ ಸಿಧು : ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಮುಂದುವರಿಕೆ

ನವದೆಹಲಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ನವಜೋತ್ ಸಿಂಗ್ ಸಿಧು ಹಿಂಪಡೆದಿದ್ದಾರೆ. ಮತ್ತು ಅದೇ ಹುದ್ದೆಯಲ್ಲಿ ತಮ್ಮ ಕರ್ತವ್ಯವನ್ನು ಮುಂದುವರಿಸಲಿದ್ದಾರೆ. ಶುಕ್ರವಾರ, ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾದ ನಂತರ, ನವಜೋತ್ ಸಿಂಗ್ ಸಿಧು “ನಾನು ನನ್ನ ಎಲ್ಲಾ ಕಳವಳಗಳನ್ನು ರಾಹುಲ್ ಗಾಂಧಿಯೊಂದಿಗೆ ಹಂಚಿಕೊಂಡಿದ್ದೇನೆ. ಎಲ್ಲವನ್ನೂ ಬಗೆಹರಿಸಲಾಗಿದೆ” ಎಂದು ಹೇಳಿದ್ದಾರೆ. ಅಖಿಲ … Continued

ಸಿಂಘು ಗಡಿ ಹತ್ಯೆ ಪ್ರಕರಣ: ಪೊಲೀಸರಿಗೆ ಶರಣಾದ ಸರಬ್ಜಿತ್ ಸಿಂಗ್

ನವದೆಹಲಿ:ನಿಹಾಂಗ್ ಸಮುದಾಯಕ್ಕೆ ಸೇರಿದ ಸರಬ್ಜಿತ್ ಸಿಂಗ್ ಎಂಬ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದು, ದೆಹಲಿ-ಹರಿಯಾಣ ಗಡಿ ಸಮೀಪದ ಕುಂಡ್ಲಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಒಬ್ಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದ ಜವಾಬ್ದಾರಿಯನ್ನು ಈತ ಹೊತ್ತುಕೊಂಡಿದ್ದಾನೆ. ಸರಬ್ಜಿತ್ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ವಿವರಗಳ ಪ್ರಕಾರ, ಅವರನ್ನು ಶನಿವಾರ (ನಾಳೆ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. .35 ವರ್ಷದ ವ್ಯಕ್ತಿಯನ್ನು … Continued

ದುರ್ಗಾ ದೇವಿ ಮೆರವಣಿಗೆ ನಡುವೆ ನುಗ್ಗಿದ ಕಾರು; ಒಂದು ಸಾವು, 20 ಮಂದಿಗೆ ಗಾಯ, ದೃಶ್ಯ ವಿಡಿಯೊದಲ್ಲಿ ಸೆರೆ

ನವದೆಹಲಿ: ದುರ್ಗಾ ದೇವಿ ಮೂರ್ತಿಯ ಮೆರವಣಿಗೆಯ ನಡುವೆ ಕಾರು ನುಗ್ಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಡದ ಜಶ್‌ಪುರದಲ್ಲಿ ಶುಕ್ರವಾರ ನಡೆದ ಬಗ್ಗೆ ವರದಿಯಾಗಿದೆ. ಆದರೆ ಘಟನೆಯಲ್ಲಿ, ಕನಿಷ್ಠ ನಾಲ್ಕು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ. 20 ಮಂದಿ ಇತರರು ಗಾಯಗೊಂಡಿದ್ದು ಇದರಲ್ಲಿ ನಾಲ್ವರ ಸ್ಥಿತಿ ಚಗಂಭೀರವಾಗಿದೆ … Continued