ಕಾಂಗ್ರೆಸ್‌ ಅಧಕಾರಕ್ಕೆ ಬಂದರೆ ಕೃಷಿ ಕಾಯ್ದೆ ರದ್ದು:ಪ್ರಿಯಾಂಕಾ

ಲಖನೌ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲಾಗುವುದು ಎಂದು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಬುಧವಾರ ಉತ್ತರ ಪ್ರದೇಶದಲ್ಲಿ ಸಹಾರನ್ ಪುರದಲ್ಲಿ ಕಿಸಾನ್‌ ಪಂಚಾಯತ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಅವಮಾನಿಸುತ್ತಿದ್ದಾರೆ … Continued

ಫೆ,೧೮ರಂದು ರಾಷ್ಟ್ರವ್ಯಾಪಿ ರೈಲು ತಡೆ:ಸಂಯುಕ್ತ ಕಿಸಾನ್‌ ಮೋರ್ಚಾ ಘೋಷಣೆ

ನವ ದೆಹಲಿ: ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸಿದ ರೈತ ಸಂಘಗಳು ಫೆಬ್ರವರಿ 18 ರಂದು ರಾಷ್ಟ್ರವ್ಯಾಪಿ ನಾಲ್ಕು ತಾಸುಗಳ ರೈಲು ತಡೆ ಚಳವಳಿ ಮಾಡುವುದಾಗಿ ಪ್ರಕಟಿಸಿವೆ. ಫೆಬ್ರವರಿ 12 ರಿಂದ ರಾಜಸ್ಥಾನದಲ್ಲಿ ಟೋಲ್ ಸಂಗ್ರಹಣೆಗೆ ನೀಡುವುದಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆಯಲ್ಲಿ ತಿಳಿಸಿದೆ. ಫೆಬ್ರವರಿ … Continued

೩೪ ಸಾವು, ಸುರಂಗದೊಳಗೆ ಕಾರ್ಮಿಕರ ಪತ್ತೆಗೆ ಡ್ರೋನ್‌-ಡಾಗ್ ಸ್ಕ್ವಾಡ್‌ ಬಳಕೆ

ಉತ್ತರಾಖಂಡ: ಚಮೋಲಿ ಜಿಲ್ಲೆಯ ತಪೋವನ್‌ನಲ್ಲಿರುವ ಎನ್‌ಟಿಪಿಸಿ ಹೈಡಲ್ ವಿದ್ಯುತ್ ಯೋಜನೆಯಲ್ಲಿ 1.7 ಕಿಲೋಮೀಟರ್ ಉದ್ದದ ಸುರಂಗದಲ್ಲಿ ಸುಮಾರು 35 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ.ಬುಧವಾರ ಸಂಜೆ ತನಕ, 1.7 ಕಿ.ಮೀ ಉದ್ದದ ಸುರಂಗದೊಳಗೆ 100 ಮೀಟರ್ ಸುರಂಗ ತೆರವುಗೊಳಿಸಲು ಸಾಧ್ಯವಾಯಿತು. 100 ಮೀ ನಂತರ ಪ್ರವಾಹದಿಂದ ತಂದ ದೊಡ್ಡ ಪ್ರಮಾಣದ ಕೆಸರು ತುಂಬಿದ್ದರಿಂದ ತೆರವಿಗೆ ಅಡಚಣೆಯಾಗಿದೆ. ಡ್ರೋನ್‌ಗಳು ಮತ್ತು … Continued

ಕೃಷಿ ಕಾಯ್ದೆಯಲ್ಲಿ ತೊಡಕಿದ್ದರೆ ಬದಲಾವಣೆಗೆ ಸಿದ್ಧ: ರೈತರಿಗೆ ಪ್ರಧಾನಿ ಅಭಯ

ನವದೆಹಲಿ: ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳು ಬಲವಂತವಾಗಿಲ್ಲ ಮತ್ತು ಆಯ್ಕೆಗಳನ್ನು ಮಾತ್ರ ನೀಡುತ್ತವೆ. ಒಂದೊಮ್ಮೆ ರೈತರು ಮನವರಿಕೆಯಾಗುವ ಸಮರ್ಥ ಸಲಹೆಯೊಂದಿಗೆ ಬಂದರೆ ಕಾನೂನಿನಲ್ಲಿ ಬದಲಾವಣೆ ಮಾಡಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ, ಕೃಷಿ ಮಾರುಕಟ್ಟೆಗಳ ಹಳೆಯ ವ್ಯವಸ್ಥೆ ಮತ್ತು ಎಂಎಸ್‌ಪಿ ಮುಂದುವರಿಯುತ್ತದೆ ಎಂದು ಪುನರುಚ್ಚರಿಸಿದ ಅವರು, … Continued

ಸೆಬಿ ನಿಯಮ ಉಲ್ಲಂಘನೆ: ಹಣ ಪಾವತಿಸಿ ಸಮಸ್ಯೆ ಬಗೆಹರಿಸಿಕೊಂಡ ಇಂಡಿಗೋ

ನವದೆಹಲಿ: ಸೆಬಿಯ ನಿಯಮ ಉಲ್ಲಂಘನೆಗಾಗಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ನಡೆಸುತ್ತಿರುವ ಇಂಟರ್‌ಗ್ಲೋಬ್‌ ಏವಿಯೇಶನ್‌ ಲಿಮಿಟೆಡ್‌ ೨.೧೦ ಕೋಟಿ ರೂ. ಭರಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡಿದೆ. ಸೆಬಿಯ ಒಪ್ಪಿಗೆಯ ಕಾರ್ಯವಿಧಾನದ ಅಡಿಯಲ್ಲಿ, ತಪ್ಪನ್ನು ಒಪ್ಪಿಕೊಳ್ಳದೇ ಅಥವಾ ಅದನ್ನು ತಪ್ಪನ್ನು ನಿರಾಕರಿಸದೆ ದಂಡವನ್ನು ಪಾವತಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದೆ. ತನ್ನ ಪಾಲುದಾರ ರಾಹುಲ್ ಭಾಟಿಯಾ ಮತ್ತು ಇಂಟರ್ … Continued

ಐಎನ್‌ಎಸ್‌ ವಿರಾಟ ಒಡೆಯಲು ಸುಪ್ರೀಂಕೋರ್ಟ್‌ ತಡೆ

ವಿಮಾನವಾಹಕ ನೌಕೆ ಐಎನ್‌ಎಸ್‌ ವಿರಾಟ್ ‌ಅನ್ನು ಒಡೆಯುವ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯ ತಡೆಯೊಡ್ಡಿದ್ದು, ವಿಶಾಲವಾದ ಹಡಗನ್ನು ವಸ್ತುಸಂಗ್ರಹಾಲಯ ಮಾಡುವಂತೆ ಆದೇಶ ನೀಡಿದೆ. ವಿಮಾನವಾಹನ ನೌಕೆಯನ್ನು ವಸ್ತುಸಂಗ್ರಹಾಲಯವಾಗಿ ರೂಪಿಸಬೇಕೆಂಬ ಎನ್ವಿಟೆಕ್‌ ಮೆರೈನ್‌ ಕನ್ಸಲ್ಟಂಟ್‌ ಲಿಮಿಟೆಡ್‌ನ ಮನವಿಯನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದ ನಂತರ ಸಂಸ್ಥೆ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಐಎನ್‌ಎಸ್‌ ವಿರಾಟನ್ನು ಒಡೆಯದೇ ಯಥಾಸ್ಥಿತಿ ಉಳಿಸಿಕೊಳ್ಳುವಂತೆ ನ್ಯಾಯಾಲಯ … Continued

ತೆಲಂಗಾಣದಲ್ಲಿ ವೈ.ಎಸ್‌.ಶರ್ಮಿಳಾ ಹೊಸ ಪಕ್ಷ.?

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ ರೆಡ್ಡಿ ಅವರ ಸೋದರಿ ವೈ.ಎಸ್.ಶರ್ಮಿಳಾ ತೆಲಂಗಾಣದಲ್ಲಿ ನೂತನ ಪಕ್ಷ ಆರಂಭಿಸುವ ಸಾಧ್ಯತೆಯಿದೆ. ೨೦೨೩ರಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕೆ.ಚಂದ್ರಶೇಖರ ರಾವ್‌ ಅವರ (ಕೆಸಿಆರ್)‌ ಪಕ್ಷಕ್ಕೆ ಪೈಪೋಟಿ ನೀಡಲು ಹೊಸ ಪಕ್ಷ ಆರಂಭಿಸಲು ಚಿಂತನೆ ನಡೆಸಿದ್ದಾರೆ. ಆಂಧ್ರಪ್ರದೇಶದ ಮಾಜಿ ಸಿಎಂ ವೈ.ಎಸ್‌.ರಾಜಶೇಖರ ಅವರ ಪುತ್ರಿ ಶರ್ಮಿಳಾ ತೆಲಂಗಾಣದಲ್ಲಿ ಭವಿಷ್ಯದ … Continued

ಎಂ.ಜೆ. ಅಕ್ಬರ್‌ ಮಾನಷ್ಟ ಮೊಕದ್ದಮೆ ತೀರ್ಪು: ಫೆ.೧೭ಕ್ಕೆ ಮುಂದೂಡಿಕೆ

ಲೈಂಗಿಕ ಕಿರುಕುಳ ಆರೋಪ ಮಾಡಿದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ದಾಖಲಿಸಿದ ಮಾನಹಾನಿ ಪ್ರಕರಣದ ತೀರ್ಪನ್ನು ದೆಹಲಿ ನ್ಯಾಯಾಲಯ ಫೆ.೧೭ಕ್ಕೆ ಮುಂದೂಡಿದೆ. ಎರಡೂ ಪಕ್ಷಗಳಿಂದ ಲಿಖಿತ ಸಲ್ಲಿಕೆಯಲ್ಲಿ ವಿಳಂಬವಾಗಿದ್ದರಿಂದ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರವೀಂದ್ರಕುಮಾರ ಪಾಂಡೆ ತೀರ್ಪನ್ನು ಮುಂದೂಡಿದ್ದಾಗಿ ತಿಳಿಸಿದರು. ೧೯೯೪ರಲ್ಲಿ ಏಷ್ಯನ್‌ ಏಜ್‌ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ … Continued

ಕಾಂಗ್ರೆಸ್‌-ಎಡ ಪಕ್ಷಗಳ ಬಗ್ಗೆ ಮಮತಾ ಮೌನ

ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ತಮಗೆ ನೇರ ಎದುರಾಳಿ ಎಂಬುದನ್ನು ಮನಗಂಡ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳ ಬಗ್ಗೆ ಮೌನವಹಿಸಿದ್ದಾರೆ. ಇತ್ತೀಚಿನ ಚುನಾವಣಾ ಭಾಷಣಗಳಲ್ಲಿ ಅವರು ಕೇವಲ ಬಿಜೆಪಿಯನ್ನು ಮಾತ್ರ ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌-ಎಡ ಪಕ್ಷಗಳು ಉತ್ತಮ ಪ್ರದರ್ಶನ … Continued

೫ ವರ್ಷದಲ್ಲಿ ೬.೭೬ ಲಕ್ಷ ಜನರಿಗೆ ಭಾರತೀಯ ಪೌರತ್ವ

ನವದೆಹಲಿ: ಕೇಂದ್ರ ಸರ್ಕಾರ ಕಳೆದ 5 ವರ್ಷಗಳಲ್ಲಿ 6,76,074 ಮಂದಿಗೆ ಭಾರತೀಯ ಪೌರತ್ವವನ್ನು ನೀಡಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ. ಸಂಸದ ಕಾರ್ತಿ ಚಿದಂಬರಂ ಅವರ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರ ನೀಡಿರುವ ಅವರು 2015- 19ರ ನಡುವೆ ನೀಡಲಾಗಿರುವ ಭಾರತೀಯ ಪೌರತ್ವದ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದೇಶದಲ್ಲಿ ನೆಲೆಸುತ್ತಿರುವವರಿಗೆ … Continued