ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಶುರುವಾಗಿಲ್ಲ, ಮತ್ತೊಂದು ಅಲೆ ಸಾಧ್ಯತೆ ಕಡಿಮೆ: ಐಸಿಎಂಆರ್‌

ನವದೆಹಲಿ: ದೇಶಾದ್ಯಂತ ಕೋವಿಡ್‌ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ನಿಧನಾವಾಗಿ ಏರುತ್ತಿರುವ ನಡುವೆಯೇ ಭಾರತದಲ್ಲಿ ನಾಲ್ಕನೇ ಅಲೆ ಬಂದಿಲ್ಲ, ಬರುವ ಸಾಧ್ಯತೆಯೂ ಕಡಿಮೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಹೇಳಿದೆ. ಪ್ರಸ್ತುತ ದೇಶದಲ್ಲಿನ ಕೋವಿಡ್‌ ಸೋಂಕಿನ ಪರಿಸ್ಥಿತಿಯನ್ನು ನಾಲ್ಕನೇ ಅಲೆ ಎಂದು ಹೇಳಲಾಗುವುದುಲ್ಲ. ಸೋಂಕು ಸ್ಥಳೀಯ ಮಟ್ಟದಲ್ಲಿದೆ ಇದೆಯಷ್ಟೇ ಎಂದು ಐಸಿಎಂಆರ್‌ ತಜ್ಞರು ಭಾನುವಾರ … Continued

ರಾಹುಲ್ ಗಾಂಧಿ ಭೇಟಿಗೆ ಅನುಮತಿ ನಿರಾಕರಿಸಿದ ಉಸ್ಮಾನಿಯಾ ವಿಶ್ವವಿದ್ಯಾಲಯ: ಕಾಂಗ್ರೆಸ್

ಹೈದರಾಬಾದ್: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕ್ಯಾಂಪಸ್‌ಗೆ ಭೇಟಿ ನೀಡಲು ಉಸ್ಮಾನಿಯಾ ವಿಶ್ವವಿದ್ಯಾಲಯದ ಆಡಳಿತವು ‘ಅನಧಿಕೃತವಾಗಿ’ ಅನುಮತಿ ನಿರಾಕರಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಕಾರ್ಯಕರ್ತರು, ಅದರಲ್ಲಿ ರಾಜ್ಯ ಸರ್ಕಾರ ಶಾಮೀಲಾಗಿದೆ ಎಂದು ಶನಿವಾರ ಆರೋಪಿಸಿದ್ದಾರೆ. ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಮುಖಂಡರು ಉಸ್ಮಾನಿಯಾ ವಿಶ್ವವಿದ್ಯಾಲಯದ ಕಲಾ ಕಾಲೇಜು ಎದುರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ … Continued

ಆಸ್ಪತ್ರೆಗೆ ದಾಖಲಾಗಿದ್ದ ನಟ ಧರ್ಮೇಂದ್ರ ಈಗ ವಾಪಸ್‌ ಮನೆಗೆ

ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಧರ್ಮೇಂದ್ರ ಮನೆಗೆ ಮರಳಿದ್ದಾರೆ. ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ಚಿತ್ರೀಕರಣದಲ್ಲಿದ್ದ ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ ಮತ್ತು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಧರ್ಮೇಂದ್ರ ಭಾನುವಾರ ಖಚಿತಪಡಿಸಿದ್ದಾರೆ. … Continued

ಮೇ 4ರ ನಂತರ ಮಹಾರಾಷ್ಟ್ರದ ಶಕ್ತಿ ನಿಮಗೆ ತೋರಿಸ್ತೇನೆ: ಧ್ವನಿವರ್ಧಕದ ಗಡುವು ಸಮೀಪಿಸಿದಂತೆ ಗುಡುಗಿದ ರಾಜ್ ಠಾಕ್ರೆ

ಔರಂಗಾಬಾದ್‌: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಭಾನುವಾರ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ, ಮೇ 4 ರೊಳಗೆ ಮಹಾರಾಷ್ಟ್ರದ ಮಸೀದಿಗಳಲ್ಲಿನ ಎಲ್ಲಾ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ, ಹನುಮಾನ್ ಚಾಲೀಸಾವನ್ನು ಮುಂದೆ ‘ಡಬಲ್ ಪವರ್’ ನಲ್ಲಿ ನುಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಮೇ 3 ರಂದು ಈದ್ ಇದೆ, ಹಬ್ಬಕ್ಕೆ ತೊಂದರೆ ಮಾಡಲು … Continued

ಮಿಜೋರಾಂನಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ: ನಾಲ್ವರ ಬಂಧನ

ಐಜ್ವಾಲ್ (ಮಿಜೋರಾಂ) : ಅಸ್ಸಾಂ ರೈಫಲ್ಸ್ ಭಾನುವಾರ ಮಿಜೋರಾಂನ ಐಜ್ವಾಲ್ ಜಿಲ್ಲೆಯಲ್ಲಿ 3,000 ಕೆಜಿ ಜಿಲೆಟಿನ್ ಕಡ್ಡಿಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ ಮತ್ತು ಈ ಸಂಬಂಧ ನಾಲ್ವರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. . ಕಳೆದ ಕೆಲವು ವರ್ಷಗಳಲ್ಲಿ ನಡೆದ ಅತಿದೊಡ್ಡ ಶಸ್ತ್ರಾಸ್ತ್ರಗಳ ವಶ ಎಂದು ಹೇಳಲಾಗಿದೆ. ಸುಳಿವಿನ ಮೇರೆಗೆ … Continued

ಭಾರತೀಯ ಮೂಲದ ನಂದ ಮುಲ್ಚಂದಾನಿ ಅಮೆರಿಕದ ಸಿಐಎಯ ಮೊದಲ ಮುಖ್ಯ ತಾಂತ್ರಿಕ ಅಧಿಕಾರಿ

ನವದೆಹಲಿ: ಭಾರತೀಯ ಮೂಲದ ವ್ಯಕ್ತಿ ನಂದ ಮುಲ್ಚಂದಾನಿ ಅವರು ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆಯ (CIA) ಮೊದಲ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಮುಲ್ಚಂದಾನಿ ದೆಹಲಿಯ ಬ್ಲೂಬೆಲ್ಸ್ ಸ್ಕೂಲ್ ಇಂಟರ್‌ನ್ಯಾಶನಲ್‌ನಲ್ಲಿ 1979 ಮತ್ತು 1987 ರ ನಡುವೆ ಅಧ್ಯಯನ ಮಾಡಿದವರು. ಸಿಐಎ ನಿರ್ದೇಶಕ ವಿಲಿಯಂ ಜೆ ಬರ್ನ್ಸ್ ಅವರು ಈ ಘೋಷಣೆ ಮಾಡಿದ್ದಾರೆ. CIA ಪ್ರಕಾರ, … Continued

ಉತ್ತರ ಪ್ರದೇಶದಲ್ಲಿ 53,942 ಧ್ವನಿವರ್ಧಕಗಳನ್ನು ತೆಗೆದುಹಾಕಿದ ಯೋಗಿ ಸರ್ಕಾರ

ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ನಿರ್ದೇಶನದ ಮೇರೆಗೆ ಭಾನುವಾರ ಬೆಳಿಗ್ಗೆ 7.00 ಗಂಟೆ ವರೆಗೆ ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳಿಂದ 53,942 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮಾತನಾಡಿ, “ಇಂದು ಬೆಳಿಗ್ಗೆ 7 … Continued

ಮರಾಠಿ ಮಾತನಾಡುವ ಕರ್ನಾಟಕ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿಸುವ ಹೋರಾಟಕ್ಕೆ ಬೆಂಬಲ: ಮತ್ತೆ ವಿವಾದದ ಕಿಡಿ ಹೊತ್ತಿಸಿದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್

ಪುಣೆ: ನೆರೆ ರಾಜ್ಯ ಕರ್ನಾಟಕದ ಗಡಿ ಭಾಗದಲ್ಲಿರುವ ಮರಾಠಿ ಮಾತನಾಡುವ ಜನರಿರುವ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೋರಾಟವನ್ನು ತಾವು ಬೆಂಬಲಿಸುವುದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದ ಸಂಸ್ಥಾಪನಾ ದಿನದ ಅಂಗವಾಗಿ ಪುಣೆ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, 1960 ರ ಈ ದಿನದಂದು ಮಹಾರಾಷ್ಟ್ರ ರಚನೆಯಾಗಿ 62 ವರ್ಷ … Continued

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ; ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್​ ಬಂಧನ

ತಿರುವನಂತಪುರಂ:: ಹಿರಿಯ ರಾಜಕೀಯ ನಾಯಕ, ಕೇರಳ ಜನಪಕ್ಷಂ (ಜಾತ್ಯತೀತ) ಮುಖಂಡ ಮತ್ತು ಕೇರಳದ ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಎರಟ್ಟುಪೇಟೆಯಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಮುಂಜಾನೆ ಬಂಧಿಸಲಾಗಿದೆ. ಗುರುವಾರ ತಿರುವನಂತಪುರಂನಲ್ಲಿ ನಡೆದ ‘ಅನನಾಥಪುರಿ ​​ಹಿಂದೂ ಮಹಾಸಮ್ಮೇಳನ’ದಲ್ಲಿ ಅವರು ಮಾಡಿದ ದ್ವೇಷದ ಭಾಷಣದ ನಂತರ ಈ ಬಂಧನ ನಡೆದಿದೆ. ಅವರನ್ನು ಕಸ್ಟಡಿಗೆ … Continued

ಪಟಿಯಾಲ ಘರ್ಷಣೆ: ಪ್ರಮುಖ ‘ಮಾಸ್ಟರ್ ಮೈಂಡ್’ ಬರ್ಜಿಂದರ್ ಸಿಂಗ್ ಪರ್ವಾನಾ ಬಂಧನ, ವಿವಾದಗಳು ಈತನಿಗೆ ಹೊಸದಲ್ಲ

ಪಟಿಯಾಲಾ ಘರ್ಷಣೆಯ ಹಿಂದಿನ ಪ್ರಮುಖ ಮಾಸ್ಟರ್ ಮೈಂಡ್ ಮತ್ತು ಪ್ರಮುಖ ಶಂಕಿತ ಬರ್ಜಿಂದರ್ ಸಿಂಗ್ ಪರ್ವಾನಾ ಅವನನ್ನು ಮೊಹಾಲಿಯಲ್ಲಿ ಪೊಲೀಸರು ಭಾನುವಾರ ಬೆಳಿಗ್ಗೆ ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಅವರು ಮುಂಬೈನಿಂದ ವಿಸ್ತಾರಾ ವಿಮಾನದಲ್ಲಿ ಬೆಳಿಗ್ಗೆ 7:20 ಕ್ಕೆ ಮೊಹಾಲಿಗೆ ಬಂದ ನಂತರ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಪಟಿಯಾಲ ಇನ್ಸ್‌ಪೆಕ್ಟರ್ ಶರ್ಮಿಂದರ್ ಸಿಂಗ್ ನೇತೃತ್ವದ ತಂಡವು … Continued