ಲಡಾಖ್‌ ಗಡಿಯ ಪ್ರಮುಖ ಪಾಯಿಂಟ್‌ನಿಂದ ಭಾರತ, ಚೀನಾ ಸೇನೆಗಳ ಸಂಪೂರ್ಣ ಹಿಂತೆಗೆತ: ಮೂಲಗಳು

ನವದೆಹಲಿ: ಲಡಾಖ್‌ನ ಪ್ರಮುಖ ಪಾಯಿಂಟ್‌ನಿಂದ ಭಾರತ ಮತ್ತು ಚೀನಾದ ಸೈನಿಕರು ನಿರ್ಗಮನವನ್ನು ಪೂರ್ಣಗೊಳಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 16 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವಿನ ಚರ್ಚೆಯ ನಂತರ ಪ್ರಕ್ರಿಯೆಯು ಸೆಪ್ಟೆಂಬರ್ 8 ರಂದು ಪ್ರಾರಂಭವಾಯಿತು. ಭಾರತ ಮತ್ತು ಚೀನಾ ಕಳೆದ ವಾರ ಪೂರ್ವ ಲಡಾಖ್‌ನ ಗೋಗ್ರಾ-ಹಾಟ್ ಸ್ಪ್ರಿಂಗ್ಸ್ … Continued

ಬ್ರಿಟಿಷರು ಭಾರತಕ್ಕೆ ನಾಗರಿಕತೆ ನೀಡಿದರು ಎಂದ ಅಮೆರಿಕ ಆಂಕರ್: ತಿರುಗೇಟು ನೀಡಿದ ಮಾರ್ಟಿನಾ ನವ್ರಾತಿಲೋವಾ, ಶಶಿ ತರೂರ್‌

ನವದೆಹಲಿ: ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿಯನ್ನು ಹೊಗಳಿದ ಅಮೆರಿಕದ ಸುದ್ದಿ ನಿರೂಪಕರೊಬ್ಬರು ಬ್ರಿಟಿಷರ ಆಳ್ವಿಕೆಯಲ್ಲಿ ಭಾರತವು ಅಭಿವೃದ್ಧಿ ಹೊಂದಿತು ಎಂದು ಹೇಳಿರುವುದು ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ಅನೇಕ ಟ್ವಿಟರ್ ಬಳಕೆದಾರರನ್ನು ಕೆರಳಿಸಿದೆ ಎಂದು ಇಂಡಿಪೆಂಡೆಂಟ್‌ನ ವರದಿಯೊಂದು ತಿಳಿಸಿದೆ. ಟಕರ್ ಕಾರ್ಲ್ಸನ್ ಎಂಬ ಫಾಕ್ಸ್ ನ್ಯೂಸ್ ಆಂಕರ್ ಬ್ರಿಟಿಷ್ ವಸಾಹತುಶಾಹಿ ಯುಗ ಪ್ರಾರಂಭವಾಗುವ ಮೊದಲು ಭಾರತವು … Continued

ಕಾರುಗಳಿಗೆ ಬೆಂಕಿ, ಕಲ್ಲು ತೂರಾಟ, ಮುಖಂಡರ ಬಂಧನ: ಕೋಲ್ಕತ್ತಾದಲ್ಲಿ ಟಿಎಂಸಿ ವಿರುದ್ಧ ಬಿಜೆಪಿ ರ್ಯಾಲಿಯಲ್ಲಿ ಹಿಂಸಾಚಾರ

ಕೋಲ್ಕತ್ತಾ: ರಾಜ್ಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಸರ್ಕಾರದ ಭ್ರಷ್ಟಚಾರಗಳ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ರಾಜ್ಯ ಕಾರ್ಯದರ್ಶಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಕಾರಣ ಕೋಲ್ಕತ್ತಾ ಮತ್ತು ಬಂಗಾಳದ ಹಲವು ಭಾಗಗಳು ಮಂಗಳವಾರ ರಣರಂಗದ ರೀತಿ ಆದವು. ಘರ್ಷಣೆಯಲ್ಲಿ ಹಲವು ಬಿಜೆಪಿ ನಾಯಕರಿಗೆ ಗಾಯಗಳಾಗಿದ್ದು, ಹಲವು ಪೊಲೀಸ್ ಅಧಿಕಾರಿಗಳು … Continued

27 ವರ್ಷದ ಯುವಕನ ಹೊಟ್ಟೆಯಿಂದ 7.5 ಇಂಚಿನ ಡಿಯೋಡ್ರೆಂಟ್ ಬಾಟಲಿ ಹೊರತೆಗೆದ ವೈದ್ಯರು…!

ವೈದ್ಯರ ತಂಡ ಇತ್ತೀಚೆಗೆ 27 ವರ್ಷದ ವ್ಯಕ್ತಿಯ ಹೊಟ್ಟೆಯಿಂದ ಏಳೂವರೆ ಇಂಚು ಉದ್ದದ ಸಂಪೂರ್ಣ ಡಿಯೋಡ್ರೆಂಟ್ ಬಾಟಲಿಯನ್ನು ಹೊರಕ್ಕೆ ತೆಗೆದಿದೆ. ರೋಗಿಯು ದಾಖಲಾಗಿದ್ದ ಬುರ್ದ್ವಾನ್ ವೈದ್ಯಕೀಯ ಕಾಲೇಜು-ಆಸ್ಪತ್ರೆಯಲ್ಲಿ ಈ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ತೀವ್ರ ಹೊಟ್ಟೆ ನೋವು ಅನುಭವಿಸಿದ ನಂತರ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೌಪ್ಯತೆಯ ಕಾರಣದಿಂದ ಹೆಸರನ್ನು ಬಹಿರಂಗಪಡಿಸದ 27 ವರ್ಷದ ಯುವಕ … Continued

ಚುನಾವಣೆಗೆ ಸ್ಪರ್ಧಿಸುವುದು ಹಕ್ಕು ಎಂದು ಆಗ್ರಹಿಸಲು ಸಾಧ್ಯವಿಲ್ಲ : ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ವ್ಯಕ್ತಿಯೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಹಕ್ಕು ಎಂದು ಆಗ್ರಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತಿಳಿಸಿದ್ದು ನಾಮಪತ್ರ ಸಲ್ಲಿಸುವಾಗ ಅರ್ಜಿದಾರರ ಹೆಸರನ್ನು ಸೂಚಿಸುವವರು ಇಲ್ಲದಿದ್ದರೂ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೋರಿದ್ದಕ್ಕಾಗಿ ಅವರಿಗೆ ₹ 1 ಲಕ್ಷ ದಂಡ ವಿಧಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಮೂಲಭೂತ ಹಕ್ಕು ಅಥವಾ ಸಾಮಾನ್ಯ ಕಾನೂನಿನ ಹಕ್ಕಲ್ಲ, ಬದಲಿಗೆ ಅದು … Continued

ಕೋವಿಡ್‌-19 ಸೋಂಕಿನ ಹೆಚ್ಚಿನ ಅಪಾಯದ ಪ್ರಕರಣಗಳ ಚಿಕಿತ್ಸೆಯಲ್ಲಿ ಆಯುರ್ವೇದ, ಯೋಗ ಹೆಚ್ಚು ಪರಿಣಾಮಕಾರಿ: ದೆಹಲಿ ಐಐಟಿ ಅಧ್ಯಯನದಲ್ಲಿ ಕಂಡುಬಂದ ಅಂಶ

ನವದೆಹಲಿ: ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮತ್ತು ಹರಿದ್ವಾರದ ದೇವ್ ಸಂಸ್ಕೃತಿ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಯೋಗ ಮತ್ತು ಆಯುರ್ವೇದವು ಕೋವಿಡ್‌-19ರ ಹೆಚ್ಚಿನ ಅಪಾಯದ ಪ್ರಕರಣಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಬಹುದು ಎಂದು ಕಂಡುಬಂದಿದೆ. 30 ಹೆಚ್ಚಿನ ಅಪಾಯದ (ಹೈ-ರಿಸ್ಕ್) ಕೋವಿಡ್‌-19 ರೋಗಿಗಳ ಯಶಸ್ವಿ ಚಿಕಿತ್ಸೆಯ ಕುರಿತಾದ ಅಧ್ಯಯನವನ್ನು ಇಂಡಿಯನ್ ಜರ್ನಲ್ ಆಫ್ ಟ್ರೆಡಿಷನಲ್ ನಾಲೆಡ್ಜ್‌ನಲ್ಲಿ … Continued

ಹಸಿವೆ ನೀನೆಷ್ಟು ಕ್ರೂರ…: ಭಾರೀ ಮಳೆಯ ನಡುವೆಯೇ ಆಹಾರ ತಿನ್ನುತ್ತಿರುವ ಹಸಿದ ವ್ಯಕ್ತಿ | ವೀಕ್ಷಿಸಿ

ಭಾರೀ ಮಳೆಯ ನಡುವೆ ವ್ಯಕ್ತಿಯೊಬ್ಬ ಊಟ ಮಾಡುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಂದಗಿ ಗುಲ್ಜಾರ್ ಹೈ ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ಸುರಿಯುತ್ತಿರುವ ಮಳೆಯಲ್ಲಿ ಊಟ ಮಾಡುತ್ತಿರುವುದನ್ನು ಕಾಣಬಹುದು. ಇದು ನೋಡಿದವರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.ತನ್ನ ಊಟ ಮಳೆಗೆ ಕೆಡದಂತೆ ರಕ್ಷಿಸಿಸಲು ತಟ್ಟೆಯನ್ನು ಸ್ಕೂಟರ್ ಅಡಿಯಲ್ಲಿ … Continued

ನಿತೀಶ್ ಕುಮಾರ್​ಗೆ ಆಘಾತ: ಬಿಜೆಪಿ ಸೇರಿದ ಜೆಡಿಯುದ 15 ಜಿಲ್ಲಾ ಪಂಚಾಯತ​ ಸದಸ್ಯರು

ದಿಯು ಮತ್ತು ದಮನ್ : ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ಆರ್​ಜೆಡಿ ಹಾಗೂ ಕಾಂಗ್ರೆಸ್‌ ಸೇರಿದಂತೆ ಏಳು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಹೊಸ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್​ ಕುಮಾರ್​​ಗೆ ಆಘಾತದ ಮೇಲೆ ಆಘಾತವಾಗುತ್ತಿದೆ. ನಿತೀಶ್​ ಕುಮಾರ್​​ ನೇತೃತ್ವದ ಜನತಾ ದಳ ಯುನೈಟೆಡ್(ಜೆಡಿಯು)ಗೆ ಅನೇಕರು ಸಾಮೂಹಿಕವಾಗಿ ಪಕ್ಷ ತೊರೆಯುತ್ತಿದ್ದಾರೆ. ನಿತೀಶ್ ಕುಮಾರ್ ಬಿಜೆಪಿ … Continued

ಅಗತ್ಯ ಔಷಧಗಳ ಪಟ್ಟಿಯಿಂದ ಅಸಿಡಿಟಿ ಔಷಧ ರಾನಿಟಿಡಿನ್ ಸೇರಿದಂತೆ 26 ಔಷಧಿಗಳನ್ನು ಕೈಬಿಟ್ಟ ಕೇಂದ್ರ ಸರ್ಕಾರ

ನವದೆಹಲಿ: ಕ್ಯಾನ್ಸರ್-ಉಂಟುಮಾಡುವ ಕಳವಳದ ಹಿನ್ನೆಲೆಯಲ್ಲಿ ಕೇಂದ್ರವು ಜನಪ್ರಿಯ ಆಂಟಿಸಿಡ್ ರಾನಿಟಿಡಿನ್ ಅನ್ನು ಅಗತ್ಯ ಔಷಧ ಪಟ್ಟಿಯಿಂದ ತೆಗೆದುಹಾಕಿದೆ. 26 ಔಷಧಿಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ರಾನಿಟಿಡಿನ್ ಅನ್ನು ಅಸಿಲೋಕ್, ಜಿನೆಟಾಕ್ ಮತ್ತು ರಾಂಟಾಕ್ ಎಂಬ ಬ್ರ್ಯಾಂಡ್ ಹೆಸರುಗಳಲ್ಲಿ ಜನಪ್ರಿಯವಾಗಿ ಮಾರಾಟ ಮಾಡಲಾಗುತ್ತದೆ, ಮತ್ತು ಸಾಮಾನ್ಯವಾಗಿ ಆಮ್ಲೀಯತೆ ಮತ್ತು ಹೊಟ್ಟೆನೋವು-ಸಂಬಂಧಿತ ಸಮಸ್ಯೆಗಳಿಗೆ ಸೂಚಿಸಲಾಗುತ್ತದೆ. ಆರೋಗ್ಯ ಸಚಿವಾಲಯವು 384 ಔಷಧಗಳನ್ನು … Continued

ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ಮುಕುಲ್ ರೋಹಟಗಿ ನೇಮಕ

ನವದೆಹಲಿ: ಮುಕುಲ್ ರೋಹಟಗಿ ಅವರನ್ನು ಭಾರತದ ಅಟಾರ್ನಿ ಜನರಲ್ ಆಗಿ ನೇಮಕ ಮಾಡಲಾಗಿದೆ. ಅವರು ಅಕ್ಟೋಬರ್ 1 ರಿಂದ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅಟಾರ್ನಿ ಜನರಲ್ ಆಗಿರುವ ಕೆ.ಕೆ. ವೇಣುಗೋಪಾಲ ಅವರ ಅಧಿಕಾರಾವಧಿಯು ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳಲಿದ್ದು, ಅವರ ಸ್ಥಾನಕ್ಕೆ ರೋಹಟಗಿ ಅವರನ್ನು ನೇಮಕ ಮಾಡಲಾಗಿದೆ. ರೋಹಟಗಿ ಅವರು ಈ ಹಿಂದೆ ಜೂನ್ … Continued