ಬಿಜೆಪಿ ಕೇಂದ್ರ ಪದಾಧಿಕಾರಿಗಳಲ್ಲಿ ಮಹತ್ವದ ಬದಲಾವಣೆ : ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ. ರವಿಗೆ ಕೊಕ್ -ರಾಜ್ಯಾಧ್ಯಕ್ಷ ಸ್ಥಾನ..?

ನವದೆಹಲಿ: ಮುಂಬರುವ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು ಬಿಜೆಪಿ ತನ್ನ ಸಂಘಟನಾ ರಚನೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಕರ್ನಾಟಕದ ನಾಯಕ ಸಿ.ಟಿ. ರವಿ ಮತ್ತು ಅಸ್ಸಾಂನ ಲೋಕಸಭಾ ಸಂಸದ ದಿಲೀಪ ಸೈಕಿಯಾ ಅವರನ್ನು ತನ್ನ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ … Continued

ಶಾಸಕಾಂಗ ಸಭೆ ಬೆನ್ನಲ್ಲೇ 146 ತಹಶೀಲ್ದಾರ್‌ಗಳ ವರ್ಗಾವಣೆ ; ಶಾಸಕರ ಅಸಮಾಧಾನ ಶಮನಕ್ಕೆ ಸಿಎಂ ಸಿದ್ದರಾಮಯ್ಯ ಯತ್ನ

ಬೆಂಗಳೂರು: ಅಸಂತುಷ್ಟರಾಗಿರುವ ಸ್ವಪಕ್ಷೀಯ ಶಾಸಕರನ್ನು ಸಮಾಧಾನಪಡಿಸಲು ಮುಂದಾಗಿರುವ ಸರ್ಕಾರ, ಶುಕ್ರವಾರ ಒಂದೇ ದಿನ ಬರೋಬ್ಬರಿ 146 ತಹಶೀಲ್ದಾರ್‌ಗಳನ್ನು ವರ್ಗಾಯಿಸಿದೆ. ಪಕ್ಷದ ಶಾಸಕರು ಬಯಸಿದ ತಹಶೀಲ್ದಾರ್‌ಗಳನ್ನೇ ಪೋಸ್ಟಿಂಗ್‌ ಮಾಡಲಾಗಿದೆ. ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ಮೂರು ವಾರಗಳ ಬಳಿಕ ಮೂರು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಒಟ್ಟು 146 ಗ್ರೇಡ್‌ -1 ಮತ್ತು ಗ್ರೇಡ್‌ -2 ತಹಶೀಲ್ದಾರ್‌ಗಳ ವರ್ಗಾವಣೆಗೆ … Continued

ಸಂಘರ್ಷ ಪೀಡಿತ ಮಣಿಪುರಕ್ಕೆ ವಿಪಕ್ಷಗಳ ಒಕ್ಕೂಟ-ಇಂಡಿಯಾದ 20 ಸಂಸದರ ನಿಯೋಗದಿಂದ ಎರಡು ದಿನಗಳ ಭೇಟಿ

ನವದೆಹಲಿ: ಪ್ರತಿಪಕ್ಷಗಳ ಒಕ್ಕೂಟ-ಇಂಡಿಯಾದ 16 ಪಕ್ಷಗಳ 20 ಸಂಸದರ ನಿಯೋಗ ಜುಲೈ 29 ಮತ್ತು 30 ರಂದು ಮಣಿಪುರಕ್ಕೆ ಭೇಟಿ ನೀಡಲಿದೆ. ನಾಯಕರು ಹಿಂಸಾಚಾರ ಪೀಡಿತ ರಾಜ್ಯದ ನೆಲದ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತಾರೆ. 20 ನಾಯಕರ ನಿಯೋಗದಲ್ಲಿ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ಫುಲೋ ದೇವಿ ನೇತಮ್, ಕೆ ಸುರೇಶ್; ಟಿಎಂಸಿಯ … Continued

ಸೆಮಿಕಂಡಕ್ಟರ್ ಉತ್ಪಾದಕಾ ಘಟಕ ಸ್ಥಾಪಿಸಲು ಕಂಪನಿಗಳಿಗೆ 50% ಆರ್ಥಿಕ ನೆರವಿನ ಮೆಗಾ ಆಫರ್‌ ಘೋಷಿಸಿದ ಪ್ರಧಾನಿ ಮೋದಿ

ಗಾಂಧಿನಗರ: ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ತಂತ್ರಜ್ಞಾನ ಸಂಸ್ಥೆಗಳಿಗೆ ಶೇಕಡಾ 50 ರಷ್ಟು ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ತಮ್ಮ ಸರ್ಕಾರವು ಸೆಮಿಕಂಡಕ್ಟರ್ ಉದ್ಯಮಗಳಿಗೆ ರೆಡ್ ಕಾರ್ಪೆಟ್ ಹಾಸಿದೆ ಎಂದು ಅವರು ಹೇಳಿದ್ದಾರೆ. ಗಾಂಧಿನಗರದಲ್ಲಿ ಸೆಮಿಕಾನ್ ಇಂಡಿಯಾ-2023 ಸಮ್ಮೇಳನ ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ಜಗತ್ತು … Continued

35 ವರ್ಷಗಳ ನಂತರ ತಾಯಿ-ಮಗನನ್ನು ಮತ್ತೆ ಒಂದಾಗಿಸಿದ ಅತ್ಯಂತ ಭೀಕರ ಪ್ರವಾಹ…!

ಪಂಜಾಬ್‌ನಲ್ಲಿ ಪ್ರವಾಹವು ಸಾಕಷ್ಟು ಹಾನಿ ಮಾಡಿದೆ. ಸಾವಿರಾರು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಳ್ಳುವಂತೆ ಮಾಡಿತು. ಆದರೆ ರಕ್ಷಣಾ ಸ್ವಯಂಸೇವಕ ಜಗಜಿತ್ ಸಿಂಗ್ ಅವರಿಗೆ ಈ ಪ್ರವಾಹ ಮಾತ್ರ ಎಂದೂ ಮರೆಯಲಾಗದ ಅವಿಸ್ಮರಣೀಯ ವಿದ್ಯಮಾನವಾಗಿ ಪರಿಣಮಿಸಿತು. ಪ್ರವಾಹವು ಅವರು 35 ವರ್ಷಗಳ ನಂತರ ತನ್ನ ತಾಯಿಯೊಂದಿಗೆ ಮತ್ತೆ ಸೇರುವಂತೆ ಮಾಡುವ ಮೂಲಕ ಅವರ ಜೀವನವನ್ನೇ ಆನಂದ ಮತ್ತು … Continued

ಮದುವೆಯಾಗಲುನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಕಬ್ಬಿಣದ ರಾಡ್‌ ನಿಂದ ಹೊಡೆದು ಕೊಂದ ಸೋದರ ಸಂಬಂಧಿ

ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯಾ ನಗರದಲ್ಲಿ ಶುಕ್ರವಾರ ಕಾಲೇಜು ವಿದ್ಯಾರ್ಥಿನಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ನರ್ಗೀಸ್ ಎಂದು ಗುರುತಿಸಲಾದ ಯುವತಿ ಕಮಲಾ ನೆಹರು ಕಾಲೇಜಿನ ವಿದ್ಯಾರ್ಥಿನಿ. ಪೊಲೀಸರ ಪ್ರಕಾರ, ಆಕೆಯನ್ನು ಮದುವೆಯಾಗಲು ನಿರಾಕರಿಸಿದ ಕಾರಣ ಅವಳ ಸ್ವಂತ ಸೋದರಸಂಬಂಧಿಯೇ ಅವಳನ್ನು ಕೊಂದಿದ್ದಾನೆ. ದೆಹಲಿಯ ಅರಬಿಂದೋ ಕಾಲೇಜ್ ಬಳಿಯ ಮಾಳವೀಯ ನಗರದ … Continued

ಕಡಲ ಕಿನಾರೆಗೆ ಬಂದ ಬರೋಬ್ಬರಿ 25 ಅಡಿ ಉದ್ದದ ಬೃಹತ್‌ ತಿಮಿಂಗಿಲ; ವೀಡಿಯೋ ವೈರಲ್

ಗುರುವಾರ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಮೇಘಾವರಂ ಕಡಲತೀರದಲ್ಲಿ ನೀಲಿ ತಿಮಿಂಗಿಲವೊಂದು ದಡದಲ್ಲಿ ನಿರ್ಜೀವ ಸ್ಥಿತಿಯಲ್ಲಿ ಕಂಡುಬಂದಿದೆ. ಐದು ಟನ್ ತೂಕದ 25 ಅಡಿ ಉದ್ದದ ಈ ಬೃಹತ್‌ ಜೀವಿಯ ಮೃತದೇಹವನ್ನು ಮರಳಿನ ಮೇಲೆ ನೋಡಿದ ಅಲ್ಲಿನ ಜನರಿಗೆ ಈ ಘಟನೆ ಅಪರೂಪದ ದೃಶ್ಯವಾಗಿತ್ತು. ಬಂಗಾಳಕೊಲ್ಲಿಯಲ್ಲಿ ಇಂತಹ ತಿಮಿಂಗಿಲಗಳು ಅಪರೂಪವಾಗಿದ್ದು, ಆಂಧ್ರ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ … Continued

ಹಿಮಾಲಯದಲ್ಲಿ 60 ಕೋಟಿ ವರ್ಷಗಳಷ್ಟು ಹಳೆಯದಾದ ಸಾಗರವನ್ನು ಕಂಡುಹಿಡಿದ ಭಾರತ, ಜಪಾನ್ ವಿಜ್ಞಾನಿಗಳು…!

ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಮತ್ತು ಜಪಾನ್‌ನ ನಿಗಾಟಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಿಮಾಲಯದ ಎತ್ತರದಲ್ಲಿ ಸುಮಾರು 60 ಕೋಟಿ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಪ್ರಾಚೀನ ಸಾಗರದ ಉಳಿದಿರುವ ಖನಿಜ ನಿಕ್ಷೇಪಗಳಲ್ಲಿ ಸಿಕ್ಕಿಬಿದ್ದ ನೀರಿನ ಹನಿಗಳನ್ನು ಕಂಡುಹಿಡಿದಿದ್ದಾರೆ. ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕಾರ್ಬೋನೇಟ್‌ಗಳನ್ನು ಹೊಂದಿರುವ ಈ ನಿಕ್ಷೇಪಗಳ ವಿಶ್ಲೇಷಣೆಯು ಭೂಮಿಯ ಇತಿಹಾಸದಲ್ಲಿ ಪ್ರಮುಖ ಆಮ್ಲಜನಕೀಕರಣದ … Continued

ನಾಸಿಕ್‌ : ಮನೆಗೆ ನುಗ್ಗಿ ನಾಯಿ ಮೇಲೆ ದಾಳಿ ಮಾಡಿದ ಚಿರತೆ ; ಪ್ರತಿದಾಳಿ ಮಾಡಿ ಚಿರತೆಯನ್ನೇ ಹೆದರಿಸಿ ಓಡಿಸಿದ ಎರಡು ನಾಯಿಗಳು | ವೀಕ್ಷಿಸಿ

ನಾಸಿಕ್: ನಾಸಿಕ್‌ನ ಅಡ್ಗಾಂವ್ ಶಿವಾರ್ ಪ್ರದೇಶದಲ್ಲಿ ಚಿರತೆಯೊಂದು ನಾಯಿಯ ಮೇಲೆ ದಾಳಿ ಮಾಡಲು ಯತ್ನಿಸಿದೆ. ಆದರೆ ನಾಯಿಗಳೇ ಅದನ್ನು ಓಡಿಸಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯೊಂದರ ಹುಲ್ಲುಹಾಸಿನ ಪ್ರದೇಶಕ್ಕೆ ಚಿರತೆಯೊಂದು ನಿಧಾನವಾಗಿ ನುಗ್ಗಿ ಮನೆಯ ಮುಖ್ಯ ಬಾಗಿಲಿನ ಹೊರಗೆ ಮಲಗಿದ್ದ ನಾಯಿಯ ಮೇಲೆ ದಾಳಿ ಮಾಡಲು ಯತ್ನಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಆದರೆ, ಮತ್ತೊಂದು … Continued

ಸ್ಟಾರ್‌ ಚಿಹ್ನೆ ಹೊಂದಿರುವ ಬ್ಯಾಂಕ್‌ ನೋಟುಗಳು ಕಾನೂನುಬದ್ಧವಾಗಿವೆ, ಗೊಂದಲ ಬೇಡ: ಆರ್​ಬಿಐ ಸ್ಪಷ್ಟನೆ

ನವದೆಹಲಿ: ಸ್ಟಾರ್‌ (*) ಚಿಹ್ನೆ ಹೊಂದಿರುವ ಬ್ಯಾಂಕ್‌ ನೋಟುಗಳು ನಕಲಿ ಎನ್ನುವ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ನಡೆಯುತ್ತಿರುವ ಊಹಾಪೋಹಗಳ ಬಗ್ಗೆ ಆರ್‌ಬಿಐ ಈ ಸ್ಪಷ್ಟನೆ ನೀಡಿದ್ದು, ಸ್ಟಾರ್‌ (*) ಚಿಹ್ನೆ ಹೊಂದಿರುವ ನೋಟುಗಳು ಕಾನೂನುಬದ್ಧವಾಗಿದೆ ಎಂದು ಅದು ಸ್ಪಷ್ಟಪಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ 27 ರಂದು ನಕ್ಷತ್ರ (*) ಚಿಹ್ನೆಯನ್ನು ಹೊಂದಿರುವ ಬ್ಯಾಂಕ್‌ … Continued