ಮಧ್ಯಪ್ರದೇಶ, ತೆಲಂಗಾಣ, ಛತ್ತೀಸಗಢ ವಿಧಾನಸಭೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ನವದೆಹಲಿ: ಮಧ್ಯಪ್ರದೇಶ, ಛತ್ತೀಸಗಢ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.ಮಧ್ಯಪ್ರದೇಶದ 144, ಛತ್ತೀಸ್‌ಗಡದ 30, ತೆಲಂಗಾಣದ 55 ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಮತ … Continued

ಕಂಟೈನರ್‌ ಗೆ ಮಿನಿ ಬಸ್ ಡಿಕ್ಕಿ : 12 ಮಂದಿ ಸಾವು, 23 ಮಂದಿಗೆ ಗಾಯ

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಮುಂಜಾನೆ ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 12 ಜನರು ಸಾವಿಗೀಡಾಗಿದ್ದಾರೆ ಮತ್ತು 23 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾಸಗಿ ಬಸ್‌ನಲ್ಲಿ 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈನಿಂದ ಸುಮಾರು 350 ಕಿಮೀ ದೂರದಲ್ಲಿರುವ ಜಿಲ್ಲೆಯ … Continued

ಮಧ್ಯಪ್ರಾಚ್ಯ ನೋಡಿದರೆ… ಭಾರತೀಯರಾಗಿ ನಾವು ಅದೃಷ್ಟವಂತರು’ : ಪ್ರಧಾನಿ ಮೋದಿ, ಅಮಿತ್ ಶಾರನ್ನು ಹೊಗಳಿದ ಅವರಿಬ್ಬರ ಕಟು ಟೀಕಾಕಾರ್ತಿ ಶೆಹ್ಲಾ ರಶೀದ್

ನವದೆಹಲಿ: ಪ್ರಧಾನಿ ಮೋದಿ ಕಟು ಟೀಕಾಕಾರ್ತಿ ಹಾಗೂ ಮಾಜಿ ಜೆಎನ್‌ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಕಾಶ್ಮೀರದಲ್ಲಿ ದೀರ್ಘಾವಧಿಯ ಶಾಂತಿ ಮತ್ತು ಸುರಕ್ಷತೆ ಖಾತ್ರಿಪಡಿಸಿದ್ದಕ್ಕಾಗಿ ಭಾರತೀಯ ಸೇನೆ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದ್ದಾರೆ. ಶನಿವಾರ ಇಸ್ರೇಲ್-ಹಮಾಸ್ ಸಂಘರ್ಷ ಎಂಟನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರ ಈ ಪ್ರಶಂಸೆ ಬಂದಿದೆ. … Continued

ಐಒಸಿ ಅಧಿವೇಶನ 2023: 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಭಾರತದ ಸಂಭಾವ್ಯ ಬಿಡ್ ದೃಢಪಡಿಸಿದ ಪ್ರಧಾನಿ ಮೋದಿ

ಅಕ್ಟೋಬರ್ 14, ಶನಿವಾರದಂದು ನಡೆದ ಐಒಸಿ (IOC) ಅಧಿವೇಶನ 2023 ರ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2036 ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಸಂಭಾವ್ಯ ಬಿಡ್ ಅನ್ನು ದೃಢಪಡಿಸಿದ್ದಾರೆ. ಮೋದಿ ಅವರು ಮುಂಬೈನಲ್ಲಿ 141 ನೇ ಐಒಸಿ (IOC) ಅಧಿವೇಶನವನ್ನು ಉದ್ಘಾಟಿಸಿದರು ಮತ್ತುಮೊಟ್ಟಮೊದಲ ಒಲಿಂಪಿಕ್ ಕ್ರೀಡಾಕೂಟಗಳ ಆತಿಥ್ಯ ವಹಿಸುವ … Continued

ವೀಡಿಯೊ..| ದಿನಗೂಲಿ ಕಾರ್ಮಿಕ- ಏಷ್ಯನ್ ಗೇಮ್ಸ್ ಪದಕ ವಿಜೇತ ರಾಮ ಬಾಬುಗೆ ಉದ್ಯಮಿ ಆನಂದ ಮಹೀಂದ್ರಾ ವಿಶೇಷ ಕೊಡುಗೆ : ಏನದು…?

ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ರಾಮ ಬಾಬು ಅವರ ಅದ್ಭುತ ಪ್ರಯಾಣ ಮತ್ತು ಸಾಧನೆಯಿಂದ ಪ್ರೇರಿತರಾದ ಉದ್ಯಮಿ ಆನಂದ್ ಮಹೀಂದ್ರ ಅವರು ಅವರಿಗೆ ಬೆಂಬಲದ ಸೂಚಕವಾಗಿ ರಾಮ ಬಾಬು ಅವರಿಗೆ ಅವರ ಆಯ್ಕೆಯ ವಾಹನವನ್ನು ಉಡುಗೊರೆಯಾಗಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ರಾಮ ಬಾಬು ಅವರು ಮಂಜು ರಾಣಿ ಅವರೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ 35 ಕಿಮೀ … Continued

ಕ್ರಿಕೆಟ್ ವಿಶ್ವಕಪ್ 2023: ಏಕದಿನದ ಪಂದ್ಯಗಳ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ರೋಹಿತ್‌ ಶರ್ಮಾ

ಅಹಮದಾಬಾದ್‌ : ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಇತಿಹಾಸದಲ್ಲಿ ಮಹತ್ತರ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ಆದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ವಿಶ್ವಕಪ್ 2023 ಪಂದ್ಯದ ಸಮಯದಲ್ಲಿ ರೋಹಿತ್ ಶರ್ಮಾ ಕ್ರಿಕೆಟ್‌ ವೃತ್ತಿಜೀವನಕ್ಕೆ ಮತ್ತೊಂದು ಪ್ರಮುಖ ಮೈಲಿಗಲ್ಲು ಸೇರಿಸಿದರು. ಅವರು ಏಕದಿನ ಕ್ರಿಕೆಟ್‌ನಲ್ಲಿ 300 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಭಾರತೀಯ … Continued

ವಿಶ್ವಕಪ್ 2023: ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳಿಂದ ಭರ್ಜರಿ ಜಯಗಳಿಸಿದ ಭಾರತ, ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಸಾಧನೆ 8-0

ಅಹಮದಾಬಾದ್‌ : ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರ 63 ಎಸೆತಗಳಲ್ಲಿ 86 ರನ್‌ಗಳ ನೆರವಿನಿಂದ ಭಾರತವು ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. 192 ರನ್‌ಗಳನ್ನು ಭಾರತದ ತಂಡ ಇನ್ನೂ 117 ಎಸೆತಗಳು ಬಾಕಿ ಇರುವಂತೆಯೇ ಗೆಲುವನ್ನು ದಾಖಲಿಸಿತು. ಸುದೀರ್ಘ ಗಾಯದ ನಂತರ … Continued

ನ್ಯಾಯಾಲಯದಲ್ಲಿ ರಾಜಕೀಯ ಭಾಷಣ ಮಾಡಿದ್ದಕ್ಕೆ ಎಎಪಿಯ ಸಂಜಯ್ ಸಿಂಗ್ ಗೆ ಎಚ್ಚರಿಕೆ ನೀಡಿದ ಕೋರ್ಟ್‌

ನವದೆಹಲಿ: ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಶುಕ್ರವಾರ ಎಎಪಿ ಸಂಸದ ಸಂಜಯ ಸಿಂಗ್ ಅವರಿಗೆ “ರಾಜಕೀಯ ಭಾಷಣ” ನೀಡದಂತೆ ಎಚ್ಚರಿಕೆ ನೀಡಿದೆ. ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್‌ ಅವರು ಕೈಗಾರಿಕೋದ್ಯಮಿ ಗೌತಮ ಅದಾನಿ ಅವರ ಹೆಸರನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ್ದರು. … Continued

ಇಸ್ರೇಲಿನಿಂದ ದೆಹಲಿಗೆ ಬಂದಿಳಿದ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ

ನವದೆಹಲಿ: ಇಸ್ರೇಲಿನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆರಂಭಿಸಲಾಗಿರುವ ‘ಆಪರೇಷನ್ ಅಜಯ’ ಕಾರ್ಯಾಚರಣೆಯ ವಿಶೇಷ ವಿಮಾನದಲ್ಲಿ ಎರಡನೇ ತಂಡ ಇಂದು ಮುಂಜಾನೆ ಯುದ್ಧ ಪೀಡಿತ ಇಸ್ರೇಲ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದೆ. ಎರಡು ಶಿಶುಗಳು ಸೇರಿದಂತೆ 235 ಭಾರತೀಯರನ್ನು ಹೊತ್ತ ವಿಮಾನ ಶನಿವಾರ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್‌ … Continued

ಗಾಜಾದಲ್ಲಿ ʼಹಮಾಸ್‌ʼ ನ 500 ಕಿಮೀ ಉದ್ದದ ರಹಸ್ಯ ʼಸುರಂಗ ಜಾಲʼಗಳು… ಭೂ ದಾಳಿ ವೇಳೆ ಇಸ್ರೇಲ್‌ ಸೈನ್ಯದ ಮುಂದಿರುವ ಕಠಿಣ ಸವಾಲು…

ಗಾಜಾ ಪಟ್ಟಿಯಲ್ಲಿ ಸಂಪೂರ್ಣ ಭೂ ದಾಳಿಗೆ ಇಸ್ರೇಲ್‌ ಸಜ್ಜಾಗುತ್ತಿರುವಾಗ, ಅವರು ಎದುರಿಸುತ್ತಿರುವ ದೊಡ್ಡ ಸವಾಲುಗಳೆಂದರೆ ಗಾಜಾದ ಅಡಿಯಲ್ಲಿ ಹಮಾಸ್‌ ನಿರ್ಮಾಣ ಮಾಡಿರುವ ವ್ಯಾಪಕ ಸುರಂಗ ಜಾಲ. ಭೂ ಆಕ್ರಮಣದಲ್ಲಿ, ಇಸ್ರೇಲ್ ಅದರ ವೈರಿ ಪ್ರಬಲವಾಗಿರುವ ಭೂಪ್ರದೇಶದಲ್ಲಿ ಶತ್ರುಗಳೊಂದಿಗೆ ಹೋರಾಡಬೇಕಾಗುತ್ತದೆ ಎಂದು ಹಲವಾರು ತಜ್ಞರು ಎಚ್ಚರಿಸಿದ್ದಾರೆ. ವ್ಯಾಪಕ ಸುರಂಗಗಳ ಜಾಲವನ್ನು ಹೊಂದಿರುವ ಗಾಜಾದ ಜನನಿಬಿಡ ಪ್ರದೇಶವು ಇಸ್ರೇಲ್‌ನ … Continued