ದೆಹಲಿ ಸೇವಾ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ: ಕೇಜ್ರಿವಾಲಗೆ ಹಿನ್ನಡೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಹಿನ್ನಡೆಯಾಗಿದೆ. ದೆಹಲಿ ಸೇವೆಗಳ ಮಸೂದೆ- 2023 ಅನ್ನು ಸೋಮವಾರ (ಆಗಸ್ಟ್ 7) ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಮಸೂದೆಯ ಪರವಾಗಿ 131 ಮತಗಳು ಮತ್ತು ವಿರುದ್ಧವಾಗಿ 101 ಮತಗಳು ಬಂದವು. ಆಮ್ ಆದ್ಮಿ ಪಕ್ಷ ಮತ್ತು ಕೇಂದ್ರದ ನಡುವಿನ ವಿವಾದದ ಬಿಂದುವಾಗಿದ್ದ ಮಸೂದೆಯನ್ನು ಆಗಸ್ಟ್ 3 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. … Continued

ಶಿವನ ಭಜನೆ ಹಾಡಿದ್ದ ಮುಸ್ಲಿಂ ಗಾಯಕಿಯ ಸಹೋದರನನ್ನು ಚಾಕುವಿನಿಂದ ಇರಿದು ಹತ್ಯೆ

ಮುಜಾಫರ್ ನಗರ: ಭಜನೆ ಹಾಡಿದ್ದಕ್ಕಾಗಿ ವಿವಾದಕ್ಕೆ ಸಿಲುಕಿದ್ದ ಮುಸ್ಲಿಂ ಗಾಯಕಿಯ 17 ವರ್ಷದ ಸಹೋದರನನ್ನು ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕೊಲೆ ಮಾಡಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮೃತನನ್ನು 17 ವರ್ಷದ ಖುರ್ಷಿದ್ ಎಂದು … Continued

ನೂಹ್ ಹಿಂಸಾಚಾರ: ಕಟ್ಟಡ ತೆರವು ಕಾರ್ಯಾಚರಣೆಗೆ ಪಂಜಾಬ್-ಹರಿಯಾಣ ಹೈಕೋರ್ಟ್ ತಡೆ

ಚಂಡೀಗಢ : ಹರಿಯಾಣದ ನೂಹ್‌ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ವಿಚಾರಣೆಗೆ ಮುಂದಾಗಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆರೋಪಿಗಳ ಕಟ್ಟಡ ನೆಲಸಮ ಕಾರ್ಯಾಚರಣೆಗೆ ತಡೆ ನೀಡಿದೆ. ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ನೇತೃತ್ವದ ಪೀಠ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿದೆ. ಜುಲೈ 31ರ ವಿಎಚ್‌ಪಿ ಹಮ್ಮಿಕೊಂಡಿದ್ದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ನಂತರ ಹಿಂಸಾಚಾರ … Continued

ಮಣಿಪುರ ಹಿಂಸಾಚಾರ: ತನಿಖೆಯ ಮೇಲ್ವಿಚಾರಣೆಗೆ ಮೂವರು ನಿವೃತ್ತ ಮಹಿಳಾ ನ್ಯಾಯಮೂರ್ತಿಗಳ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಮಣಿಪುರ ಪೊಲೀಸರು ವಿವಿಧ ಪ್ರಕರಗಣಗಳಿಗೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖೆಯ ಪರಿಶೀಲನೆಗಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ನೇತೃತ್ವದ ತ್ರಿಸದಸ್ಯ ಪೀಠವನ್ನು ಸುಪ್ರೀಂ ಕೋರ್ಟ್‌ ಸೋಮವಾರ ರಚಿಸಿದೆ. ನಿವೃತ್ತ ನ್ಯಾಯಮೂರ್ತಿಗಳಾದ ಶಾಲಿನಿ ಜೋಶಿ ಮತ್ತು ಆಶಾ ಮೆನನ್ ಅವರು ಸಮಿತಿಯ ಇತರ … Continued

ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ-2023 ಅಂಗೀಕರಿಸಿದ ಲೋಕಸಭೆ

ನವದೆಹಲಿ : ಖಾಸಗಿತನದ ಬಗ್ಗೆ ವಿಪಕ್ಷಗಳ ಪ್ರಶ್ನೆಗಳ ನಡುವೆಯೂ ಡೇಟಾ ಉಲ್ಲಂಘನೆಗೆ ಭಾರೀ ದಂಡವನ್ನು ವಿಧಿಸುವ ಡಿಜಿಟಲ್ ಪರ್ಸನಲ್‌ ಡೇಟಾ ಸಂರಕ್ಷಣಾ ಮಸೂದೆ-2023 ಡಿಜಿಟಲ್ ಹಕ್ಕುಗಳ ಕಾನೂನಿಗೆ ಲೋಕಸಭೆ ಇಂದು, ಸೋಮವಾರ ಅನುಮೋದನೆ ನೀಡಿತು. ಬ್ಯಾಂಕಿಂಗ್, ಆರೋಗ್ಯ, ವಿಮೆ ಅಥವಾ ಫೋನ್ ಕರೆ ದಾಖಲೆಗಳ ಡಿಜಿಟಲ್ ಸೇವೆಗಳನ್ನು ಬಳಸುವ ನಾಗರಿಕರ ವೈಯಕ್ತಿಕ ಡೇಟಾಗಳ ಸುರಕ್ಷತೆಗೆ ಭರವಸೆ … Continued

4 ತಿಂಗಳ ನಂತರ ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಪುನಃಸ್ಥಾಪನೆ : ಅವಿಶ್ವಾಸ ನಿರ್ಣಯಕ್ಕೂ ಮುನ್ನ ಕಾಂಗ್ರೆಸ್ಸಿಗೆ ಬಲ

ನವದೆಹಲಿ: ಮೋದಿ ಉಪನಾಮ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್‌ ನ್ಯಾಯಾಲಯವು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರಿಂಕೋರ್ಟ್‌ ತಡೆಯಾಜ್ಞೆ ವಿಧಿಸಿದ ನಂತರ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪುನಃಸ್ಥಾಪಿಸಿದ್ದಾರೆ. ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷೆಯು ಶಾಸಕರನ್ನು … Continued

ಚಂದ್ರನ ಮೊದಲ ವೀಡಿಯೊ ತೆಗೆದ ಚಂದ್ರಯಾನ-3 ಬಾಹ್ಯಾಕಾಶ ನೌಕೆ : ವೀಕ್ಷಿಸಿ

ನವದೆಹಲಿ: ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಒಂದು ದಿನದ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ‘ಚಂದ್ರಯಾನ-3 ವೀಕ್ಷಿಸಿದಂತೆ’ ಚಂದ್ರನ ವೀಡಿಯೊವೊಂದನ್ನು ಬಿಡುಗಡೆ ಮಾಡಿದೆ. “ಆಗಸ್ಟ್ 5ರಂದು ಚಂದ್ರನ ಆರ್ಬಿಟ್ ಅಳವಡಿಕೆ (LOI) ಸಮಯದಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆಯಿಂದ ಚಂದ್ರನನ್ನು ವೀಕ್ಷಿಸಲಾಗಿದೆ” ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ … Continued

ವಿಶ್ವಕಪ್ ಕ್ರಿಕೆಟ್‌ 2023: ಭಾರತಕ್ಕೆ ಕ್ರಿಕೆಟ್ ತಂಡ ಕಳುಹಿಸಲು ಗ್ರೀನ್‌ ಸಿಗ್ನಲ್‌ ನೀಡಿದ ಪಾಕಿಸ್ತಾನ

ನವದೆಹಲಿ: ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನ ಸರ್ಕಾರವು ಪಾಕ್ ತಂಡಕ್ಕೆ ಭಾರತದ ಪ್ರವಾಸಕ್ಕೆ ತೆರಳಲು ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ ಪಾಕಿಸ್ತಾನ ವಿಶ್ವಕಪ್‌ಗಾಗಿ ಭಾರತಕ್ಕೆ ಬರುತ್ತದೆಯೋ, ಇಲ್ಲವೋ ಎಂಬ ಅನೇಕ ಊಹಾಪೋಹಗಳಿದ್ದವು. ವಿಶ್ವಕಪ್‌ಗೆ ಸಂಬಂಧಿಸಿದಂತೆ ಪಾಕಿಸ್ತಾನ ತಂಡದ ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಕ್ರೀಡೆಯನ್ನು ರಾಜಕೀಯದಿಂದ ಪ್ರತ್ಯೇಕವಾಗಿಡಬೇಕು ಎಂಬುದನ್ನು ಪಾಕಿಸ್ತಾನ ಯಾವಾಗಲೂ … Continued

ಮಣಿಪುರದ ಬಿಜೆಪಿ ಸರ್ಕಾರಕ್ಕೆ ಬೆಂಬಲ ಹಿಂಪಡೆದ ಮಿತ್ರಪಕ್ಷ

ಗುವಾಹತಿ: ಮೂರು ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಮಣಿಪುರದ ಎನ್ ಬಿರೇನ್ ಸಿಂಗ್ ಸರ್ಕಾರವು ಭಾನುವಾರ ತನ್ನ ಮಿತ್ರ ಪಕ್ಷವೊಂದನ್ನು ಕಳೆದುಕೊಂಡಿದೆ. ಇಬ್ಬರು ಶಾಸಕರನ್ನು ಹೊಂದಿರುವ ಕುಕಿ ಪೀಪಲ್ಸ್ ಅಲಯನ್ಸ್ ಪಕ್ಷವು ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರಿಗೆ ಪತ್ರ ಬರೆದು ಬೆಂಬಲ ಹಿಂಪಡೆಯುವುದಾಗಿ ತಿಳಿಸಿದೆ. ಈ ಕ್ರಮವು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ … Continued

ಅಪ್ರಾಪ್ತ ಬಾಲಕರ ಗುದದ್ವಾರಕ್ಕೆ ಮೆಣಸಿನ ಕಾಯಿ ಹಾಕಿ ಚಿತ್ರಹಿಂಸೆ : 6 ಮಂದಿ ಬಂಧನ

ಲಕ್ನೋ : ಇಬ್ಬರುಅಪ್ರಾಪ್ತ ಬಾಲಕರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಸೆರೆಹಿಡಿದು ಚಿತ್ರಹಿಂಸೆ ನೀಡಿದ ಅಮಾನವೀಯ ಕೃತ್ಯ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. 10-15 ವರ್ಷದ ಅಪ್ರಾಪ್ತ ಬಾಲಕರು ಕಳ್ಳತನ ಮಾಡಿದ್ದಾರೆ ಎಂದು ಸ್ಥಳೀಯ ಗೂಂಡಾಗಳು ಬಾಲಕರನ್ನು ಸೆರೆ ಹಿಡಿದಿದ್ದಾರೆ. ಬಳಿಕ ಗೂಂಡಾಗಳು ಹುಡುಗರನ್ನು ಕಟ್ಟಿ ಹಾಕಿ ಹಸಿ ಮೆಣಸಿನ ಕಾಯಿಯನ್ನು ಕಚ್ಚಿ ತಿನ್ನುವಂತೆ ಬಲವಂತ … Continued