ಜಮ್ಮು: ದೋಡಾದಲ್ಲಿ ಬಸ್ಸು ಕಂದರಕ್ಕೆ ಉರುಳಿ 36 ಸಾವು

ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಬಸ್ ಕಮರಿಗೆ ಬಿದ್ದ ಪರಿಣಾಮ 36 ಮಂದಿ ಮೃತಪಟ್ಟಿದ್ದಾರೆ ಹಾಗೂ 19 ಮಂದಿ ಗಾಯಗೊಂಡಿದ್ದಾರೆ. 55 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಬಟೋಟೆ-ಕಿಶ್ತ್ವಾರ್ ರಾಷ್ಟ್ರೀಯ ಹೆದ್ದಾರಿಯ ಟ್ರುಂಗಲ್-ಅಸ್ಸರ್ ಬಳಿ ರಸ್ತೆಯಿಂದ ಸ್ಕಿಡ್ ಆಗಿ 300 ಅಡಿ ಕೆಳಕ್ಕೆ ಬಿದ್ದಿದೆ ಎಂದು ಜಮ್ಮು ವಿಭಾಗೀಯ ಆಯುಕ್ತ ರಮೇಶ್ ಕುಮಾರ್ ತಿಳಿಸಿದ್ದಾರೆ. “ಅಪಘಾತದ … Continued

ಐಶ್ವರ್ಯಾ ರೈ ಬಚ್ಚನ್ ಬಗ್ಗೆ ವಿವಾದಾತ್ಮಕ ಹೇಳಿಕೆ : ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಅಬ್ದುಲ್ ರಜಾಕ್

ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ರಜಾಕ್ ಅನುಚಿತವಾದ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಸಹ ಕ್ರಿಕೆಟಿಗರಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನ ಮತ್ತು ಕೋಚಿಂಗ್ ತಂತ್ರಗಳ ಬಗ್ಗೆ ರಜಾಕ್ ಮಾಧ್ಯಮಗಳನ್ನು ಉದ್ದೇಶಿಸಿ … Continued

ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ನಿಧನ

ಮುಂಬೈ : ಸಹಾರಾ ಸಮೂಹದ ಸಂಸ್ಥಾಪಕ ಸುಬ್ರತಾ ರಾಯ್ ಅವರು ದೀರ್ಘಕಾಲದ ಅನಾರೋಗ್ಯದ ಕಾರಣದಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಆರೋಗ್ಯದಲ್ಲಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಭಾನುವಾರ ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಡಿಎಎಚ್) ದಾಖಲಿಸಲಾಗಿತ್ತು. ಸಹಾರಾ ಇಂಡಿಯಾ ಪರಿವಾರ್ ನಿಧನದ ಸುದ್ದಿಯನ್ನು ಖಚಿತಪಡಿಸಿದೆ. “ನಮ್ಮ ಗೌರವಾನ್ವಿತ … Continued

ವೀಡಿಯೊ…| ಬೈಕ್‌ ಓಡಿಸುತ್ತಿರುವಾಗಲೇ ಪಟಾಕಿ ಸಿಡಿಸುತ್ತ ಬೈಕ್‌ ಸಾಹಸದ ಸ್ಟಂಟ್‌ ಮಾಡಿದ ವ್ಯಕ್ತಿ : ವೀಡಿಯೊ ವೈರಲ್ ಆದ ನಂತರ ಬಂಧನ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್‌ನಲ್ಲಿ ಸ್ಟಂಟ್‌ ಮಾಡುತ್ತಿದ್ದು, ಬೈಕ್‌ ನಲ್ಲಿ ಪಟಾಕಿ ಸಿಡಿಸುತ್ತಲೇ ಬೈಕ್‌ ಸ್ಟಂಟ್‌ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಈತನ ಬೈಕ್ ಸ್ಟಂಟ್ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ತಮಿಳುನಾಡಿನ ತಿರುಚ್ಚಿಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ವೀಡಿಯೊದಲ್ಲಿ ವ್ಯಕ್ತಿ ತನ್ನ ಮೋಟಾರು ಬೈಕ್‌ಗೆ ಪಟಾಕಿಗಳನ್ನು ಜೋಡಿಸಿ, … Continued

ಜ.22ರಂದು ರಾಮ ಮಂದಿರ ಉದ್ಘಾಟನೆ : ದೇಶಾದ್ಯಂತ 10 ಕೋಟಿ ಕುಟುಂಬ ಆಹ್ವಾನಿಸಲು ನಿರ್ಧಾರ

ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾನ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜನವರಿ 22 ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ 10 ಕೋಟಿ ಕುಟುಂಬಗಳಿಗೆ ಆಹ್ವಾನ ನೀಡುವುದಾಗಿ ಹೇಳಿದೆ. ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಮಹಾಸಚಿವ ಚಂಪತ್ ರಾಯ್ ಅವರು, ಜನವರಿ 22 ರಂದು ದೇವಾಲಯದಲ್ಲಿ ಶ್ರೀರಾಮನ ಮೂರ್ತಿ ಸ್ಥಾಪಿಸಲಾಗುವುದು … Continued

32 ವರ್ಷಗಳ ದಾಂಪತ್ಯ ಜೀವನದ ನಂತರ ಪತ್ನಿಯಿಂದ ಬೇರ್ಪಟ್ಟ ಬಿಲಿಯನೇರ್ ಗೌತಮ್ ಸಿಂಘಾನಿಯಾ

ನವದೆಹಲಿ: ಬಿಲಿಯನೇರ್ ಉದ್ಯಮಿ ಗೌತಮ ಸಿಂಘಾನಿಯಾ ಅವರು ಪತ್ನಿ ನವಾಜ್‌ನಿಂದ ಬೇರ್ಪಡುವುದಾಗಿ ಸೋಮವಾರ ಪ್ರಕಟಿಸಿದ್ದಾರೆ. ತಾವಿಬ್ಬರೂ ವಿಭಿನ್ನ ಮಾರ್ಗಗಳನ್ನು ಅನುಸರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಸಿಂಘಾನಿಯಾ (58) ಅವರು 1999 ರಲ್ಲಿ ಸಾಲಿಸಿಟರ್ ನಾದರ್ ಮೋದಿಯವರ ಪುತ್ರಿ ನವಾಜ್ ಮೋದಿ ಅವರನ್ನು ವಿವಾಹವಾದರು. ಅವರು ಎಂಟು ವರ್ಷಗಳ ಪ್ರಣಯದ ನಂತರ 1999 ರಲ್ಲಿ 29 ವರ್ಷ ವಯಸ್ಸಿನ … Continued

ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಚಿಲ್ಲರೆ ಹಣದುಬ್ಬರ

ನವದೆಹಲಿ : ಆಹಾರ ಬೆಲೆಯಲ್ಲಿ ಮತ್ತಷ್ಟು ಕುಸಿತದಿಂದಾಗಿ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ನಾಲ್ಕು ತಿಂಗಳ ಕನಿಷ್ಠ 4.87%ಕ್ಕೆ ಇಳಿದಿದೆ ಎಂದು ಗುರುವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು ತೋರಿಸಿವೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ 5.02 ಶೇಕಡಾ ಮತ್ತು ಆಗಸ್ಟ್ 2023 ರಲ್ಲಿ 6.83% ಇತ್ತು. ಅಕ್ಟೋಬರ್ 2022 ರಲ್ಲಿ, ಚಿಲ್ಲರೆ ಹಣದುಬ್ಬರ … Continued

ಆಘಾತಕಾರಿ…: ಹೋಮ್‌ಸ್ಟೇ ಉದ್ಯೋಗಿಗೆ ಬಲವಂತವಾಗಿ ಸಾರಾಯಿ ಕುಡಿಸಿ, ಥಳಿಸಿ ಸಾಮೂಹಿಕ ಅತ್ಯಾಚಾರ : ಮಹಿಳೆ ಸೇರಿ ಐವರ ಬಂಧನ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಐವರು ದುಷ್ಕರ್ಮಿಗಳು ಮಹಿಳೆಯೊಬ್ಬರಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ, ಆಕೆಗೆ ಥಳಿಸಿ ಹೋಮ್‌ಸ್ಟೇನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಭಯಾನಕ ಘಟನೆ ವರದಿಯಾಗಿದೆ. ತನ್ನ ಸ್ನೇಹಿತ ಹಾಗೂ ಇತರೆ ಕೆಲವರು ಬಲವಂತವಾಗಿ ತನಗೆ ಮದ್ಯಪಾನ ಮಾಡಿಸಿದ್ದು, ಬಳಿಕ ಕೊಠಡಿಯೊಂದಕ್ಕೆ ಎಳೆದೊಯ್ದರು. ಅದಕ್ಕೆ ವಿರೋಧಿಸಲು ಪ್ರಯತ್ನಿಸಿದಾಗ ಕೆಲವರು ಥಳಿಸಿದರು ಎಂದು ಅತ್ಯಾಚಾರಕ್ಕೆ … Continued

ರಾಸಾಯನಿಕ ಗೋದಾಮಿನಲ್ಲಿ ಬೆಂಕಿ: ಬಹುಮಹಡಿ ಕಟ್ಟಡಕ್ಕೆ ವ್ಯಾಪಿಸಿ 9 ಸಾವು

ಹೈದರಾಬಾದ್‌ : ಹೈದರಾಬಾದ್ ನಾಂಪಲ್ಲಿ ವಸತಿ ಕಟ್ಟಡದಲ್ಲಿ ಸೋಮವಾರ ಸಂಭವಿಸಿದ ಭಾರೀ ಬೆಂಕಿಯಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ದುರಂತದ ನಂತರ ಒಟ್ಟು 16 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ರಕ್ಷಣಾ ಮತ್ತು ತಂಪಾಗಿಸುವ ಕಾರ್ಯಾಚರಣೆ ನಡೆಯುತ್ತಿದೆ. ಮೇಲಿನ ಮಹಡಿಗಳಲ್ಲಿ ವಾಸಿಸುವ … Continued

ವಿಶ್ವಕಪ್ ಲೀಗ್‌ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರು…: ಬ್ಯಾಟಿಂಗ್‌, ಬೌಲಿಂಗ್‌ ನಲ್ಲಿ ಇವರೇ ಟಾಪರ್‌…

ಬೆಂಗಳೂರು: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿವೆ. ಭಾರತ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿವೆ. ಸೆಮಿಫೈನಲ್‌ ಪಂದ್ಯಗಳು ನವೆಂಬರ್‌ 15, 16ರಂದು ಕ್ರಮವಾಗಿ ಮುಂಬೈ ಮತ್ತು ಕೋಲ್ಕತ್ತದಲ್ಲಿ ನಡೆಯಲಿವೆ. ರೌಂಡ್‌ ರಾಬಿನ್‌ ಮಾದರಿಯ ಲೀಗ್‌ ಹಂತದಲ್ಲಿ ಎಲ್ಲ ತಂಡಗಳು ತಲಾ 9 ಪಂದ್ಯಗಳಲ್ಲಿ … Continued