ರಾಜ್ಯದ ಈ ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನವೆಂಬರ್ 6ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೂ 3 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, … Continued

ದೆಹಲಿಯಲ್ಲಿ ವಾಯು ಮಾಲಿನ್ಯ ಉಲ್ಬಣ: ನಾಳೆಯಿಂದ ಪ್ರಾಥಮಿಕ ಶಾಲೆಗಳು ಬಂದ್‌

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ನಾಳೆ, ಶನಿವಾರದಿಂದ ರಜೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಪ್ರಕಟಿಸಿದ್ದಾರೆ. ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ಶುಕ್ರವಾರ ಸತತ ಎರಡನೇ ದಿನ … Continued

ಗುಜರಾತ್ ಚುನಾವಣೆ ; ಟೈಮ್ಸ್ ನೌ -ನವಭಾರತ-ಇಟಿಜಿ ಒಪಿನಿಯನ್ ಪೋಲ್ : ಬಿಜೆಪಿ ಗೆಲ್ಲುತ್ತಾ..? ಕಾಂಗ್ರೆಸ್‌ಗೆ ಆಪ್‌ ಅಡ್ಡಿಯಾಗುತ್ತಾ..? ಸಮೀಕ್ಷೆಯಲ್ಲಿ ಬಹಿರಂಗ

ಅಹ್ಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆ 2022 ಘೋಷಣೆಯಾಗಿದೆ. ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಹಿಮಾಚಲ ಪ್ರದೇಶದೊಂದಿಗೆ ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಗುಜರಾತ್‌ಗೆ ಸಂಬಂಧಿಸಿದಂತೆ ಟೈಮ್ಸ್ ನೌ -ನವಭಾರತ ಮತ್ತು ಇಟಿಜಿಯ ಅಭಿಪ್ರಾಯ ಸಂಗ್ರಹ (opinion poll) ಹೊರಬಿದ್ದಿದೆ. ಇದು ಗುಜರಾತ್ … Continued

ದೆಹಲಿ: ವಾಯು ಗುಣಮಟ್ಟ ಹದಗೆಟ್ಟಿದ್ದರಿಂದ ನೋಯ್ಡಾ ಶಾಲೆಗಳಿಗೆ ಮಂಗಳವಾರದ ವರೆಗೆ ಆನ್‌ಲೈನ್‌ನಲ್ಲೇ ತರಗತಿ

ನೋಯ್ಡಾ: ದೆಹಲಿ-ಎನ್‌ಸಿಆರ್‌ನಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದಾಗಿ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಎಲ್ಲಾ ಶಾಲೆಗಳಲ್ಲಿ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಂಗಳವಾರದ ವರೆಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುವಂತೆ ಸೂಚಿಸಲಾದೆ. ಗೌತಮ್ ಬುದ್ಧನಗರದ ಶಾಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್ (ಡಿಐಒಎಸ್) ಧರ್ಮವೀರ್ ಸಿಂಗ್ ಹೊರಡಿಸಿದ ಆದೇಶದಲ್ಲಿ, 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುವಂತೆ … Continued

ಪೂಂಚ್‌ನ ಗಡಿಯಲ್ಲಿ ಒಳ ನುಸುಳಲೆತ್ನಿಸಿದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯು ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿದೆ ಮತ್ತು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಬ್ಬ ಭಯೋತ್ಪಾದಕನ ಶವವನ್ನು ಸೈನಿಕರು ವಶಪಡಿಸಿಕೊಂಡರೆ, ಎಲ್‌ಒಸಿಯ ಆಚೆ ಬಿದ್ದಿರುವ ಇತರ ಇಬ್ಬರ ದೇಹಗಳನ್ನು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಗ್ರಾಮಸ್ಥರು ವಾಪಸು … Continued

ಸಮಾವೇಶದ ವೇಳೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ: ಆಸ್ಪತ್ರೆಗೆ ದಾಖಲು

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ರ್ಯಾಲಿ ಮಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಸಂಜೆ ಅವರ ರ್ಯಾಲಿಯಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದರಿಂದ ಗಾಯಗೊಂಡಿದ್ದಾರೆ. ದಾಳಿಕೋರನನ್ನು ಬಂಧಿಸಲಾಗಿದೆ. ಗುಜ್ರಾನ್‌ವಾಲಾ ವಿಭಾಗದ ವಜೀರಾಬಾದ್ ನಗರದ ಜಾಫರ್ ಅಲಿ ಖಾನ್ … Continued

ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡ ಭಾರತವನ್ನು ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನು ಮದುವೆಯಾಗ್ತಾಳಂತೆ ಪಾಕಿಸ್ತಾನದ ಈ ನಟಿ…!

ಮುಂಬರುವ ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಕುರಿತು ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಟ್ವೀಟ್ ಮಾಡಿದ್ದು ಈಗ ಭಾರೀ ಚರ್ಚೆಯಾಗುತ್ತಿದೆ. ಒಂದು ವೇಳೆ ಜಿಂಬಾಬ್ವೆ ಭಾರತವನ್ನು “ಅದ್ಭುತವಾಗಿ” ಸೋಲಿಸಿದರೆ, ತಾನು ಆಫ್ರಿಕನ್ ದೇಶದ ವ್ಯಕ್ತಿಯನ್ನು ಮದುವೆಯಾಗುತ್ತೇನೆ ಎಂದು ಪಾಕಿಸ್ತಾನಿ ನಟಿ ಸೆಹರ್‌ ಶಿನ್ವಾರಿ ತಮ್ಮ ಟ್ವೀಟ್‌ನಲ್ಲಿ ಘೋಷಿಸಿದ್ದಾರೆ. ನವೆಂಬರ್ 6ರಂದು ಭಾನುವಾರ ವಿಶ್ವ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಭಾರತ … Continued

ಮದ್ಯದ ಕಳ್ಳಸಾಗಣೆಯ ಈ ವಿಧಾನ ನೋಡಿದ್ರೆ ಬೆರಗಾಗ್ತೀರಾ : ಬಾಗಿಲುಗಳಲ್ಲಿ ಬಚ್ಚಿಟ್ಟು ಒಯ್ಯುತ್ತಿದ್ದ 2000 ಮದ್ಯದ ಬಾಟಲಿ ವಶಪಡಿಸಿಕೊಂಡ ಪೊಲೀಸರು | ವೀಕ್ಷಿಸಿ

ನವದೆಹಲಿ: ದೆಹಲಿ ಪೊಲೀಸರ ವಿಶೇಷ ತಂಡವು ಇಬ್ಬರು ಮದ್ಯ ಕಳ್ಳಸಾಗಣೆದಾರರನ್ನು ಬಂಧಿಸಿದೆ. ದೆಹಲಿಯಿಂದ ಮದ್ಯ ನಿಷೇಧಿತ ಬಿಹಾರಕ್ಕೆ ಈ ಇಬ್ಬರೂ ಆರೋಪಿಗಳು ಮದ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದರು. ರಹಸ್ಯ ಮಾಹಿತಿಯ ಮೇರೆಗೆ, ಇಬ್ಬರೂ ಆರೋಪಿಗಳನ್ನು ಬಂಧಿಸಿ, ನಂತರ ಮರದ ಬಾಗಿಲುಗಳಲ್ಲಿ ಬಚ್ಚಿಟ್ಟ ಸಾಗಿಸುತ್ತಿದ್ದ ತಲಾ 90 ಎಂಎಲ್‌ನ 2112 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ರೋಷನ್ ರೈ ಮತ್ತು ಸರ್ವಜಿತ್ … Continued

ಗುಜರಾತ್‌ ಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ : ಎರಡು ಹಂತಗಳಲ್ಲಿ ಮತದಾನ

ನವದೆಹಲಿ: 182 ಸ್ಥಾನಗಳ ಗುಜರಾತ್ ವಿಧಾನಸಭೆಗೆ ಬಹು ನಿರೀಕ್ಷಿತ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ (ಇಸಿ) ಗುರುವಾರ ಪ್ರಕಟಿಸಿದೆ. ಡಿಸೆಂಬರ್ 1ರಂದು ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 182 ಸದಸ್ಯರ ಗುಜರಾತ್ … Continued