ಎಲ್ಲೆ ಮೀರಿದ ಪ್ರೀತಿ..! ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಲು ಭಾರತಕ್ಕೆ ಹಾರಿ ಬಂದ ಸ್ವೀಡನ್‌ ಮಹಿಳೆ

ಇಟಾಹ್ (ಉತ್ತರ ಪ್ರದೇಶ): ಪ್ರೀತಿಗೆ ಯಾವುದೇ ಗಡಿಗಳಿಲ್ಲ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಸ್ವೀಡನ್ ಮಹಿಳೆಯೊಬ್ಬರು ಸ್ಥಳೀಯ ನಿವಾಸಿಯನ್ನು ವಿವಾಹವಾದಾಗ ಉತ್ತರ ಪ್ರದೇಶದ ಇಟಾಹ್ ಜನರು ಇದೇ ರೀತಿಯ ಘಟನೆಗೆ ಸಾಕ್ಷಿಯಾದರು. ಸ್ವೀಡನ್ನಿನ ಕ್ರಿಸ್ಟನ್ ಲೀಬರ್ಟ್ ಎಂಬವರು ಶುಕ್ರವಾರ ಉತ್ತರ ಪ್ರದೇಶದ ಇಟಾಹ್‌ನಲ್ಲಿರುವ ಶಾಲೆಯೊಂದರಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ಫೇಸ್‌ಬುಕ್‌ನಲ್ಲಿ ಭೇಟಿಯಾದ ಪವನ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ … Continued

ಒಡಿಶಾ ಆರೋಗ್ಯ ಸಚಿವ ನಬಕಿಶೋರ್ ದಾಸ್ ಮೇಲೆ ಗುಂಡು ಹಾರಿಸಿದ ಪೊಲೀಸ್‌ ಅಧಿಕಾರಿ : ಆಸ್ಪತ್ರೆಗೆ ದಾಖಲು

ಭುವನೇಶ್ವರ: ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬಕಿಶೋರ್ ದಾಸ್ ಅವರ ಮೇಲೆ ಭಾನುವಾರ ಝಾರ್ಸುಗುಡಾ ಜಿಲ್ಲೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ್ದಾನೆ. ಎದೆಗೆ ಗುಂಡು ತಗುಲಿದ ನಬಾ ದಾಸ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಜಿಲ್ಲೆಯ ಬ್ರಜರಾಜನಗರ ಪಟ್ಟಣದಲ್ಲಿ ಸಚಿವರು ಸಭೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ದಾಸ್ ಮೇಲೆ … Continued

‘ದೇಶ್ ಕೊ ತೋಡನೆ ಕೆ ಬಹಾನೆ…’: ಬಿಬಿಸಿ ಸಾಕ್ಷ್ಯಚಿತ್ರದ ವಿವಾದದ ನಡುವೆ ದೇಶದಲ್ಲಿ ವಿಭಜನೆ ಸೃಷ್ಟಿಸುವ ಪ್ರಯತ್ನಗಳ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ಭಿನ್ನಾಭಿಪ್ರಾಯಗಳನ್ನು ಬಿತ್ತುವ ಮತ್ತು ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಆದರೆ ಅಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ದೆಹಲಿ ಕಂಟೋನ್ಮೆಂಟ್‌ನ ಕರಿಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಭಾರತವು ಭವ್ಯತೆಯನ್ನು ಸಾಧಿಸಬೇಕಿದ್ದರೆ ಏಕತೆಯ ಮಂತ್ರವೊಂದೇ ಮಾರ್ಗವಾಗಿದೆ … Continued

ಚೀನಾ 1962ರಲ್ಲಿ ಭಾರತದ ಭೂಮಿ ಆಕ್ರಮಿಸಿಕೊಂಡಿತ್ತು: ರಾಹುಲ್ ಗಾಂಧಿ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ವಾಗ್ದಾಳಿ ನಡೆಸಿದ್ದು, ಚೀನಾ ಆಕ್ರಮಿಸಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳುವ ಭೂಮಿಯನ್ನು ವಾಸ್ತವವಾಗಿ 1962ರಲ್ಲಿ ಚೀನಾ ಆಕ್ರಮಿಸಿಕೊಂಡಿದೆ ಎಂದು ಹೇಳಿದ್ದಾರೆ. ಕೇವಲ ರಾಜಕೀಯಕ್ಕಾಗಿ ಕೆಲವರು ಉದ್ದೇಶಪೂರ್ವಕವಾಗಿ ಚೀನಾ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇದು ಇತ್ತೀಚೆಗೆ ನಡೆದಿದೆ … Continued

ಪ್ರಧಾನಿ ಮೋದಿ ಕುರಿತು ಬಿಬಿಸಿ ಸರಣಿ ವಿವಾದ : ಬ್ರಿಟೀಷರ ದೌರ್ಜನ್ಯದ ಕುರಿತು ಬಿಬಿಸಿ ಸಾಕ್ಷ್ಯಚಿತ್ರ ಯಾಕೆ ಮಾಡಿಲ್ಲ-ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನೆ

ನವದೆಹಲಿ: ಗುಜರಾತ್ ಗಲಭೆ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿದವರು ಬ್ರಿಟಿಷರ ದೌರ್ಜನ್ಯದ ಬಗ್ಗೆ ಏಕೆ ಸರಣಿ ಮಾಡಲಿಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದಾರೆ. ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ವಿದೇಶಿ ಸಾಕ್ಷ್ಯಚಿತ್ರ ತಯಾರಕರು “ನಿರಾಶೆ ಅನುಭವಿಸುತ್ತಿದ್ದಾರೆ” ಎಂದು ಅವರು ಹೇಳಿದರು. “ಭಾರತವು ಪ್ರಪಂಚದಾದ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಆದ್ದರಿಂದ ಈ ಜನರು ನಿರಾಶೆ … Continued

ರಾಷ್ಟ್ರಪತಿ ಭವನದ ಐತಿಹಾಸಿಕ ಮೊಘಲ್ ಉದ್ಯಾನವನಕ್ಕೆ ‘ಅಮೃತ ಉದ್ಯಾನ’ ಎಂದು ಮರುನಾಮಕರಣ ಮಾಡಿದ ಸರ್ಕಾರ

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ಸ್ ಹೆಸರನ್ನು ಕೇಂದ್ರ ಸರ್ಕಾರ ಶನಿವಾರ ಬದಲಾವಣೆ ಮಾಡಿದ್ದು, ಅದಕ್ಕೆ ‘ಅಮೃತ ಉದ್ಯಾನ’ ಎಂದು ಮರುನಾಮಕರಣ ಮಾಡಿದೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸುವ ‘ಅಮೃತ ಮಹೋತ್ಸವ’ದ ಥೀಮ್‌ಗೆ ಅನುಗುಣವಾಗಿ ಕೇಂದ್ರ ಸರ್ಕಾರವು ಮೊಘಲ್ ಗಾರ್ಡನ್ಸ್ ಹೆಸರನ್ನು ಅಮೃತ ಉದ್ಯಾನ ಎಂದು ಬದಲಾಯಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ … Continued

ರಾಮಮಂದಿರ ನಿರ್ಮಾಣವಾಗುತ್ತಿದೆ, ಆದರೆ ರಾಮರಾಜ್ಯವೆಲ್ಲಿ?: ಪ್ರವೀಣ್ ತೊಗಾಡಿಯಾ ಪ್ರಶ್ನೆ

ಅಮೇಥಿ: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ದೇಶದಲ್ಲಿ ಇನ್ನೂ ರಾಮರಾಜ್ಯ ಮಾತ್ರ ಸ್ಥಾಪನೆಯಾಗಿಲ್ಲ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷದ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸಂಜೆ ಉತ್ತರ ಪ್ರದೇಶ ಅಮೇಥಿಯಲ್ಲಿನ ಪುರೆ ರಾಮದೀನ್ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೊಗಾಡಿಯಾ, “ಅಯೋಧ್ಯಾದಲ್ಲಿ ರಾಮಮಂದಿರ ತಲೆ ಎತ್ತುತ್ತಿದೆ. ಆದರೆ ‘ರಾಮರಾಜ್ಯ’ ಮಾತ್ರ ಎಲ್ಲಿಯೂ ಕಾಣಿಸುತ್ತಿಲ್ಲ. … Continued

ಗ್ವಾಲಿಯರ್ ಬಳಿ ಸುಖೋಯ್, ಮಿರಾಜ್ ಫೈಟರ್ ಜೆಟ್ ಪತನ : ಓರ್ವ ಪೈಲಟ್ ಸಾವು

ನವದೆಹಲಿ: ಸುಖೋಯ್ ಸು-30 ಮತ್ತು ಮಿರಾಜ್ 2000 ಎಂಬ ಎರಡು ಯುದ್ಧ ವಿಮಾನಗಳು ಶನಿವಾರ ಮಧ್ಯಪ್ರದೇಶದ ಗ್ವಾಲಿಯರ್ ಬಳಿ ಪತನಗೊಂಡು ಭಾರತೀಯ ವಾಯುಪಡೆಯ ಪೈಲಟ್ ಮೃತಪಟ್ಟಿದ್ದಾರೆ. Su-30 ನಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಮಿರಾಜ್‌ನಲ್ಲಿನ ಪೈಲಟ್ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ನಂತರ ಮೃತಪಟ್ಟಿದ್ದಾರೆ. ಪತನಗೊಂಡ ವಿಮಾನದ ಅವಶೇಷಗಳು ರಾಜಸ್ಥಾನದ ಭರತ್‌ಪುರ ಮತ್ತು ಮಧ್ಯಪ್ರದೇಶದ ಮೊರೆನಾದಲ್ಲಿ … Continued

ದಿನಕ್ಕೆ 500 ರೂ.ದುಡಿಯುವ ರಸ್ತೆ ಬದಿ ಬಟ್ಟೆ ವ್ಯಾಪಾರಿ ಮೇಲೆ 366 ಕೋಟಿ ರೂ. ಜಿಎಸ್‌ಟಿ ವಂಚನೆ ಕೇಸ್‌…!

ಆಗ್ರಾ: ಉತ್ತರ ಪ್ರದೇಶದ ಆಗ್ರಾದಿಂದ ಬೀದಿಬದಿಯಲ್ಲಿ ಬಟ್ಟೆ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿಬದಿ ವ್ಯಾಪಾರಿಯೊಬ್ಬರ ಮೇಲೆ 366 ಕೋಟಿ ಜಿಎಸ್‌ಟಿ ವಂಚನೆ ಆರೋಪ ಹೊರಿಸಿದ ಆಘಾತಕಾರಿ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಬಟ್ಟೆ ಮಾರಾಟಗಾರ ದಿನಕ್ಕೆ 500 ರೂ.ಗಳನ್ನು ದುಡಿಯುತ್ತಾರೆ. ಅವರ ಮೇಲೆ 366 ಕೋಟಿ ರೂ.ಗಳ ಜಿಎಸ್‌ಟಿ ವಂಚನೆ ಆರೋಪ ಹೊರಿಸಲಾಗಿದೆ…! ವ್ಯಕ್ತಿಯನ್ನು … Continued

ಈ 5 ಅದಾನಿ ಷೇರುಗಳಲ್ಲಿ ತೀವ್ರ ಕುಸಿತ: ಎರಡು ದಿನಗಳಲ್ಲಿ ₹16,580 ಕೋಟಿ ಕಳೆದುಕೊಂಡ ಎಲ್‌ಐಸಿ…!

ಮುಂಬೈ: ಸ್ಟಾಕ್ ಮಾರ್ಕೆಟ್ ರಕ್ತಪಾತದ ಮಧ್ಯೆ, ಹಿಂಡೆನ್‌ಬರ್ಗ್ ರಿಸರ್ಚ್ ವರದಿಯು ಅದಾನಿ ಸಮೂಹದ ಷೇರುಗಳಿಗೆ ಮತ್ತಷ್ಟು ಹಾನಿ ಮಾಡಿದೆ. ಕಳೆದ ಎರಡು ಅವಧಿಗಳಲ್ಲಿ, ಅದಾನಿ ಸಮೂಹದ ಷೇರುಗಳು ಪ್ರಮುಖ ಬೆಂಚ್‌ಮಾರ್ಕ್ ಸೂಚ್ಯಂಕಗಳಿಗಿಂತ ಬಹಳ ಕುಸಿದಿದೆ. ಇದು ಅದರ ಚಿಲ್ಲರೆ ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ಭಾರಿ ನಷ್ಟ ಉಂಟು ಮಾಡಲು ಕಾರಣವಾಯಿತು. ಭಾರತದ ಜೀವ ವಿಮಾ ನಿಗಮವು … Continued