ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತನ್ನ ಇಬ್ಬರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಸೇರಿ 7 ಜನರನ್ನು ಜೀವಂತವಾಗಿ ಸುಟ್ಟು ಹಾಕಿದ ವ್ಯಕ್ತಿ..!

ಲಾಹೋರ್‌: ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ಸ್ವತಃ ತಂದೆಯೇ ತನ್ನ ಹೆಣ್ಣುಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಪರಿಣಾಮ 7 ಮಂದಿ ಸಜೀವ ದಹನವಾದ ಘಟನೆ ಆಘಾತಕಾರಿ ಘಟನೆ ಪಾಕಿಸ್ತಾನದ ಮುಜಾಫರ್​​ಗರ್​ ಜಿಲ್ಲೆಯ ಪೀರ್​ ಜಹನೈನ್​​ ಪಟ್ಟಣದಲ್ಲಿ ವರದಿಯಾಗಿದೆ. ಈ ಸಂಬಂಧ ಆರೋಪಿ ಮಂಜೂರ್​ ಹುಸೇನ್​ ವಿರುದ್ಧ ಪೊಲೀಸರು ಲುಕ್​ಔಟ್​ ನೋಟಿಸ್​ ಜಾರಿ … Continued

ಟಿ 20 ವಿಶ್ವಕಪ್ :ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್: ಹೊಸ ದಾಖಲೆ ಬರೆದ ಐರ್ಲೆಂಡ್ ಬೌಲರ್..!

ಅಬುಧಾಬಿ: ಐಸಿಸಿ ಟಿ 20 ವಿಶ್ವಕಪ್ ಕೂಟದ ಎರಡನೇ ದಿನದಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಐರ್ಲೆಂಡ್ ಬೌಲರ್ ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ಈ ಹೊಸದಾಖಲೆ ಬರೆದಿದ್ದಾರೆ. ಶೇಕ್ ಝಯೀದ್ ಮೈದಾನದಲ್ಲಿ ನೆದರ್ಲಾಂಡ್ ವಿರುದ್ಧದ ಪಂದ್ಯದಲ್ಲಿ ಕ್ಯಾಂಫರ್ ಈ ದಾಖಲೆ ಮಾಡಿದ್ದಾರೆ.ಹೀಗೆ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ … Continued

ಬಾಂಗ್ಲಾದೇಶ: ಮತ್ತೊಂದು ಹಿಂದೂ ದೇವಾಲಯ ಧ್ವಂಸ, ಅಂಗಡಿಗಳ ಲೂಟಿ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದು ಸಮುದಾಯದ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ ನಂತರ ಭುಗಿಲೆದ್ದಿರುವ ಕೋಮು ಹಿಂಸಾಚಾರ ಮುಂದುವರಿದಿದ್ದು ಮತ್ತೊಂದು ಹಿಂದು ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಈ ಮಧ್ಯೆ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ದೇಶದಾದ್ಯಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹಿಂದು ಸಂಘಟನೆಯ ಮುಖಂಡರು ಪ್ರಕಟಿಸಿದ್ದಾರೆ. ಶನಿವಾರ ನಡೆದ … Continued

ಕೊರೊನಾ ಬೆನ್ನಲೇ ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆ

ಬೀಜಿಂಗ್: ಈ ಚಳಿಗಾಲದಲ್ಲಿ “ಟ್ವಿಂಡೆಮಿಕ್” (Twindemic’) ನ ಸಂಭವನೀಯ ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡಿರುವ ಚೀನಾದ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಸೆಪ್ಟೆಂಬರ್ ನಿಂದ ದೇಶದ ದಕ್ಷಿಣ ಪ್ರಾಂತ್ಯಗಳಲ್ಲಿ ಜ್ವರ ಹೆಚ್ಚಾಗಿರುವುದರಿಂದ ಈ ಎಚ್ಚರಿಕೆ ನೀಡಲಾಗಿದೆ. ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ, ಚೀನಾದ ಆರೋಗ್ಯ ಆಯೋಗವು ಜ್ವರದ ಋತುವಿನಲ್ಲಿ ಜ್ವರದ ( influenza) ತಡೆಗಟ್ಟುವಿಕೆ ಮತ್ತು ನಿಯಂತ್ರಣ … Continued

ಸಮುದ್ರದ ಆಳದಲ್ಲಿ ಸ್ಕೂಬಾ ಡೈವರ್‌ನ ಮುದ್ದಾಡಿದ ಸೀಲ್‌: ಮನ ತಟ್ಟುತ್ತದೆ ಈ ವಿಡಿಯೊ

ಮಾನವನಷ್ಟೇ ಅಲ್ಲ, ಪ್ರಾಣಿಗಳಳು ಸಹ ತಮ್ಮ ಪ್ರೀತಿಯನ್ನು ಅಪ್ಪುಗೆಯ ಮೂಲಕ ತೋರಿಸುತ್ತವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಸ್ಕೂಬಾ ಡೈವಿಂಗ್‌ ಮಾಡುವ ವೇಳೆಯಲ್ಲಿ ಕಡಲ ಚಿರತೆ( Seal )ಯೊಂದು ಸ್ಕೂಬಾ ಡೈವರ್‌ನನ್ನು ಅಪ್ಪಿ ಹಿಡಿದು ಮುದ್ದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದು ಸ್ಕೂಬಾ ಡೈವರ್‌ ಮೇಲೆ ಸೀಲ್‌ನ ಪ್ರೀತಿಗೆ ಸಾಕ್ಷಿಯಂತಿದೆ ಹಾಗೂ ಮನ … Continued

ಬಾಂಗ್ಲಾದೇಶದಲ್ಲಿ ಇಸ್ಕಾನ್ ದೇವಾಲಯದ ಮೇಲೆ ದಾಳಿ;ದೇಗುಲದ ಸದಸ್ಯನ ಹತ್ಯೆ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಡೆದ ಇನ್ನೊಂದು ದಾಳಿಯಲ್ಲಿ, 200 ಕ್ಕೂ ಹೆಚ್ಚು ಜನರ ಗುಂಪು ಶುಕ್ರವಾರ ನೋಖಾಲಿ ಪ್ರದೇಶದಲ್ಲಿ ದಸರಾ ಸಂದರ್ಭದಲ್ಲಿ ಇಸ್ಕಾನ್ ದೇವಸ್ಥಾನ ಮತ್ತು ಭಕ್ತರ ಮೇಲೆ ದಾಳಿ ನಡೆಸಿದೆ. ಹಿಂಸಾತ್ಮಕ ದಾಳಿಯಲ್ಲಿ ದೇಗುಲದ ಸದಸ್ಯ ಮೃತಪಟ್ಟಿದ್ದಾನೆ ಮತ್ತು 30 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಚೌಮುಹನಿ ಪ್ರದೇಶದಲ್ಲಿ ಶುಕ್ರವಾರ … Continued

ಚರ್ಚ್‌ನಲ್ಲಿ ಚಾಕುವಿನಿಂದ ಇರಿದು ಬ್ರಿಟಿಷ್ ಸಂಸದ ಡೇವಿಡ್ ಅಮೆಸ್ ಕೊಲೆ

ಲಂಡನ್‌: ಡೇವಿಡ್ ಅಮೆಸ್, 69, ಪೂರ್ವ ಇಂಗ್ಲೆಂಡ್‌ನ ಎಸ್ಸೆಕ್ಸ್‌ನಲ್ಲಿರುವ ಸೌಥೆಂಡ್ ವೆಸ್ಟ್‌ ಸಂಸತ್ ಸದಸ್ಯ, ಬೆಲ್ಫೇರ್ಸ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ನಡೆದ ಸಭೆಯಲ್ಲಿ ಮಧ್ಯರಾತ್ರಿಯ ವೇಳೆಗೆ ನಡೆದ ಚಾಕು ಇರಿತದಿಂದ ಕೊಲೆಯಾಗಿದ್ದಾರೆ. ಪೊಲೀಸರು ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೇರೆಯವರನ್ನು ಹುಡುಕುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಚರ್ಚ್ ಒಳಗೆ ಸಂಸದರ ಜೀವ ಉಳಿಸಲು ತುರ್ತು … Continued

ಬಾಂಗ್ಲಾದೇಶದ ನೊಖಾಲಿಯಲ್ಲಿ ಇಸ್ಕಾನ್ ದೇವಸ್ಥಾನ ಧ್ವಂಸ, ಗುಂಪಿನಿಂದ ಭಕ್ತರ ಮೇಲೆ ದಾಳಿ

ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಡೆದ ಇನ್ನೊಂದು ದಾಳಿಯಲ್ಲಿ, ಗುಂಪೊಂದು ಶುಕ್ರವಾರ ನೋಖಾಲಿ ಪ್ರದೇಶದ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರ ಮೇಲೆ ದಾಳಿ ಮಾಡಿತು. ದೇವಸ್ಥಾನವು ಗಮನಾರ್ಹ ಹಾನಿಯನ್ನು ಅನುಭವಿಸಿದೆ ಮತ್ತು ಭಕ್ತರ ಸ್ಥಿತಿ ಗಂಭೀರವಾಗಿದೆ ಎಂದು ಇಸ್ಕಾನ್ ಟ್ವೀಟ್ ನಲ್ಲಿ ಹೇಳಿದೆ. ಇಸ್ಕಾನ್ ದೇವಸ್ಥಾನ ಮತ್ತು ಭಕ್ತರು ಇಂದು ಬಾಂಗ್ಲಾದೇಶದ ನೋಖಾಲಿಯಲ್ಲಿ ಒಂದು … Continued

ಕುಂದುಜ್ ನಂತರ ಈಗ ಕಂದಹಾರದ ಶಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಮಯದಲ್ಲಿ ಬಾಂಬ್‌ ಸ್ಫೋಟ:ಕನಿಷ್ಠ 32 ಮಂದಿಸಾವು

ನವದೆಹಲಿ:  ದಕ್ಷಿಣ ಅಫ್ಗಾನಿಸ್ತಾನದ ಕಂದಹಾರ್ ನಗರದಲ್ಲಿರುವ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲೇ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 32ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೂರು ಕಡೆ ಸ್ಫೋಟ ಸಂಭವಿಸಿದೆ. ಮಸೀದಿಯ ಮುಖ್ಯದ್ವಾರ, ದಕ್ಷಿಣ‌ ಭಾಗ ಮತ್ತು ಪ್ರಾರ್ಥನೆಗೆ ಹಾಜರಾಗುವುದಕ್ಕೂ ಮುನ್ನ ಜನರು ಮುಖ ತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನದ … Continued

ತಾಲಿಬಾನಿಗಳ ಹಸ್ತಕ್ಷೇಪ; ಕಾಬೂಲಿಗೆ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ಪಾಕಿಸ್ತಾನ ಇಂಟರ್​ನ್ಯಾಶನಲ್​ ಏರ್​ಲೈನ್ಸ್​..!

ಕಾಬೂಲ್​​ನಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ಮತ್ತು ಪಾಕಿಸ್ತಾನದಿಂದ ಕಾಬೂಲ್​​ಗೆ ಹೋಗುತ್ತಿದ್ದ ಎಲ್ಲ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ (PIA) ಹೇಳಿದೆ. ತಾಲಿಬಾನಿಗಳ ಮಿತಿಮೀರಿದ ಹಸ್ತಕ್ಷೇಪ, ಅನಿಯಂತ್ರಿತ ನಿಯಮ ಬದಲಾವಣೆ, ಮತ್ತು ಅಲ್ಲಿನ ಸಿಬ್ಬಂದಿಯ ಬೆದರಿಕೆ, ವಿಪರೀತ ಎನ್ನಿಸುವಷ್ಟು ಕಟ್ಟುನಿಟ್ಟಿನ ನಿಯಮಗಳೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ತಿಳಿಸಿದೆ. ಅಫ್ಘಾನಿಸ್ತಾನದ ಅತಿದೊಡ್ಡ ಖಾಸಗಿ ವಾಹಕವಾದ ಕಾಮ್​ … Continued