ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕುಖ್ಯಾತ ದಂತಚೋರ ವೀರಪ್ಪನ್ ಪುತ್ರಿ

ದಂತಚೋರ ಹಾಗೂ ಗ್ಯಾಂಗಸ್ಟರ್‌ ವೀರಪ್ಪನ್ ಪುತ್ರಿ ವಿಜಯಲಕ್ಷ್ಮೀ ವೀರಪ್ಪನ್ ಈಗ ತಮಿಳಿನಲ್ಲಿ ನಿರ್ಮಾಣವಾದ ಮಾವೀರನ್ ಪಿಳ್ಳೈ ಸಿನೆಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಅದು ಕನ್ನಡಕ್ಕೂ ಡಬ್ ಆಗಲಿದೆ ಎಂದು ಹೇಳಲಾಗಿದೆ. ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗಾಗಿ ಎದುರು ನೋಡುತ್ತಿರುವ ನಿರ್ಮಾಕರು ಇತ್ತೀಚೆಗೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಮತ್ತು ಚಿತ್ರರಂಗದ ಇತರರ ಸಮ್ಮುಖದಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆ … Continued

ನಮೀಬಿಯಾದಿಂದ ತಂದಿದ್ದ ಒಂದು ಚೀತಾ ಸಾವು

ಭೋಪಾಲ್‌: ನಮೀಬಿಯಾದಿಂದ (Namibia) ಭಾರತಕ್ಕೆ ಕರೆತಂದಿದ್ದ ಎಂಟು ಚೀತಾಗಳ ಪೈಕಿ ಒಂದು ಸಾವಿಗೀಡಾಗಿದೆ. ಜನವರಿಯಲ್ಲಿ ಇದಕ್ಕೆ ಮೂತ್ರಪಿಂಡದ ಸೋಂಕು ಉಂಟಾಗಿದ್ದು ಸೋಮವಾರ ಮೃತಪಟ್ಟಿದೆ. ಇದು ಭಾರತಕ್ಕೆ ಬರುವಾಗಲೇ ಕಿಡ್ನಿ ತೊಂದರೆಯಿಂದ ಬಳಲುತ್ತಿತ್ತು ಎಂದು ಹೇಳಲಾಗಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಂದ ನಂತರ ಕೆಲ ಸಮಯದಲ್ಲಿಯೇ ಈ ಹೆಣ್ಣು ಚೀತಾ ಸಾಶಾ ಆಯಾಸ ಮತ್ತು ದೌರ್ಬಲ್ಯದ … Continued

ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಈಗ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ ನೋಟಿಸ್: ವರದಿ

ನವದೆಹಲಿ: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ರಾಹುಲ್ ಗಾಂಧಿ ಅವರಿಗೆ ದೆಹಲಿಯ ಲುಟ್ಯೆನ್ ವಲಯದ ತುಘಲಕ್ ಲೇನ್‌ನಲ್ಲಿರುವ ಅವರ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ನೋಟಿಸ್ ಬಂದಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದರೆ ನಿಯಮದ ಪ್ರಕಾರ ರಾಹುಲ್ ಗಾಂಧಿ ಅವರು 30 ದಿನಗಳಲ್ಲಿ ಮನೆ ಖಾಲಿ ಮಾಡಬೇಕು … Continued

ಲಂಚ ಪ್ರಕರಣ: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನ

ಬೆಂಗಳೂರು: ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ. ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಸೋಮವಾರ ವಜಾಗೊಳಿಸಿದ ನಂತರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಅರ್ಜಿ ವಜಾಗೊಂಡ ವೇಳೆ ಚನ್ನಗಿರಿಯಲ್ಲಿ ಸರ್ಕಾರಿ … Continued

ರಾಹುಲ್ ಗಾಂಧಿಯವರ ಸಾವರ್ಕರ್ ಹೇಳಿಕೆ ನಂತರ ಕಾಂಗ್ರೆಸ್ ಸಭೆಗೆ ಗೈರಾಗಲು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಿರ್ಧಾರ

ಮುಂಬೈ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ನಂತರ ಲೋಕಸಭಾ ಸದಸ್ಯತ್ವದಿಂದ ಅವರನ್ನು ಅನರ್ಹಗೊಳಿಸದ ನಂತರ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಮತ್ತು ತೆಲಂಗಾಣದ ಆಡಳಿತಾರೂಢ ಭಾರತ ರಕ್ಷಣಾ ಸಮಿತಿ ಜೊತೆಗಿನ ಸಂಬಂಧ ಸರಿಪಡಿಸುವತ್ತ ಹೆಜ್ಜೆ ಇಡಲು ಕಾಂಗ್ರೆಸ್‌ಗೆ ಸಹಾಯ ಮಾಡಿದಂತೆ ತೋರುತ್ತಿದೆ. ಆದರೆ ಇದೇ ವೇಳೆ ಮತ್ತೊಂದೆಡೆ ಹೊಸ ಬಿರುಕು ಕಾಣಿಸಿಕೊಂಡಿದೆ. … Continued

ಖಾತೆಯನ್ನು ವಂಚನೆ ಖಾತೆ ಎಂದು ವರ್ಗೀಕರಿಸುವ ಮೊದಲು ಸಾಲಗಾರರು ಹೇಳುವುದನ್ನೂ ಆಲಿಸಬೇಕು : ಸುಪ್ರೀಂ ಕೋರ್ಟ್

ನವದೆಹಲಿ : ಬ್ಯಾಂಕ್‌ಗಳು ಖಾತೆಗಳನ್ನು ವಂಚನೆ ಎಸಗಿರುವ ಖಾತೆ ಎಂದು ಘೋಷಿಸುವ ಮೊದಲು ಸಾಲಗಾರರ ಮಾತನ್ನೂ ಆಲಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು, ಸೋಮವಾರ ಹೇಳಿದೆ. ಖಾತೆಯನ್ನು ವಂಚನೆ ಎಂದು ಘೋಷಿಸುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ, ಹಾಗೂ ಕೇಂದ್ರವು ಪ್ರಶ್ನಿಸಿದ 2020 ರ ತೆಲಂಗಾಣ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಆದ್ದರಿಂದ, … Continued

ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟಿಸಿದ ಬಿಸಿಸಿಐ: ರವೀಂದ್ರ ಜಡೇಜಾಗೆ ಬಡ್ತಿ, ಕೆ.ಎಲ್‌. ರಾಹುಲ್‌ಗೆ ಭಾರೀ ಹಿನ್ನಡೆ-ಇಲ್ಲಿದೆ ಪಟ್ಟಿ

ನವದೆಹಲಿ: ಬೋರ್ಡ್ ಆಫ್ ಕ್ರಿಕೆಟ್ ಕಂಟ್ರೋಲ್ ಇನ್ ಇಂಡಿಯಾ (ಬಿಸಿಸಿಐ) 2022-23ರ ಋತುವಿನಲ್ಲಿ ಕೆಲವು ದೊಡ್ಡ ಬದಲಾವಣೆಗಳೊಂದಿಗೆ ನವೀಕರಿಸಿದ ಆಟಗಾರರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ. ಬಿಸಿಸಿಐನ ಹೊಸ ಪಟ್ಟಿಯಲ್ಲಿ ಕೆಲವು ಆಟಗಾರರು ಬಡ್ತಿ ಪಡೆದಿದ್ದರೆ, ಇತರರನ್ನು ಗ್ರೇಡ್‌ನಲ್ಲಿ ಡೌನ್‌ ಗ್ರೇಡ್‌ ಮಾಡಲಾಗಿದೆ ಅಥವಾ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ … Continued

ಶಾಲಾ ತಪಾಸಣೆ ವೇಳೆ ಪ್ರಾಂಶುಪಾಲರ ಕೊಠಡಿಯಲ್ಲಿ ಮದ್ಯದ ಬಾಟಲಿಗಳು, ಕಾಂಡೋಮ್‌ಗಳು ಪತ್ತೆ…!

ಮೊರೆನಾ : ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಮಿಷನರಿ ಶಾಲೆಯೊಂದಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶನಿವಾರ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದಾಗ ಪ್ರಿನ್ಸಿಪಾಲರ ಕೊಠಡಿಯಲ್ಲಿ ಮದ್ಯ ಮತ್ತು ಕಾಂಡೋಮ್ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಶಾಲೆಯನ್ನು ಸೀಲ್ ಮಾಡಲಾಗಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (SCPCR)ದ ತಂಡವು ಪ್ರಿನ್ಸಿಪಾಲರ ಕೊಠಡಿಯಲ್ಲಿ ಹಾಸಿಗೆಗಳು, ಮದ್ಯದ … Continued

ವೀರ್ ಸಾವರ್ಕರಗೆ ಅವಮಾನ ಮಾಡಿದ್ರೆ ಸಹಿಸಲ್ಲ, ಇದು ಮುಂದುವರಿದ್ರೆ ಮೈತ್ರಿಯಲ್ಲಿ ಬಿರುಕು : ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ ಉದ್ಧವ್ ಠಾಕ್ರೆ

ಮಾಲೆಗಾಂವ್(ಮಹಾರಾಷ್ಟ್ರ) : ವಿನಾಯಕ ಸಾವರ್ಕರ್ (ವೀರ್‌) ಅವರನ್ನು ಅವಮಾನಿಸಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿರುವ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ಸಾವರ್ಕರ್ ಅವರನ್ನು ಅವಹೇಳನ ಮಾಡಿದರೆ ವಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಮೂಡಲಿದೆ ಎಂದು ಭಾನುವಾರ ಎಚ್ಚರಿಸಿದ್ದಾರೆ. ಮಾಲೆಗಾಂವ್‌ನಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಅವರು ಹಿಂದುತ್ವ ಸಿದ್ಧಾಂತವಾದಿ … Continued

ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇ-ಮೇಲ್: ಜೋಧಪುರದ ವ್ಯಕ್ತಿಯ ಬಂಧನ

ಮುಂಬೈ : ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಇಮೇಲ್ ಕಳುಹಿಸಿದ್ದಕ್ಕಾಗಿ 21 ವರ್ಷದ ವ್ಯಕ್ತಿಯನ್ನು ರಾಜಸ್ಥಾನದ ಜೋಧಪುರದಲ್ಲಿ ಭಾನುವಾರ ಬಂಧಿಸಲಾಗಿದೆ. ಕಳೆದ ವರ್ಷ ಪಂಜಾಬಿ ಗಾಯಕನ ಹತ್ಯೆಯನ್ನು ಉಲ್ಲೇಖಿಸಿ ‘ನೀವು ಸಿಧು ಮೂಸ್ ವಾಲಾದಂತೆ ಕೊನೆಗೊಳ್ಳುತ್ತೀರಿ’ ಎಂದು ಬರೆದ ಇಮೇಲ್ ಅನ್ನು 2-3 ದಿನಗಳ ಹಿಂದೆ ಸಲ್ಮಾನ್‌ ಕಚೇರಿಗೆ ಕಳುಹಿಸಲಾಗಿದೆ. ಆರೋಪಿಯನ್ನು … Continued