ಸೀಮಾ ಹೈದರ್ ಪಾಕಿಸ್ತಾನಕ್ಕೆ ಹಿಂತಿರುಗದಿದ್ರೆ 26/11 ಮುಂಬೈ ರೀತಿಯ ಭಯೋತ್ಪಾದಕ ದಾಳಿ ಮಾಡ್ತೇವೆ : ಮುಂಬೈ ಪೊಲೀಸರಿಗೆ ಬೆದರಿಕೆ ಕರೆ

ಮುಂಬೈ : ಪಬ್‌ ಜಿ ಪ್ರೇಮಿಯೊಂದಿಗೆ ಇರಲು ಭಾರತಕ್ಕೆ ಅಕ್ರಮವಾಗಿ ಬಂದಿರುವ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್‌ ತನ್ನ ದೇಶಕ್ಕೆ ಹಿಂತಿರುಗದಿದ್ದರೆ 26/11 ಮುಂಬೈ ಭಯೋತ್ಪಾದಕ ದಾಳಿ ಮಾದರಿಯಲ್ಲೇ ದಾಳಿ ನಡೆಸುವುದಾಗಿ ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ. ಮುಂಬೈ ಟ್ರಾಫಿಕ್ ಪೊಲೀಸರಿಗೆ ಬಂದ ಬೆದರಿಕೆ ಕರೆಯನ್ನು ಅನುಸರಿಸಿ ಮುಂಬೈ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ … Continued

ಮಸಾಲಾ ದೋಸೆಯೊಂದಿಗೆ ಸಾಂಬಾರ್ ಕೊಡಲಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ ಗ್ರಾಹಕ : ರೆಸ್ಟೊರೆಂಟಿಗೆ ಶಾಕ್‌ ಕೊಟ್ಟ ತೀರ್ಪು

ಸಾಂಬಾರ್ ಮತ್ತು ಚಟ್ನಿಯನ್ನು ದೋಸೆ ನೀಡುವುದು ಒಂದು ರೀತಿಯ ರೂಢಿಯಾಗಿದೆ. ಆದರೆ ಬಿಹಾರದ ಬಕ್ಸಾರ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ 140 ರೂ. ಬೆಲೆಯ ಸ್ಪೆಷಲ್ ಮಸಾಲಾ ದೋಸೆಯೊಂದಿಗೆ ಸಾಂಬಾರ್ ನೀಡುವ ಬದಲು ಸೂಪ್‌ ಕೊಟ್ಟ ತಪ್ಪಿಗೆ ರೆಸ್ಟೊರೆಂಟ್ ಈಗ 3,500 ರೂ.ಗಳನ್ನು ದಂಡವಾಗಿ ಪಾವತಿಸಬೇಕಾಗಿದೆ…! ಗ್ರಾಹಕರು ರೆಸ್ಟೋರೆಂಟ್‌ ಅನ್ನು ನ್ಯಾಯಾಲಯಕ್ಕೆ ಎಳೆದ ನಂತರ ರೆಸ್ಟೋರೆಂಟ್‌ಗೆ 3,500 ರೂ. ದಂಡ … Continued

ಚಂದ್ರಯಾನ 3 ಉಡಾವಣೆಗೂ ಮುನ್ನ ಅದರ ಪ್ರತಿಕೃತಿಯೊಂದಿಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳು

ಚಂದ್ರಯಾನ-3 ಉಡಾವಣೆಗೆ ಮುಂಚಿತವಾಗಿ ದೈವಿಕ ಆಶೀರ್ವಾದ ಪಡೆಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ತಂಡವು ಜುಲೈ 13ರ ಗುರುವಾರ ಬೆಳಿಗ್ಗೆ ತಿರುಪತಿ ವೆಂಕಟಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿತು. ತಮ್ಮೊಂದಿಗೆ ಬಾಹ್ಯಾಕಾಶ ನೌಕೆಯ ಚಿಕಣಿ ಮಾದರಿಯನ್ನು ಹೊತ್ತುಕೊಂಡು ಬಂದಿದ್ದ ತಂಡವು ಯಶಸ್ವಿ ಕಾರ್ಯಾಚರಣೆಗಾಗಿ ತಿರುಪತಿ ದೇವಾಲಯಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿತು. ಸುಮಾರು ಎಂಟು ವಿಜ್ಞಾನಿಗಳ … Continued

ಪ್ರತಿಭಟನೆ ವೇಳೆ ಲಾಠಿ ಚಾರ್ಜ್‌ : ಬಿಜೆಪಿ ನಾಯಕ ಸಾವು, ಹಲವರಿಗೆ ಗಾಯ

ಪಾಟ್ನಾ: ರಾಜ್ಯದಲ್ಲಿ ಶಿಕ್ಷಕರ ಹುದ್ದೆಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪಾಟ್ನಾ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರಿಂದ ಬಿಜೆಪಿ ನಾಯಕರೊಬ್ಬರು ಸಾವಿಗೀಡಾಗಿದ್ದಾರೆ. ವಿವರಗಳ ಪ್ರಕಾರ, ಬಿಜೆಪಿ ಮುಖಂಡ ವಿಜಯಕುಮಾರ ಸಿಂಗ್ ಎಂದು ಗುರುತಿಸಲಾಗಿದ್ದು, ನಗರದ ದಕ್ಬಂಗ್ಲಾ ಚೌರಾಹಾದಲ್ಲಿ ಪ್ರತಿಭಟನೆ ವೇಳೆ ಸಾವಿಗೀಡಾಗಿದ್ದಾರೆ. ಸಿಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು … Continued

ಫ್ರಾನ್ಸ್‌ನಿಂದ 26 ರಫೇಲ್-ಎಂ ಯುದ್ಧ ವಿಮಾನ, 3 ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆ ಖರೀದಿಗೆ ರಕ್ಷಣಾ ಮಂಡಳಿ ಅನುಮೋದನೆ

ನವದೆಹಲಿ: ಭಾರತೀಯ ನೌಕಾಪಡೆಗೆ 26 ರಫೇಲ್-ಎಂ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಗೆ ರಕ್ಷಣಾ ಸ್ವಾಧೀನ ಮಂಡಳಿ ಗುರುವಾರ ಅನುಮೋದನೆ ನೀಡಿದೆ. ಇವುಗಳಲ್ಲಿ 22 ರಫೇಲ್ Ms ಯುದ್ಧ ವಿಮಾನ ಮತ್ತು ಅದರ ನಾಲ್ಕು ಅವಳಿ-ಆಸನಗಳ ತರಬೇತು ಆವೃತ್ತಿಯ ಯುದ್ಧ ವಿಮಾನ ಸೇರಿವೆ. ಅಲ್ಲದೆ, ಭಾರತೀಯ ನೌಕಾಪಡೆಗೆ ಮೂರು ಹೆಚ್ಚುವರಿ ಸ್ಕೋಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆಗಳನ್ನು ಸಹ … Continued

ವೀಡಿಯೊ…| ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬಂದ ಶಾಸಕನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ

ಚಂಡೀಗಢ: ಹರಿಯಾಣದ ಗುಲಾದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುವಾಗ ಪ್ರವಾಹ ವಿಕೋಪಕ್ಕೆ ಹೋದ ಬಗ್ಗೆ ಕೋಪಗೊಂಡ ಮಹಿಳೆಯೊಬ್ಬರು ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಶಾಸಕ ಈಶ್ವರ್ ಸಿಂಗ್ ಅವರಿಗೆ ಬುಧವಾರ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಹರಿಯಾಣದ ಘಗ್ಗರ್ ನದಿಯ ಉಕ್ಕಿ ಹರಿಯುತ್ತಿರುವುದರಿಂದ ಆ ಪ್ರದೇಶದಲ್ಲಿನ ಪ್ರವಾಹದಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ಮಹಿಳೆ ಕೋಪಗೊಂಡಿದ್ದರು.‘ಈಗೇಕೆ ಬಂದಿದ್ದೀರಿ’ ಎಂದು … Continued

ಎಂಟು ಜನರನ್ನು ಮದುವೆಯಾಗಿ ಹಣ-ಚಿನ್ನಾಭರಣದೊಂದಿಗೆ ಪರಾರಿಯಾಗಿರುವ ಮಹಿಳೆಗಾಗಿ ಪೊಲೀಸರ ಹುಡುಕಾಟ…!

ಎಂಟು ಮಂದಿಯನ್ನು ಮದುವೆಯಾಗಿ ಹಣ, ಚಿನ್ನಾಭರಣ ಕದ್ದು ಪರಾರಿಯಾಗಿರುವ ರಶೀದಾ ಎಂಬ ಮಹಿಳೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಈ ಯುವತಿ ಮನೆಯಲ್ಲಿದ್ದ ನಗದು, ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಿದ್ದಳು. ರಶೀದಾ ಎಂಬ ಯುವತಿ ಸೇಲಂ ಜಿಲ್ಲೆಯ ತಾರಮಂಗಲದ ಫೈನಾನ್ಷಿಯರ್ ಮೂರ್ತಿ ಅವರೊಂದಿಗೆ ಮದುವೆಯಾಗಿ ಚಿನ್ನಾಭರಣದೊಂದಿಗೆ ಪರಾರಿಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಸೇಲಂ … Continued

ಮೋದಿ’ ಉಪನಾಮʼ ಹೇಳಿಕೆ : ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಮೇಲ್ಮನವಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಕೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರಿಗೆ ಕೆಳ ಹಂತದ ನ್ಯಾಯಾಲಯ ಶಿಕ್ಷೆ ನೀಡಿದ್ದನ್ನು ಎತ್ತಿಹಿಡಿದ ಗುಜರಾತ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗುವ ಮೇಲ್ಮನವಿ ವಿರುದ್ಧ ಕೇವಿಯಟ್‌ (ತಡೆ ಅರ್ಜಿ) ಸಲ್ಲಿಕೆಯಾಗಿದೆ. ಗುಜರಾತ್‌ ಶಾಸಕ ಪೂರ್ಣೇಶ ಮೋದಿ ಈ ಅರ್ಜಿ ಸಲ್ಲಿಸಿದ್ದು, ರಾಹುಲ್‌ ಗಾಂಧಿ ಅವರ ವಿರುದ್ಧ ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದರ … Continued

ಮಾಧ್ಯಮರಂಗದಲ್ಲಿ ಕ್ರಾಂತಿ : ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ ‘ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌’ ಸೃಷ್ಟಿ ‘ಲೀಸಾ’ | ವೀಕ್ಷಿಸಿ

ಟಿವಿ ಚಾನೆಲ್‌ಗಳ ನಿರೂಪಕರ ಸೀಟ್‌ನಲ್ಲಿ ತಂತ್ರಜ್ಞಾನ ಈಗ ಕುಳಿತಿದೆ. ಲೀಸಾ ಹೆಸರಿನ ಕೃತಕಬುದ್ಧಿಮತ್ತೆ (AI-powered ) ಸುದ್ದಿ ನಿರೂಪಕಿಯನ್ನು ಒಡಿಸ್ಸಾದ ಒಟಿವಿ ಪರಿಚಯಿಸಿದೆ. ಸುದ್ದಿ ಮಾಧ್ಯಮ ಕ್ಷೇತ್ರಗಳಲ್ಲಿ ಪತ್ರಕರ್ತರು, ಕಂಟೆಂಟ್‌ ಬರಹಗಾರರು, ವಾರ್ತಾ ವಾಚಕರ ಸ್ಥಾನವನ್ನು ಎಐ ಆಕ್ರಮಿಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಒಟಿವಿ ಎಂಬ ಒಡಿಸ್ಸಾದ ಖಾಸಗಿ ಸುದ್ದಿ ವಾಹಿನಿ ಮೊದಲ ವರ್ಚ್ಯುವಲ್‌ … Continued

ವೀಡಿಯೊ..| ಸೀಮಾ ಹೈದರಳನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ರೆ ಪಾಕಿಸ್ತಾನದ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡ್ತೇವೆ, ಕೊಲ್ತೇವೆ-ಬಲೂಚ್ ಡಕಾಯಿತರ ಬೆದರಿಕೆ

ತನ್ನ ಪಬ್‌ ಜಿ ಪ್ರೇಮಿಗಾಗಿ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಬಂಧಿಸಲ್ಪಟ್ಟ ನಂತರ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇದಾದ ಒಂದು ದಿನದ ನಂತರ ಭಾರತದ ಪ್ರೇಮಿ ಸಚಿನ್‌ ಮತ್ತು ಪಾಕಿಸ್ತಾನಿ ಪ್ರೇಮಿಕಾ ಸೀಮಾ ಹೈದರ್‌ ನಡುವಿನ ಪಬ್‌ ಜಿ (PUBG) ಪ್ರೇಮಕಥೆ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. … Continued