ಮೃತ ಪತ್ನಿಯ ಅಂತ್ಯಸಂಸ್ಕಾರ ಮುಗಿದು 4 ದಿನಗಳ ಬಳಿಕ 600 ಕಿಮೀ ದೂರದಲ್ಲಿ ಆಕೆ ಜೀವಂತವಾಗಿ ಪತ್ತೆ…!

ಗೋರಖಪುರ : ಪತ್ನಿ ಮೃತಪಟ್ಟಿದ್ದಾಳೆ ಎಂದು ಆಕೆಯ ಅಂತ್ಯಸಂಸ್ಕಾರ ನಡೆಸಿದ್ದ ಪತಿಗೆ ನಾಲ್ಕು ದಿನಗಳ ನಂತರ ಪತ್ನಿ 600 ಕಿ.ಮೀ. ದೂರದಲ್ಲಿ ಪತ್ತೆಯಾಗಿದ್ದು, ಈಗ ಸತಿ ಪತಿ ಮತ್ತೆ ಒಂದಾಗಿರುವ ಅಸಾಮಾನ್ಯ ಘಟನೆ ಉತ್ತರ ‍ಪ್ರದೇಶದ ಗೋರಖಪುರ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ. ಗೋರಖಪುರದ ಬನ್ಸ್‌ಗಾಂವ್‌ನ ನಿವಾಸಿ ರಾಮ ಸುಮೇರ್ (60) ಅವರು ತಮ್ಮ ಪತ್ನಿ ಫೂಲ್ಮತಿ … Continued

ಪುನಃ ಸೋದರಳಿಯನನ್ನೇ ತಮ್ಮ ಉತ್ತರಾಧಿಕಾರಿಯಾಗಿ ಮರುನೇಮಕ ಮಾಡಿದ ಮಾಯಾವತಿ

ನವದೆಹಲಿ : ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ)ದ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ ಆನಂದ ಅವರನ್ನು ಮತ್ತೆ ಪಕ್ಷದಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಲೋಕಸಭೆ ಚುನಾವಣೆಯ ಸಮಯದಲ್ಲೇ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ ಆನಂದ (28) ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಮತ್ತು ತಮ್ಮ ಉತ್ತರಾಧಿಕಾರಿ ಸ್ಥಾನದಿಂದ ತೆಗೆದುಹಾಕಿದ್ದರು. … Continued

ಯುಜಿಸಿ ನೆಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡದ ಮೇಲೆ ಜನರ ಗುಂಪಿನ ದಾಳಿ ; ನಾಲ್ವರ ಬಂಧನ

ಪಾಟ್ನಾ: ಯುಜಿಸಿ ನೆಟ್ (UGC-NET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಗಾಗಿ ಬಿಹಾರಕ್ಕೆ ತೆರಳಿದ್ದ ಕೇಂದ್ರೀಯ ತನಿಖಾ ದಳ(CBI)ದ ತಂಡದ ಮೇಲೆ ನಾವಡಾದಲ್ಲಿ ದಾಳಿ ಮಾಡಿದ್ದಾರೆ. ಈ ತಂಡವು ʼನಕಲಿʼ ಎಂದು ಗ್ರಾಮಸ್ಥರು ಭಾವಿಸಿದ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಸುಮಾರು 200 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅವರಲ್ಲಿ ಎಂಟು ಮಂದಿಯನ್ನು ಮಾತ್ರ ಹೆಸರಿಸಲಾಗಿದೆ. … Continued

ಜಾಮೀನಿಗೆ ಹೈಕೋರ್ಟ್ ತಡೆ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅರವಿಂದ ಕೇಜ್ರಿವಾಲ್

ನವದೆಹಲಿ: ಜಾರಿ ನಿರ್ದೇಶನಾಲಯದ ಅರ್ಜಿ ವಿಚಾರಣೆ ನಡೆಯುವವರೆಗೆ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ತನ್ನ ಜಾಮೀನಿಗೆ ತಡೆ ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೇಜ್ರಿವಾಲ್ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗುವ ಗಂಟೆಗಳ ಮೊದಲು ಅವರಿಗೆ ನೀಡಲಾದ ಜಾಮೀನನ್ನು ಇ.ಡಿ.ದೆಹಲಿ ಹೈಕೋರ್ಟಿನಲ್ಲಿ ಪ್ರಶ್ನಿಸಿತ್ತು. ಶುಕ್ರವಾರ … Continued

ನೀಟ್‌-ಯುಜಿ ಪರೀಕ್ಷೆ ಅಕ್ರಮ ಆರೋಪ: : ಸಿಬಿಐ ತನಿಖೆಗೆ ಸರ್ಕಾರದ ಆದೇಶ

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್‌-ಯುಜಿ (NEET-UG) ಪರೀಕ್ಷೆಯಲ್ಲಿ ಅವ್ಯವಹಾರ ಮತ್ತು ಪೇಪರ್ ಸೋರಿಕೆ ಆರೋಪಗಳ ಕುರಿತು ಕೇಂದ್ರ ಸರ್ಕಾರವು ಶನಿವಾರ (ಜೂನ್ 22) ಸಿಬಿಐ ತನಿಖೆಗೆ ಆದೇಶಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದವು ಭುಗಿಲೆದ್ದ ಒಂದು ವಾರದ ನಂತರ ಸರ್ಕಾರದ ಈ ಕ್ರಮವು ಬಂದಿದೆ. “ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2024 ರ … Continued

ಇಂದು ನಿಗದಿಯಾಗಿದ್ದ ನೀಟ್-ಪಿಜಿ ಪರೀಕ್ಷೆ ದಿಢೀರ್‌ ಮುಂದೂಡಿಕೆ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ಅಕ್ರಮಗಳ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಜೂನ್ 23 ರಂದು ನಡೆಯಬೇಕಿದ್ದ ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು (NEET PG) ದಿಢೀರ್‌ ಮುಂದೂಡಲಾಗಿದೆ. ಆರೋಗ್ಯ ಸಚಿವಾಲಯ ಈ ನಿರ್ಧಾರ ಪ್ರಕಟಿಸಿದ್ದು, ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ. ನೀಟ್-ಪಿಜಿ (NEET-UG) ಮತ್ತು ಯುಜಿಸಿ-ನೆಟ್‌ (UGC-NET) … Continued

ರಾಷ್ಟ್ರೀಯ ಪರೀಕ್ಷಾ ಪ್ರಕ್ರಿಯೆ ಸುಧಾರಣೆ : ಇಸ್ರೋ ಮಾಜಿ ಮುಖ್ಯಸ್ಥ ರಾಧಾಕೃಷ್ಣನ್‌ ನೇತೃತ್ವದಲ್ಲಿ 7 ಮಂದಿ ಸಮಿತಿ ರಚನೆ

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಕವಾಗಿ ಮತ್ತು ನ್ಯಾಯೋಚಿತವಾಗಿ ನಡೆಸಲು ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಕಾರ್ಯವಿಧಾನವನ್ನು ಸಮಗ್ರವಾಗಿ ರೂಪಿಸಲು ಕೇಂದ್ರ ಸರ್ಕಾರವು ಇಸ್ರೊ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್‌ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿದೆ. ದೆಹಲಿಯ ಏಮ್ಸ್‌ ಮಾಜಿ ನಿರ್ದೇಶಕ ರಣದೀಪ ಗುಲೇರಿಯಾ, ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಬಿ.ಜೆ.ರಾವ್‌, ಐಐಟಿ … Continued

ಪತ್ರಿಕೆ ಸೋರಿಕೆ ವಿವಾದದ ನಡುವೆಯೇ ಎನ್‌ಟಿಎ ಮಹಾನಿರ್ದೇಶಕ ಸ್ಥಾನದಿಂದ ಸುಬೋಧಕುಮಾರ ವಜಾ

ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಡುವೆ ಪ್ರಮುಖ ಕ್ರಮದಲ್ಲಿ ಕೇಂದ್ರ ಸರ್ಕಾರವು ಪರೀಕ್ಷಾ ಸಂಸ್ಥೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮಹಾನಿರ್ದೇಶಕ ಸ್ಥಾನದಿಂದ ಸುಬೋಧಕುಮಾರ ಸಿಂಗ್ ಅವರನ್ನು ವಜಾಗೊಳಿಸಿದೆ. ಮತ್ತು ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಪ್ರದೀಪ ಸಿಂಗ್ ಖರೋಲಾ ಅವರನ್ನು ಶನಿವಾರ (ಜೂನ್ 22) ನೇಮಿಸಿದೆ. ಖರೋಲಾ ಅವರು ಇಂಡಿಯಾ ಟ್ರೇಡ್ ಪ್ರಮೋಷನ್ … Continued

ಪರೀಕ್ಷಾ ಅಕ್ರಮ ತಡೆಗಟ್ಟಲು ಹೊಸ ಕಾನೂನು ಜಾರಿ ಮಾಡಿದ ಕೇಂದ್ರ ; 5-10 ವರ್ಷ ಜೈಲು, ಕನಿಷ್ಠ 1 ಕೋಟಿ ರೂ. ದಂಡ

ನವದೆಹಲಿ: ನೀಟ್‌ (NEET) ಹಗರಣದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕಾನೂನು ಜಾರಿಗೊಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಹಗರಣಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆ-2024 ಕಾನೂನು ಜಾರಿಗೆ ಅಧಿಸೂಚನೆ ಹೊರಡಿಸಿದೆ‌. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ತಡೆಗಟ್ಟುವ ಕಾನೂನು … Continued

ಎಚ್ಚರಿಕೆ…| ಮುಖೇಶ ಅಂಬಾನಿ ಡೀಪ್‌ಫೇಕ್ ವೀಡಿಯೊ ಬಳಸಿದ ಜಾಹೀರಾತು ಆಮಿಷಕ್ಕೆ ₹7 ಲಕ್ಷ ಕಳೆದುಕೊಂಡ ವೈದ್ಯೆ…!

ಮುಂಬೈನ ಅಂಧೇರಿಯ 54 ವರ್ಷದ ಆಯುರ್ವೇದ ವೈದ್ಯರೊಬ್ಬರು ಕೈಗಾರಿಕೋದ್ಯಮಿ ಮುಖೇಶ ಅಂಬಾನಿಯವರ ಡೀಪ್‌ಫೇಕ್ ವೀಡಿಯೊವನ್ನು ಒಳಗೊಂಡ ಅತ್ಯಾಧುನಿಕ ಹಗರಣಕ್ಕೆ ಬಲಿಯಾಗಿದ್ದಾರೆ. ನಕಲಿ ಶೇರ್ ಟ್ರೇಡಿಂಗ್ ಅಕಾಡೆಮಿ ಪ್ರಚಾರ ಮಾಡುವ ವೀಡಿಯೊವನ್ನು ವಂಚಕರು ಬಳಸಿಕೊಂಡಿದ್ದಾರೆ. ಏಪ್ರಿಲ್‌ನಲ್ಲಿ, ಡಾ. ಪಾಟೀಲ್ ತಮ್ಮ Instagram ಫೀಡ್‌ನಲ್ಲಿ ಡೀಪ್‌ಫೇಕ್ ವೀಡಿಯೊವನ್ನು ನೋಡಿದ್ದಾರೆ. ಡೀಪ್‌ಫೇಕ್ ವೀಡಿಯೊದಲ್ಲಿ ರಾಜೀವ ಶರ್ಮಾ ಟ್ರೇಡ್ ಗ್ರೂಪ್ ಅನ್ನು … Continued