ರಷ್ಯಾ-ಉಕ್ರೇನ್ ಯುದ್ಧ ಮಧ್ಯೆಯೇ ಉಕ್ರೇನ್‌ ಜೊತೆ ಮಾತುಕತೆಗೆ ನಿಯೋಗ ಕಳುಹಿಸಲು ಸಿದ್ಧ ಎಂದ ರಷ್ಯಾ ಅಧ್ಯಕ್ಷ ಪುಟಿನ್..!

ಮಾಸ್ಕೋ: ಮಹತ್ವದ ಬೆಳವಣಿಗೆಯಲ್ಲಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ಜೊತೆ ಮಾತುಕತೆ ನಡೆಸಲು ನಿಯೋಗವನ್ನು ಕಳುಹಿಸಲು ಸಿದ್ಧವಾಗಿರುವುದಾಗಿ ಪ್ರಕಟಿಸಿದ್ದಾರೆ. ಸರ್ಕಾರಿ ಮಾಧ್ಯಮ ಸ್ಪುಟ್ನಿಕ್ ಪ್ರಕಾರ, ಪುಟಿನ್ ಅವರು ಉಕ್ರೇನ್‌ನೊಂದಿಗೆ ಮಾತುಕತೆಗಾಗಿ ಮಿನ್ಸ್ಕ್‌ಗೆ ನಿಯೋಗವನ್ನು ಕಳುಹಿಸಲು ಸಿದ್ಧರಾಗಿದ್ದಾರೆ. ವಿದೇಶಾಂಗ ಸಚಿವಾಲಯ, ರಕ್ಷಣಾ ಮತ್ತು ಆಡಳಿತ ಅಧಿಕಾರಿಗಳು ಸೇರಿದಂತೆ ರಷ್ಯಾದ ರಾಜತಾಂತ್ರಿಕ ನಿಯೋಗವನ್ನು ಮಿನ್ಸ್ಕ್‌ಗೆ ಕಳುಹಿಸಬಹುದು … Continued

ಉಕ್ರೇನ್ ಸೇನೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಮಾತುಕತೆಗೆ ಸಿದ್ಧ ಎಂದ ರಷ್ಯಾ

ಮಾಸ್ಕೋ: ದಾಳಿಯ ಎರಡನೇ ದಿನದಂದು ರಷ್ಯಾದ ಪಡೆಗಳು ಕೈವ್ ಅನ್ನು ಸಮೀಪಿಸುತ್ತಿರುವಾಗ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಶುಕ್ರವಾರ ಉಕ್ರೇನ್ ಅನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಮಾಸ್ಕೋ ಬಯಸಿದೆ ಎಂದು ಹೇಳಿದ್ದಾರೆ. ಉಕ್ರೇನ್ ಸೇನೆಯು ಹೋರಾಟವನ್ನು ನಿಲ್ಲಿಸಿದರೆ ರಷ್ಯಾ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು. “ಗುರುವಾರ ಮುಂಜಾನೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ … Continued

ಉಕ್ರೇನ್ ವರ್ಸಸ್‌ ರಷ್ಯಾ : ಎರಡು ದೇಶಗಳ ಮಿಲಿಟರಿ ಸಾಮರ್ಥ್ಯಗಳ ಮಾಹಿತಿ ಇಲ್ಲಿದೆ…

ರಷ್ಯಾ ಹಾಗೂ ಉಕೇನ್‌ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ದಿನಗಳ ನಂತರ ರಷ್ಯಾ ಗುರುವಾರ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತು. ಪೂರ್ವ ಉಕ್ರೇನಿನ ಕೈವ್, ಖಾರ್ಕಿವ್ ಮತ್ತು ಒಡೆಸ್ಸಾದಲ್ಲಿ ದೊಡ್ಡ ಸ್ಫೋಟಗಳು ಕೇಳಿಬರುತ್ತಿದ್ದಂತೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಭಯ ದೇಶಗಳ ನಡುವಿನ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸುವ ಯಾವುದೇ ವಿಶ್ವ ನಾಯಕರ ವಿರುದ್ಧ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ … Continued

ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತದ ಜೊತೆ ಮಾತುಕತೆ : ಅಮೆರಿಕ ಅಧ್ಯಕ್ಷ ಬಿಡೆನ್‌

ವಾಷಿಂಗ್ಟನ್: ರಷ್ಯಾದಿಂದ ಸೇನಾ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತದ ಜೊತೆ ಸಮಾಲೋಚನೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಹೇಳಿದ್ದಾರೆ. ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತದ ಜೊತೆ ನಾವು ಮಾತುಕತೆ ನಡೆಸಲಿದ್ದೇವೆ. ನಾವು ಅದನ್ನು ಇನ್ನೂ ಸಂಪೂರ್ಣವಾಗಿ ಬಗೆಹರಿಸಿಲ್ಲ” ಎಂದು ಶ್ವೇತಭವನದಲ್ಲಿ ಉಕ್ರೇನ್ ಸಂಘರ್ಷದ ಕುರಿತು ನಡೆಸಿದ ಸುದ್ದಿಗೋಷ್ಠಿ ವೇಳೆ ಅಮೆರಿಕ … Continued

ಉಕ್ರೇನ್ ಮೇಲೆ ಆಕ್ರಮಣದ ನಂತರ ರಷ್ಯಾ ಮೇಲೆ ನಿರ್ಬಂಧ ವಿಧಿಸಿದ ಅಮೆರಿಕ

ವಾಷಿಂಗ್ಟನ್: ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಷ್ಯಾವನ್ನು ಗುರಿಯಾಗಿಸಿಕೊಂಡು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಗುರುವಾರ ಹೊಸ ಸುತ್ತಿನ ನಿರ್ಬಂಧಗಳನ್ನು ಘೋಷಿಸಿದರು, ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರು “ಈ ಯುದ್ಧವನ್ನು ಆರಿಸಿಕೊಂಡರು” ಮತ್ತು ಅವರ ಕ್ರಮದ ಪರಿಣಾಮಗಳನ್ನು ಅವರ ದೇಶವು ಭರಿಸಲಿದೆ ಎಂದು ಹೇಳಿದ್ದಾರೆ. ದೇಶದ ಅತಿ ದೊಡ್ಡ ಬ್ಯಾಂಕ್ ಸ್ಬೆರ್‌ಬ್ಯಾಂಕ್ ಸೇರಿದಂತೆ … Continued

ರಷ್ಯಾದ ದಾಳಿಯಲ್ಲಿ ಉಕ್ರೇನ್​ನ 137 ಜನರ ಸಾವು; 316 ಜನರಿಗೆ ಗಾಯ

ಕ್ವೈವ್‌: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಮೊದಲ ದಿನದಲ್ಲಿ 137 ಜನರು ಮೃತಪಟ್ಟಿದ್ದಾರೆ ಹಾಗೂ 316 ಜನರಿಗೆ ಗಾಯಗೊಂಡಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ ಮೇಲೆ ಯುದ್ಧ ಘೋಷಿಸಿದ್ದರು. ಇದು ಯುರೋಪ್​ನಲ್ಲಿ ಎರಡನೇ ಮಹಾಯುದ್ಧದ ನಂತರ ನಡೆಯುತ್ತಿರುವ ಮೊದಲ ಭೀಕರ ಕದನವಾಗಿದೆ. ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ಅಲ್ಲಿನ ಪ್ರಮುಖ ನಗರಗಳ … Continued

ರಷ್ಯಾಕ್ಕೆ ಯಾಕೆ ಉಕ್ರೇನ್ ಬೇಕೇಬೇಕು..? ನ್ಯಾಟೋ ಕಡೆ ವಾಲಿದ್ದೇ ಉಕ್ರೇನ್‌ಗೆ ಮಾರಕವಾಯಿತೇ..?

ಜುಲೈ 2021 ರಲ್ಲಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ರೆಮ್ಲಿನ್ ವೆಬ್‌ಸೈಟ್‌ನಲ್ಲಿ ಲೇಖನವನ್ನು ಬರೆದಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾ ಏನು ಬಯಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಈ ಸುದೀರ್ಘ ಬರಹದಲ್ಲಿ, ಪುಟಿನ್ ರಷ್ಯನ್ನರು ಮತ್ತು ಉಕ್ರೇನಿಯನ್ನರನ್ನು “ಒಂದು ರಾಷ್ಟ್ರ” ಎಂದು ವಿವರಿಸಿದ್ದಾರೆ, ಡಿಸೆಂಬರ್ 1991 ರಲ್ಲಿ ಸೋವಿಯತ್ ಒಕ್ಕೂಟದ (ಯುಎಸ್ಎಸ್ಆರ್) ಪತನವನ್ನು “ಐತಿಹಾಸಿಕ … Continued

ವಿಶ್ವದ ಅತ್ಯಂತ ಭೀಕರ ಪರಮಾಣು ದುರಂತದ ಪ್ರದೇಶ ಚೆರ್ನೋಬಿಲ್ ರಷ್ಯಾ ಪಡೆಗಳ ವಶಕ್ಕೆ

ಕೈವ್: ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ ಎಂದು ಉಕ್ರೇನಿಯನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಗುರುವಾರ ಹೇಳಿದ್ದಾರೆ. ರಷ್ಯನ್ನರ ಸಂಪೂರ್ಣ ಅರ್ಥಹೀನ ದಾಳಿಯ ನಂತರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವು ಸುರಕ್ಷಿತವಾಗಿದೆ ಎಂದು ಹೇಳುವುದು ಅಸಾಧ್ಯ.ಇದು ಇಂದು ಯುರೋಪಿನ ಅತ್ಯಂತ ಗಂಭೀರ ಬೆದರಿಕೆಗಳಲ್ಲಿ ಒಂದಾಗಿದೆ” ಎಂದು ಪೊಡೊಲ್ಯಾಕ್ ಹೇಳಿದರು. ಉಕ್ರೇನ್ ಅಧ್ಯಕ್ಷ … Continued

ಉಕ್ರೇನ್ ಬಿಕ್ಕಟ್ಟು: ಪುಟಿನ್ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಹಿಂಸಾಚಾರ ತಕ್ಷಣವೇ ನಿಲ್ಲಿಸಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮನವಿ

ನವದೆಹಲಿ: ಉಕ್ರೇನ್ ಸಂಘರ್ಷದ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಾತನಾಡಿದ್ದಾರೆ ಮತ್ತು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ರಾಜತಾಂತ್ರಿಕ ಮಾತುಕತೆಗಳ ಹಾದಿಗೆ ಮರಳುವಂತೆ ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳು ನಡೆಯಬೇಕು ಎಂದು ಮನವಿ ಮಾಡಿದ್ದಾರೆ. ತಮ್ಮ ದೂರವಾಣಿ ಸಂಭಾಷಣೆಯಲ್ಲಿ ಅಧ್ಯಕ್ಷ ಪುಟಿನ್ ಅವರು ಉಕ್ರೇನ್‌ಗೆ ಸಂಬಂಧಿಸಿದ ಇತ್ತೀಚಿನ … Continued

ರಷ್ಯಾ ದಾಳಿಯಲ್ಲಿ 40 ಮಂದಿ ಸಾವು: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಕೈವ್ (ಉಕೇನ್):‌ ಉಕ್ರೇನ್ ಅಧ್ಯಕ್ಷರ ಸಲಹೆಗಾರರೊಬ್ಬರು, ದೇಶದ ಮೇಲೆ ರಷ್ಯಾದ ದಾಳಿಯಲ್ಲಿ ಇದುವರೆಗೆ ಸುಮಾರು 40 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಹಲವಾರು ಡಜನ್ ಜನರು ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್ ಗುರುವಾರ ಹೇಳಿದ್ದಾರೆ. ಸಾವುನೋವುಗಳಲ್ಲಿ ನಾಗರಿಕರು ಸೇರಿದ್ದಾರೆಯೇ ಎಂಬುದನ್ನು ಅವರು ನಿರ್ದಿಷ್ಟಪಡಿಸಲಿಲ್ಲ. ದೇಶವನ್ನು ರಕ್ಷಿಸಲು ಸಿದ್ಧರಿರುವ ಎಲ್ಲರಿಗೂ ಉಕ್ರೇನಿಯನ್ … Continued