ತಾನು ಹೇಳಿದ ಅಭ್ಯರ್ಥಿಗೆ ಮತ ಹಾಕಲಿಲ್ಲವೆಂದು ಹೆಂಡತಿಗೆ ಹೊಡೆದು, ಮನೆಯಿಂದ ಹೊರಹಾಕಿದ ಪತಿ ಮಹಾಶಯ..!

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರು ಸೋಮವಾರ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿದ್ದು, ತಾನು ಸೂಚಿಸಿದ ಪಕ್ಷದ ಅಭ್ಯರ್ಥಿಗೆ ಮತ ಹಾಕದ ಕಾರಣಕ್ಕೆ ಪತ್ನಿಗೆ ಹೊಡೆದು ಮನೆಯಿಂದ ಹೊರಹಾಕಿದ ಮಹಿಳೆಯ ಪತಿ ಮತ್ತು ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ … Continued

ಚುನಾವಣೆಯಲ್ಲಿ ಸೋಲಿನ ಹೊರತಾಗಿಯೂ ಉತ್ತರಾಖಂಡ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಹೆಸರು ಘೋಷಿಸಿದ ಬಿಜೆಪಿ..!

ನವದೆಹಲಿ: 11 ದಿನಗಳ ಸಸ್ಪೆನ್ಸ್‌ಗೆ ತೆರೆ ಎಳೆದಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಉತ್ತರಾಖಂಡದ ಮುಂದಿನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅವರ ಹೆಸರನ್ನು ಸೋಮವಾರ ಘೋಷಿಸಿದೆ. ಉತ್ತರಾಖಂಡದ ಬಿಜೆಪಿಯ ಕೇಂದ್ರ ವೀಕ್ಷಕರಾದ ರಾಜನಾಥ್ ಸಿಂಗ್ ಮತ್ತು ಮೀನಾಕ್ಷಿ ಲೇಖಿ ಮತ್ತು ರಾಜ್ಯ ಚುನಾವಣಾ ವ್ಯವಹಾರಗಳ ಉಸ್ತುವಾರಿ ಪ್ರಲ್ಹಾದ್ ಜೋಶಿ ಭಾಗವಹಿಸಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ … Continued

ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್‌ಗೆ ಏ.4ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಎನ್‌ಸಿಪಿ ನಾಯಕ, ಸಚಿವ ನವಾಬ್ ಮಲಿಕ್ ಗೆ ನ್ಯಾಯಾಂಗ ಬಂಧನವನ್ನು ಏಪ್ರಿಲ್ 4ರ ವರೆಗೆ ವಿಸ್ತರಿಸಿ ಕೋರ್ಟ್‌ ಆದೇಶ ನೀಡಿದೆ. ನವಾಬ್ ಮಲಿಕ್ ಅವರಿಗೆ ಬೆನ್ನುನೋವಿನ ಕಾರಣ ಮನವಿ ಮೇರೆಗೆ ಹಾಸಿಗೆ, ಕುರ್ಚಿ ಮತ್ತು ಚಾಪೆಗಳ ಬಳಕೆಗೆ ಅನುಮತಿ ನೀಡಿದೆ. ಮನೆ ಆಹಾರಕ್ಕಾಗಿ ಅವರ ಅರ್ಜಿಯನ್ನು … Continued

ಸೈನ್ಯ ಸೇರಲು ಮಧ್ಯರಾತ್ರಿ ಓಡುವ 19 ವರ್ಷದ ಹುಡುಗನ ವೀಡಿಯೊ ವೈರಲ್ ಆದ ನಂತರ ಸಹಾಯಕ್ಕೆ ಮುಂದೆ ಬಂದ ನಿವೃತ್ತ ಲೆಫ್ಟಿನೆಂಟ್‌ ಜನರಲ್

ನವದೆಹಲಿ: ಸೈನ್ಯಕ್ಕೆ ಸೇರುವ ಸಲುವಾಗಿ ಮಧ್ಯ ರಾತ್ರಿ ಪ್ರತಿದಿನ ತನ್ನ ಕೆಲಸ ಶಿಫ್ಟ್‌ ಮುಗಿಸಿಕೊಂಡು ನೋಯ್ಡಾದ ರಸ್ತೆಯಲ್ಲಿ ಹತ್ತು ಕಿಮೀ ಓಡುವ ಉತ್ತರಾಖಂಡದ 19 ವರ್ಷದ ಹದಿಹರೆಯದ ಹುಡುಗನ ಸ್ಫೂರ್ತಿದಾಯಕ ವೀಡಿಯೊ ಸೋಮವಾರ, ಮಾರ್ಚ್ 21ರಂದು ಇಡೀ ದೇಶವು ಸಾಮಾಜಿಕ ಮಾಧ್ಯಮದಲ್ಲಿ ಕಾಳ್ಗಿಚ್ಚಿನಂತೆ ಹರಡಿ ಲಕ್ಷಾಂತರ ಜನರನ್ನು ತಲುಪಿದೆ. ನಿನ್ನೆಯವರೆಗೆ, ಉತ್ತರಾಖಂಡದ ಅಲ್ಮೋರಾದ ಹುಡುಗ ಪ್ರದೀಪ್ … Continued

ಪ್ರಧಾನಿ ಮೋದಿ- ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಶೃಂಗಸಭೆಗೆ ಮೊದಲು ಆಸ್ಟ್ರೇಲಿಯಾದಿಂದ ಮರಳಿ ಭಾರತಕ್ಕೆ ಬಂದ 29 ಪುರಾತನ ವಸ್ತುಗಳು

ಸೋಮವಾರ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯನ್ ಪ್ರಧಾನಿ ಸ್ಕಾಟ್ ಮಾರಿಸನ್ ನಡುವಿನ ವರ್ಚುವಲ್ ಸಭೆಯ ಮೊದಲು, ಭಾರತದ 29 ಪುರಾತನ ವಸ್ತುಗಳನ್ನು ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್‌ ಕಳುಹಿಸಲಾಗಿದೆ. ಪುರಾತನ ವಸ್ತುಗಳಲ್ಲಿ ಶಿವ ಮತ್ತು ಅವನ ಶಿಷ್ಯರು, ಶಕ್ತಿ, ಭಗವಾನ್ ವಿಷ್ಣು ಮತ್ತು ಅವನ ರೂಪಗಳು, ಜೈನ ಸಂಪ್ರದಾಯಗಳು, ಭಾವಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಸೇರಿವೆ. ಈ … Continued

ನೋಯ್ಡಾದಲ್ಲಿ ಮಧ್ಯರಾತ್ರಿಯಲ್ಲಿ ಪ್ರತಿದಿನ ರಸ್ತೆಯಲ್ಲಿ ಈ ಹುಡುಗ 10 ಕಿಮೀ ಓಡ್ತಾನೆ…! ಕಾರಣ ಕೇಳಿದ್ರೆ ನೀವೇ ಅಚ್ಚರಿ ಪಡ್ತೀರಾ..ವೀಕ್ಷಿಸಿ

ನವದೆಹಲಿ: ಮಧ್ಯರಾತ್ರಿ ನೋಯ್ಡಾ ರಸ್ತೆಯಲ್ಲಿ 19 ವರ್ಷದ ಹುಡುಗನೊಬ್ಬ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀಕ್ಷಣೆಗೆ ಒಳಗಾಗಿದೆ. ಪ್ರತಿದಿನ ಖಾಲಿ ಇರುವ ನೋಯ್ಡಾ ಬೀದಿಯಲ್ಲಿ ಹುಡುಗ ಓಡುವುದರ ಹಿಂದಿನ ಕಾರಣವೇನು ಎಂದು ತಿಳಿದರೆ ಅದು ಸ್ಫೂರ್ತಿದಾಯಕವಾಗಿದೆ. ನಮ್ಮ ಜೀವನದಲ್ಲಿನ ಸಣ್ಣದೊಂದು ಅಸ್ವಸ್ಥತೆಯ ಬಗ್ಗೆ ನಾವು ಹೇಳಿಕೊಳ್ಳುತ್ತಿರುವಾಗ, ಇಲ್ಲಿ ಉತ್ತರಾಖಂಡದ ಹುಡುಗ ಪ್ರದೀಪ್ ಮೆಹ್ರಾ ತನ್ನ … Continued

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಸಲಹೆಗಾರ ಫಾರೂಕ್ ಖಾನ್ ರಾಜೀನಾಮೆ, ಬಿಜೆಪಿಯಲ್ಲಿ ಪ್ರಮುಖ ಹುದ್ದೆ ನೀಡುವ ಸಾಧ್ಯತೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಅವರ ಸಲಹೆಗಾರ ಫಾರೂಕ್ ಖಾನ್ ರಾಜೀನಾಮೆ ನೀಡಿದ್ದು, ಬಿಜೆಪಿಯಲ್ಲಿ ಅವರು ದೊಡ್ಡ ಜವಾಬ್ದಾರಿ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಸಲಹೆಗಾರ ಫಾರೂಕ್ ಖಾನ್ ಭಾನುವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. 1990ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ … Continued

ಯುರೋಪಿನ ಅತಿ ದೊಡ್ಡ ಉಕ್ಕಿನ ಘಟಕ ರಷ್ಯಾ-ಉಕ್ರೇನ್ ಯುದ್ಧದಲ್ಲಿ ನಾಶ…ವೀಕ್ಷಿಸಿ

ಕೀವ್‌ (ಉಕ್ರೇನ್): ಯುರೋಪ್‌ನ ಅತಿದೊಡ್ಡ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಲ್ಲಿ ಒಂದಾದ ಅಜೋವ್‌ಸ್ಟಾಲ್, ಉಕ್ರೇನ್ ಬಂದರು ನಗರವಾದ ಮರಿಯುಪೋಲ್‌ಗೆ ರಷ್ಯಾದ ಪಡೆಗಳು ಮುತ್ತಿಗೆ ಹಾಕಿದ್ದರಿಂದ ತೀವ್ರವಾಗಿ ಹಾನಿಗೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಯುರೋಪ್‌ನಲ್ಲಿನ ಅತಿದೊಡ್ಡ ಲೋಹ ಘಟಕಗಳಲ್ಲಿ ಒಂದು ನಾಶವಾಗಿದೆ. ಉಕ್ರೇನ್‌ಗೆ ಆರ್ಥಿಕವಾಗಿ ನಷ್ಟವು ದೊಡ್ಡದಾಗಿದೆ. ಸುತ್ತಮುತ್ತಲಿನ ಪರಿಸರವು ಧ್ವಂಸಗೊಂಡಿದೆ ಎಂದು ಉಕ್ರೇನಿಯನ್ ಶಾಸಕಿ … Continued

ತೈಲ ರಾಜತಾಂತ್ರಿಕತೆಯ ನಂತರ, ರಷ್ಯಾದಿಂದ ಈಗ ಭಾರತೀಯ ಔಷಧೀಯ ಕಂಪನಿಗಳಿಗೆ ಉತ್ತೇಜನ

ನವದೆಹಲಿ: ನವದೆಹಯಲ್ಲಿರುವ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಅವರು ಮಾಸ್ಕೋದಿಂದ ಹೊರಡುವ ಪಾಶ್ಚಿಮಾತ್ಯ ತಯಾರಕರ ಸ್ಥಾನವನ್ನು ಭಾರತೀಯ ಔಷಧ ಕಂಪನಿಗಳು ಬದಲಿಸಬಹುದು ಹೇಳಿದ್ದಾರೆ ಎಂದು  ವರದಿಗಳು ತಿಳಿಸಿವೆ. ರಷ್ಯಾದ ಮಾರುಕಟ್ಟೆಯಿಂದ ಅನೇಕ ಪಾಶ್ಚಿಮಾತ್ಯ ಕಂಪನಿಗಳ ಹಿಂತೆಗೆದುಕೊಳ್ಳುವಿಕೆಯಿಂದಾಗಿ ಖಾಲಿಯಾದ ಆ ಜಾಗವನ್ನು ವಾಸ್ತವವಾಗಿ ಅನೇಕ ಕೈಗಾರಿಕೆಗಳಲ್ಲಿ, ನಿರ್ದಿಷ್ಟವಾಗಿ, ಔಷಧೀಯ ಕಂಪನಿಗಳನ್ನು ಭಾರತೀಯ ಕಂಪನಿಗಳು ಬದಲಿಸಬಹುದು ಎಂದು ರಷ್ಯಾದ … Continued

ಬೃಹತ್ ಬಳಕೆದಾರರಿಗೆ ಡೀಸೆಲ್ ಬೆಲೆ ಲೀಟರ್‌ಗೆ 25 ರೂ.ಗಳಷ್ಟು ಹೆಚ್ಚಳ

ನವದೆಹಲಿ: ಮುಂಬಯಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಏರಿಕೆಗೆ ಅನುಗುಣವಾಗಿ ಬೃಹತ್ ಬಳಕೆದಾರರಿಗೆ ಸಗಟು ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆಯನ್ನು ಲೀಟರ್‌ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ, ಆದರೆ ಪೆಟ್ರೋಲ್ ಬಂಕ್ ಗಳಲ್ಲಿ ಚಿಲ್ಲರೆ ದರಗಳು ಬದಲಾಗದೆ ಉಳಿದಿವೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೇ ಸುಳಿವು ಇದ್ದಂತೆ ತೈಲ … Continued