ಇಂದಿನಿಂದ ಐದು ದಿನಗಳ ಕಾಲ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಸಂಭವ

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್ 6 ರಿಂದ 10ರ ವರೆಗೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 6ರಂದು ಮೈಸೂರು, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದ್ದು, ಏಪ್ರಿಲ್ 7 ರಂದು ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡು ಭಾಗದ ಚಾಮರಾಜನಗರ, ಹಾಸನ, … Continued

ಐಟಿಆರ್ 1 ಮತ್ತು 4ಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಆಫ್‌ಲೈನ್ ಯುಟಿಲಿಟಿ (utility) ಆರಂಭ

2020-21ರ ಆರ್ಥಿಕ ವರ್ಷಕ್ಕೆ ಐಟಿಆರ್ – 1 ಮತ್ತು 4 ಅನ್ನು ಸಲ್ಲಿಸುವ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಆಫ್‌ಲೈನ್ ಯುಟಿಲಿಟಿ (utility) ಪ್ರಾರಂಭಿಸಿದೆ. ಆನ್‌ಲೈನ್ ಇ-ಫೈಲಿಂಗ್ ಪೋರ್ಟಲ್ ಪ್ರಕಾರ, “ಬಳಕೆದಾರರು ಈಗ ಐಟಿಆರ್ 1 ಮತ್ತು 4 (ಎವೈ 2021-22) ಗಾಗಿ ಆಫ್‌ಲೈನ್ ಯುಟಿಲಿಟಿ(utility) ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಭರ್ತಿ ಮಾಡಬಹುದು. ಇತರ ಐಟಿಆರ್‌ಗಳ … Continued

ನಾವು ಒಟ್ಟಿಗೆ ಮಗು ಹೊಂದಿದ್ದರಿಂದ ನಾವು ಮದುವೆಯಾಗಲಿಲ್ಲ: ತನ್ನ ಗರ್ಭಧಾರಣೆ ಪ್ರಕಟಣೆ ಸಮಯ ಪ್ರಶ್ನಿಸಿದ ಟ್ರೋಲ್‌ಗೆ ನಟಿ ದಿಯಾ ಮಿರ್ಜಾ ಉತ್ತರ

ಈ ಸುಂದರ ಪ್ರಯಾಣಕ್ಕೆ ಯಾವತ್ತೂ ಅವಮಾನವಾಗಬಾರದು ‘. ತನ್ನ ಗರ್ಭಧಾರಣೆಯ ಪ್ರಕಟಣೆಯ ಸಮಯವನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಪ್ರತಿಕ್ರಿಯಿಸಲು ಬಾಲಿವುಡ್‌ ನಟಿ ಮತ್ತು ಕಾರ್ಯಕರ್ತೆ ದಿಯಾ ಮಿರ್ಜಾ ಸಾಮಾಜಿಕ ಮಾಧ್ಯಮದಲ್ಲಿ ಉತ್ತರ ನೀಡಿದ್ದಾರೆ. ಮಹಿಳೆಯರಾದ ‘ನಾವು ಯಾವಾಗಲೂ ನಮ್ಮ ಆಯ್ಕೆಯನ್ನು ಚಲಾಯಿಸಬೇಕು’ ಎಂದು ಹೇಳಿದ್ದಾರೆ. ಫೆಬ್ರವರಿಯಲ್ಲಿ ಮದುವೆಯಾದ ನಂತರ ಕಳೆದ ವಾರ ತಾನು ಗರ್ಭಿಣಿ ಎಂಬುದನ್ನು ಪ್ರಕಟಿಸಿದ್ದ … Continued

ಭ್ರಷ್ಟಾಚಾರ ಆರೋಪದ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್‌ ಆದೇಶ: ಮಹಾರಾಷ್ಟ್ರ ಗೃಹ ಸಚಿವ ದೇಶ್ಮುಖ್‌ ರಾಜೀನಾಮೆ

ಮುಂಬೈ: ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಸಲ್ಲಿಸಿದ್ದ ಪ್ರಕರಣದಲ್ಲಿ 15 ದಿನಗಳಲ್ಲಿ ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದ ನಂತರ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬೈ ಹೈಕೋರ್ಟ್‌ ಆದೇಶ ನೀಡಿದ ಸುಮಾರು ಒಂದು ತಾಸಿನಲ್ಲಿ  ಅವರು ಮುಖ್ಯಮಂತ್ರಿ … Continued

ಪರಮ್ ಬೀರ್ ಸಿಂಗ್ ಭ್ರಷ್ಟಾಚಾರ ಆರೋಪ: ಮಹಾರಾಷ್ಟ್ರ ಗೃಹ ಸಚಿವ ದೇಶ್ಮುಖ್ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ಸೂಚನೆ

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರ ಭ್ರಷ್ಟಾಚಾರದ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸುವಂತೆ ಮುಂಬೈ ಹೈಕೋರ್ಟ್ ಸೋಮವಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿದೆ. ಇದರಿಂದ ಅನಿಲ ದೇಶ್ಮುಖ್‌ಗೆ ರಾಜಕೀಯವಾಗಿ ಹಿನ್ನಡೆಯಾಗಿದೆ. ದೇಶ್ಮುಖ್ ವಿರುದ್ಧ “ತಕ್ಷಣದ ಮತ್ತು ಪಕ್ಷಪಾತವಿಲ್ಲದ” … Continued

ಆಮಿಷ ಒಡ್ಡಿ ಭದ್ರತಾ ಪಡೆಗಳಿಗೆ ಯು-ಆಕಾರದ’ ಹೊಂಚು ದಾಳಿಗೆ ಗುರಿಯಾಗುವಂತೆ ಮಾಡಿದ ನಕ್ಸಲರು

ಉನ್ನತ ಮಾವೋವಾದಿ ಕಮಾಂಡರ್ ಇರುವ ಮಾಹಿತಿ ನೀಡಿ ಭದ್ರತಾ ಸಿಬ್ಬಂದಿ ಬಲೆಗೆ ಬೀಳಿಸಿದ ನಂತರ ಮಾವೋವಾದಿಗಳು ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ “ಯು-ಟೈಪ್” ಹೊಂಚು ದಾಳಿ ನಡೆಸಿದರು ಎಂದು ಪರಿಚಿತ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ ಎಂದು  ವರದಿಯೊಂದು ಹೇಳಿದೆ. ವರದಿ ಪ್ರಕಾರ, ಮಾವೋವಾದಿ ಕಾರ್ಯಾಚರಣೆ ನೇತೃತ್ವವನ್ನು ಬೆಟಾಲಿಯನ್ ನಂಬರ್ -1 ಕಮಾಂಡರ್ ಮಾಡ್ವಿ ಹಿಡ್ಮಾ ವಹಿಸಿದ್ದರು. ನಕ್ಸಲ್‌ … Continued

ಝೈಡಸ್ ಕ್ಯಾಡಿಲಾದಿಂದ ಕೋವಿಡ್‌ ‘ಪ್ರಗತಿ’ ಚಿಕಿತ್ಸೆ ಅನುಮೋದನೆಗೆ ಅರ್ಜಿ

ಕೊವಿಡ್‌ -19 ಚಿಕಿತ್ಸೆಯಲ್ಲಿ ಪೆಜಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ ಬಳಕೆಗಾಗಿ ಡಿಸಿಜಿಐ ಜೊತೆ ಹೆಚ್ಚುವರಿ ಸೂಚನೆಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದೆ ಎಂದು ಝೈಡಸ್ ಕ್ಯಾಡಿಲಾ ಸೋಮವಾರ ಪ್ರಕಟಿಸಿದೆ. ಪೆಜಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ ಒಂದಿಗಿನ ತನ್ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಕೊವಿಡ್‌-19 ಚಿಕಿತ್ಸೆಯಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿದೆ ಎಂದು ಝೈಡಸ್ ಕ್ಯಾಡಿಲಾ … Continued

ಭಾರತದಲ್ಲಿ ಒಂದು ಲಕ್ಷ ದಾಟಿದ ದೈನಂದಿನ ಪ್ರಕರಣ. ಇದು ಈವರೆಗಿನ ದಾಖಲೆ…!!

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,03,558 ಜನರುಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ದೈನಂದಿನ ಸೋಂಕು ಒಂದು ಲಕ್ಷ ದಾಟಿರುವುದು ಇದೇ ಮೊದಲು. ಕಳೆದ 24 ಗಂಟೆಗಳಲ್ಲಿ 478 ಹೊಸ ಸಾವುನೋವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 165,101 ಕ್ಕೆ ಏರಿದೆ. ಕಳೆದ ವರ್ಷ ಕಳೆದ ವರ್ಷ ಸೆಪ್ಟೆಂಬರ್ 16 ರಂದು ದೈನಂದಿನ ಸೋಂಕುಗಳಲ್ಲಿ 97,894 ರಷ್ಟಿತ್ತು. … Continued

ಏರ್‌ಇಂಡಿಯಾ ಖರೀದಿ: ಟಾಟಾ- ಕೇಂದ್ರ ಸರ್ಕಾರದ ನಡುವೆ ಬಹುತೇಕ ಬಗೆಹರಿದ ಭಿನ್ನಾಭಿಪ್ರಾಯ

ಮುಂಬೈ / ನವದೆಹಲಿ: ಏರ್‌ ಇಂಡಿಯಾ ಖರೀದಿಯಲ್ಲಿ ಮಂಚೂಣಿಯಲ್ಲಿರುವ ಟಾಟಾ ಸನ್ಸ್ ಲಿಮಿಟೆಡ್ ಮತ್ತು ಸರ್ಕಾರದ ನಡುವೆ ಖರೀದಿಗೆ ಸಂಬಂಧಿಸಿದ ಮಾತುಕತೆಗಳು ಈವರೆಗಿದ್ದ ಬಹುತೇಕ ಭಿನ್ನಾಭಿಪ್ರಾಯವನ್ನು ದೂರ ಮಾಡಿದೆ. ಪ್ರಮುಖವಾಗಿ ಏರ್‌ಇಂಡಿಯಾ ಖರೀದಿಗೆ ಸಂಬಂಧಿಸಿದಂತೆ ಪಿಂಚಣಿ ಹೊಣೆಗಾರಿಕೆಗಳು, ರಿಯಲ್‌ ಎಸ್ಟೇಟ್‌ ಆಸ್ತಿಗಳು, ಮತ್ತು ಸಾಲ ಈ ಮೂರು ಪ್ರಮುಖ ವಿಷಯಗಳ ಬಗ್ಗೆ ಟಾಟಾ ಸನ್ಸ್‌ ಮತ್ತು … Continued

ರೈಲು ಹಾಯ್ದು ಮೂವರು ರೈಲ್ವೆ ಕಾರ್ಮಿಕರ ಸಾವು

ಖರಗ್ ಪುರ: ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಇಲ್ಲಿನ ರೈಲ್ವೆ ವಿಭಾಗ ವ್ಯಾಪ್ತಿಯ ದುವಾ ನಿಲ್ದಾಣದ ಬಳಿ ಶನಿವಾರ ಬೆಳಿಗ್ಗೆ ಸಿಕಂದರಾಬಾದ್ ನಿಂದ ಹೊರಟ ಫಲಕ್ನುಮಾ ಎಕ್ಸ್ ಪ್ರೆಸ್ ರೈಲು ಹರಿದು ಮೂವರು ರೈಲ್ವೆ ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಆಗ್ನೇಯ ರೈಲ್ವೆಯ ದುವಾ ಮತ್ತು ಬಲಿಚಕ್ ನಿಲ್ದಾಣಗಳ ನಡುವೆ … Continued