ಗಡ್ಡವಿಲ್ಲದ ಸರ್ಕಾರಿ ನೌಕರರನ್ನು ಕಚೇರಿಗಳಿಗೆ ಪ್ರವೇಶಿಸುವುದನ್ನು ತಡೆದ ತಾಲಿಬಾನ್‌ :ವರದಿ

ಅಫ್ಘಾನಿಸ್ತಾನದಲ್ಲಿರುವ ತಮ್ಮ ಕಚೇರಿಗಳಿಗೆ ಗಡ್ಡವಿಲ್ಲದ ಸರ್ಕಾರಿ ನೌಕರರು ಪ್ರವೇಶಿಸುವುದನ್ನು ತಾಲಿಬಾನ್ ಸೋಮವಾರ ತಡೆದಿದೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಸದ್ಗುಣ ಪ್ರಚಾರ ಸಚಿವಾಲಯದ ಪ್ರತಿನಿಧಿಗಳು ಗಡ್ಡವಿಲ್ಲದ ಕಾರಣ ಹಣಕಾಸು ಸಚಿವಾಲಯದ ಸಿಬ್ಬಂದಿಯನ್ನು ಗೇಟ್‌ನಲ್ಲಿ ನಿಲ್ಲಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. ತಾಲಿಬಾನ್ ಪ್ರತಿನಿಧಿಗಳು ಶಿಫಾರಸು ಮಾಡಿದ ಟೋಪಿಗಳನ್ನು ಧರಿಸಿದ ನಂತರವೇ ಉದ್ಯೋಗಿಗಳಿಗೆ … Continued

ಕೋಳಿ ಕಾಳಗದ ವೇಳೆ ಗುಂಡಿನ ಸದ್ದು, 20 ಮಂದಿ ಸಾವು..!

ಮೆಕ್ಸಿಕೋ ಸಿಟಿ: ಮೆಕ್ಸಿಕೊದ ಝಿನಾಪೆಕ್ವಾರೊ ಪಟ್ಟಣದಲ್ಲಿ ಗೌಪ್ಯವಾಗಿ ನಡೆಯುತಿದ್ದ ಕೋಳಿ ಕಾಳಗದ ವೇಳೆ ನಡೆದ ಘರ್ಷಣೆ ವಿಕೋಪಕ್ಕೆ ತಿರುಗಿದ ನಂತರ ಬಂದೂಕುಧಾರಿಗಳು ಗುಂಡು ಹಾರಿಸಿದ ಪರಿಣಾಮ 20 ಜನರು ಸಾವಿಗೀಡಾಗಿದ್ದಾರೆ. ಮೆಕ್ಸಿಕೋದ ಪಶ್ಚಿಮ ರಾಜ್ಯದ ಪುಟ್ಟ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸತ್ತವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ವ್ಯವಸ್ಥಿತವಾಗಿ ಪೂರ್ವ ಯೋಜನೆಯಂತೆ ದಾಳಿ … Continued

ಭಾರತೀಯ ಮೂಲದ ರಾಜ್ ಸುಬ್ರಮಣ್ಯಂ 6 ಲಕ್ಷ ನೌಕರರನ್ನು ಹೊಂದಿರುವ ಜಾಗತಿಕ ಕೊರಿಯರ್ ಡೆಲಿವರಿ ದೈತ್ಯ ಫೆಡ್‌ಎಕ್ಸ್ (FedEx )ಕಂಪನಿ ಹೊಸ ಸಿಇಒ

ವಾಷಿಂಗ್ಟನ್: ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್ ಡೆಲಿವರಿ ಕಂಪನಿ ಸೋಮವಾರ ಮಾಡಿದ ಪ್ರಕಟಣೆಯ ಪ್ರಕಾರ ಭಾರತೀಯ ಅಮೆರಿಕನ್ ರಾಜ್ ಸುಬ್ರಮಣ್ಯಂ ಅವರು ಫೆಡೆಕ್ಸ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲಿದ್ದಾರೆ. ರಾಜ್ ಸುಬ್ರಮಣ್ಯಂ ಅವರು ಜೂನ್ 1 ರಂದು ಈ ಸ್ಥಾನದಿಂದ ಕೆಳಗಿಳಿಯುವ ಅಧ್ಯಕ್ಷ ಮತ್ತು ಸಿಇಒ (CEO) ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್ ಅವರನ್ನು ಬದಲಾಯಿಸಲಿದ್ದಾರೆ. ಅವರು ಈಗ … Continued

ಮಹಿಳೆಯರು ಏಕಾಂಗಿಯಾಗಿ ವಿಮಾನ ಪ್ರಯಾಣ ಮಾಡುವಂತಿಲ್ಲ: ತಾಲಿಬಾನ್‌ನಿಂದ ಮತ್ತೊಂದು ಫತ್ವಾ..!

ಅಪ್ಘಾನಿಸ್ತಾನ: ಆಪ್ಘಾನಿಸ್ತಾನದಲ್ಲಿ ಮಹಿಳೆಯರ ವಿರುದ್ಧ ತಾಲಿಬಾನ್ ಮತ್ತೊಂದು ನಿರ್ಬಂಧ ವಿಧಿಸಿದೆ. ಮಹಿಳೆಯರು ಇನ್ಮುಂದೆ ಏಕಾಂಗಿಯಾಗಿ ವಿಮಾನಯಾನ ಪ್ರಯಾಣ ಮಾಡುವಂತಿಲ್ಲ ಎಂದು ತಾಲಿಬಾನ್ ಹೊಸ ಫತ್ವಾ ಹೊರಡಿಸಿದೆ. ಪುರುಷರ ರಕ್ಷಣೆಯಿಲ್ಲದೇ ಮಹಿಳೆಯರು ಒಂಟಿಯಾಗಿ ವಿಮಾನದಲ್ಲಿ ಪ್ರಯಾಣ ಮಾಡುವಂತಿಲ್ಲ ಎಂದು ಹೇಳಿರುವ ತಾಲಿಬಾನ್‌ ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ಕೊನೆಯ ಅವಕಾಶವನ್ನು ಸೋಮವಾರದವರೆಗೆ ಮಾತ್ರ ನೀಡಿದೆ. ಆನಂತರ ಯಾವುದೇ … Continued

ಪಾಕಿಸ್ತಾನ: ಇಮ್ರಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು, ಸೋಮವಾರ ಪಾಕ್ ಸಂಸತ್‍ನಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಅವಿಶ್ವಾಸ ನಿರ್ಣಯಕ್ಕೆ 161 ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಎರಡೂ ಡಜನ್‍ಗೂ ಹೆಚ್ಚು ಸಂಸದರ ಬಂಡಾಯ ಎದ್ದು ವಿಪಕ್ಷಗಳ ಜೊತೆ ಕೈಜೋಡಿಸಿದ್ದಾರೆ ಎಂದು ಹೇಳಲಾಗಿದೆ. … Continued

ತನ್ನ ಪತ್ನಿ ಬಗ್ಗೆ ಜೋಕ್‌ ಮಾಡಿದ ಪಿಂಕೆಟ್-ಸ್ಮಿತ್‌ಗೆ ಆಸ್ಕರ್ ಪ್ರಶಸ್ತಿ ಸಮಾರಂಭದ ವೇದಿಕೆ ಮೇಲೆಯೇ ಗುದ್ದಿದ ಹಾಲಿವುಡ್‌ ನಟ ವಿಲ್‌ ಸ್ಮಿತ್‌…ವೀಕ್ಷಿಸಿ

94 ನೇ ಅಕಾಡೆಮಿ ಪ್ರಶಸ್ತಿಗಳ ಸಮಾರಂಭದಲ್ಲಿ ವಿಲ್ ಸ್ಮಿತ್ ಅವರು ಕ್ರಿಸ್ ರಾಕ್‌ಗೆ ಪಂಚ್ ಮಾಡಿದ ಆಘಾತಕಾರಿ ಘಟನೆಗೆ ಸಾಕ್ಷಿಯಾಯಿತು. ಪ್ರಶಸ್ತಿಯನ್ನು ನೀಡುವಾಗ ನಿರೂಪಣೆ ಮಾಡುವಾಗ ಕ್ರಿಸ್ ರಾಕ್ ಅವರು ನಟ ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಅವರ ಬಗ್ಗೆ ತಮಾಷೆ ಮಾಡಿದರು ಮತ್ತು ಅವರು ಜಿಐ ಜೇನ್ 2 ರಂತೆ ಕಾಣುತ್ತಾರೆ … Continued

ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಮತಕ್ಕೆ ಮೊದಲು ಮತ್ತೊಂದು ಮಿತ್ರಪಕ್ಷ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ಇಮ್ರಾನ್ ಖಾನ್ ಬೃಹತ್‌ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನಕ್ಕೆ ಒಂದು ಗಂಟೆಯ ಮೊದಲು, ತಮ್ಮ ಸರ್ಕಾರಕ್ಕೆ ಜಮ್ಹೂರಿ ವತನ್ ಪಾರ್ಟಿ (ಜೆಡಬ್ಲ್ಯುಪಿ) ಮುಖ್ಯಸ್ಥ ಶಹಜೈನ್ ಬುಗ್ತಿ ಅವರ ಬೆಂಬಲ ಕಳೆದುಕೊಂಡಿದ್ದಾರೆ – ಅವರು . ದೇಶದ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಸರ್ಕಾರದಿಂದ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದು, ವಿರೋಧಪಕ್ಷಗಳ ಒಕ್ಕೂಟದ ಪರವಾಗಿ … Continued

ಇದೇ ಮೊದಲ ಬಾರಿಗೆ ಮಾನವನ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆ…! ವಿಜ್ಞಾನಿಗಳಿಂದ ಎಚ್ಚರಿಕೆ

ಮಾಲಿನ್ಯದ ಪ್ರಮುಖ ಮೂಲವಾದ ಮೈಕ್ರೋಪ್ಲಾಸ್ಟಿಕ್ ಎಂದು ಕರೆಯಲ್ಪಡುವ ಪ್ಲಾಸ್ಟಿಕ್‌ನ ಸಣ್ಣ ಕಣಗಳು ಮಾನವನ ರಕ್ತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿವೆ…! ನೆದರ್ಲೆಂಡ್ಸ್‌ನ ಸಂಶೋಧಕರ ಗುಂಪು ರಕ್ತದ ಮಾದರಿಗಳನ್ನು ಪರೀಕ್ಷಿಸಿದ ಸುಮಾರು 80 ಪ್ರತಿಶತ ಮಾದರಿಗಳಲ್ಲಿ ಇದು ಪತ್ತೆಯಾಗಿದೆ. ಆವಿಷ್ಕಾರವು ಅತ್ಯಂತ ಮಹತ್ವದ್ದಾಗಿದೆ ಏಕೆಂದರೆ ಮೈಕ್ರೊಪ್ಲಾಸ್ಟಿಕ್ ದೇಹದಾದ್ಯಂತ ಸಂಚರಿಸಬಹುದು ಮತ್ತು ಅಂಗಗಳಲ್ಲಿ ನೆಲೆಸಬಹುದು ಎಂದು ತೋರಿಸುತ್ತದೆ. ವಿಜ್ಞಾನಿಗಳಿಗೆ ಆರೋಗ್ಯದ … Continued

ವೇಲ್‌ ಹಾಕಿಕೊಂಡು ಬಂದ ಮಹಿಳೆಗೆ ಪ್ರವೇಶ ನಿರಾಕರಿಸಿದ್ದಕ್ಕೆ ಭಾರತೀಯ ರೆಸ್ಟೋರೆಂಟ್ ಮುಚ್ಚಿಸಿದ ಬಹ್ರೇನ್

ನವದೆಹಲಿ: ವೇಲ್‌ (veil) ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಿಸಿದ ಕಾರಣ ಬಹ್ರೇನ್‌ನ ಅದ್ಲಿಯಾದಲ್ಲಿರುವ ರೆಸ್ಟೋರೆಂಟ್ ಅನ್ನು ಅಧಿಕಾರಿಗಳು ಮುಚ್ಚಿದ್ದಾರೆ ಎಂದು ದಿ ಡೈಲಿ ಟ್ರಿಬ್ಯೂನ್ ವರದಿ ಮಾಡಿದೆ. ರೆಸ್ಟೋರೆಂಟ್‌ನ ಅಧಿಕೃತ ಸೈಟ್ ಇದು ಭಾರತೀಯ ರೆಸ್ಟೋರೆಂಟ್ ಎಂದು ಉಲ್ಲೇಖಿಸುತ್ತದೆ, ಇದು 1987 ರಿಂದ ಬಹ್ರೇನ್‌ನಲ್ಲಿದೆ. ವೇಲ್‌ ಹಾಕಿಕೊಂಡು ಬಂದ  ಮಹಿಳೆಯನ್ನು ರೆಸ್ಟೋರೆಂಟ್ ಸಿಬ್ಬಂದಿ ತಡೆಯುವ ವಿಡಿಯೋವನ್ನು … Continued

ರಷ್ಯಾ-ಉಕ್ರೇನ್‌ ಯುದ್ಧ-ತನ್ನ ಸೈನಿಕರಿಂದಲೇ ಕೊಲ್ಲಲ್ಪಟ್ಟ ರಷ್ಯಾದ ಲೆಫ್ಟಿನೆಂಟ್ ಜನರಲ್ : ವರದಿಗಳು

ಕೀವ್: ಉಕ್ರೇನ್ ಮೇಲಿನ ರಷ್ಯಾದ ದಾಳಿಗೆ ಮತ್ತೊಂದು ಹಿನ್ನಡೆಯಾಗಿ, ರಷ್ಯಾದ ಉನ್ನತ ಕಮಾಂಡರ್ ಒಬ್ಬರನ್ನು ಅವರದ್ದೇ ದೇಶದ ಸೈನಿಕರು  ಕೊಂದಿದ್ದಾರೆ ಮತ್ತು ಜನರಲ್ ಸಹ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ ಎಂದು ವರದಿಗಳು ತಿಳಿಸಿವೆ. ಉಕ್ರೇನ್‌ನಲ್ಲಿನ ಯುದ್ಧದ ಸಮಯದಲ್ಲಿ ಏಳು ರಷ್ಯಾದ ಜನರಲ್‌ಗಳು ಇಲ್ಲಿಯವರೆಗೆ ಕೊಲ್ಲಲ್ಪಟ್ಟಿದ್ದಾರೆ ಎಂದು ಪಾಶ್ಚಿಮಾತ್ಯ ಅಧಿಕಾರಿಗಳು ಹೇಳುತ್ತಾರೆ. ಮೃತಪಟ್ಟ ಲೆಫ್ಟಿನೆಂಟ್ ಜನರಲ್ ಯಾಕೋವ್ … Continued