ಚಂಡೀಗಢ ಮೇಯರ್ ಚುನಾವಣೆ : ಇಂಡಿಯಾ ಮೈತ್ರಿಕೂಟದ ವಿರುದ್ಧ ಬಿಜೆಪಿಗೆ ಜಯ, 8 ಮತಗಳು ಅಸಿಂಧು, ಎಎಪಿ-ಕಾಂಗ್ರೆಸ್ ಕೋರ್ಟ್‌ ಮೊರೆ

ಚಂಡೀಗಢ : ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಹಾಗೂ ಬಿಜೆಪಿಯ ಮೊದಲ ನೇರ ಹಣಾಹಣಿಯಲ್ಲಿ ಮಂಗಳವಾರ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜಕುಮಾರ ಸೋಂಕರ್ ಅವರು ಗೆಲುವು ಸಾಧಿಸಿದ್ದಾರೆ. 8 ಮತಗಳು ಅಸಿಂಧುವಾದ ನಂತರ ಅವರು ಎಎಪಿ-ಕಾಂಗ್ರೆಸ್ ಜಂಟಿ ಅಭ್ಯರ್ಥಿ ಕುಲದೀಪ್ ಸಿಂಗ್ ಅವರನ್ನು ಸೋಲಿಸಿದ್ದಾರೆ. ಪದನಿಮಿತ್ತ ಸದಸ್ಯ ಹಾಗೂ ಸಂಸದೆ ಕಿರಣ್ ಖೇರ್ … Continued

ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಹತ್ಯೆ: ಕೇರಳದ 15 ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ

 ಕೊಚ್ಚಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಹಾಗೂ ಬಿಜೆಪಿ ನಾಯಕ ರಂಜಿತ್‌ ಶ್ರೀನಿವಾಸನ್‌ ಅವರ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಗೆ ಸಂಬಂಧಿಸಿದ 15 ಮಂದಿಗೆ ಕೇರಳದ ಮಾವೇಲಿಕರ ಅಡಿಷನಲ್ ಸೆಷನ್ಸ್ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿ ಮಂಗಳವಾರ (ಜನವರಿ 30) ತೀರ್ಪು ಪ್ರಕಟಿಸಿದೆ. ಕಳೆದ ವಾರ 15 ಮಂದಿ ತಪ್ಪಿತಸ್ಥರೆಂದು … Continued

ಇ.ಡಿ.ಯಿಂದ ಬಂಧನದ ಭೀತಿ: ಅಜ್ಞಾತ ಸ್ಥಳಕ್ಕೆ ತೆರಳಿದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್

ನವದೆಹಲಿ : ಭೂ ಅಕ್ರಮ ಹಗರಣ ಸಂಬಂಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತಂಡವು ನವದೆಹಲಿಯಲ್ಲಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಮಧ್ಯರಾತ್ರಿ ಅಜ್ಞಾತ ಸ್ಥಳಕ್ಕೆ ತೆರಳಿರುವ ಮುಖ್ಯಮಂತ್ರಿ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಹಲವು ಬಾರಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಗೈರಾಗಿದ್ದ ಸೊರೇನ್‌ ಅವರಿಗೆ … Continued

ರಾಮಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ, ಬೆದರಿಕೆ ಕರೆ

ನವದೆಹಲಿ: ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಭಾಗವಹಿಸಿದ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮುಖ್ಯಸ್ಥ ಡಾ.ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಫತ್ವಾವನ್ನು ಭಾನುವಾರ ಹೊರಡಿಸಲಾಗಿದೆ. ಆದರೆ ರಾಮ ಮಂದಿರದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಿನದಿಂದಲೂ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು … Continued

ಕೆರೆಗೋಡು ಹನುಮ ಧ್ವಜ ಪ್ರಕರಣ: ಪಿಡಿಒ ತಲೆದಂಡ

ಮಂಡ್ಯ : ಮಂಡ್ಯದ ಕೆರಗೋಡು (Keragodu) ಗ್ರಾಮದ ಧ್ವಜ ವಿವಾದ ಪ್ರಕರಣದಲ್ಲಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕೆರಗೋಡು ಗ್ರಾಮ ಪಂಚಾಯತ ಪಿಡಿಒ ಜೀವನ್‌.ಬಿ.ಎಂ ಅವರನ್ನು ಸರ್ಕಾರ ಅಮಾನತು ಮಾಗಿದೆ. ಐದು ಕಾರಣಗಳನ್ನು ನೀಡಿ ಪಿಡಿಒ ಅವರನ್ನು ಅಮಾನತು ಮಾಡಿ ಮಂಡ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ತನ್ವೀರ್ ಆಸೀಫ್ ಸೇಠ್ ಆದೇಶ … Continued

ಕ್ಷಮಿಸಿ..ಮಮ್ಮಿ, ಪಪ್ಪಾ.. ಜೆಇಇ ಬರೆಯಲು ನನ್ನಿಂದ ಸಾಧ್ಯವಿಲ್ಲ.. ಇದು ನನ್ನ ಕೊನೆಯ ಆಯ್ಕೆ: ಡೆತ್‌ ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಕೋಟಾ(ರಾಜಸ್ಥಾನ) : ರಾಜಸ್ಥಾನದ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಟಾದ ಬೋರ್ಖೇಡಾ ಪ್ರದೇಶದ 18 ವರ್ಷದ ನಿಹಾರಿಕಾ ಸಿಂಗ್ ಅವರು ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದಳು ಮತ್ತು ಆಕೆ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಟುಂಬದವರು ತಕ್ಷಣವೇ ಆಸ್ಪತ್ರೆಗೆ … Continued

ಸಿಮಿ ಸಂಘಟನೆಯನ್ನು ಮತ್ತೆ 5 ವರ್ಷಗಳ ಕಾಲ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(SIMI)ವನ್ನು “ಕಾನೂನುಬಾಹಿರ ಸಂಘಟನೆ” ಎಂದು ಘೋಷಿಸಲಾಗಿದೆ ಮತ್ತು ಕಠಿಣ ಭಯೋತ್ಪಾದನೆ-ವಿರೋಧಿ ಅಡಿಯಲ್ಲಿ ಅದರ ಮೇಲಿನ ನಿಷೇಧವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಪ್ರಕಟಿಸಿದ್ದಾರೆ. ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಲ್ಲಿ ತೊಡಗಿರುವ ಸಂಘಟನೆಯು ಭಾರತದ ಸಾರ್ವಭೌಮತೆ, … Continued

15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ

ನವದೆಹಲಿ: ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯನ್ನು ಘೋಷಿಸಿದ್ದು, ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದ್ದು, ಫೆಬ್ರವರಿ 27 ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅಧಿಕೃತ ಟಿಪ್ಪಣಿಯ ಪ್ರಕಾರ, 15 ರಾಜ್ಯಗಳಿಂದ ಚುನಾಯಿತರಾದ 56 … Continued

‘2029ರ ಚುನಾವಣೆಗೆ ಸಿದ್ಧತೆ’: ಭಾರತ ಜೋಡೋ ನ್ಯಾಯ ಯಾತ್ರೆ ಬಗ್ಗೆ ಸ್ವಪಕ್ಷವನ್ನೇ ಟೀಕಿಸಿದ ಕಾಂಗ್ರೆಸ್ ಮುಖಂಡ

ನವದೆಹಲಿ: ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ ಕೃಷ್ಣಂ ಅವರು ಸೋಮವಾರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು “ರಾಜಕೀಯ ಪ್ರವಾಸೋದ್ಯಮ” ಎಂದು ಕರೆದಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಇತರ ಪಕ್ಷಗಳು ತಯಾರಿ ನಡೆಸುತ್ತಿರುವಾಗ ತಮ್ಮ ಪಕ್ಷವು “ಪ್ರಯಾಣ” ಮಾಡುತ್ತಿದೆ ಎಂದು ಅವರು ಸ್ವಪಕ್ಷವನ್ನೇ ಟೀಕಿಸಿದ್ದಾರೆ. “ಕಾಂಗ್ರೆಸ್ ಪಕ್ಷವು ಕೆಲವು ಶ್ರೇಷ್ಠ … Continued

ತನ್ನ ಅರ್ಧ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಹಿಳೆಯನ್ನು ಮದುವೆಯಾದ 103 ವರ್ಷದ ವ್ಯಕ್ತಿ…!

ಭೋಪಾಲ್: 104 ವರ್ಷದ ಸ್ವಾತಂತ್ರ್ಯ ಹೋರಾಟಗಾರರಾದ ಹಬೀಬ್ ನಜರ್ ಸಾಹೇಬ್ ಅವರು ಕೆಲದಿನಗಳಿಂದ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ, ಅವರ ಒಂದು ವೀಡಿಯೊ ವೈರಲ್ ಆಗುತ್ತಿದೆ, ಅದರಲ್ಲಿ ಅವರು ತಮ್ಮ 103 ನೇ ವಯಸ್ಸಿನಲ್ಲಿ ವಿವಾಹವಾದರು ಎಂದು ಹೇಳಲಾಗುತ್ತಿದೆ. ಈ ವೀಡಿಯೊ ಈಗ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ ಈಗ ಅವರ ವಯಸ್ಸು 104 ವರ್ಷಗಳು. ಅವರು ಮದುವೆಯಾದ ಮಹಿಳೆಗೆ … Continued