ವಿವಾದಕ್ಕೆ ಕಾರಣವಾಯ್ತು ಕೇರಳದ ಕಾಂಗ್ರೆಸ್‌ ಮಿತ್ರಪಕ್ಷ ಮುಸ್ಲಿಂ ಲೀಗ್ ‘ಜಾತ್ಯತೀತ ಪಕ್ಷ’ ಎಂದು ರಾಹುಲ್ ಗಾಂಧಿ ಅಮೆರಿಕದಲ್ಲಿ ನೀಡಿದ ಹೇಳಿಕೆ

ಕೇರಳದಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿರುವ ಮುಸ್ಲಿಂ ಲೀಗ್ ಅನ್ನು “ಸಂಪೂರ್ಣ ಜಾತ್ಯತೀತ ಪಕ್ಷ” ಎಂದು ರಾಹುಲ್‌ ಗಾಂಧಿ ಬಣ್ಣಿಸಿದ ನಂತರ ಶುಕ್ರವಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೆ ವಾಗ್ಯುದ್ಧ ಆರಂಭವಾಗಿದೆ. ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ಸಂವಾದದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಹೇಳಿಕೆಗಳು ಫ್ಲ್ಯಾಶ್ ಪಾಯಿಂಟ್ ಆಗಿತ್ತು. ಜಾತ್ಯತೀತತೆಯನ್ನು ಪ್ರತಿಪಾದಿಸುವ ಮತ್ತು … Continued

ಹಿಂದೂ-ಜೈನ್‌ ವಿದ್ಯಾರ್ಥಿನಿಯರಿಗೆ ಹಿಜಾಬ್ ಹಾಕಿಸಿದ ಆರೋಪ: ಮಧ್ಯಪ್ರದೇಶ ಖಾಸಗಿ ಶಾಲೆ ವಿರುದ್ಧ ತನಿಖೆಗೆ ಆದೇಶ

ಭೋಪಾಲ್/ಸಾಗರ್: ಮಧ್ಯಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರು ಮುಸ್ಲಿಮೇತರ ವಿದ್ಯಾರ್ಥಿನಿಯರಿಗೆ ಹಿಜಾಬ್(Hijab) ಧರಿಸುವಂತೆ ಒತ್ತಾಯಿಸಿದ್ದಾರೆ ಎನ್ನುವ ವಿಚಾ ಬೆಳಕಿಗೆ ಬಂದ ನಂತರ ವಿವಾದ ಭುಗಿಲೆದ್ದಿದೆ. ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 18 ವಿದ್ಯಾರ್ಥಿಗಳನ್ನು ಅಭಿನಂದಿಸುವ ಖಾಸಗಿ ಶಾಲೆಯ ಪೋಸ್ಟರ್‌ನ ಕುರಿತು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಬುಧವಾರ ವಿಸ್ತೃತ ಪೊಲೀಸ್ ತನಿಖೆಗೆ ಆದೇಶಿಸಿದ್ದಾರೆ, … Continued

ಸಿಎಂ ಏಕನಾಥ್ ಶಿಂಧೆ ಭೇಟಿ ಮಾಡಿದ ಶರದ ಪವಾರ್ : ‘ವೈಯಕ್ತಿಕ ಭೇಟಿ’ ಎಂದ ಬಿಜೆಪಿ

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ ಪವಾರ್ ಅವರು ಗುರುವಾರ ಮುಂಬೈನ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಭೇಟಿಯಾದರು. ಸಭೆಯ ಕುರಿತು ಟ್ವೀಟ್ ಮಾಡಿರುವ ಶರದ ಪವಾರ್ ಅವರು, ದಕ್ಷಿಣ ಮುಂಬೈನ ಐಕಾನಿಕ್ ಸಿನಿಮಾ ಹಾಲ್ ಮರಾಠ ಮಂದಿರದ 75ನೇ ವಾರ್ಷಿಕೋತ್ಸವಕ್ಕೆ ಮುಖ್ಯಮಂತ್ರಿಯನ್ನು ಆಹ್ವಾನಿಸಲು ಹೋಗಿದ್ದೆ ಎಂದು … Continued

ಅಬಕಾರಿ ನೀತಿ ತುಂಬಾ ಉತ್ತಮವಾಗಿದ್ದರೆ ನೀವು ಹಿಂತೆಗೆದುಕೊಂಡಿದ್ದು ಯಾಕೆ ? : ಮನೀಶ ಸಿಸೋಡಿಯಾ ಪ್ರಶ್ನಿಸಿದ ಕೋರ್ಟ್‌

ನವದೆಹಲಿ : ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿತರಾಗಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಅವರಿಗೆ ದೆಹಲಿ ಹೈಕೋರ್ಟ್‌ ಗುರುವಾರ ನೀತಿ ತುಂಬಾ ಉತ್ತಮವಾಗಿದ್ದರೆ ಅದನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದು ಏಕೆ ಎಂಬುದನ್ನು ವಿವರಿಸುವಂತೆ ಕೇಳಿದೆ. ನ್ಯಾಯಮೂರ್ತಿ ದಿನೇಶಕುಮಾರ ಶರ್ಮಾ ಅವರು, ಆರೋಪಿತ ಹಗರಣದಿಂದ ಉದ್ಭವಿಸಿದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಹ ಆರೋಪಿ … Continued

ವಾಣಿಜ್ಯ ಎಲ್‌ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ₹83.50 ರೂಪಾಯಿ ಇಳಿಕೆ ಮಾಡಿದೆ. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ. ಹೊಸ ಬೆಲೆಗಳು ಜೂನ್‌ 1ರಿಂದ ಅನ್ವಯವಾಗಲಿದೆ ಎಂದು ಹೇಳಿದೆ. ಅಡುಗೆ ಅನಿಲ ದರ ಯಥಾಸ್ಥಿತಿಯಲ್ಲಿದೆ. ಸಿಲಿಂಡರ್ ಬೆಲೆ ದರ ಕಡಿತದ ನಂತರ, 19 ಕೆಜಿ ವಾಣಿಜ್ಯ … Continued

ಅರ್ನಾಲ್ಟ್‌ ಹಿಂದಕ್ಕಿ ಪುನಃ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲೋನ್‌ ಮಸ್ಕ್‌

ಎಲೋನ್ ಮಸ್ಕ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಗುರುವಾರ ಬಿಡುಗಡೆಯಾದ ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಪ್ರಕಾರ ಮಸ್ಕ್ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಪ್ಯಾರಿಸ್ ವಹಿವಾಟಿನಲ್ಲಿ ಅರ್ನಾಲ್ಟ್‌ನ LVMH ಷೇರುಗಳು 2.6% ಕುಸಿದ ನಂತರ ಟೆಸ್ಲಾ ಮುಖ್ಯಸ್ಥ ಮಸ್ಕ್‌ ಅವರು … Continued

ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಬರಿಗೈಯಲ್ಲಿ ಎತ್ತಿ ತೋರಿಸಿದ ಗ್ರಾಮಸ್ಥರು | ವೀಕ್ಷಿಸಿ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿರುವ ವೀಡಿಯೊವೊಂದರಲ್ಲಿ ಹೊಸದಾಗಿ ನಿರ್ಮಿಸಲಾದ ರಸ್ತೆಯನ್ನು ಗ್ರಾಮಸ್ಥರು ತಮ್ಮ ಕೈಗಳಿಂದ ಎತ್ತುತ್ತಿರುವುದನ್ನು ತೋರಿಸುತ್ತದೆ. ಹಲವಾರು ಟ್ವಿಟರ್ ಹ್ಯಾಂಡಲ್‌ಗಳು ಹೇಳಿಕೊಂಡಂತೆ ಮಹಾರಾಷ್ಟ್ರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. 38 ಸೆಕೆಂಡುಗಳ ಕ್ಲಿಪ್‌ನಲ್ಲಿ ಕಾರ್ಪೆಟ್ ತರಹದ ವಸ್ತುವನ್ನು ನೇರವಾಗಿ ರಸ್ತೆಯ ಕೆಳಗೆ ಇರಿಸಲಾಗಿದೆ, ಇದನ್ನು ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ್ದಾರೆ. ಕ್ಲಿಪ್‌ನಲ್ಲಿ ಸ್ಥಳೀಯ ಗುತ್ತಿಗೆದಾರನ ಕಳಪೆ … Continued

ಸಮುದ್ರಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ ಬಿಜೆಪಿ ಶಾಸಕ | ವೀಕ್ಷಿಸಿ

ಗುಜರಾತ್‌ನ ರಾಜುಲಾ ಕ್ಷೇತ್ರದ ಬಿಜೆಪಿ ಶಾಸಕ ಹೀರಾ ಸೋಲಂಕಿ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ಮೂರು ಜೀವಗಳನ್ನ ಉಳಿಸಿದ್ದಾರೆ. ನಾಲ್ವರು ಯುವಕರು ಗುಜರಾತ್‌ನ ರಾಜುಲಾ ಸಮೀಪದ ಪಟ್ವಾ ಗ್ರಾಮದ ಸಮುದ್ರ ತೀರದಲ್ಲಿರುವ ತೊರೆಗೆ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಅವರು ಮುಳುಗುತ್ತಿದ್ದರು. ಘಟನೆಯ ಬಗ್ಗೆ ತಿಳಿದ ರಾಜುಲಾ ಕ್ಷೇತ್ರದ ಬಿಜೆಪಿ ಶಾಸಕ ಹೀರಾ … Continued

ಡಾರ್ವಿನ್‌ನ ವಿಕಾಸದ ಸಿದ್ಧಾಂತದ ನಂತರ, ಆವರ್ತಕ ಕೋಷ್ಟಕವನ್ನು 10ನೇ ತರಗತಿಯ ಪಠ್ಯಪುಸ್ತಕದಿಂದ ಕೈಬಿಟ್ಟ ಎನ್‌ಸಿಇಆರ್‌ ಟಿ

ನವದೆಹಲಿ : ಎನ್‌ಸಿಇಆರ್‌ಟಿ (NCERT)ಯು ಕಳೆದ ತಿಂಗಳು 9 ಮತ್ತು 10 ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳಿಂದ ಚಾರ್ಲ್ಸ್ ಡಾರ್ವಿನ್ ಅವರ ವಿಕಾಸದ ಸಿದ್ಧಾಂತವನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡ ನಂತರ, 10 ನೇ ತರಗತಿಯ ಪಠ್ಯಪುಸ್ತಕಗಳಿಂದ ಈಗ ಆವರ್ತಕ ಕೋಷ್ಟಕವನ್ನು ತೆಗೆದುಹಾಕುವ ಮೂಲಕ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ … Continued

ತನ್ನ ಹೆಸರಿನ ಬಗ್ಗೆ ಸುಳ್ಳು ಹೇಳಿ ವ್ಯಕ್ತಿಯಿಂದ ಮಾಡೆಲ್ ಮೇಲೆ ಅತ್ಯಾಚಾರ, ಬಲವಂತವಾಗಿ ಮತಾಂತರಕ್ಕೆ ಯತ್ನ : ಮುಂಬೈ ಪೊಲೀಸರು

ಮುಂಬೈ: ಮದುವೆಯಾಗುವುದಾಗಿ ಭರವಸೆ ನೀಡಿ ಮತಾಂತರಕ್ಕೆ ಒತ್ತಾಯಿಸಿ ನಗರ ಮೂಲದ ಮಾಡೆಲ್ ಒಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. 23 ವರ್ಷದ ಮಹಿಳೆಯು “ದಿ ಕೇರಳ ಫೈಲ್ಸ್” ಚಲನಚಿತ್ರವನ್ನು ವೀಕ್ಷಿಸಿದ ನಂತರ ಪೊಲೀಸರನ್ನು ಸಂಪರ್ಕಿಸಲು ಪ್ರೇರೇಪಿಸಿದ್ದಳು ಎಂದು ಅವರ ದೂರಿನಲ್ಲಿ … Continued