ಶಾಂಘೈ ಸಹಕಾರ ಸಂಘಟನೆಯ ಮೊದಲ ಪ್ರವಾಸಿ-ಸಾಂಸ್ಕೃತಿಕ ರಾಜಧಾನಿಯಾಗಿ ಕಾಶಿ ಹೆಸರು ಘೋಷಣೆ

ನವದೆಹಲಿ: ಶಾಂಘೈ ಸಹಕಾರ ಸಂಘಟನೆಯ (SCO) ನಾಯಕರು ಶುಕ್ರವಾರ ಭಾರತದ ಅಧ್ಯಾತ್ಮಿಕ ಹಾಗೂ ಧಾರ್ಮಿಕ ವಾರಾಣಸಿ (ಕಾಶಿ)ಯನ್ನು 2022-23ರ ಗುಂಪಿನ ಮೊದಲ ಪ್ರವಾಸಿ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ಅನುಮೋದಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಈ ಐತಿಹಾಸಿಕ ಉಜ್ಬೆಕ್ ನಗರ ಸಮರ್‌ಕಂಡ್‌ನಲ್ಲಿ ನಡೆದ SCO ಶೃಂಗಸಭೆಯಲ್ಲಿ ಭಾರತೀಯ ನಿಯೋಗವನ್ನು ಪ್ರಧಾನಿ … Continued

ಶಾಂಘೈ ಸಹಕಾರ ಸಂಘಟನೆ ಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುತಿನ್ ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ಏಕೆ ಹೇಳಲಿಲ್ಲ?…ಕಾರಣ ಇಲ್ಲಿದೆ

ನವದೆಹಲಿ: ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಒಂದು ದಿನ ಮುಂಚಿತವಾಗಿ, ಅವರು ತಾಜಕಿಸ್ತಾನದಲ್ಲಿ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯ ಭಾಗವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರನ್ನು ಭೇಟಿ ಮಾಡಿದರು. ಆದಾಗ್ಯೂ, ಮರುದಿನದ ತನ್ನ ಜನ್ಮದಿನವಿರುವ ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ಹೇಳಲು ಸಾಧ್ಯವಿಲ್ಲ ಎಂದು ಪುತಿನ್‌ ಹೇಳಿದರು. ನನ್ನ “ಆತ್ಮೀಯ … Continued

ಭಾರತಕ್ಕೆ ಬಂದಿಳಿದ ಎಂಟು ಏಸಿಯಾಟಿಕ್‌ ಚಿರತೆಗಳು: ಅವನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ

ನವದೆಹಲಿ: ನಮೀಬಿಯಾದಿಂದ ಎಂಟು ಚಿರತೆಗಳು ತಮ್ಮ ಹೊಸ ಮನೆಯಾದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದ್ದು, ಅವುಗಳನ್ನು ಭಾರತದಲ್ಲಿ ಮತ್ತೆ ಪರಿಚಯಿಸುವ ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಿದ್ದಾರೆ. ಎಂಟು ಚಿರತೆಗಳನ್ನು ಹೊತ್ತ ವಿಮಾನವು ಬೆಳಿಗ್ಗೆ 8 ಗಂಟೆಗೆ ಸ್ವಲ್ಪ ಮೊದಲು ಗ್ವಾಲಿಯರ್‌ನ ಮಹಾರಾಜಪುರದ ವಾಯುನೆಲೆಗೆ … Continued

ಮದುವೆಯಾದ 8 ವರ್ಷಗಳ ನಂತರ, ತನ್ನ ಪತಿ ಮಹಿಳೆಯಾಗಿದ್ದಳು ಎಂದು ಕಂಡುಕೊಂಡ ಹೆಂಡತಿ

ನವದೆಹಲಿ: ಗುಜರಾತ್‌ನ ವಡೋದರದ 40 ವರ್ಷದ ಮಹಿಳೆಯೊಬ್ಬರು ಮದುವೆಯಾಗಿ 8 ವರ್ಷಗಳಾದ ನಂತರ ತನ್ನ ಪತಿ ಮಹಿಳೆಯಾಗಿದ್ದು,  ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ ಎಂದು ಕಂಡುಕೊಂಡ ನಂತರ ಆಘಾತಕ್ಕೊಳಗಾಗಿದ್ದಾರೆ. ಗೋತ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಶೀತಲ್ ಎಂಬ ಮಹಿಳೆ ವಿರಾಜ್ ವರ್ಧನ್ (ಹಿಂದಿನ ವಿಜಯತಾ) ವಿರುದ್ಧ “ಅಸ್ವಾಭಾವಿಕ ಲೈಂಗಿಕತೆ” ಮತ್ತು … Continued

ಈ ಯುಗವು ಯುದ್ಧದ್ದಲ್ಲ’: ಉಕ್ರೇನ್ ಯುದ್ಧ ಕೊನೆಗೊಳಿಸುವಂತೆ ಮೋದಿ ಪುತಿನ್ ಅವರನ್ನು ಸಾರ್ವಜನಿಕವಾಗಿ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಆಹಾರ ಮತ್ತು ಇಂಧನ ಭದ್ರತೆಯ ಸಮಸ್ಯೆಗಳನ್ನು ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರನ್ನು ಕೋರಿದ್ದು, ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸಿ ಮಾತುಕತೆಯ ಹಾದಿಗೆ ಮರಳುವಂತೆ ಒತ್ತಾಯಿಸಿದರು. ಉಜ್ಬೇಕಿಸ್ತಾನ್‌ನ ಐತಿಹಾಸಿಕ ನಗರವಾದ ಸಮರ್‌ಕಂಡ್‌ನಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯ ಅಂಚಿನಲ್ಲಿ … Continued

ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳದ ದಾಳಿ ನಂತರ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ

ನವದೆಹಲಿ: ದೆಹಲಿಯ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ದೆಹಲಿ ಪೊಲೀಸ್ ಘಟಕದ ಭ್ರಷ್ಟಾಚಾರ ನಿಗ್ರಹ ದಳ ಶುಕ್ರವಾರ ಬಂಧಿಸಿದೆ. ಇಂದು, ಶುಕ್ರವಾರ ನಡೆಸಲಾದ ಶೋಧ ಕಾರ್ಯಾಚರಣೆಯಲ್ಲಿ “ಅವರ ವಿರುದ್ಧ ದೋಷಾರೋಪಣೆಯ ವಸ್ತುಗಳು ಮತ್ತು ಸಾಕ್ಷ್ಯಗಳನ್ನು” ವಶಪಡಿಸಿಕೊಂಡ ನಂತರ ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಲಾಯಿತು. ಅಮಾನತುಲ್ಲಾ ಖಾನ್ ಅಧ್ಯಕ್ಷರಾಗಿರುವ ದೆಹಲಿ ವಕ್ಫ್ ಬೋರ್ಡ್‌ನಲ್ಲಿ ನಡೆದ ನೇಮಕಾತಿಯಲ್ಲಿನ … Continued

2016ರ ಪ್ರಕರಣದಲ್ಲಿ ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿಗೆ 6 ತಿಂಗಳು ಜೈಲು ಶಿಕ್ಷೆ

ಗಾಂಧಿನಗರ: 2016 ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ನ್ಯಾಯಾಲಯವು ಶುಕ್ರವಾರ, ಸೆಪ್ಟೆಂಬರ್ 16ರಂದು ಗುಜರಾತ್ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ 18 ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಗುಜರಾತ್ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಕಟ್ಟಡಕ್ಕೆ ಬಿಆರ್ ಅಂಬೇಡ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡುವಂತೆ ಒತ್ತಾಯಿಸಿ … Continued

ಹೃದಯ ವಿದ್ರಾವಕ : ಸತ್ತ ಮಾಲೀಕನಿಗೆ ವಿದಾಯ ಹೇಳಲು ಸ್ಮಶಾನಕ್ಕೆ ಓಡಿಬಂದ ಆಕಳ ಕರು-ಮೃತದೇಹದ ಮುಂದೆ ಗೋಳಿಟ್ಟ ಗೋವು, ಅಲ್ಲಿದ್ದವರಿಗೆ ಕಣ್ಣೀರು | ವೀಕ್ಷಿಸಿ

ಮೃತಪಟ್ಟ ತನ್ನ ಮಾಲೀಕನಿಗೆ ಅಂತಿಮ ವಿದಾಯ ಹೇಳಲು ಆಕಳು ಕರು (ದೊಡ್ಡದು) ಓಡೋಡಿ ಬಂದ ಹೃದಯವಿದ್ರಾವಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಇದು ಸುದ್ದಿಯಾಗಿತ್ತು. ಆದರೆ ಈಗ ಆಕಳ ಕರು ತನ್ನ ಮಾಲೀಕನ ಶವದ ಮುಂದೆ ಗೋಳಿಡುವ ವೀಡಿಯೊ ವೈರಲ್‌ ಆಗಿದೆ. ಇದು ಎಂಥವನ ಕಣ್ಣಂಚಿನಲ್ಲಿಯೂ ನೀರು ತರಿಸುವಂತಿದೆ. ಜಾರ್ಖಂಡ್‌ನ ಹಜಾರಿಬಾಗ್‌ನ … Continued

ಪ್ರಧಾನಿ ಮೋದಿ ಜನ್ಮದಿನ: ದೆಹಲಿ ರೆಸ್ಟೋರೆಂಟ್‌ನಲ್ಲಿ 56 ಇಂಚಿನ ಥಾಲಿ, 8.5 ಲಕ್ಷ ರೂ. ಬಹುಮಾನ, ಕೇದಾರನಾಥ ಯಾತ್ರೆ : ಥಾಲಿಯ ವಿಶೇಷತೆ ಇಲ್ಲಿದೆ

ನವದೆಹಲಿ: ನಾಳೆ, ಸೆಪ್ಟೆಂಬರ್ 17ರ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಆಚರಿಸಲಾಗುತ್ತಿದೆ. ಅಂದು ದೆಹಲಿಯ ಲುಟ್ಯೆನ್ಸ್‌ನ ರೆಸ್ಟೋರೆಂಟ್ 56 ಇಂಚಿನ ಥಾಲಿಯನ್ನು 10 ದಿನಗಳ ವರೆಗೆ ನೀಡುವುದಾಗಿ ಘೋಷಿಸಿದೆ. ಈ ಯೋಜನೆಯ ಭಾಗವಾಗಿ ಇಬ್ಬರು ಅದೃಷ್ಟಶಾಲಿಗಳು ಕೇದಾರನಾಥ ದೇಗುಲಕ್ಕೆ ಭೇಟಿ ನೀಡುವ ಅವಕಾಶವನ್ನು ಸಹ ಪಡೆಯುತ್ತಾರೆ ಎಂದು ರೆಸ್ಟೋರೆಂಟ್ ಮಾಲೀಕರು ತಿಳಿಸಿದ್ದಾರೆ. ಕನ್ನಾಟ್ … Continued

ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆ : 15 ರಾಜ್ಯಗಳ ಮುಖ್ಯಸ್ಥರಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಪಾಳಯ ಸೇರಿದ 12 ರಾಜ್ಯಗಳ ಮುಖ್ಯಸ್ಥರು…!

ಮುಂಬೈ : ಶಿವಸೇನೆಯ ಬಣ ರಾಜಕೀಯದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಬಂ ಮೇಲುಗೈ ಸಾಧಿಸಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಭಾರೀ ಹಿನ್ನಡೆಯಾಗಿದೆ. ಶಿವಸೇನೆಯ ವಿವಿಧ ರಾಜ್ಯ ಘಟಕದ 15 ಮುಖ್ಯಸ್ಥರಲ್ಲಿ 12 ರಾಜ್ಯಗಳ ಮುಖ್ಯಸ್ಥರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣಕ್ಕೆ ಬೆಂಬಲ ಘೋಷಿಸಿದ್ದಾರೆ. ಸೆಪ್ಟೆಂಬರ್‌ 15ರಂದು ಗುರುವಾರ ನಡೆದ ಸಭೆಯಲ್ಲಿ ಶಿವಸೇನಯ … Continued