ಜಮ್ಮು ಕಾಶ್ಮೀರ: ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರ ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ನಗರದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಸೋಮವಾರ ಸಂಜೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕರು ಮತ್ತು ಭದ್ರತಾಪಡೆಗಳ ನಡುವೆ ಹೈದರ್​ಪೊರಾ ಬೈಪಾಸ್ ಸಮೀಪ ಗುಂಡಿನ ಚಕಮಕಿ ಆರಂಭವಾಗಿತ್ತು. ಶೂಟೌಟ್ ಆರಂಭವಾದ ಕೆಲವೇ ನಿಮಿಷಗಳ ನಂತರ ಭಯೋತ್ಪಾದಕರನ್ನು ಕೊಲ್ಲಲಾಯಿತು ಎಂದು ಪೊಲೀಸರು ಟ್ವೀಟ್​ ಮಾಡಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ … Continued

ಕನ್ನಡ ಕಡ್ಡಾಯ ಬಹುದಿನಗಳ ಬೇಡಿಕೆ: ಸರ್ಕಾರದ ಸಮರ್ಥನೆ

ಬೆಂಗಳೂರು; ಪದವಿ ಹಂತದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ಬೋಧಿಸುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿ ಅಫಿಡವಿಟ್‌ ಸಲ್ಲಿಸಬೇಕು ಎಂದು ಸೋಮವಾರ ಕರ್ನಾಟಕ ಹೈಕೋರ್ಟ್‌ ಆದೇಶ ಮಾಡಿದೆ. ಎರಡು ತಾಸಿಗೂ ಹೆಚ್ಚು ಕಾಲ ಅರ್ಜಿದಾರರು ಮತ್ತು ರಾಜ್ಯ ಸರ್ಕಾರದ ವಾದವನ್ನು ಆಲಿಸಿದ ಪೀಠವು ವಿಚಾರಣೆಯನ್ನು … Continued

ಅತ್ಯಾಧುನಿಕ ಸೌಲಭ್ಯದ ರಾಣಿ ಕಮಲಾಪತಿ ರೈಲು ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಭೋಪಾಲ್: ಮಧ್ಯಪ್ರದೇಶದಲ್ಲಿಯೇ ಅತ್ಯಂತ ಅಧುನಿಕ ಎಂಬ ಪರಿಗಣಿಸಲ್ಪಟ್ಟ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಗರದಲ್ಲಿ ಉದ್ಘಾಟಿಸಿದರು. ಈ ಮೊದಲು ಈ ನಿಲ್ದಾಣವನ್ನು ಹಬೀಬ್​ಗಂಜ್ ನಿಲ್ದಾಣ ಎಂದು ಕರೆಯುತ್ತಿದ್ದರು. ಗೋಂಡಾ ಬುಡಕಟ್ಟಿಗೆ ಸೇರಿದ ರಾಣಿ ಕಮಲಾಪತಿ ಅವರ ಸ್ಮರಣಾರ್ಥ ನಿಲ್ದಾಣದ ಹೆಸರು ಬದಲಿಸಲಾಗಿದೆ. ರಾಜ್ಯಪಾಲರಾದ ಮನ್​ಗುಭಾಯ್ ಪಟೇಲ್, … Continued

ತ್ರಿಪುರಾ ಕೋಮು ಗಲಭೆ ವರದಿ ಪ್ರಕರಣ: ಇಬ್ಬರು ಮಹಿಳಾ ಪತ್ರಕರ್ತರ ಬಂಧನ, ಜಾಮೀನು

ತ್ರಿಪುರಾ ಕೋಮು ಗಲಭೆ ವರದಿ ಪ್ರಕರಣ: ಇಬ್ಬರು ಮಹಿಳಾ ಪತ್ರಕರ್ತರ ಬಂಧನ, ಜಾಮೀನು ಗುವಾಹಟಿ: ಕ್ರಿಮಿನಲ್ ಪಿತೂರಿ ಸೇರಿದಂತೆ ವಿವಿಧ ಆರೋಪಗಳ ಮೇಲೆ ತ್ರಿಪುರಾದಲ್ಲಿ ಬಂಧಿತರಾಗಿದ್ದ ದೆಹಲಿ ಮೂಲದ ಇಬ್ಬರು ಮಹಿಳಾ ಪತ್ರಕರ್ತರಿಗೆ ಸ್ಥಳೀಯ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ಪತ್ರಕರ್ತರಾದ ಸಮೃದ್ಧಿ ಕೆ. ಸಕುನಿಯಾ ಮತ್ತು ಸ್ವರ್ಣಾ ಝಾ ಅವರಿಗೆ ತ್ರಿಪುರಾದ ಗೋಮತಿ ಜಿಲ್ಲಾ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ದೇಶಮುಖಗೆ 14 ದಿನ ನ್ಯಾಯಾಂಗ ಬಂಧನ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈ ನ್ಯಾಯಾಲಯ ಸೋಮವಾರ ಆದೇಶಿಸಿದೆ. . ಜಾರಿ ನಿರ್ದೇಶನಾಲಯಕ್ಕೆ ನೀಡಬಹುದಾಗಿದ್ದ ಕಸ್ಟಡಿ ಅವಕಾಶದ ಅವಧಿ 14 ದಿನಗಳು ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪರ ವಕೀಲ ಶ್ರೀರಾಮ್ … Continued

ಪ್ರೇರಣಾದಾಯಕ..: ಕೇರಳದ ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104 ವರ್ಷದ ಬೊಚ್ಚುಬಾಯಿಯ ಹಣ್ಣುಹಣ್ಣು ಮುದುಕಿ..!

ಕೇರಳದ 104 ವರ್ಷದ ಹಣ್ಣುಹಣ್ಣು ಮುದುಕಿಯೊಬ್ಬರು ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೊಟ್ಟಾಯಂನಲ್ಲಿ ವಾಸಿಸುವ ಈ 104 ವರ್ಷದ ಮಹಿಳೆ ಕುಟ್ಟಿಯಮ್ಮ ಎಂಬವರು ಕೇರಳ ರಾಜ್ಯ ಸಾಕ್ಷರತಾ ಮಿಷನ್‌ ನಡೆಸಿದ ಪರೀಕ್ಷೆಯಲ್ಲಿ 00 ಕ್ಕೆ 89 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ಇವರಿಗೆ ಕಿವಿ ಕೇಳಿಸುವುದಿಲ್ಲ, ಜೀವನದಲ್ಲಿ ಈ ಮೊದಲು ಶಾಲೆಗೇ ಹೋದವರಲ್ಲ. … Continued

ಹೊಸ ಪುಸ್ತಕದ ವಿವಾದದ ನಡುವೆ ಸಲ್ಮಾನ್ ಖುರ್ಷಿದ್ ನೈನಿತಾಲ್ ಮನೆ ಧ್ವಂಸ

ನವದೆಹಲಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಹೊಸ ಪುಸ್ತಕದ ಕೋಲಾಹಲದ ನಡುವೆ ಸೋಮವಾರ ನೈನಿತಾಲ್‌ನಲ್ಲಿರುವ ಅವರ ಮನೆಯನ್ನು ಧ್ವಂಸಗೊಳಿಸಲಾಯಿತು. ಅವರು ತಮ್ಮ ಪುಸ್ತಕದಲ್ಲಿ ಹಿಂದುತ್ವವನ್ನು ಐಸಿಸ್‌ ಹಾಗೂ ಬೊಕೊ ಹರಾಂಗೆ ಹೋಲಿಸಿದ ನಂತರ ಅನೇಕರಿಂದ ಆಕ್ರೋಶ ವ್ಯಕ್ತವಾಗಿದೆ. ಹಾಗೂ ದೆಹಲಿಯಲ್ಲಿ ಅವರ ವಿರುದ್ಧ ದೂರು ಸಹ ದಾಖಲಾಗಿದೆ. ಈ ಮಧ್ಯೆ ನೈನಿತಾಲ್ನಲ್ಲಿರುವ ಅವರ ಮನೆಯನ್ನು … Continued

ಹಾಡಹಗಲೇ ಆರ್‌ಎಸ್‌ಎಸ್ ಕಾರ್ಯಕರ್ತನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ, ಪೂರ್ವಯೋಜಿತ ಕೃತ್ಯ ಎಂದ ಬಿಜೆಪಿ

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತನನ್ನು ಸೋಮವಾರ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಎಸ್. ಸಂಜಿತ್ ಎಂದು ಗುರುತಿಸಲಾಗಿದ್ದು, ಆತ ತನ್ನ ಪತ್ನಿಯೊಂದಿಗೆ ಮೋಟಾರ್ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ ನಾಲ್ವರ ತಂಡವೊಂದು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ (ನವೆಂಬರ್ 15) ಬೆಳಿಗ್ಗೆ … Continued

ಐಐಎಂನಲ್ಲಿ ಭಗವದ್ಗೀತೆ..: ಡಿಸೆಂಬರ್‌ 13 ರಿಂದ ಐಐಎಂ ಅಹ್ಮದಾಬಾದ್‌ನಲ್ಲಿ ಕಾರ್ಪೊರೇಟ್ ವೃತ್ತಿಪರರಿಗೆ ಭಗವದ್ಗೀತೆ ಕೋರ್ಸ್‌ ಆರಂಭ..!

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಅಹಮದಾಬಾದ್ ಕಾರ್ಪೊರೇಟ್ ವೃತ್ತಿಪರರಿಗೆ ಮ್ಯಾನೇಜ್ಮೆಂಟ್ ಕಲಿಸಲು ಭಗವದ್ಗೀತೆಯ ಕೋರ್ಸ್ ಪ್ರಾರಂಭಿಸಲಿದೆ..! ಡಿಸೆಂಬರ್ 13 ರಿಂದ ಪ್ರಾರಂಭವಾಗುವ ಕಾರ್ಯಕ್ರಮವು ಗೀತೆಯಿಂದ ‘ಸಮಕಾಲೀನ ನಿರ್ವಹಣಾ ಪರಿಕಲ್ಪನೆಗಳು, ಸಂಘರ್ಷಗಳು, ಸಂದಿಗ್ಧತೆಗಳು ಮತ್ತು ವ್ಯವಹಾರದಲ್ಲಿನ ವ್ಯಾಪಾರ-ವಹಿವಾಟುಗಳ ಅನ್ವೇಷಣೆ’ (to explore contemporary management concepts, conflicts, dilemmas, and trade-offs in business)’ ಪಾಠಗಳು … Continued

ಖ್ಯಾತ ಇತಿಹಾಸಕಾರ, ಪದ್ಮವಿಭೂಷಣ ಪುರಸ್ಕೃತ ಬಾಬಾಸಾಹೇಬ್ ಪುರಂದರೆ ನಿಧನ

ಖ್ಯಾತ ಇತಿಹಾಸಕಾರ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಬಾಸಾಹೇಬ್ ಪುರಂದರೆ ಎಂದೇ ಖ್ಯಾತರಾಗಿದ್ದ ಬಲವಂತ ಮೊರೇಶ್ವರ ಪುರಂದರೆ ಅಲ್ಪಕಾಲದ ಅನಾರೋಗ್ಯದಿಂದ ಇಂದು (ಸೋಮವಾರ) ಬೆಳಗ್ಗೆ 5 ಗಂಟೆಗೆ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ನಿಧನರಾದರು. ಬಾಬಾಸಾಹೇಬ್‌ ಪುರಂದರೆ (99) ಅವರಿಗೆ ಒಂದು ವಾರದ ಹಿಂದೆ ನ್ಯುಮೋನಿಯಾ ಪತ್ತೆಯಾಗಿದ್ದು, ಅವರನ್ನು ನಗರದ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಿ … Continued