ಬಾಯಿ ಮುಚ್ಕೊಂಡು ಕೆಲಸ ಮಾಡಿ, 224 ಅಭ್ಯರ್ಥಿಗಳೂ ಸಿಎಂ ಅಭ್ಯರ್ಥಿ​ಗಳೇ : ಪರೋಕ್ಷವಾಗಿ ಜಮೀರ್ ವಿರುದ್ಧ ಡಿಕೆಶಿ ಗುಡುಗು

ಬೆಂಗಳೂರು: ನನ್ನ ಲೆವೆಲ್‌ಗೆ ಮಾತನಾಡುವವರ ವಿಚಾರ ನಾನು ಮಾತನಾಡುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಬಾಯಿ ಮುಚ್ಚಿಕೊಂಡು ಮಾಡಬೇಕು. ಎಲ್ಲರಿಗೂ ನಾನು ಈ ಮಾತು ಹೇಳುತ್ತಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭೆ ಚುನಾವಣೆಗೆ ನಿಲ್ಲುವ ಎಲ್ಲ 224 ಅಭ್ಯರ್ಥಿಗಳೂ ಮುಖ್ಯಮಂತ್ರಿ ಅಭ್ಯರ್ಥಿಗಳೇ. ಈ ಬಗ್ಗೆ ಹೈ ಕಮಾಂಡ್‌ ನಿರ್ಧರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಶಾಸಕ … Continued

ಕೊಡಗಿನಲ್ಲಿ ಭಾರೀ ಶಬ್ದದೊಂದಿಗೆ ಮತ್ತೆ ಭೂಕುಸಿತ :18 ಕುಟುಂಬಗಳ ಸ್ಥಳಾಂತರ

ಕೊಡಗು: ಭಾರೀ ಶಬ್ದದೊಂದಿಗೆ ಕೊಡಗಿನಲ್ಲಿ ಮತ್ತೆ ಭೂ ಕುಸಿತ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಬೆಟ್ಟದ ತಪ್ಪಲಿನ 18 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮದೆನಾಡು ಸುತ್ತಮುತ್ತ ಇಂದು, ಶನಿವಾರ ಬೆಳಿಗ್ಗೆ ಕಂಪನದ ಅನುಭವ ಉಂಟಾಗಿದೆ. ಇಂದು (ಜುಲೈ 23) ಮಡಿಕೇರಿ ತಾಲೂಕಿನ ಮದೆನಾಡು ಸಮೀಪದ ಸೀಮೆಹುಲ್ಲುಕಜೆ ಬೆಟ್ಟದಲ್ಲಿ ಭೂಕುಸಿತ ಆಗಿದ್ದು, ಭೂಮಿಯೊಳಗೆ ಭಾರಿ ಶಬ್ದದೊಂದಿಗೆ ಕೆಸರು ಕೊಚ್ಚಿ … Continued

ಕರ್ನಾಟಕ ಉದ್ಯೋಗ ನೀತಿ 2022-25: ಉದ್ಯೋಗ ಮೂರು ಪಟ್ಟು ಹೆಚ್ಚಳ ನಿರೀಕ್ಷ, ಕನ್ನಡಿಗರಿಗೆ ಆದ್ಯತೆ

ಬೆಂಗಳೂರು: ‘ಕರ್ನಾಟಕ ಉದ್ಯೋಗ ನೀತಿ 2022- 25’ ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಎಲ್ಲ ರೀತಿಯ ಉದ್ಯಮಗಳು ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವ ಸಂದರ್ಭ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಅವುಗಳನ್ನು ಕನ್ನಡಿಗರಿಗೇ ನೀಡಬೇಕು ಎಂಬ ಅಂಶವನ್ನು ಸೇರಿಸಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು … Continued

ತುಮಕೂರು: ನಾಪತ್ತೆಯಾಗಿ ವಾರದ ಬಳಿಕ ಮರಳಿ ಮನೆ ಸೇರಿದ ಗಿಳಿ, 85 ಸಾವಿರ ರೂ. ಬಹುಮಾನ ನೀಡಿದ ಕುಟುಂಬ…!

ತುಮಕೂರು: ತಮ್ಮ ಕುಟುಂಬದ ಸದಸ್ಯನಾಗಿದ್ದ ಗಿಳಿಯೊಂದು ಜುಲೈ 16ರಂದು ನಾಪತ್ತೆಯಾದ ನಂತರ ಗಿಳಿಗಾಗಿ ಸಾಕಷ್ಟು ಹುಡುಕಾಡಿದ ಕುಟುಂಬ ನಗರದಲ್ಲಿ ಅಲ್ಲಲ್ಲಿ ಪೋಸ್ಟರ್‌ಗಳನ್ನು ಹಾಕಿ ಗಿಳಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ಕೊಡುವುದಾಗಿ ಘೋಷಿಸಿತ್ತು. ಈಗ ಆ ಗಿಳಿ ಸಿಕ್ಕಿದ್ದು ಗಿಣಿ ಸಿಕ್ಕ ಖುಷಿಯಲ್ಲಿ ಹುಡುಕಿ ಕೊಟ್ಟವರಿಗೆ ಕುಟುಂಬವು 85 ಸಾವಿರ ರೂ.ಗಳ ಬಹುಮಾನ ಕೊಟ್ಟಿದೆ. ತುಮಕೂರಿನ … Continued

ತಂದೆಯ ಅಚಾತುರ್ಯಕ್ಕೆ ಪುಟ್ಟ ಮಗು ಸಾವು: ವಾಹನ ರಿವರ್ಸ್‌ ತೆಗೆದುಕೊಳ್ಳುವಾಗ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ವಾಹನ

ಬೆಂಗಳೂರು: ಇಟ್ಟಿಗೆ ತುಂಬಿದ್ದ ವಾಹನವನ್ನು ಹಿಂದಕ್ಕೆ ತೆಗೆಯುವಾಗ ಆಟವಾಡುತ್ತಿದ್ದ ಪುಟ್ಟ ಮಗುವಿನ ಮೇಲೆ ಹರಿದು ಕಂದಮ್ಮ ಸಾವಿಗೀಡಾದ ಘಟನೆ ಬೆಂಗಳೂರು ಹೊರವಲಯ ಕಾಮನಹಳ್ಳಿ ಸಮೀಪದ ಗೋಣಿಘಟ್ಟಪುರದಲ್ಲಿ ನಡೆದಿದೆ. ಒಂದೂವರೆ ವರ್ಷದ ಮನಿಶಾ ದೇವಿ ಮೃತ ಮಗು ಎಂದು ಗುರುತಿಸಲಾಗಿದೆ. ಮಗುವಿನ ತಂದೆ ಬಾಲಕೃಷ್ಣ ಅವರೇ ವಾಹನವನ್ನು ಹಿಂದಕ್ಕೆ ಚಲಾಯಿಸುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. … Continued

ರಾಜ್ಯದಲ್ಲಿ ಶುಕ್ರವಾರ 1,562 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಶುಕ್ರವಾರ 1,562 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಹಾಗೂ 1,107 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಯಾವುದೇ ಮರಣ ದಾಖಲಾಗಿಲ್ಲ. ರಾಜಧಾನಿ ಬೆಂಗಳೂರು ನಗರದಲ್ಲಿಯೇ 1,244 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 4.67 ಮತ್ತು ಮರಣ ಶೇ.0.00 ಇದೆ. ಇಂದು, ಶುಕ್ರವಾರ 33,391 ಮಂದಿ … Continued

ಶವವಾಗಿ ಪತ್ತೆಯಾದ ತಲಕಳ ಧರ್ಮ ಚಾವಡಿಯ ಸ್ವಾಮೀಜಿ

ಮಂಗಳೂರು: ಶ್ರೀಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿ (51) ತಮ್ಮ ಆಶ್ರಮ ತಲಕಳ ಧರ್ಮ ಚಾವಡಿಯಲ್ಲಿ ಶುಕ್ರವಾರ (ಜುಲೈ 22) ಶವವಾಗಿ ಪತ್ತೆಯಾಗಿದ್ದಾರೆ.ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸನ್ಯಾಸ ಸ್ವೀಕರಿಸುವ ಮೊದಲು ಶ್ರೀಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿ ಮುಂಬೈನಲ್ಲಿ ಹೋಟೆಲ್ ಉದ್ಯಮಿಯಾಗಿದ್ದರು. ಪೂರ್ವಾಶ್ರಮದಲ್ಲಿ ದೇವಿಪ್ರಸಾದ್ ಶೆಟ್ಟಿ ಹೆಸರಿನಿಂದ ಗುರುತಿಸಲ್ಪಟ್ಟಿದ್ದು, ಅವರಿಗೆ ಮದುವೆಯಾಗಿದ್ದು, ಪತ್ನಿ ಹಾಗೂ ಮಗಳಿದ್ದಾಳೆ. ನಂತರ … Continued

ಟ್ರಾಯ್‌ ಯೋಜನೆಯಡಿ 5ಜಿ ನೆಟ್​​ವರ್ಕ್ ಪರೀಕ್ಷಿಸಿದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆಂಗಳೂರು ಮೆಟ್ರೊ

ಬೆಂಗಳೂರು: ಭಾರತದಲ್ಲಿ 5G ಪರೀಕ್ಷೆಯು ಪೂರ್ಣ ಸ್ವಿಂಗ್‌ನಲ್ಲಿದೆ ಎಂದು ತೋರುತ್ತಿದೆ. ಜಿಯೋ (Jio) ಮತ್ತು ಏರ್‌ಟೆಲ್‌ (Airtel) ನಂತಹ ಕಂಪನಿಗಳು 2022 ರ ಅಂತ್ಯದ ವೇಳೆಗೆ ಭಾರತದಲ್ಲಿ 5G ನೆಟ್‌ವರ್ಕ್ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದೀಗ ಟ್ರಾಯ್ (TRAI) ಪ್ರಾಯೋಗಿಕ ಯೋಜನೆಯಡಿಯಲ್ಲಿ 5 ಜಿ ನೆಟ್​​ವರ್ಕ್​​​ನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಬೆಂಗಳೂರು … Continued

ಸುಪ್ರೀಂಕೋರ್ಟ್‌ನಿಂದ ಯಡಿಯೂರಪ್ಪಗೆ ರಿಲೀಫ್

ನವದೆಹಲಿ: ಐಟಿ ಕಾರಿಡಾರ್ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಭೂ ಹಂಚಿಕೆ ಹಗರಣದಲ್ಲಿ ಆರೋಪಿಯಾಗಿರುವ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಬಿಜೆಪಿಯ ಹಿರಿಯ ನಾಯಕ 2006-07ರಲ್ಲಿ ಅವರು … Continued

ಚುಂಬನದ ವೀಡಿಯೊ ವೈರಲ್‌ ಆದ ನಂತರ 8 ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಮಂಗಳೂರು: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಚುಂಬಿಸುತ್ತಿರುವ ವೀಡಿಯೋ ವೈರಲ್ ಆಗಿದ್ದು, ಮಂಗಳೂರಿನಲ್ಲಿ ಎಂಟು ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳೂರು: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಚುಂಬಿಸುತ್ತಿರುವ ವೀಡಿಯೋ ವೈರಲ್ ಆಗಿದ್ದು, ಮಂಗಳೂರಿನಲ್ಲಿ ಎಂಟು ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲೇಜಿನ ಎಂಟು ಹದಿಹರೆಯದವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ವೀಡಿಯೊವನ್ನು ಆರು ತಿಂಗಳ ಹಿಂದೆ ಚಿತ್ರೀಕರಿಸಲಾಗಿದ್ದು, ಇತ್ತೀಚೆಗೆ … Continued