ಕ್ವಿಟ್ ಇಂಡಿಯಾ ದಿನದ ಮೆರವಣಿಗೆಗೆ ಮುಂಚಿತವಾಗಿ ಮಹಾತ್ಮಾ ಗಾಂಧಿ ಮರಿಮೊಮ್ಮಗನ ಬಂಧನ, ಬಿಡುಗಡೆ

ಮುಂಬೈ: ಮಹಾತ್ಮಾ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ಕ್ವಿಟ್ ಇಂಡಿಯಾ ಚಳುವಳಿಯ ವಾರ್ಷಿಕೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದರು. ಬಳಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಯಿತು. ಅವರು ಮೆರವಣಿಗೆಯ ಸ್ಥಳವಾದ ಆಗಸ್ಟ್ ಕ್ರಾಂತಿ ಮೈದಾನಕ್ಕೆ ಪ್ರಯಾಣಿಸುತ್ತಿದ್ದಾಗ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಅವರನ್ನು ಬಂಧಿಸಲಾಯಿತು. ಆಗಸ್ಟ್ 1942 ರಲ್ಲಿ ಮಹಾತ್ಮಾ ಗಾಂಧಿಯವರ … Continued

ʼಬಾಬರಿʼ ಕುರಿತು ಸಚಿವರ ಸಲಹೆಗೆ ವಿರುದ್ಧವಾಗಿ ಬಿಜೆಪಿಯ ವಿಜಯರಾಜೇ ಸಿಂಧಿಯಾ ನೀಡಿದ್ದ ಭರವಸೆಯನ್ನೇ ನರಸಿಂಹ ರಾವ್‌ ನಂಬಿದರು ..’: ಶರದ್ ಪವಾರ್ ಹೇಳಿಕೆ

ನವದೆಹಲಿ: 1992ರಲ್ಲಿ ರಾಮ ಜನ್ಮಭೂಮಿ ಆಂದೋಲನದ ತೀವ್ರತೆ ಹೆಚ್ಚುತ್ತಿರುವಾಗ ಬಿಜೆಪಿ ನಾಯಕ ವಿಜಯ ರಾಜೇ ಸಿಂಧಿಯಾ ಅವರು ಅಂದಿನ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ಬಾಬರಿ ಮಸೀದಿಗೆ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು ಮತ್ತು ನರಸಿಂಹ ರಾವ್‌ ಅವರು ತಮ್ಮ ಮಂತ್ರಿಗಳ ಸಲಹೆಗೆ ವಿರುದ್ಧವಾಗಿ ವಿಜಯ ರಾಜೇ ಸಿಂಧಿಯಾ ಅವರನ್ನು ನಂಬಿದ್ದರು ಎಂದು ಎನ್‌ಸಿಪಿ … Continued

ಡೆರೆಕ್ ಒʼ ಬ್ರೆಯಾನ್‌ ಸದನದಿಂದ ಅಮಾನತುಗೊಂಡಿಲ್ಲ: ಉಪರಾಷ್ಟ್ರಪತಿ ಜಗದೀಪ ಧನಕರ ಸ್ಪಷ್ಟನೆ

ನವದೆಹಲಿ: ರಾಜ್ಯಸಭೆ ಕಲಾಪ ವೇಳೆ ಗದ್ದಲ ಮಾಡಿದ ಹಿನ್ನೆಲೆ ಟಿಎಂಸಿ ಸಂಸದ ಡೆರೆಕ್ ಓ’ಬ್ರೆಯಾನ್ ಅವರನ್ನು ಸದನದಿಂದ ಹೊರನಡೆಯಬೇಕು ಎಂದು ಸಭಾಧ್ಯಕ್ಷರು ಸೂಚಿಸಿದ್ದರೂ ಬಳಿಕ ಡೆರೆಕ್ ಓ’ಬ್ರೇನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮತಕ್ಕೆ ಹಾಕಿಲ್ಲ. ಹೀಗಾಗಿ ಅವರು ಕಲಾಪದಲ್ಲಿ ಭಾಗಿಯಾಗಬಹುದು ಎಂದು ರಾಜ್ಯಸಭೆಯ ಅಧ್ಯಕ್ಷರಾದ ಜಗದೀಪ್ ಧನಕರ ಸ್ಪಷ್ಟನೆ ನೀಡಿದ್ದಾರೆ. ತಾವು ಡೆರೆಕ್ ಓ’ಬ್ರೆಯಾನ್ ಅವರನ್ನು … Continued

ಚಂದ್ರನ ಮೇಲೆ ಚಂದ್ರಯಾನ-3 ಲ್ಯಾಂಡಿಂಗ್ ಕುರಿತು ಮಹತ್ವದ ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ

ಬೆಂಗಳೂರು: ಭಾರತದ ಚಂದ್ರಯಾನ-3ರ ಲ್ಯಾಂಡರ್ ವಿಕ್ರಂ, ಎಲ್ಲಾ ಸಂವೇದಕಗಳು ಮತ್ತು ಅದರ ಎರಡು ಎಂಜಿನ್‌ಗಳು ಕಾರ್ಯನಿರ್ವಹಿಸದಿದ್ದರೂ ಸಹ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಸಾಧ್ಯವಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಮಂಗಳವಾರ ಹೇಳಿದ್ದಾರೆ. ‘ವಿಕ್ರಂ’ ಲ್ಯಾಂಡರ್‌ನ ಸಂಪೂರ್ಣ ವಿನ್ಯಾಸವು ವೈಫಲ್ಯಗಳನ್ನು ನಿಭಾಯಿಸಲು ಸಾಧ್ಯವಾಗುವ ರೀತಿಯಲ್ಲಿ ಮಾಡಲಾಗಿದೆ ಎಂದು ಸೋಮನಾಥ ಅವರು ಲಾಭ … Continued

ಭಾರತ ಜೋಡೋ ಯಾತ್ರೆ 2.0: ಗುಜರಾತದಿಂದ ಮೇಘಾಲಯದ ವರೆಗೆ ರಾಹುಲ್ ಗಾಂಧಿ ಪಾದಯಾತ್ರೆ

ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯ ಎರಡನೇ ಹಂತವು ಗುಜರಾತ್‌ನಲ್ಲಿ ಪ್ರಾರಂಭವಾಗಿ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಕೊನೆಗೊಳ್ಳಲಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಾಟೋಲೆ ಅವರು ಹೇಳಿಕೆಯನ್ನು ದೃಢಪಡಿಸಿದರು ಮತ್ತು ರಾಜ್ಯದಲ್ಲಿ ಪಕ್ಷದ ಪದಾಧೀಕಾರಿಗಳು ಸಮಾನಾಂತರ ಮೆರವಣಿಗೆಯನ್ನು ಆಯೋಜಿಸಲಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವು … Continued

ಏಕರೂಪ ನಾಗರಿಕ ಸಂಹಿತೆ ಜಾರಿ ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ತಿರುವನಂತಪುರಂ: ಕೇಂದ್ರ ಸರ್ಕಾರದ ಉದ್ದೇಶಿತ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರುವುದರ ವಿರುದ್ಧ ಕೇರಳ ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ಮಂಗಳವಾರ, ಆಗಸ್ಟ್ 8 ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ ನಿರ್ಣಯವು, ದೇಶದಲ್ಲಿ ಯುಸಿಸಿ ಜಾರಿಗೆ ತರಲು ಕೇಂದ್ರ ಸರ್ಕಾರದ “ಏಕಪಕ್ಷೀಯ ಮತ್ತು ಆತುರದ ನಡೆ” ಭಾರತೀಯ ಸಂವಿಧಾನದ “ಜಾತ್ಯತೀತ … Continued

ಕುಟುಂಬದವರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವಾಗ ಕಣ್ಣುಬಿಟ್ಟ ಬಿಜೆಪಿ ನಾಯಕ…!

ಆಗ್ರಾ: ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಮುಖಂಡರೊಬ್ಬರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಅವರ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ನಡೆಸುತ್ತಿರುವ ವೇಳೆ ಅವರು ಎಚ್ಚರಗೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಹೇಶ ಬಾಘೇಲ್ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಕುಟುಂಬದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರನ್ನು ಪರೀಕ್ಷಿಸಿದ ಆಸ್ಪತ್ರೆಯ ವೈದ್ಯರು, … Continued

ಅಶಿಸ್ತಿನ ವರ್ತನೆಗಾಗಿ ತೃಣಮೂಲ ಸಂಸದ ಡೆರೆಕ್ ಒ’ಬ್ರಿಯಾನ್ ರಾಜ್ಯಸಭೆಯಿಂದ ಅಮಾನತು

ನವದೆಹಲಿ: ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆಯಲ್ಲಿ ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅಧಿವೇಶದಿಂದ ಅಮಾನತು ಮಾಡಲಾಗಿದೆ. ತೃಣಮೂಲದ ಡೆರೆಕ್ ಒ’ಬ್ರಿಯಾನ್ ಅವರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ರಾಜ್ಯಸಭಾ ಚೇರ್ಮನ್‌ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಇಂದು, ಮಂಗಳವಾರ ಪ್ರಕಟಿಸಿದ್ದಾರೆ. ಟಿಎಂಸಿ ನಾಯಕ ಆರ್ಡರ್ ಅನ್ನು … Continued

ಪ್ರಿಯಕರನ ಜೊತೆ ಮುನಿಸು, 80 ಅಡಿ ಎತ್ತರದ ಹೈ ಹೈಟೆನ್ಷನ್‌ ವಿದ್ಯುತ್ ಟವರ್ ಏರಿದ ಪ್ರೇಯಸಿ…!

ರಾಯಪುರ: ಪ್ರಿಯಕರನ ಜತೆ ಸಿಟ್ಟು ಮಾಡಿಕೊಂಡ ನಂತರ ಪ್ರೇಯಸಿ 80 ಅಡಿ ಎತ್ತರದ ವಿದ್ಯುತ್‌ ಟವರ್‌ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ಛತ್ತೀಸ್‌ಗಢದ ಗೌರೇಲಾ ಪೆಂಡ್ರಾ ಮಾರ್ವಾಹಿ ಜಿಲ್ಲೆಯಲ್ಲಿ ನಡೆದಿದೆ. ಯುವತಿ ಕ್ಷುಲ್ಲಕ ಕಾರಣಕ್ಕೆ ಪ್ರಿಯತಮನ ಜತೆ ಜಗಳ ಮಾಡಿಕೊಂಡಿದ್ದಾಳೆ, ಇಬ್ಬರ ಮಧ್ಯೆ ಜಗಳದ ನಂತರ ಕೋಪಗೊಂಡ ಆಕೆ 80 ಅಡಿ ಎತ್ತರದ … Continued

2 ಕೋಟಿ ರೂ. ಪರಿಹಾರ ಕೋರಿ ʼಎಲಿಫೆಂಟ್ ವಿಸ್ಪರರ್ಸ್’ ನಿರ್ದೇಶಕಿಗೆ ಲೀಗಲ್ ನೋಟಿಸ್ ಕಳುಹಿಸಿದ ಬೆಳ್ಳಿ-ಬೊಮ್ಮನ್ ಮಾವುತ ದಂಪತಿ

ಬೆಂಗಳೂರು : ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ಮೂಲಕ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಇಡೀ ಜಗತ್ತಿಗೆ ಪರಿಚಯವಾಗಿದ್ದ ಈಗ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ ತಂಡದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಈ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದಕ್ಕೆ ತಮಗೆ ಭರವಸೆ ನೀಡಿದಂತೆ ಹಣ ನೀಡಿಲ್ಲ ಎಂದು ದೂರಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಬೊಮ್ಮನ್ ಹಾಗೂ … Continued