ನೋಡುತ್ತಿದ್ದಂತೆಯೇ ಉರುಳಿ ಬಿದ್ದ ಬೃಹತ್‌ ಕಲ್ಲು ತುಂಬುತ್ತಿದ್ದ ಭಾರೀ ಉದ್ದದ ಟ್ರಕ್..! ವೀಕ್ಷಿಸಿ

ಕ್ಷಣಾರ್ಧದಲ್ಲಿ ಅನಾಹುತವೇ ನಡೆದು ಹೋಗಿದೆ. ಸಣ್ಣ ಅಜಾಗರೂಕತೆಯಿಂದಾಗಿ ಬೃಹತ್‌ ಟ್ರಕ್‌ ಪ್ರಪಾತಕ್ಕೆ ಬಿದ್ದಿದೆ. ಭಾಋಈ ಉದ್ದನೆಯ ಟ್ರಕ್‌ ಬೀಳುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು ಅದನ್ನು ಐಎಎಸ್‌ ಅಧಿಕಾರಿ ರುಪಿನ್‌ ಶರ್ಮಾ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಭಾರೀ ಉದ್ದದ ಟ್ರಕ್‌ಗೆ ಬೃಹತ್ ಬಂಡೆಯನ್ನು ತುಂಬುವಾಗ ಈ ಅನಾಹುತ ಸಂಭವಿಸಿದೆ. ಬಂಡೆಯನ್ನು ತುಂಬುತ್ತಿದ್ದಂತೆಯೇ ಒಂದು … Continued

ಅಕಾಲಿಕ ಮಳೆಗೆ ಬೆಳೆ ನಾಶ; ಮನನೊಂದು ರೈತ ಆತ್ಮಹತ್ಯೆ

ಶಿರಸಿ:ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿದ್ದಕ್ಕೆ ಮನನೊಂದು ರೈತನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ನರೂರು ಗ್ರಾಮದಲ್ಲಿ ನಡೆದ ವರದಿಯಾಗಿದೆ. ಗಂಗಾಧರ ಫಕೀರಣ್ಣ ಶೇಷಣ್ಣನವರ (58) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದ್ದು, ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಭತ್ತ, ಶುಂಠಿ ಹಾಗೂ ಇತರ ಬೆಳೆ ಹಾನಿಯಾಗಿದ್ದಕ್ಕೆ ತೀವ್ರವಾಗಿ … Continued

ಮತಾಂತರ ವಿರೋಧಿ ಮಸೂದೆಗೆ ಆತಂಕ: ಸಂವಿಧಾನ ಮತಾಂತರ ನಿರ್ಬಂಧಿಸುವುದಿಲ್ಲ ಎಂದ ಬೆಂಗಳೂರು ಆರ್ಚ್‌ಬಿಷಪ್

ಬೆಂಗಳೂರು: ಕರ್ನಾಟಕ ಸರ್ಕಾರವು ಮುಂದಿನ ದಿನಗಳಲ್ಲಿ ಮಂಡಿಸಲಿರುವ ಮತಾಂತರ ವಿರೋಧಿ ಮಸೂದೆಯ ಬಗ್ಗೆ ಕ್ರೈಸ್ತ ಸಮುದಾಯವು ಆತಂಕಕ್ಕೊಳಗಾಗಿದೆ ಎಂದು ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೋ ಶನಿವಾರ ಹೇಳಿದ್ದಾರೆ. ಅಂತಹ ಮಸೂದೆಯು ರಾಜ್ಯದಲ್ಲಿ ಕೋಮು ಅಶಾಂತಿಯನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಪೀಟರ್ ಮಚಾಡೊ, “ನಾವು ಕ್ರೈಸ್ತರು ಮತಾಂತರ ವಿರೋಧಿ ಮಸೂದೆಯ ಬಗ್ಗೆ … Continued

ಮಗುವಿಗೆ ಜನ್ಮ ನೀಡಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ !

ಮಂಗಳೂರು: ಎಸ್ಎಸ್ಎಲ್ಸಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಅಪ್ರಾಪ್ತೆ ಬಾಲಕಿ ಗರ್ಭ ಧರಿಸಲು ಕಾರಣನಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 10ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿನಿಯ ಉದರದಲ್ಲಿ ಗೆಡ್ಡೆ ಬೆಳೆದಿದೆ ಎಂದು ತಿಳಿದು ಹೆತ್ತವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಪರೀಕ್ಷೆ ನಡೆಸಿದಾಗ ವಿದ್ಯಾರ್ಥಿನಿ ಗರ್ಭಿಣಿ ಎಂದು ತಿಳಿದು ಬಂದಿದೆ. … Continued

ಭಟ್ಕಳ ಸಮೀಪ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಬೃಹತ್‌ ತಿಮಿಂಗಲ…! ವಿಡಿಯೊದಲ್ಲಿ ಸೆರೆ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ತಿಮಿಂಗಿಲವೊಂದು ಕಾಣಿಸಿಕೊಂಡು ಮೀನುಗಾರರು ಆತಂಕಕ್ಕೆ ಒಳಗಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಬ್ಬಿ ಸಮುದ್ರದ ಕಡಲ ತೀರದಲ್ಲಿ ನಡೆದಿದೆ. ಸಾಮಾನ್ಯವಾಗಿ ತಿಮಿಂಗಲುಗಳು ಆಳಸಮುದ್ರದಲ್ಲಿ ಇರುತ್ತವೆ. ಮತ್ತು ಕಾಣಿಸಿಕೊಳ್ಳುವುದು ಅಪರೂಪ. ಇಂದು (ಶನಿವಾರ) ಬೆಳಿಗ್ಗೆ ಸಮುದ್ರದಲ್ಲಿ ಅದು ಮೀನುಗಾರರಿಗೆ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಮೀನುಗಾರರು … Continued

ಭೀಕರ ಅಪಘಾತ: ಒಂದೇ ಕುಟುಂಬದ ಐವರ ದುರ್ಮರಣ

ಮಂಡ್ಯ: ಒಂದೇ ಕುಟುಂಬದ ಐವರು ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ಗೇಟ್ ಬಳಿ ನಡೆದ ಬಗ್ಗೆ ವರದಿಯಾಗಿದೆ. ದಡದಪುರ ಗ್ರಾಮದ ಮುತ್ತಮ್ಮ(45), ಮಗಳು ಬಸಮ್ಮಣಿ(30), ಮಗ ವೆಂಕಟೇಶ(25), ಬಸಮ್ಮಣಿ ಅವರ ಮಕ್ಕಳಾದ ಚಾಮುಂಡೇಶ್ವರಿ (8) ಹಾಗೂ, 2 ವರ್ಷದ ಗಂಡು ಮಗು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮುತ್ತಮ್ಮ … Continued

ವಿಧಾನ ಪರಿಷತ್ ಚುನಾವಣೆ: ಬಿಜೆಪಿಯಿಂದ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನಪರಿಷತ್​ ಚುನಾವಣೆ ಡಿಸೆಂಬರ್ 10 ರಂದು ನಡೆಯಲಿದೆ. ಈ ಹಿನ್ನೆಲೆ 25 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಲಿ ಸದಸ್ಯರ ಪೈಕಿ ಕೊಡಗು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಹಾಲಿ ಎಂಎಲ್​ಸಿ ಸುನಿಲ್ ಸುಬ್ರಮಣಿ ಸೋದರನಿಗೆ ಟಿಕೆಟ್​ ನೀಡಲಾಗಿದೆ. ಸುನಿಲ್ ಸುಬ್ರಮಣಿ ಸಹೋದರ ಸುಜಾ ಕುಶಾಲಪ್ಪಗೆ ಟಿಕೆಟ್​ … Continued

ಡಿ.13ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ

ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿ ಸುವರ್ಣಸೌಧದಲ್ಲಿ ಡಿಸೆಂಬರ್ 13ರಿಂದ ನಡೆಯಲಿದೆ. ಡಿಸೆಂಬರ್ 13 ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ. ಮೂರು ವರ್ಷದ ನಂತರ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಡಿಸೆಂಬರ್ 13 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನ ಸಭೆಯನ್ನು ಸಮಾವೇಶಗೊಳಿಸಬೇಕೆಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಅಧಿಸೂಚನೆ ಹೊರಡಿಸಿದ್ದಾರೆ. … Continued

ಕಾರ್ತಿಕ ಮಾಸ ಮುಗಿಯವ ವರೆಗೂ ಮಳೆಗಾಲ ಇರಲಿದೆ: ಕೋಡಿಮಠದ ಶ್ರೀಗಳ ಭವಿಷ್ಯ

ಧಾರವಾಡ: ಕಾರ್ತಿಕ ಮಾಸ ಮುಗಿಯವರೆಗೂ ಮಳೆಗಾಲ ಮುಂದುವರಿಯಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಧಾರವಾಡದಲ್ಲಿ ಇಂದು (ಶುಕ್ರವಾರ) ಮಾಧ್ಯದವರ ಜೊತೆ ಮಾತನಾಡಿದ ಅವರು, ಮಳೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಕೃತಿ ವಿಕೋಪದಿಂದ ಮೆಳೆ ಹೆಚ್ಚಾಗುತ್ತಿದೆ. ಇನ್ನೂ ಅನಾಹುತವಾಗುವ ಸಾಧ್ಯತೆಯಿದೆ. ಮಳೆ ಕಡಿಮೆಯಾಗಲು ಮಕರ ಸಂಕ್ರಮಣದವರೆಗೂ ಕಾಯಬೇಕು ಎಂದು ಕೋಢಿಮಠದ ಶ್ರೀಗಳು ಹೇಳಿದರು. ದೈವ ಕೃಪೆಯಿಂದ … Continued

ರಾಜ್ಯಾದ್ಯಂತ ಮುಂದಿನ ಐದು ದಿನ ಭಾರೀ ಮಳೆ: ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನವೆಂಬರ್‌ 23 ರ ವರೆಗೆ ಮಳೆ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಭಾರೀ ಅವಾಂತರವೇ ಸೃಷ್ಟಿಯಾಗಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಅಲ್ಲದೇ ರಾಜ್ಯದ 11 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. … Continued