ಅತಿದೊಡ್ಡ ಡೇಟಾ ಕಳ್ಳತನ ಭೇದಿಸಿದ ಸೈಬರಾಬಾದ್ ಪೊಲೀಸರು : 66.9 ಕೋಟಿ ಜನರು, ಸಂಸ್ಥೆಗಳ ಮಾಹಿತಿ ಕಳುವು…!?

ಸೈಬರಾಬಾದ್ ಪೊಲೀಸರು ದೇಶದ 24 ರಾಜ್ಯಗಳು ಮತ್ತು 8 ಮಹಾನಗರಗಳಲ್ಲಿ 104 ವಿಭಾಗಗಳಲ್ಲಿ 66.9 ಕೋಟಿ ಜನರು ಮತ್ತು ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ ಡೇಟಾವನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಆರೋಪಿಯು ಬೈಜಸ್ ಮತ್ತು ವೇದಾಂತು ಸಂಘಟನೆಗಳ ವಿದ್ಯಾರ್ಥಿಗಳ ಡೇಟಾವನ್ನು ಹೊಂದಿರುವುದು ಪತ್ತೆಯಾಗಿದೆ. ಇದಲ್ಲದೆ, ಎಂಟು ಮೆಟ್ರೋ ನಗರಗಳ … Continued

ಭಾರತದ ಬಹುತೇಕ ಭಾಗಗಳಲ್ಲಿ ಏಪ್ರಿಲ್‌ನಿಂದ ಜೂನ್‌ ವರೆಗೆ ಸುಡಲಿದೆ ಶಾಖ: ಹವಾಮಾನ ಇಲಾಖೆ

ನವದೆಹಲಿ: ವಾಯುವ್ಯ ಮತ್ತು ಭಾರತದ ಪರ್ಯಾಯ ದ್ವೀಪದ ಭಾಗಗಳನ್ನು (ಮೂರು ಕಡೆ ಸಮುದ್ರಗಳಿಂದ ಆವೃತವಾದ ಭಾಗ) ಹೊರತುಪಡಿಸಿ ಭಾರತದ ಬಹುತೇಕ ಭಾಗಗಳು ಏಪ್ರಿಲ್‌ನಿಂದ ಜೂನ್‌ ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಅನುಭವಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು, ಶನಿವಾರ ತಿಳಿಸಿದೆ. ಈ ಅವಧಿಯಲ್ಲಿ ಮಧ್ಯ, ಪೂರ್ವ ಮತ್ತು ವಾಯುವ್ಯ ಭಾರತದ … Continued

ಮೋದಿ ಉಪನಾಮ ವಿವಾದ: ಮತ್ತೊಂದು ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಪಾಟ್ನಾ ನ್ಯಾಯಾಲಯದ ಸಮನ್ಸ್

ಪಾಟ್ನಾ : ಮೋದಿ ಉಪನಾಮದ ಕುರಿತು ರಾಹುಲ್‌ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಬಿಹಾರದ ಬಿಜೆಪಿ ನಾಯಕ ಸುಶೀಲಕುಮಾರ ಮೋದಿ ಅವರು 2019ರಲ್ಲಿ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಏಪ್ರಿಲ್ 12ರಂದು ನಡೆಯಲಿರುವ ವಿಚಾರಣೆಗೆ ರಾಹುಲ್ ಗಾಂಧಿ ಖುದ್ದು ಹಾಜರಾಗುವಂತೆ ಪಾಟ್ನಾ ನ್ಯಾಯಾಲಯ ಶುಕ್ರವಾರ ನೋಟಿಸ್‌ ನೀಡಿರುವುದಾಗಿ ವರದಿಯಾಗಿದೆ. ಸಿಆರ್‌ಪಿಸಿಯ ಸೆಕ್ಷನ್ 313 ರ ಅಡಿಯಲ್ಲಿ ತಮ್ಮ ಹೇಳಿಕೆಗಳನ್ನು … Continued

10 ತಿಂಗಳ ನಂತರ ಪಟಿಯಾಲಾ ಜೈಲಿನಿಂದ ಬಿಡುಗಡೆಯಾದ ನವಜೋತ್ ಸಿಂಗ್ ಸಿಧು

ಪಟಿಯಾಲಾ : ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು 34 ವರ್ಷಗಳ ಹಿಂದೆ ರಸ್ತೆ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ತಿಂಗಳ ಜೈಲುವಾಸದ ನಂತರ ಶನಿವಾರ (ಏಪ್ರಿಲ್ 1) ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕಾಂಗ್ರೆಸ್ ನಾಯಕನನ್ನು ಸಂಜೆ 5:53 ಕ್ಕೆ ಬಿಡುಗಡೆ ಮಾಡಲಾಯಿತು. ಜೈಲಿನಿಂದ ಹೊರಬರುತ್ತಿದ್ದಂತೆ ನವಜೋತ್ ಸಿಂಗ್ ಸಿಧು ತಮ್ಮ … Continued

ಇಂಡಿಗೋ ವಿಮಾನದಲ್ಲಿ ಗಗನಸಖಿ ಜೊತೆ ಅನುಚಿತ ವರ್ತನೆ : ಸ್ವೀಡಿಷ್ ಪ್ರಜೆ ಬಂಧನ

ಮುಂಬೈ : ಬ್ಯಾಂಕಾಕ್‌ನಿಂದ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಸ್ವೀಡನ್ ಪ್ರಜೆಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಆರೋಪಿಯನ್ನು ಕ್ಲಾಸ್ ಎರಿಕ್ ಹೆರಾಲ್ಡ್ ಜೋನಾಸ್ಮ್ (63) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವಾಗ ಸ್ವೀಡಿಷ್ ಪ್ರಜೆಯನ್ನು … Continued

ಕಳ್ಳಸಾಗಣೆಯಾಗಿದ್ದ 15 ಪುರಾತನ ಶಿಲ್ಪಗಳನ್ನು ಭಾರತಕ್ಕೆ ವಾಪಸ್‌ ನೀಡಲಿರುವ ಅಮೆರಿಕ

ನ್ಯೂಯಾರ್ಕ್: ಅಮೆರಿಕದ ಪ್ರಸಿದ್ಧ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ 15 ವಿಶೇಷ ಶಿಲ್ಪಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ. ಕಳಂಕಿತ ಶಿಲ್ಪ ಮಾರಾಟಗಾರ ಸುಭಾಷ್ ಕಪೂರ್ ಈ ಶಿಲ್ಪಗಳನ್ನು ಭಾರತದಿಂದ ಅಕ್ರಮವಾಗಿ ಒಯ್ದು ಮಾರಾಟ ಮಾಡಿದ್ದಾನೆ ಎಂದು ತಿಳಿದ ನಂತರ ಈಗ ಭಾರತಕ್ಕೆ ಹಿಂದಿರುಗಿಸುತ್ತಿದೆ. ಗುರುವಾರ ಹೇಳಿಕೆಯಲ್ಲಿ, 15 ಶಿಲ್ಪಗಳನ್ನು ಭಾರತ ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ … Continued

ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಭಾರತೀಯ ಮೂಲದ ಕುಟುಂಬದವರು ಸೇರಿ 8 ಮಂದಿ ಸಾವು : ಪೊಲೀಸರು

ಕೆನಡಾದಿಂದ ಅಕ್ರಮವಾಗಿ ಅಮೆರಿಕಕ್ಕೆ ದಾಟಲು ಯತ್ನಿಸಿ ಮೃತಪಟ್ಟ ಎಂಟು ಜನರ ಶವಗಳನ್ನು ಕೆನಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸತ್ತವರಲ್ಲಿ ಸೇಂಟ್ ಲಾರೆನ್ಸ್ ನದಿಯಲ್ಲಿ ದೋಣಿ ಮೂಲಕ ಕೆನಡಾದಿಂದ ಅಮೆರಿಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಭಾರತೀಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆರಂಭದಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ ಆರು ಜನರ ಶವವನ್ನು ನದಿಯಿಂದ ಹೊರ … Continued

ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲು

ನವದೆಹಲಿ: ಗುಜರಾತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಹೊಸ ಮಾನನಷ್ಟ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಾಗ ರಾಹುಲ್‌ ಗಾಂಧಿ ಮಾಡಿದ ಕಾಮೆಂಟ್‌ಗಳ ಕುರಿತು ಶುಕ್ರವಾರ ಹರಿದ್ವಾರದ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಜನವರಿಯಲ್ಲಿ ಮಾಡಿದ ಭಾಷಣದಲ್ಲಿ, ಗಾಂಧಿಯವರು ರಾಷ್ಟ್ರೀಯ ಸ್ವಯಂಸೇವಕ … Continued

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ಇಂದು, ಶನಿವಾರ 2024 ರ ಆರ್ಥಿಕ ವರ್ಷದ ಮೊದಲ ದಿನ ಸರ್ಕಾರವು ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಂದು ಅಡುಗೆ ಅನಿಲದ ಬೆಲೆಯನ್ನು ಸುಮಾರು ₹ 92 ರಷ್ಟು ಕಡಿತಗೊಳಿಸಲಾಯಿತು. ಆದರೆ, ವಾಣಿಜ್ಯ ಅನಿಲ ಸಿಲಿಂಡರ್ ಬಳಕೆದಾರರಿಗೆ ಮಾತ್ರ ದರ ಇಳಿಕೆಯಾಗಿದೆ. ದೇಶೀಯ ಎಲ್‌ಪಿಜಿ ಗ್ಯಾಸ್ ಗ್ರಾಹಕರಿಗೆ ಬೆಲೆ … Continued

ಪಾಕಿಸ್ತಾನದ ಜನರಲ್ಲಿ ಅತೃಪ್ತಿ ಇದೆ, ಅವರೀಗ ವಿಭಜನೆ “ತಪ್ಪು” ಎಂದು ನಂಬುತ್ತಾರೆ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್‌

ಭೋಪಾಲ್ : ಸ್ವಾತಂತ್ರ್ಯ ಪಡೆದ ಏಳು ದಶಕಗಳ ನಂತರ ಪಾಕಿಸ್ತಾನದ ಜನರು ಸಂತೋಷವಾಗಿಲ್ಲ ಮತ್ತು ಅವರು ಈಗ ಭಾರತದ ವಿಭಜನೆ ಮಾಡಿದ್ದು ತಪ್ಪು ಎಂದು ನಂಬಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಶುಕ್ರವಾರ ಹೇಳಿದ್ದಾರೆ. ಹದಿಹರೆಯದ ಕ್ರಾಂತಿಕಾರಿ ಹೇಮು ಕಲಾನಿ ಅವರ ಜನ್ಮದಿನದ ಅಂಗವಾಗಿ ದೇಶದ ವಿವಿಧ ಭಾಗಗಳಿಂದ ಸಿಂಧಿಗಳು ಪಾಲ್ಗೊಂಡಿದ್ದ … Continued