ವ್ಯಾಪಾರ ಯುದ್ಧ ಮತ್ತಷ್ಟು ಉಲ್ಬಣ : ಚೀನಾದ ಸರಕುಗಳ ಮೇಲೆ 245%ರಷ್ಟು ಸುಂಕ ಹೆಚ್ಚಿಸಿದ ಅಮೆರಿಕ

ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ಮತ್ತಷ್ಟು ಉಲ್ಬಣಗೊಂಡಿದ್ದು, ಚೀನಾದ ಕ್ರಮಕ್ಕೆ ಪ್ರತ್ಯುತ್ತರವಾಗಿ ಟ್ರಂಪ್ ಆಡಳಿತವು ತನ್ನ ಇತ್ತೀಚಿನ ಕ್ರಮದಲ್ಲಿ, ಚೀನಾದ ಆಮದುಗಳ ಮೇಲೆ 245% ವರೆಗಿನ ಹೊಸ ಸುಂಕವನ್ನು ಘೋಷಿಸಿದೆ. ಮಂಗಳವಾರ ತಡರಾತ್ರಿ ಶ್ವೇತಭವನ ಬಿಡುಗಡೆ ಮಾಡಿದ ಫ್ಯಾಕ್ಟ್ ಶೀಟ್‌ನಲ್ಲಿ ಈ ನಿರ್ಧಾರ ಬಂದಿದೆ. ” ತನ್ನ ಹೇಳಿಕೆಯಲ್ಲಿ, ಚೀನಾ ತೆಗೆದುಕೊಂಡ … Continued

ಅಮೆರಿಕ-ಚೀನಾ ವ್ಯಾಪಾರ ಯುದ್ಧ ಉಲ್ಬಣ; ಬೋಯಿಂಗ್ ಜೆಟ್ ವಿಮಾನಗಳ ವಿತರಣೆ ತೆಗೆದುಕೊಳ್ಳದಂತೆ ತನ್ನ ಕಂಪನಿಗಳಿಗೆ ಚೀನಾ ಸೂಚನೆ

ಬೀಜಿಂಗ್: ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ಅಮೆರಿಕದ ವಾಯುಯಾನ ದೈತ್ಯ ಬೋಯಿಂಗ್‌ ಕಂಪನಿಗಳು ಜೆಟ್‌ಗಳನ್ನು ವಿತರಣೆ ಮಾಡಿದ್ದನ್ನು ತೆಗೆದುಕೊಳ್ಳದಂತೆ ಚೀನಾ ತನ್ನ ವಿಮಾನಯಾನ ಸಂಸ್ಥೆಗಳಿಗೆ ಆದೇಶಿಸಿದೆ ಎಂದು ಮಂಗಳವಾರ ವರದಿಯೊಂದು ತಿಳಿಸಿದೆ. ಜನವರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾದ ಅಮೆರಿಕ ಹಾಗೂ ಚೀನಾ ಪ್ರತಿ … Continued

ಅಮೆರಿಕದ ಅಧ್ಯಕ್ಷ ಟ್ರಂಪ್‌ ಹತ್ಯೆ ಮಾಡಲು ಪೋಷಕರನ್ನೇ ಕೊಂದ 17 ವರ್ಷದ ವಿದ್ಯಾರ್ಥಿ…!

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇರೆಗೆ ವಿಸ್ಕಾನ್ಸಿನ್‌ನ 17 ವರ್ಷದ ನಿಕಿತಾ ಕಾಸಾಪ್ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಿ ಸರ್ಕಾರವನ್ನು ಉರುಳಿಸುವ ಸಲುವಾಗಿ ತನ್ನ ಪೋಷಕರನ್ನೇ ಕೊಂದಿದ್ದಾನೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. … Continued

ಅಪರೂಪದ ವೀಡಿಯೊ..| 18 ಮೀಟರ್ ಉದ್ದದ ಪಿಗ್ಮಿ ನೀಲಿ ತಿಮಿಂಗಿಲದ ಮೇಲೆ ದಾಳಿ ಮಾಡಿ ಸಾಯಿಸಿದ 60 ಓರ್ಕಾಗಳ ಗುಂಪು…!

ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿಯಲ್ಲಿ 18 ಮೀಟರ್ ಉದ್ದದ ಬೃಹತ್‌ ಪಿಗ್ಮಿ ನೀಲಿ ತಿಮಿಂಗಿಲದ ಮೇಲೆ 60 ಕ್ಕೂ ಹೆಚ್ಚು ಓರ್ಕಾ(ಕಿಲ್ಲರ್‌ ವೇಲ್ಸ್‌)ಗಳ ಗುಂಪೊಂದು ದಾಳಿ ಮಾಡಿ ಕೊಲ್ಲುತ್ತಿರುವುದು ಕಂಡುಬಂದಿದೆ. ಇದು ಈ ರೀತಿ ಬೃಹತ್‌ ಪಿಗ್ಮಿ ನೀಲಿ ತಿಮಿಂಗಿಲದ ಮೇಲೆ ಓರ್ಕಾ(ಕಿಲ್ಲರ್‌ ವೇಲ್ಸ್‌)ಗಳು ದಾಳಿ ಮಾಡಿ ಕೊಂದು ಹಾಕಿದ ನಾಲ್ಕನೇ ದಾಖಲಿತ ನಿದರ್ಶನ ಎಂದು ವಿವರಿಸಲಾಗಿದೆ. … Continued

ಈಗಲೇ ದೇಶ ಬಿಟ್ಟು ಹೊರಡಿ……”: ಅಮೆರಿಕದಲ್ಲಿರುವ ವಿದೇಶಿ ಪ್ರಜೆಗಳಿಗೆ ಟ್ರಂಪ್‌ ಆಡಳಿತದ ಎಚ್ಚರಿಕೆ ಏನೆಂದರೆ….

ವಾಷಿಂಗ್ಟನ್‌ : 30 ದಿನಗಳಿಗಿಂತ ಹೆಚ್ಚು ಕಾಲ ಅಮೆರಿಕದಲ್ಲಿ ಇರುವ ವಿದೇಶಿ ಪ್ರಜೆಗಳು ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಅದನ್ನು ಪಾಲಿಸಲು ವಿಫಲವಾದರೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ಡೊನಾಲ್ಡ್ ಟ್ರಂಪ್ ಆಡಳಿತದ ಅಧೀನದಲ್ಲಿರುವ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿದೆ. ‘ಅಕ್ರಮ ವಲಸಿಗರಿಗೆ ಸಂದೇಶ’ ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿ, ಗೃಹ ಭದ್ರತಾ ಇಲಾಖೆ (DHS) … Continued

ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಚಿಪ್‌ಗಳಿಗೆ ಪ್ರತಿಸುಂಕಗಳಿಂದ ವಿನಾಯಿತಿ ಘೋಷಿಸಿದ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರವು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸೆಮಿಕಂಡಕ್ಟರ್ ಚಿಪ್‌ಗಳು ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಪ್ರತಿ ಸುಂಕಗಳಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದೆ. ಇದರಲ್ಲಿ ಚೀನಾದ ಎಲೆಕ್ಟ್ರಾನಿಕ್‌ ಉತ್ಪನ್ನಗಳು ಸೇರಿವೆ. ಈ ಉತ್ಪನ್ನಗಳು ಚೀನಾದ ಮೇಲೆ ವಿಧಿಸಲಾಗುವ ಪ್ರಸ್ತುತ ಶೇಕಡಾ 145 ಸುಂಕಗಳಿಗೆ ಅಥವಾ ಬೇರೆಡೆ ವಿಧಿಸಲಾಗುವ ಶೇಕಡಾ 10 ರಷ್ಟು … Continued

ಕಾಲೇಜಿಗೆ ಹೋಗಲು 3,200 ಕಿ.ಮೀ. ದೂರ ವಿಮಾನದಲ್ಲಿ ಪ್ರಯಾಣಿಸುವ ಕಾನೂನು ವಿದ್ಯಾರ್ಥಿನಿ…!

ಹೆಚ್ಚಿನ ಜನರು ತಮ್ಮ ಅಧ್ಯಯನ ಅಥವಾ ಉದ್ಯೋಗಕ್ಕಾಗಿ ನಗರ ಅಥವಾ ವಿವಿಧ ದೇಶಗಳಿಗೆ ಸ್ಥಳಾಂತರಗೊಳ್ಳುತ್ತಾರೆ. ಆದರೆ 30 ವರ್ಷದ ಕಾನೂನು ವಿದ್ಯಾರ್ಥಿನಿ ನ್ಯಾಟ್ ಸೆಡಿಲ್ಲೊ ಎಂಬ ಮಹಿಳೆ ಮಾತ್ರ ಇದಕ್ಕೆ ಅಪವಾದವಾಗಿದ್ದಾರೆ. ಯಾಕೆಂದರೆ ಅವರು ತಮ್ಮ ತರಗತಿಗಳಿಗೆ ಹಾಜರಾಗಲು ಪ್ರತಿ ವಾರ ಮೆಕ್ಸಿಕೋ ನಗರದಿಂದ ನ್ಯೂಯಾರ್ಕ್ ನಗರಕ್ಕೆ 3,200 ಕಿಮೀ ವಿಮಾನದಲ್ಲಿ ಹೋಗುತ್ತಾರೆ. ದಿ ನ್ಯೂಯಾರ್ಕ್ … Continued

ಟ್ರಂಪ್‌ಗೆ ಕ್ಸಿ ಟಕ್ಕರ್‌ ; ಅಮೆರಿಕದ ಸರಕುಗಳ ಮೇಲೆ ಶೇ 125% ತೆರಿಗೆ ವಿಧಿಸಿದ ಚೀನಾ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಪ್ರಾರಂಭಿಸಿದ ಸುಂಕ ಸಮರ ಮುಗಿಯುವ ಹಾಗೆ ಕಾಣುತ್ತಿಲ್ಲ. ಅದಿ ಈಗ ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರ ಸಮರವಾಗಿ ಮಾರ್ಪಟ್ಟಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಚೀನಾದ (China) ಮೇಲೆ ವಿಧಿಸಿದ ತೆರಿಗೆಯ ಪ್ರತೀಕಾರವಾಗಿ ಈಗ ಅಮೆರಿಕದ ಸರಕುಗಳ ಮೇಲೆ ಚೀನಾ 125%ರಷ್ಟು ಸುಂಕ ವಿಧಿಸಿದೆ. … Continued

ವೀಡಿಯೊ | ಗಿರಿಗಿರಿ ತಿರುಗುತ್ತ ನದಿಗೆ ಬಿದ್ದ ಹೆಲಿಕಾಪ್ಟರ್ ; ಟೆಕ್ ಸಿಇಒ ಸೇರಿ ಕುಟುಂಬದ ಐವರು ಸಾವು

ನ್ಯೂಯಾರ್ಕ್: ಗುರುವಾರ ನ್ಯೂಯಾರ್ಕ್‌ನ ಹಡ್ಸನ್ ನದಿಗೆ ಪ್ರವಾಸಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಮೂವರು ಮಕ್ಕಳು ಸೇರಿದಂತೆ ಐವರು ಸ್ಪ್ಯಾನಿಷ್ ಪ್ರವಾಸಿಗರ ಕುಟುಂಬ ಸೇರಿ ಆರು ಜನ ಸಾವಿಗೀಡಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿನ ವೀಡಿಯೊಗಳು – ಬೆಲ್ 206 – ಹೆಲಿಕಾಪ್ಟರ್‌ನ ಭಾಗಗಳು – ನ್ಯೂಜೆರ್ಸಿಯ ಜೆರ್ಸಿ ನಗರದ ಕರಾವಳಿಯ ಬಳಿ ಗಾಳಿಯಲ್ಲಿ ನೀರಿಗೆ ಬೀಳುತ್ತಿರುವುದನ್ನು ತೋರಿಸಿವೆ. ಪೈಲಟ್ ಜೊತೆಗೆ, … Continued

ಚೀನಾಕ್ಕೆ ಮತ್ತೆ ಶಾಕ್‌ ಕೊಟ್ಟ ಟ್ರಂಪ್‌ ; ಚೀನಾದ ಆಮದಿನ ಮೇಲೆ ಮತ್ತೆ ಸುಂಕ ಹೆಚ್ಚಿಸಿದ ಅಮೆರಿಕ

ವಾಷಿಂಗ್ಟನ್‌ : ಚೀನಾದ ಆಮದುಗಳ ಮೇಲಿನ ಸುಂಕವನ್ನು ಅಮೆರಿಕ ಮತ್ತೆ ಹೆಚ್ಚಿಸಿದೆ. ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕವು ಸುಂಕವನ್ನು 145%ಕ್ಕೆ ಹೆಚ್ಚಿಸಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಅಮೆರಿಕದ ಪ್ರಸಾರಕ ಸಿಎನ್‌ಬಿಸಿಗೆ ದೃಢಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕಾರ್ಯನಿರ್ವಾಹಕ ಆದೇಶದ ನಂತರ ಈ ಹೆಚ್ಚಳ ಸಂಭವಿಸಿದೆ. ಈ ಮೊದಲು 84%ರಷ್ಟಿದ್ದ ಸುಂಕವನ್ನು … Continued