ಭಾರತದಲ್ಲಿ 9,119 ಹೊಸದಾಗಿ ಕೋವಿಡ್‌ ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 9,119 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 396 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,45,44,882ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,66,980ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇದೇ … Continued

ಮೇಘಾಲಯದಲ್ಲಿ ಕಾಂಗ್ರೆಸ್‌ಗೆ ಆಘಾತ: ಮಾಜಿ ಸಿಎಂ ಮುಕುಲ್ ಸಂಗ್ಮಾ ಸೇರಿ 12 ಶಾಸಕರು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆ..!

ನವದೆಹಲಿ: ಮೇಘಾಲಯದಲ್ಲಿ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಭಾರೀ ಆಘಾತವಾಗಿದೆ. ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ 18 ಕಾಂಗ್ರೆಸ್ ಶಾಸಕರ ಪೈಕಿ 12 ಶಾಸಕರು ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಮೂಲಗಳ ಪ್ರಕಾರ, ಈ ಎಲ್ಲಾ ಶಾಸಕರು ಶಿಲ್ಲಾಂಗ್‌ನಲ್ಲಿ ಟಿಎಂಸಿ ಸೇರಿದರು. ವಿನ್ಸೆಂಟ್ ಎಚ್. ಪಾಲಾ … Continued

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಪಡಿತರ ಯೋಜನೆ ಇನ್ನೂ 4 ತಿಂಗಳು ಮುಂದುವರಿಕೆ: ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

ನವದೆಹಲಿ: ಕೇಂದ್ರವು ತನ್ನ ಉಚಿತ ಪಡಿತರ ಯೋಜನೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKAY) ಅನ್ನು ಇನ್ನೂ ನಾಲ್ಕು ತಿಂಗಳ ವರೆಗೆ ಅಂದರೆ ಮಾರ್ಚ್ 2022ರ ವರೆಗೆ ವಿಸ್ತರಿಸಲು ನಿರ್ಧರಿಸಿದೆ. ಬುಧವಾರದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ. ತನ್ನ ಪ್ರಮುಖ ನಿರ್ಧಾರದಲ್ಲಿ, ಏಪ್ರಿಲ್ 2020 ರಿಂದ ಮೊದಲ ಕೋವಿಡ್‌-19 ಪರಿಹಾರ … Continued

ಮುಖೇಶ​ ಅಂಬಾನಿ ಹಿಂದಿಕ್ಕಿ ಏಷ್ಯಾದ ನಂಬರ್ 1 ಶ್ರೀಮಂತನಾದ ಗೌತಮ್ ಅದಾನಿ..!

ಮುಂಬೈ: ಶ್ರೀಮಂತಿಕೆಯಲ್ಲಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಖೇಶ ಅಂಬಾನಿ ಅವರನ್ನು ಇದೇ ಮೊದಲ ಬಾರಿಗೆ ಹಿಂದಿಕ್ಕಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಬುಧವಾರದಂದು ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್‌ ಅದಾನಿ ಅವರು ಹಿಂದಿಕ್ಕಿ ಏಷ್ಯಾದ ಅತ್ಯಂತ … Continued

ಎಮ್ಮೆ ಅಂದ್ರೆ ದಡ್ಡ ಎನ್ನುವವರು ಈ ವಿಡಿಯೊದಲ್ಲಿ ಬೋರ್‌ ವೆಲ್‌ ನೀರು ಕುಡಿಯಲು ಎಮ್ಮೆಯ ಮಾಡಿದ ಬುದ್ಧಿವಂತಿಕೆ ನೋಡಿ..!

ನವದೆಹಲಿ: ಸಾಮಾನ್ಯವಾಗಿ ಮಕ್ಕಳಿಗೆ ಏನಾದರೂ ಬಾರದೇ ಇದ್ದರೆ ‘ಎಮ್ಮೆ ಕಾಯಲು ಹೋಗು’ಎಂದು ಮನೆಯಲ್ಲಿ ಬೈಯುತ್ತಾರೆ. ಅಥವಾ ಎಮ್ಮೆ ತರಹ ಸೋಮಾರಿ ಎಂದು ಬೈಯುವುದು ಸಾಮಾನ್ಯ. ಆದರೆ ಎಮ್ಮೆ ಕೂಡ ಬುದ್ಧಿವಂತ ಎನ್ನುವುದು ವಿಡಿಯೊ ನೋಡಿದರಿಗೆಲ್ಲ ಅನ್ನಿಸುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಅಧಿಕೃತ … Continued

ವಿವಾದಾತ್ಮಕ ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ಮೋದಿ ರದ್ದುಗೊಳಿಸುವುದಾಗಿ ಘೋಷಣೆ ಮಾಡಿದ ನಂತರ ಅದನ್ನು ರದ್ದು ಮಾಡುವ ನೂತನ ಮಸೂದೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಬುಧವಾರ ಅನುಮೋದನೆ ದೊರೆತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ … Continued

ಕೋವ್ಯಾಕ್ಸಿನ್ ಡೆಲ್ಟಾ ರೂಪಾಂತರಿ ವಿರುದ್ಧ ಶೇ.50ರಷ್ಟು ಪರಿಣಾಮಕಾರಿ:ಲ್ಯಾನ್ಸೆಟ್ ವರದಿ

ನವದೆಹಲಿ: ಭಾರತದ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಕೋವಿಡ್‌ ಡೆಲ್ಟಾ ರೂಪಾಂತರಿ ವಿರುದ್ಧ ಶೇ.50ರಷ್ಟು ಪರಿಣಾಮಕಾರಿ ಎಂದು ಲ್ಯಾನ್ಸೆಟ್ ವರದಿ ಮಾಡಿದೆ. ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರಿ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ಶೇ.50ರಷ್ಟು ಪರಿಣಾಮಕಾರಿಯಾಗಿದ್ದು, ಲಕ್ಷಣಸಹಿತ ಕೋವಿಡ್ ತಡೆಯುವಲ್ಲಿ ಕೋವ್ಯಾಕ್ಸಿನ್ ಎರಡು ಡೋಸ್‌ಗಳ ಪರಿಣಾಮಕಾರಿತ್ವ ಶೇ.77.8ರಷ್ಟಿದೆ. ಲಸಿಕೆಯ ಸುರಕ್ಷತೆ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ವರದಿ ಹೇಳಿದೆ. … Continued

ಮದುವೆ ಮೆರವಣಿಗೆಯಲ್ಲಿ ಹಾಕಿದ ಜೋರಾದ ಡಿಜೆ ಸೌಂಡ್ಸ್ ಅಬ್ಬರಕ್ಕೆ ಹೆದರಿ ಹೃದಯಾಘಾತಕ್ಕೆ ನನ್ನ 63 ಕೋಳಿಗಳು ಸಾವು: ದೂರು ದಾಖಲು

ನವದೆಹಲಿ: ನೆರಮನೆಯಲ್ಲಿನ ಮದುವೆ ಸಂದರ್ಭದಲ್ಲಿ ಬಳಸಿದ ಡಿಜೆ ಸೌಂಡ್ಸ್ ಪರಿಣಾಮವಾಗಿ ತನ್ನ ಫಾರ್ಮ್ ನಲ್ಲಿನ 63 ಕೋಳಿಗಳು ಸತ್ತಿವೆ ಎಂದು ಒಡಿಶಾದ ಬಾಲಾಸೋರಿಲ್ಲಿನ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಕರದಂಗಡಿ ಗ್ರಾಮ ನಿವಾಸಿ, ಕೋಳಿ ಫಾರಂ ಮಾಲಿಕ ರಂಜಿತ್ ಪರಿದಾ ಎಂಬುವವರು ನೀಲಗಿರಿ ಪೊಲೀಸ್ ಠಾಣೆಯಲ್ಲಿ ತಮ್ಮ ನೆರೆಮನೆಯ ರಾಮಚಂದ್ರ ಪರಿದಾ ಅವರ ಮದುವೆ ಮೆರವಣಿಗೆಯಲ್ಲಿ … Continued

ಸರ್ಕಾರದಿಂದ ಕ್ರಿಪ್ಟೋಕರೆನ್ಸಿ ನಿಷೇಧ ಮಸೂದೆ ಮಂಡನೆ ಸುಳಿವು: ಒಂದೇ ದಿನದಲ್ಲಿ ಕ್ರಿಫ್ಟೋ ಕರೆನ್ಸಿ ಮೌಲ್ಯ ಭಾರೀ ಕುಸಿತ

ನವದೆಹಲಿ: ಭಾರತದಲ್ಲಿ ಬಿಟ್ ಕಾಯಿನ್ (ಕ್ರಿಫ್ಟೋಕರೆನ್ಸಿ)ಗೆ ನಿಷೇಧ ಹೇರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿರುವ ನಡುವೆಯೇ ಬುಧವಾರ (ನವೆಂಬರ್ 24) ಕ್ರಿಫ್ಟೋಕರೆನ್ಸಿಗಳ ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ. ರೂಪಾಯಿ ಪರಿಭಾಷೆಯಲ್ಲಿ, ಬಿಟ್‌ಕಾಯಿನ್ ಶೇಕಡಾ 17 ರಷ್ಟು ಕುಸಿದಿದೆ, ಎಥೆರಿಯಮ್ ಶೇಕಡಾ 14, ಡಾಗ್‌ಕಾಯಿನ್ ಶೇಕಡಾ 20 ಮತ್ತು ಪೋಲ್ಕಾಡೋಟ್ ಶೇಕಡಾ 14 ರಷ್ಟು ಕುಸಿದಿದೆ. ಡಾಲರ್-ಪೆಗ್ಡ್ ಟೋಕನ್ … Continued

ಸಂಸದ-ಮಾಜಿ ಕ್ರಿಕೆಟಿಗ ಗೌತಮ್ ಗಂಭೀರಗೆ ಐಸಿಸ್​​ ಕಾಶ್ಮೀರದಿಂದ ಜೀವ ಬೆದರಿಕೆ

ನವದೆಹಲಿ: ‘ಐಸಿಸ್ ಕಾಶ್ಮೀರ’ದಿಂದ ತನಗೆ ಜೀವ ಬೆದರಿಕೆ ಇದೆ ಎಂದು ದೆಹಲಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಮತ್ತು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ. ಗಂಭೀರ್ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ, ಹಾಗೂ ಅದರ ನಂತರ ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೊಲೆ ಬೆದರಿಕೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಕೇಂದ್ರ … Continued