ಬೆಚ್ಚಿಬೀಳಿಸುವ ಸಿಸಿಟಿವಿ ವೀಡಿಯೊ..| ಪೊಲೀಸ್‌ ಠಾಣೆಯಲ್ಲಿ ಶಿವಸೇನೆ ನಾಯಕನ ಮೇಲೆ ಗುಂಡಿನ ದಾಳಿ; ಬಿಜೆಪಿ ಶಾಸಕನ ಬಂಧನ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಶಿವಸೇನಾ ಬಣದ ಮುಖಂಡನ ಮೇಲೆ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಹಿಲ್‌ಲೈನ್ ಪೊಲೀಸ್ ಠಾಣೆಯಲ್ಲಿ ಈ ಘಟನೆ … Continued

ಬಿಜೆಪಿಯ ಭೀಷ್ಮ ಎಲ್ ಕೆ ಅಡ್ವಾಣಿಗೆ ‘ಭಾರತ ರತ್ನ’ : ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ. ಈ ವಿಷಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಎಲ್ ಕೆ ಅಡ್ವಾಣಿಯವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ನೀಡುತ್ತಿರುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು … Continued

ವೀಡಿಯೊ…| ಬಿಜೆಪಿ 400 ಸ್ಥಾನ ಗೆಲ್ಲಲಿದೆ : ರಾಜ್ಯಸಭೆಯಲ್ಲಿ ಹೀಗೆಂದು ಭವಿಷ್ಯ ನುಡಿದ ಮಲ್ಲಿಕಾರ್ಜುನ್ ಖರ್ಗೆ…!

ನವದೆಹಲಿ: ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಷಣವು ಆಡಳಿತ ಪಕ್ಷದ ಸಾಲಿನಲ್ಲಿ ಭಾರೀ ಖುಷಿಗೆ ಕಾರಣವಾದ ಪ್ರಸಂಗವು ರಾಜ್ಯಸಭೆಯಲ್ಲಿ ನಡೆದಿದೆ. ಖರ್ಗೆ ಅವರ ಮಾತಿಗೆ ಆಡಳಿತ ಪಕ್ಷದ ಸಂಸದರೆಲ್ಲರೂ ಬೆಂಚ್‌ ಗುದ್ದಿ ಸ್ವಾಗತಿಸಿದ ಅಪರೂಪದ ವಿದ್ಯಮಾನ ಇದಾಗಿದೆ. ಆಡಳಿತಾರೂಢ ಬಿಜೆಪಿ ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಅಬ್ ತೋ 400 ಪಾರ್’ ಹೋ … Continued

ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್‌ 40 ಸ್ಥಾನ ಗೆಲ್ಲುವುದು ಅನುಮಾನ: ಮಮತಾ ಬ್ಯಾನರ್ಜಿ

ಕೋಲ್ಕತ್ತ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಎದುರು ಕಾಂಗ್ರೆಸ್‌ 40 ಸ್ಥಾನಗಳನ್ನು ಪಡೆಯುವ ಬಗ್ಗೆ ಅನುಮಾನವಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಉಳಿಸಿಕೊಂಡಿರುವ ಬಾಕಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಡೆದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಗಾಳದ ಮೂಲಕ ಸಂಚರಿಸುವ ಭಾರತ … Continued

ಕೆಜಿಗೆ 29 ರೂ.ಗಳಂತೆ ‘ಭಾರತ ರೈಸ್’ ಅಕ್ಕಿ ಮಾರಾಟ ಮಾಡಲಿದೆ ಕೇಂದ್ರ ಸರ್ಕಾರ

ನವದೆಹಲಿ: ಜನಸಾಮಾನ್ಯರಿಗೆ ಅನುಕೂಲವಾಗಲು ಮುಂದಿನ ವಾರದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ‘ಭಾರತ ರೈಸ್’ ಅನ್ನು ಪ್ರತಿ ಕೆಜಿಗೆ 29 ರೂ.ಗಳಿಗೆ ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ಹಾಗೂ ಅದರ ನಿಯಂತ್ರಣದ ಭಾಗವಾಗಿ ಅಕ್ಕಿ/ಭತ್ತದ ದಾಸ್ತಾನಿನ ಬಗ್ಗೆ ಮಾಹಿತಿ ನೀಡುವಂತೆ ವ್ಯಾಪಾರಿಗಳಿಗೆ ನಿರ್ದೇಶನ ನೀಡಿದೆ. ಕಳೆದ ಒಂದು ವರ್ಷದಲ್ಲಿ ಅಕ್ಕಿ ಬೆಲೆ ಸುಮಾರು 15 ಪ್ರತಿಶತದಷ್ಟು … Continued

ಕಾಶಿ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪ್ರಾರ್ಥನೆಗೆ ಅನುಮತಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಅಲಾಹಾಬಾದ್‌ ಹೈಕೋರ್ಟ್‌ ನಕಾರ

ಲಕ್ನೋ: ವಾರಾಣಸಿಯ ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಹಿಂದೂ ಪಕ್ಷಕಾರರಿಗೆ ಪ್ರಾರ್ಥನೆ ಮತ್ತು ಪೂಜೆ ನಡೆಸಲು ಅವಕಾಶ ನೀಡಿದ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಜಿಲ್ಲಾ ನ್ಯಾಯಾಲಯದ ಜನವರಿ 31ರ ಆದೇಶವನ್ನು ಜಾರಿಗೊಳಿಸಿದ ಪರಿಣಾಮವಾಗಿ ಜನವರಿ 17ರ ಆದೇಶಕ್ಕೆ ಈ ಸವಾಲನ್ನು ಸೇರಿಸಿ ಮುಸ್ಲಿಂ ಪಕ್ಷಕಾರರಿಗೆ (ಜಿಲ್ಲಾ … Continued

ತಮಿಳು ಸೂಪರ್‌ಸ್ಟಾರ್‌ ದಳಪತಿ ವಿಜಯ ರಾಜಕೀಯಕ್ಕೆ ಪದಾರ್ಪಣೆ : ಹೊಸ ʼರಾಜಕೀಯ ಪಕ್ಷʼ ಘೋಷಣೆ

ಚೆನ್ನೈ: ತಮಿಳು ನಟ ದಳಪತಿ ವಿಜಯ ಅವರು ಶುಕ್ರವಾರ ತಮ್ಮ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು, ‘ತಮಿಳಗ ವೆಟ್ರಿ ಕಳಗಂ’ ಹೆಸರಿನ ತಮ್ಮ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ಪಾರದರ್ಶಕ, ಜಾತಿ-ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ “ಮೂಲಭೂತ ರಾಜಕೀಯ ಬದಲಾವಣೆ” ಯ ಬದ್ಧತೆ ತಮ್ಮ ರಾಜಕೀಯ ಪಕ್ಷದ ಉದ್ದೇಶ ಎಂದು ಹೇಳಿದ್ದಾರೆ. ಕಳೆದ ವಾರ ಚೆನ್ನೈನಲ್ಲಿ ನಡೆದ … Continued

ಅಯೋಧ್ಯೆ ಬಾಲರಾಮನ ಕಣ್ತುಂಬಿಕೊಳ್ಳಲು ಭಕ್ತ ಸಾಗರ: 11 ದಿನದಲ್ಲಿ ರಾಮಮಂದಿರಕ್ಕೆ ಭೇಟಿ ನೀಡಿದವರು ಎಷ್ಟು ಗೊತ್ತಾ..?

ಅಯೋಧ್ಯಾ : ಜನವರಿ 22 ರಂದು ರಾಮಮಂದಿರದ ಉದ್ಘಾಟನೆ ನಂತರ, ಕಳೆದ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದ ಟ್ರಸ್ಟ್‌ನ ಕಚೇರಿ ಪ್ರಭಾರಿ ಪ್ರಕಾಶ ಗುಪ್ತಾ ಪ್ರಕಾರ, ಕಳೆದ 11 ದಿನಗಳಲ್ಲಿ ಸುಮಾರು 8 ಕೋಟಿ ರೂಪಾಯಿಗಳನ್ನು ಕಾಣಿಕೆ ಪೆಟ್ಟಿಗೆಗಳಲ್ಲಿ ಸಂಗ್ರಹವಾಗಿದೆ. ಚೆಕ್ ಮತ್ತು ಆನ್‌ಲೈನ್ ಮೂಲಕ ಪಡೆದ … Continued

‘ಹೈಕೋರ್ಟ್‌ಗೆ ಹೋಗಿ’: ಬಂಧನದ ವಿರುದ್ಧ ಹೇಮಂತ್ ಸೊರೇನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

ನವದೆಹಲಿ: ಭೂ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ನಾವು ಮಧ್ಯಪ್ರವೇಶಿಸುವುದಿಲ್ಲ, ಹೈಕೋರ್ಟ್‌ಗೆ ಹೋಗಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ, ಎಂ.ಎಂ. ಸುಂದರೇಶ ಮತ್ತು ಬೇಲಾ ಎಂ ತ್ರಿವೇದಿ … Continued

ರಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣದಲ್ಲಿ 15 ಪಿಎಫ್‌ಐ ಸದಸ್ಯರಿಗೆ ಮರಣದಂಡನೆ ವಿಧಿಸಿದ ನ್ಯಾಯಾಧೀಶರಿಗೆ ಬೆದರಿಕೆ : ನಾಲ್ವರ ಬಂಧನ

ಅಲಪ್ಪುಳ: ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣದಲ್ಲಿ 15 ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಿದ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ-ಐ ನ್ಯಾಯಾಧೀಶರಾದ ಶ್ರೀದೇವಿ ವಿ.ಜಿ. ಅವರಿಗೆ ಬೆದರಿಕೆ ಹಾಕಿದ ಆರೋಪದಡಿ ನಾಲ್ವರನ್ನು ಜಿಲ್ಲಾ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮನ್ನಂಚೇರಿಯ ಕುಂಬಳತುವೇಲಿಯ ನಜೀರ್ ಮೋನ್ (47), ತಿರುವನಂತಪುರಂನ ಮಂಗಳಪುರಂನ ರಫಿ ಬಿ, 38, … Continued