ವೀಡಿಯೊ…| ಗೋಕರ್ಣ ಕಡಲತೀರದಲ್ಲಿ ಡಾಲ್ಫಿನ್‌ ರಕ್ಷಣೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಕಡಲತೀರದಲ್ಲಿ ನಡೆದ ಅಪರೂಪದ ವಿದ್ಯಮಾನದಲ್ಲಿ, ಇಬ್ಬರು ಯುವಕರು ದಡಕ್ಕೆ ಕೊಚ್ಚಿ ಬಂದಿದ್ದ ಡಾಲ್ಫಿನ್‌ನ ಜೀವವನ್ನು ಉಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಗೋಕರ್ಣದ ಕರಾವಳಿಯಲ್ಲಿರುವ ಸೂರ್ಯ ರೆಸಾರ್ಟ್ ಬಳಿ ಕಡಲತೀರಕ್ಕೆ , ಸುಮಾರು ಐದರಿಂದ ಆರು ಅಡಿ ಉದ್ದದ ಡಾಲ್ಫಿನ್ ಮೀನು ಬಂದಿತ್ತು, ಅದು ನೀರಿನ … Continued

ಬೀದಿಗಳಲ್ಲಿ ಕಸ ಎಸೆದರೆ, ನಿಮ್ಮ ಮನೆ ಮುಂದೆ ಕಸ ಸುರಿದು ದಂಡ…! ಬೇಕಾಬಿಟ್ಟಿ ಕಸ ಎಸೆಯುವವರ ವಿರುದ್ಧ ಜಿಬಿಎ ವಿನೂತನ ಕ್ರಮ

 ಬೆಂಗಳೂರು: ರಸ್ತೆಗಳಲ್ಲಿ ಕಸ ಎಸೆಯುವ ಬೆಂಗಳೂರಿನ ನಿವಾಸಿಗಳಿಗೆ ತೀವ್ರ ಎಚ್ಚರಿಕೆ ನೀಡಲಾಗಿದೆ. ನೀವು ರಸ್ತೆಯ ಮೇಲೆ ಕಸ ಎಸೆದರೆ, ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಅದನ್ನು ನಿಮ್ಮ ಮನೆ ಬಾಗಿಲಿಗೇ ವಾಪಸ್ ಎಸೆಯಲಿದೆ. ಜಿಬಿಎ (GBA) ಯ “ಕಸ ಎಸೆಯುವ ಹಬ್ಬ” ಎಂಬ ಈ ವಿನೂತನ ಉಪಕ್ರಮವು, ನಗರವನ್ನು ಕೊಳಕು ಮಾಡುವ ಜನರ ಮನೆ ಬಾಗಿಲಿಗೆ … Continued

ಡಾ. ರಾಜ​​ಕುಮಾರ, ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ ಪ್ರಶಸ್ತಿ ಘೋಷಣೆ

ಬೆಂಗಳೂರು : ಕರ್ನಾಟಕ ಸರ್ಕಾರ ನೀಡುವ ಡಾ ರಾಜಕುಮಾರ ಪ್ರಶಸ್ತಿ, ವಿಷ್ಣುವರ್ಧನ್ ಪ್ರಶಸ್ತಿ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಗುರುವಾರ (ಅಕ್ಟೋಬರ್‌ ೩೦) ಘೋಷಿಸಲಾಗಿದೆ. ಹಿರಿಯ ನಟಿ ಉಮಾಶ್ರೀ ಅವರಿಗೆ ಡಾ ರಾಜಕುಮಾರ ಪ್ರಶಸ್ತಿಯನ್ನು ನೀಡಲಾಗಿದೆ. 2019ನೇ ಸಾಲಿನ ಡಾ ರಾಜ​​ಕುಮಾರ ಪ್ರಶಸ್ತಿ ಇದಾಗಿದೆ. ಉಮಾಶ್ರೀ ಅವರು ಇಷ್ಟು ವರ್ಷ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ, ಅವರ … Continued

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; 70 ಸಾಧಕರಿಗೆ ಪ್ರಶಸ್ತಿ : ಸಂಪೂರ್ಣ ಪಟ್ಟಿ ಇಲ್ಲಿದೆ….

ಬೆಂಗಳೂರು : 2025-26ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Awards 2025)ಯನ್ನು ಪ್ರಕಟಿಸಲಾಗಿದೆ. ಒಟ್ಟು 70  ಸಾಧಕರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿ ಇಂದು (ಅಕ್ಟೋಬರ್ 30) ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟಿಸಿದ್ದು, ಇದೇ ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 … Continued

ವಿದ್ಯಾರ್ಥಿಗಳ ಪಾಸಿಂಗ್‌ ಅಂಕ ಇಳಿಕೆ ಬೇಡ : ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಸಭಾಪತಿ ಹೊರಟ್ಟಿ ಪತ್ರ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇದ್ದ ಕನಿಷ್ಠ ಅಂಕಗಳನ್ನು 35ರಿಂದ 33ಕ್ಕೆ ಇಳಿಸಲು ಸರ್ಕಾರ ಮುಂದಾಗಿರುವುದಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj horatti) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಬಸವರಾಜ ಹೊರಟ್ಟಿಯವರು 33 ಅಂಕದ ಬದಲಿಗೆ 35 ಅಂಕಗಳನ್ನೇ ನಿಗದಿಪಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ … Continued

ನವೆಂಬರ್‌ 28ಕ್ಕೆ ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಉಡುಪಿ : ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಉಡುಪಿಗೆ ಆಗಮಿಸುತ್ತಿದ್ದು, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ- ಬೃಹತ್ ಗೀತೋತ್ಸವದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನವೆಂಬರ್ 28ರ ಉಡುಪಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ, ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ಶ್ರೀಕೃಷ್ಣನ … Continued

ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಸಿಎಂ ಆಗ್ತಾರೆ ; ಯತ್ನಾಳ ಭವಿಷ್ಯ

ಬೆಳಗಾವಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ. ಬುಧವಾರ ಇಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ. ಈಗ ಮುಖ್ಯಮಂತ್ರಿ ಹುದ್ದೆಗೆ ಲಾಬಿ ಮಾಡುತ್ತಿರುವವರಿಗೆ ಅದು ಸಿಗುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಮುಂದಿನ ಮುಖ್ಯಮಂತ್ರಿ … Continued

ಮೊಂತಾ ಚಂಡಮಾರುತ ; ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಜೋರಾದ ಗಾಳಿ-ಮಳೆ ಸಾಧ್ಯತೆ

ಬೆಂಗಳೂರು : ಮೊಂತಾ ಚಂಡಮಾರುತದ (Monta Cyclone) ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಅಕ್ಟೋಬರ್‌ 30ರಂದು ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Karnataka Weather) ಸಾಧ್ಯತೆಯಿದೆ. ಅಕರಾವಳಿಯಲ್ಲಿ ಗಂಟೆಗೆ ಸರಾಸರಿ 35 -45 ಕಿಮೀಯಿಂದ ಗರಿಷ್ಠ 55 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ … Continued

ಬೆಂಗಳೂರು : ಕಾರಿನ ಕನ್ನಡಿಗೆ ಬೈಕ್‌ ತಾಗಿದ್ದಕ್ಕೆ 2 ಕಿಮೀ ಹಿಂಬಾಲಿಸಿ ಬೈಕಿಗೆ ಗುದ್ದಿ ಸವಾರನನ್ನು ಸಾಯಿಸಿದ ದಂಪತಿ…!

ಬೆಂಗಳೂರು: ಕಾರಿನ ಕನ್ನಡಿಗೆ ಬೈಕ್‌ ಸ್ವಲ್ಪ ತಾಗಿದ್ದಕ್ಕೆ ಕಾರಿನವರು ಬೆನ್ನಟ್ಟಿ ಬೈಕ್ ಗೆ ಗುದ್ದಿ ಸವಾರನನ್ನು ಸಾಯಿಸಿರುವ ಘಟನೆ ಬೆಂಗಳೂರಿನ​ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರಿನ​ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮ ಲೇಔಟ್‌ನಲ್ಲಿ ಅಕ್ಟೋಬರ್ 25ರಂದು ರಾತ್ರಿ ಈ ಘಟನೆ ನಡೆದಿದೆ. ದರ್ಶನ ಮತ್ತು ವರುಣ ಎಂಬುವರು ಬೈಕ್ … Continued

ಸ್ಪೀಕರ್ ಯು.ಟಿ ಖಾದರ್ ವಿರುದ್ಧ ‘ಭ್ರಷ್ಟಾಚಾರ’ ಆರೋಪ; ನ್ಯಾಯಾಂಗ ತನಿಖೆಗೆ ಕಾಗೇರಿ ಆಗ್ರಹ

ಬೆಂಗಳೂರು: ಸ್ಪೀಕರ್ ಯು.ಟಿ. ಖಾದರ್ ಅವರ (UT Khader) ಅವಧಿಯಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ ಎಂದು ಸಂಸದ ಮತ್ತು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಗಳಿಂದ ಆ ಸ್ಥಾನವು ಮುಕ್ತವಾಗಬೇಕು. ಯು.ಟಿ. … Continued