ಮ್ಯಾಕ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‍ಗೆ ಕ್ರಿಕೆಟಿಗ ರಿಷಭ್ ಪಂತ್ ಸ್ಥಳಾಂತರ

ನವದೆಹಲಿ: ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತದ ವಿಕೆಟ್ ಕೀಪರ್ ರಿಷಭ ಪಂತ್‍ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದು, ಅವರನ್ನು ಮ್ಯಾಕ್ಸ್ ಆಸ್ಪತ್ರೆಯ ಸುಸಜ್ಜಿತ ಖಾಸಗಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಡಿಡಿಸಿಎ ನಿರ್ದೇಶಕ ಶ್ಯಾಂ ಶರ್ಮಾ ಅವರು ರಿಷಭ್ ಪಂತ್‍ ಅವರ ಆರೋಗ್ಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, `ಡಿಸೆಂಬರ್ 30ರಂದು ಕಾರಿನ … Continued

ಈ 49 ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತವಾಗಲಿದೆ : ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ…

ಮೆಟಾ-ಮಾಲೀಕತ್ವದ ಇನ್‌ಸ್ಟೆಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ (WhatsApp) ಜನವರಿ 1, 2023 ರಿಂದ ಆಪಲ್, ಸ್ಯಾಮ್‌ಸಂಗ್, ಹುವಾವೇ, ಎಲ್ಜಿ ಮತ್ತು ಇತರ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದೆ. ಈ ಪಟ್ಟಿಯು ಹಳತಾದ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕಾರ್ಯನಿರ್ವಹಿಸುವ 49 ಫೋನ್‌ಗಳನ್ನು ಒಳಗೊಂಡಿದೆ. ವಾಟ್ಸಾಪ್‌ (WhatsApp)ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಓಎಸ್ ಆವೃತ್ತಿ 4.1 (OS version 4.1 … Continued

ನೋಟು ಅಮಾನ್ಯೀಕರಣದ ನಿರ್ಧಾರವನ್ನು 4:1 ಬಹುಮತದೊಂದಿಗೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: 2016ರಲ್ಲಿ ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ₹ 1,000 ಮತ್ತು ₹ 500 ರ ನೋಟುಗಳನ್ನು ಅಮಾನ್ಯಗೊಳಿಸುವ ಕೇಂದ್ರ ಸರ್ಕಾರದ 2016 ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠ ಸೋಮವಾರ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ … Continued

ಭಾರತದ ನಿರುದ್ಯೋಗ ದರ ಡಿಸೆಂಬರ್‌ನಲ್ಲಿ 16 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೆಚ್ಚಳ : ಶೇಕಡ 8.30ಕ್ಕೆ ಏರಿಕೆ

ನವದೆಹಲಿ: ಡಿಸೆಂಬರ್‌ನಲ್ಲಿ ಭಾರತದ ನಿರುದ್ಯೋಗ ದರವು 16 ತಿಂಗಳಲ್ಲೇ ಗರಿಷ್ಠ ಮಟ್ಟ 8.30%ಕ್ಕೆ ಏರಿದೆ. ನವೆಂಬರ್‌ ತಿಂಗಳಲ್ಲಿ ನಿರುದ್ಯೋಗ ದರವು 8%ರಷ್ಟು ಇತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE)ಯ ದತ್ತಾಂಶವು ಜನವರಿ 1 ರಂದು ತೋರಿಸಿದೆ. ಸಿಎಂಐಇ(CMIE) ದತ್ತಾಂಶವು ನಗರ ನಿರುದ್ಯೋಗ ದರವು ಹಿಂದಿನ ತಿಂಗಳಿನ 8.96%ದಿಂದ ಡಿಸೆಂಬರ್‌ನಲ್ಲಿ 10.09 ಶೇಕಡಾಕ್ಕೆ … Continued

ರಜೌರಿ: ಹಿಂದೂಗಳ ಮನೆಗಳಿಗೆ ನುಗ್ಗಿದ ಭಯೋತ್ಪಾದಕರು, ಗುರುತು ದೃಢಪಡಿಸಿಕೊಂಡು ನಾಲ್ವರನ್ನು ಗುಂಡಿಟ್ಟುಕೊಂದ ಉಗ್ರರು

ರಜೌರಿ: ಭಾನುವಾರ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಿರ್ದಿಷ್ಟ ಸಮುದಾಯದ ಮನೆಗಳಿಗೆ ಬಂದೂಕುಧಾರಿ ಉಗ್ರರು ದಾಳಿ ಮಾಡಿದ ನಂತರ ನಾಲ್ವರು ನಾಗರಿಕರು ಸಾವಿಗೀಡಾಗಿದ್ದಾರೆ. ದಾಳಿಯಲ್ಲಿ ಇಬ್ಬರು ಉಗ್ರರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ರಾತ್ರಿ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇಬ್ಬರು ಉಗ್ರರು ಅರಣ್ಯದ ಮೂಲಕ ಸಾಗಿ ಹಿಂದೂ ಸಮುದಾಯದ ಮೂರು … Continued

ಕಾಶ್ಮೀರದ: ರಾಜೌರಿಯ ಡ್ಯಾಂಗ್ರಿ ಗ್ರಾಮದಲ್ಲಿ ಗುಂಡಿನ ದಾಳಿ: ಮೂವರು ನಾಗರಿಕರು ಸಾವು, 7 ಜನರಿಗೆ ಗಾಯ

ಶ್ರೀನಗರ: ಭಾನುವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಡ್ಯಾಂಗ್ರಿ ಗ್ರಾಮದಲ್ಲಿ ಗುಂಡಿನ ದಾಳಿಯ ನಂತರ ಮೂವರು ನಾಗರಿಕರು ಸಾವಿಗೀಡಾಗಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡರು. ಮೂಲಗಳ ಪ್ರಕಾರ, ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದು ಸಾವು ನೋವುಗಳಿಗೆ ಕಾರಣವಾಯಿತು. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿದೆ. … Continued

ದೆಹಲಿ ಶಾಕರ್: ಡಿಕ್ಕಿ ಹೊಡೆದ ನಂತರ 12 ಕಿಮೀ ಎಳೆದೊಯ್ದ ಕಾರು, ಯುವತಿ ಸಾವು

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ಯುವತಿಯೊಬ್ಬಳ ಸ್ಕೂಟರ್ (Scooter) ಅಪಘಾತಕ್ಕೀಡಾಗಿದ್ದು, ಆಕೆಯನ್ನು ಕಾರು ಸುಮಾರು 12 ಕಿಮೀ ವರೆಗೂ ಎಳೆದೊಯ್ದಿದ್ದು, ತೀವ್ರವಾಗಿ ಗಾಯಗೊಂಡ ಯುವತಿ ಸಾವಿಗೀಡಾದ ಘಟನೆ ದೆಹಲಿಯಲ್ಲಿ ನಡೆದಿದೆ. ಶನಿವಾರ ಮಧ್ಯ ರಾತ್ರಿ ದೆಹಲಿಯ ಹೊರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಂಜಲಿ ಚಲಿಸುತ್ತಿದ್ದ ಸ್ಕೂಟಿಯು ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಚಕ್ರಕ್ಕೆ … Continued

ಚಂದ್ರಬಾಬು ನಾಯ್ಡು ಸಮಾವೇಶದಲ್ಲಿ ಮತ್ತೊಂದು ದುರಂತ, ಸೀರೆ ಪಡೆಯಲು ನೂಕುನುಗ್ಗಲು ಉಂಟಾಗಿ 3 ಮಹಿಳೆಯರು ಸಾವು

ಗುಂಟೂರು: ಕೆಲವೇ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಎಂಟು ಮಂದಿ ಮೃತಪಟ್ಟ ಬೆನ್ನಲ್ಲೇ ಬೆನ್ನಲ್ಲೇ ಭಾನುವಾರ (ಜನವರಿ 1) ಸಂಕ್ರಾಂತಿ ಹಬ್ಬದ ಅಂಗವಾಗಿ ಚಂದ್ರಬಾಬುನಾಯ್ಡು ಅವರು ಸೀರೆ ಹಂಚುತ್ತಿದ್ದ ಕಾರ್ಯಕ್ರಮದಲ್ಲಿ ಮತ್ತೆ 3 ಮಹಿಳೆಯರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಆಂಧ್ರದ ಗುಂಟೂರಿನ ವಿಕಾಸನಗರದಲ್ಲಿ ಈ ದುರಂತ ಸಂಭವಿಸಿದೆ. ತೆಲುಗುದೇಶಂ … Continued

2023ರಲ್ಲಿ ಸರಣಿ ವಿಧಾನಸಭೆ ಚುನಾವಣೆಗಳು : ಇದು ಲೋಕಸಭಾ ಚುನಾವಣೆ ಮುನ್ನ ‘ಸೆಮಿಫೈನಲ್’..?

ನವದೆಹಲಿ: 2023 ರಲ್ಲಿ ಭಾರತದ ಹಲವಾರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರಮುಖ ರಾಜ್ಯಗಳಾದ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ಈ ವರ್ಷ ಚುನಾವಣೆಗೆ ಹೋಗುತ್ತವೆ, ಜೊತೆಗೆ ಈಶಾನ್ಯದ ಕೆಲ ರಾಜ್ಯಗಳು ಸಹ ಚುನಾವಣೆಗೆ ಹೋಗಲಿವೆ. ವಿಧಾನಸಭೆ ಚುನಾವಣೆ ನಡೆಯಲಿರುವ ಈಶಾನ್ಯ ರಾಜ್ಯಗಳೆಂದರೆ ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯ. ಫೆಬ್ರುವರಿ-ಮಾರ್ಚ್‌ನಲ್ಲಿ ವಿಧಾನಸಭೆ ಆ … Continued