ಜೊಮಾಟೊ ವಿವಾದ: ವಿಳಾಸ್‌ ಆನ್‌ಲೈನ್‌ನಲ್ಲಿ ಬಹಿರಂಗವಾದ ನಂತರ ಬೆಂಗಳೂರು ಬಿಟ್ಟ ಹಿತೇಶಾ

ಬೆಂಗಳೂರು: ಜೊಮಾಟೊ ವಿವಾದದಲ್ಲಿ ಎರಡನೇ ಎಫ್‌ಐಆರ್ ದಾಖಲಾದ ಒಂದು ದಿನದ ನಂತರ, ಹಿತೇಶಾ ಚಂದ್ರಾನಿ ಬುಧವಾರ ಬೆಂಗಳೂರಿನಿಂದ ಹೊರಟಿದ್ದಾರೆ ಎಂದು ನಗರ ಪೊಲೀಸರು ಹೇಳಿದ್ದಾರೆ. ತನ್ನ ಮೂಗಿಗೆ ಹೊಡೆದಿದ್ದಾನೆ ಎಂದು ಆರೋಪಿಸಿ ಜೊಮಾಟೊ ಡೆಲಿವರಿ ಎಕ್ಸಿಕ್ಯೂಟಿವ್ ಕಾಮರಾಜ್ ವಿರುದ್ಧ ಹಿತೇಶಾ ಪೊಲೀಸರಿಗೆ ದೂರು ನೀಡಿದ್ದರು. ಹಿತೇಶಾ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸಲ್ಲಿಸಿದ ಪೊಲೀಸರಿಗೆ … Continued

ಪಂಚಮಸಾಲಿ ಮೀಸಲು ಹೋರಾಟ ತಾತ್ಕಾಲಿಕ ಸ್ಥಗಿತ: ಸರ್ಕಾರ ಮಾತು ತಪ್ಪಿದರೆ ಮತ್ತೆ ಹೋರಾಟ

ಬೆಂಗಳೂರು: ರಾಜ್ಯ ಸರ್ಕಾರದ ಭರವಸೆ ಮೇಲೆ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಆರು ತಿಂಗಳ ಅವಧಿ ವರೆಗೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಸರ್ಕಾರ  ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟ ಆರಂಭವಾಗಲಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆಗೆ “ಸರ್ಕಾರ ಆರು ತಿಂಗಳ … Continued

ಜಿಟಿಡಿ ಜೊತೆ ಜಗಳ ತಾರಕಕ್ಕೆ: ಗದ್ಗದಿತರಾಗಿ ರಾಜಕೀಯ ನಿವೃತ್ತಿ ಮಾತಾಡಿದ ಸಾ.ರಾ.ಮಹೇಶ

ಮೈಸೂರು : ನಿಮಗೆ ನನ್ನ ಮೇಲೆ ಯಾಕಿಷ್ಟು ಸಿಟ್ಟು? ನನ್ನನ್ನು ಯಾಕೆ ಇಷ್ಟೊಂದು ವಿರೋಧಿಸುತ್ತಿದೀರಿ? ನೀವು ಜೆಡಿಎಸ್‌ಗೆ ಬರುತ್ತೇನಂದ್ರೆ ನಾನೇ ಪಕ್ಷ ಬಿಡುತ್ತೇನೆ, ರಾಜಕೀಯ ನಿವೃತ್ತಿಯನ್ನೂ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಸಾ.ರಾ.ಮಹೇಶ ಗದ್ಗದಿತರಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಸಾ.ರಾ.ಮಹೇಶ್​ ಮಾತನಾಡುವ ವೇಳೆ ಗದ್ಗದಿತರಾಗಿ, ನಾನು ಎರಡು ವರ್ಷದ ಬಳಿಕ ಸಾರ್ವಜನಿಕ … Continued

ಕೊರೊನಾ: ಕರ್ನಾಟಕದಲ್ಲಿ ಲಾಕ್‌ಡೌನ್‌ ಬಗ್ಗೆ ಹೇಳಿದ್ದೇನೆಂದರೆ…

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾದಿಂದಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಕಳೆದ ಬಾರಿ ಇದಕ್ಕೆ ಲಸಿಕೆ ಇರಲಿಲ್ಲ.ಈಗ ಲಸಿಕೆ ಬಂದಿದೆ. ಕೊರೊನಾಕ್ಕೆ … Continued

ಎಸ್‌ಬಿಐನಿಂದ ಮನೆಯಲ್ಲಿಯೇ ಈ ಸೌಲಭ್ಯ ಪಡೆದುಕೊಳ್ಳಬಹುದು

ನವ ದೆಹಲಿ: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ತನ್ನ ಗ್ರಾಹಕರ ಸೌಲಭ್ಯಗಳ ಬಗ್ಗೆ ಸಂಪೂರ್ಣ ನಿಗಾ ವಹಿಸಲಿದೆ. ಎಸ್ ಬಿಐ ಡೋರ್ ಸ್ಟೆಪ್ ಬ್ಯಾಂಕಿಂಗ್ ಈಗ ಗ್ರಾಹಕರಿಗೆ ಶಾಖೆ ಇಲ್ಲದೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ನೀವು ಎಸ್ ಬಿಐನಲ್ಲಿ ಖಾತೆ ಹೊಂದಿದ್ದರೆ ಅಥವಾ ಇನ್ನಾವುದೇ ಕಾರಣಕ್ಕಾಗಿ … Continued

ಹಲ್ಲೆ ಪ್ರಕರಣ: ಡೆಲಿವರಿ ಬಾಯ್ ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ ಮಹಿಳೆ ನಾಪತ್ತೆ

ಬೆಂಗಳೂರು: ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ ಆರೋಪ ಮಾಡಿದ್ದ ಮಹಿಳೆ ಬೆಂಗಳೂರಿನಲ್ಲಿ ಇಲ್ಲ. ಆಹಾರ ಡೆಲಿವರಿ ವಿಳಂಬ ಪ್ರಶ್ನಿಸಿದ್ದ ಯುವತಿ ಹಿತೇಶಾ ಚಂದ್ರಾನಿ ಮೇಲೆ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರಾಜ್ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದರು. ದೂರು ಹಿನ್ನೆಲೆಯಲ್ಲಿ ಪೊಲೀಸರು … Continued

ಸಿಡಿ ಪ್ರಕರಣ: ಯುವತಿ ತಂದೆ-ತಾಯಿ ಹೇಳಿದ್ದೇನೆಂದರೆ….

ಬೆಳಗಾವಿ : ಮಾಜಿ ಸಚಿವರ ಮೇಲಿನ ಸಿಡಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿ ತಂದೆ-ತಾಯಿ ತಮ್ಮ ಹೇಳಿಕೆಯುಳ್ಳ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸಿಡಿಯಲ್ಲಿರುವಳು ನಾನಲ್ಲ ಎಂದು ಮಗಳು ಹೇಳಿದ್ದಾಳೆ ಎಂದು  ಅವರು ಹೇಳಿದ್ದಾರೆ. ನನ್ನಂತೆ ಕಾಣುವ ಹುಡುಗಿಯ ದೃಶ್ಯವನ್ನು ಎಡಿಟ್ ಮಾಡಿದ್ದಾರೆ. ಅದೊಂದು ನಕಲಿ ಸಿಡಿ , ಆ ಸಿಡಿಯಲ್ಲಿ ನನ್ನ ಪಾತ್ರ ಏನೂ … Continued

ಕರ್ನಾಟಕದಲ್ಲಿ ಸಾವಿರ ಗಡಿದಾಟಿದ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ…!!

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಕೂಡ ಕೊರೊನಾದಲ್ಲಿ ಭಾರೀ ಹೆಚ್ಚಳವಾಗಿದ್ದು, ಸಾವಿರದ ಗಡಿ ದಾಟಿದೆ…! ಕಳೆದ ೨೪ ತಾಸಿನಲ್ಲಿ ದೈನಂದಿನ ಕೊರೊನಾ ಪ್ರಕರಣ 1135 ದಾಖಲಾಗಿದ್ದು, ಸರ್ಕಾರದ ಚಿಂತೆಗೆ ಕಾರಣವಾಗಿದೆ. ಇದರೊಂದಿಗೆ ಸಕ್ರಿಯ ಪ್ರಕಣಗಳ ಸಂಖ್ಯೆ 9428ಕ್ಕೆ ಏರಿಕೆಯಾಗಿದ್ದು, 129 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟಾರೆ ಸೋಂಕಿತರ ಸಂಖ್ಯೆ 9,62,339 ಕ್ಕೆ ಏರಿಕೆಯಾಗಿದೆ. … Continued

ಉಪಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಬಿಜೆಪಿ ಜಯ: ಬೊಮ್ಮಾಯಿ ವಿಶ್ವಾಸ

ಬೆಂಗಳೂರು: ರಾಜ್ಯದಲ್ಲಿ ಘೋಷಣೆಯಾಗಿರುವ ಒಂದು ಲೋಕಸಭೆ ಹಾಗೂ 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ದಾಖಲೆ ಮತಗಳ ಅಂತರದಿಂದ ಜಯ ಗಳಿಸುತ್ತೇವೆ ಎಂದು ಗೃಹ,  ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ಸಮಿತಿಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ … Continued