ಎಸ್‌ಬಿಐನ 5008 ಜೂನಿಯರ್‌ ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ: ಪದವಿಧರರು ಅರ್ಜಿ ಸಲ್ಲಿಸಬಹುದು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ಲರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್ ( ಕಸ್ಟಮರ್‌ ಸಪೋರ್ಟ್‌ ಮತ್ತು ಸೇಲ್ಸ್) ಹುದ್ದೆಗಳಿಗೆ ಅರ್ಜಿ‌ ಸ್ವೀಕರಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ದೇಶಾದ್ಯಂತ 5008 ಹುದ್ದೆಗಳಿಗೆ ಅಧಿಸೂಚನೆಯನ್ನು ಎಸ್‌ಬಿಐ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳುಎಸ್‌ಬಿಐ ವೆಬ್‌ಸೈಟ್‌ನ ಕರಿಯರ್ಸ್‌ ಪೋರ್ಟಲ್, sbi.co.in ಅಥವಾ ibpsonline.ibps.in ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ … Continued

ಸೌರಶಕ್ತಿ ಚಾಲಿತ ವಿದ್ಯುತ್ ಹೆದ್ದಾರಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖ: ಗಡ್ಕರಿ

ನವದೆಹಲಿ: ಸೌರಶಕ್ತಿಯಿಂದ (Solar Energy) ಚಾಲಿತವಾಗಿರುವ ಎಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಂದ್ರ ಸರ್ಕಾರ ಕಾರ್ಯ ಪ್ರವೃತ್ತವಾಗಿದೆಯಂತೆ. ಈ ಹೆದ್ದಾರಿಗಳ ಮೂಲಕ ಭಾರೀ ಟ್ರಕ್‌ಗಳು ಮತ್ತು ಬಸ್‌ಗಳನ್ನು ಚಾರ್ಜ್‌ ಮಾಡಲು ಅನುಕೂಲವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ. ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (IACC) ಆಯೋಜಿಸಿದ್ದ … Continued

2015ರ ಪೊಲೀಸ್ ಠಾಣೆ ಗಲಭೆ ಪ್ರಕರಣ: ಎಎಪಿಯ ಇಬ್ಬರು ಶಾಸಕರು ದೋಷಿಗಳು ಎಂದ ದೆಹಲಿ ನ್ಯಾಯಾಲಯ

ನವದೆಹಲಿ: ಏಳು ವರ್ಷಗಳ ಹಿಂದೆ ಪೊಲೀಸ್‌ ಠಾಣೆಯೊಂದಕ್ಕೆ ಗುಂಪೊಂದು ನುಗ್ಗಿ ಗಲಭೆ ನಡೆಸಿ, ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷದ (ಎಎಪಿ) ಇಬ್ಬರು ಶಾಸಕರು ಹಾಗೂ ಇತರ 15 ಮಂದಿ ದೋಷಿಗಳು ಎಂದು ಸಂಸದರು ಮತ್ತು ಶಾಸಕರ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ದೆಹಲಿಯ ವಿಶೇಷ ನ್ಯಾಯಾಲಯವು … Continued

ಗೆಳೆತನ ಮಾಡದಿದ್ದರೆ ಕಿಡ್ನಾಪ್ ಮಾಡ್ತೇವೆ: ರಾಂಚಿಯ ಶಾಲೆಯಲ್ಲಿ ಹಿಂದೂ ಬಾಲಕಿಯರಿಗೆ ಬೆದರಿಕೆ

ರಾಂಚಿ: ಮುಸ್ಲಿಂ ಗೂಂಡಾಗಳ ಗುಂಪೊಂದು ಜಾರ್ಖಂಡ್‌ನ ರಾಂಚಿಯಲ್ಲಿ ಸರ್ಕಾರಿ ಶಾಲೆಯೊಂದಕ್ಕೆ ನುಗ್ಗಿ, ಶಸ್ತ್ರಾಸ್ತ್ರಗಳನ್ನು ಝಳಪಿಸಿ ತಮ್ಮನ್ನು ಸ್ನೇಹಿತರಾಗಿ ಮಾಡಿಕೊಳ್ಳಬೇಕು. ಒಂದುವೇಳೆ ಇದನ್ನು ಪಾಲಿಸದಿದ್ದರೆ ಅಪಹರಿಸುವುದಾಗಿ ಹುಡುಗಿಯರಿಗೆ ಬೆದರಿಕೆ ಹಾಕಿದ್ದಾರೆ. ಕೆಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಗೂಂಡಾಗಳ ವಿರುದ್ಧ ನಿಂತಿದ್ದರಿಂದ, ಅವರಿಗೆ ಬೆದರಿಕೆ ಹಾಕಿ ನಂತರ ಥಳಿಸಲಾಗಿದೆ. 9ನೇ ತರಗತಿಯ ವಿದ್ಯಾರ್ಥಿನಿಯರ ಪ್ರಕಾರ, ಬುಡಕಟ್ಟು ಮತ್ತು … Continued

ಚಿಲ್ಲರೆ ಹಣದುಬ್ಬರ ಆಗಸ್ಟ್ ನಲ್ಲಿ ಶೇ.7ಕ್ಕೆ ಏರಿಕೆ

ನವದೆಹಲಿ : ಚಿಲ್ಲರೆ ಹಣದುಬ್ಬರ ಆಗಸ್ಟ್‌ನಲ್ಲಿ ಶೇಕಡಾ 7ಕ್ಕೆ ಏರಿದೆ, ಇದು ಜುಲೈನಲ್ಲಿ ಶೇಕಡಾ 6.71ರಷ್ಟು ಇತ್ತು. ಆಗಸ್ಟ್ ನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಆಹಾರ ಹಣದುಬ್ಬರವು ಹೆಚ್ಚಾಗಿದೆ. ಜೂನ್ʼನಲ್ಲಿ ಇದು ಶೇ.7.01ರಷ್ಟಿತ್ತು. ಮೇನಲ್ಲಿ, ಶೇಕಡಾ 7.04 ಮತ್ತು ಏಪ್ರಿಲ್‌ನಲ್ಲಿ ಶೇಕಡಾ 7.79 ರಷ್ಟಿತ್ತು. ನಗರ-ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಹಣದುಬ್ಬರ ಹೆಚ್ಚಳವಾಗಿದೆ. ನಗರ ಪ್ರದೇಶಗಳಲ್ಲಿ … Continued

ಒಂದು ಕುಂಬಳಕಾಯಿ 47 ಸಾವಿರ ರೂಪಾಯಿಗೆ ಮಾರಾಟ….!

ತಿರುವನಂತಪುರ: ಕೇರಳದಲ್ಲಿ 5 ಕೆ.ಜಿ ಇರುವ ಒಂದು ಕುಂಬಳಕಾಯಿ ಬೆಲೆ 47 ಸಾವಿರ ರೂ.ಗಳಿಗೆ ಮಾರಾಟವಾಗಿದೆ…! ಕೇರಳದ ಇಡುಕ್ಕಿಯ ಗುಡ್ಡಗಾಡು ಪ್ರದೇಶದ ವಲಸೆ ಗ್ರಾಮವಾದ ಚೆಮ್ಮನ್ನಾರ್‌ನಲ್ಲಿ ನಡೆದ ಸಾರ್ವಜನಿಕ ಹರಾಜಿನಲ್ಲಿ ಒಂದು ಕುಂಬಳಕಾಯಿ 47 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಇದು ಈ ಬಾರಿಯ ಓಣಂ ಹಬ್ಬದ ವಿಶೇಷತೆಯಾಗಿದೆ. ಕೇರಳದಲ್ಲಿ ಓಣಂ ಹಬ್ಬವನ್ನು ಎಲ್ಲ ಧರ್ಮೀಯರೂ ಸೇರಿ … Continued

ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಕ್ರಿಕೆಟ್ ತಂಡ ಪ್ರಕಟ

ಮುಂಬೈ : ಮುಂಬರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನಾಯಕರಾಗಿ ಭಾರತದ ತಂಡವನ್ನು ಮುನ್ನಡೆಸಲಿದ್ದಾರೆ.ವಿಕೆಟ್ ಕೀಪರ್‌ ಆಗಿ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ಇಬ್ಬರೂ ಸ್ಥಾನ ತಂಡದಲ್ಲಿ ಪಡೆದಿದ್ದಾರೆ. ಅಕ್ಟೋಬರ್ 22 ರಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದ್ದು, ನವೆಂಬರ್ 13ರವರೆಗೆ … Continued

ಅಯೋಧ್ಯೆ ರಾಮ ಮಂದಿರ-ಸಂಕೀರ್ಣ ನಿರ್ಮಾಣಕ್ಕೆ ಅಂದಾಜು 1800 ಕೋಟಿ ರೂ. ವೆಚ್ಚ, 3 ಅಂತಸ್ತಿನ ಸೂಪರ್‌ ಸ್ಟ್ರಕ್ಚರ್‌ ಕಟ್ಟಡ ನಿರ್ಮಾಣ ಪ್ರಾರಂಭ: ಟ್ರಸ್ಟ್

ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮೂರು ಅಂತಸ್ತಿನ ನಿರ್ಮಾಣ ಕಾರ್ಯ ಆರಂಭವಾಗಿದೆ. ಮತ್ತು ಪ್ರಸ್ತುತ ಅಂದಾಜಿನ ಪ್ರಕಾರ, ದೇವಾಲಯ ಮತ್ತು ಸಂಕೀರ್ಣದ ಒಟ್ಟು ನಿರ್ಮಾಣ ವೆಚ್ಚ ಸುಮಾರು 1,800 ಕೋಟಿ ರೂಪಾಯಿಗಳಾಗಬಹುದು ಎಂದು ಶ್ರೀರಾಮ ದೇವಾಲಯ ಟ್ರಸ್ಟ್ ಹೇಳಿದೆ. ಗರ್ಭಗೃಹ ಮತ್ತು ಐದು ಮಂಟಪಗಳನ್ನು(ಮುಖಮಂಟಪಗಳು) ಒಳಗೊಂಡಿರುವ ಮೂರು ಅಂತಸ್ತಿನ ಮೇಲ್ವಿನ್ಯಾಸದ ನಿರ್ಮಾಣ ಕಾರ್ಯವು ಪೂರ್ಣ ಸ್ವಿಂಗ್‌ನಲ್ಲಿ … Continued

ಜ್ಞಾನವಾಪಿ ಮಸೀದಿ ಸಂಕೀರ್ಣ ಪ್ರಕರಣ: ಪೂಜೆಗೆ ಅನುಮತಿ ಕೋರಿರುವ ಹಿಂದುಗಳ ಅರ್ಜಿ ವಿಚಾರಣೆಗೆ ಅರ್ಹ, ವಾರಣಾಸಿ ಕೋರ್ಟ್‌ ಮಹತ್ವದ ತೀರ್ಪು

ವಾರಾಣಸಿ:ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯು ಜ್ಞಾನವಾಪಿ ಮಸೀದಿಯ ಕಾಂಪೌಂಡ್‌ನಲ್ಲಿ ಪೂಜೆ ಮಾಡುವ ಹಕ್ಕುಗಳನ್ನು ಕೋರಿ ಐವರು ಹಿಂದೂ ಮಹಿಳೆಯರು  ಸಲ್ಲಿಸಿರುವ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್‌ ತಿರಸ್ಕರಿಸಿದೆ. ವಾರಾಣಸಿ ಜಿಲ್ಲಾ ನ್ಯಾಯಾಲಯ ಸೋಮವಾರ ಮುಸ್ಲಿಂ ಕಡೆಯ ಅರ್ಜಿಯನ್ನು ತಿರಸ್ಕರಿಸಿದೆ. ಹಿಂದೂ ಕಕ್ಷಿದಾರರ ದಾವೆಯನ್ನು ನ್ಯಾಯಾಲಯದಲ್ಲಿ ನಿರ್ವಹಣೆ ನಡೆಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯವು … Continued

ಸೋನಾಲಿ ಫೋಗಟ್ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಗೋವಾ ಸರ್ಕಾರ

ಪಣಜಿ: ಸೋನಾಲಿ ಫೋಗಟ್ ಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಗೋವಾ ಸರ್ಕಾರ ಸೋಮವಾರ ಶಿಫಾರಸು ಮಾಡಿದೆ. ಭಾನುವಾರ, ಸೋನಾಲಿ ಫೋಗಟ್ ಅವರ ಕುಟುಂಬವು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ, ಗೋವಾ ಪೊಲೀಸರು ನಡೆಸಿದ ತನಿಖೆಯಿಂದ ಅತೃಪ್ತಿಗೊಂಡಿರುವ ಕಾರಣ ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸುವಂತೆ ಕೋರಿತ್ತು. ನಾವು … Continued